DBSE: ಇನ್ಮುಂದೆ ದೆಹಲಿಗೂ ಸಿಗಲಿದೆ ತನ್ನದೇ ಆದ ಶಿಕ್ಷಣ ಮಂಡಳಿ, ಸಿಎಂ ಕೆಜ್ರಿವಾಲ್ ಘೋಷಣೆ

Delhi Board Of School Education - ಇನ್ಮುಂದೆ ದೆಹಲಿ ಸರ್ಕಾರವು ಕೂಡ ತನ್ನದೇ ಆದ ಪ್ರತ್ಯೇಕ ಶಿಕ್ಷಣ ಮಂಡಳಿಯನ್ನು ಹೊಂದಿರಲಿದೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಘೋಷಿಸಿದ್ದಾರೆ.

Written by - Nitin Tabib | Last Updated : Mar 6, 2021, 03:32 PM IST
  • ಇನ್ಮುಂದೆ ರಾಷ್ಟ್ರರಾಜಧಾನಿಗೂ ಸಿಗಲಿದೆ ತನ್ನದೇ ಆದ ಶಿಕ್ಷಣ ಮಂಡಳಿ.
  • DBSE ಸ್ಥಾಪನೆ ಕುರಿತು ದೆಹಲಿ ಸಿಎಂ ಅರವಿಂದ್ ಕೆಜ್ರಿವಾಲ್ ಘೋಷಣೆ.
  • ಪ್ರಸ್ತುತ ಶೈಕ್ಷಣಿಕ ವರ್ಷದಲ್ಲಿ 20-25 ಸರ್ಕಾರಿ ಶಾಲೆಗಳನ್ನು ಈ ಮಂಡಳಿಗೆ ಸೇರಿಸಲಾಗುವುದು.
DBSE: ಇನ್ಮುಂದೆ ದೆಹಲಿಗೂ ಸಿಗಲಿದೆ ತನ್ನದೇ ಆದ ಶಿಕ್ಷಣ ಮಂಡಳಿ, ಸಿಎಂ ಕೆಜ್ರಿವಾಲ್ ಘೋಷಣೆ title=
Delhi Board Of School Education (Arvind Kejriwal File Photo)

ನವದೆಹಲಿ: Delhi Board Of School Education - ಇನ್ಮುಂದೆ ದೆಹಲಿ ಸರ್ಕಾರವು ಕೂಡ ತನ್ನದೇ ಆದ ಪ್ರತ್ಯೇಕ ಶಿಕ್ಷಣ ಮಂಡಳಿಯನ್ನು ಹೊಂದಿರಲಿದೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಘೋಷಿಸಿದ್ದಾರೆ. ಇದುವರೆಗೆ ದೆಹಲಿಯಲ್ಲಿನ ಶಾಲೆಗಳಿಗೆ ಕೇವಲ CBSE/ICSC ಆಯ್ಕೆ ಮಾತ್ರ ಇದ್ದವು. ಇವುಗಳ ಮಾಧ್ಯಮದ ಮೂಲಕ ಮಾತ್ರ ಅಲ್ಲಿ ಶಿಕ್ಷಣ ನಡೆಯುತ್ತಿತ್ತು. ಆದರೆ, ಇದೀಗ ಈ ಕುರಿತು ಸುದ್ದಿಗೋಷ್ಟಿಯನ್ನು ನಡೆಸುವ ಮೂಲಕ ದೆಹಲಿ ಸಿಎಂ ಅರವಿಂದ್ ಕೆಜ್ರಿವಾಲ್ ದೆಹಲಿ ಸರ್ಕಾರ ಕೂಡ ತನ್ನದೇ ಆದ ಶಿಕ್ಷಣ ಮಂಡಳಿ ಹೊಂದಲಿದೆ ಎಂದು ಘೋಷಿಸಿದ್ದಾರೆ.

ಸಚಿವ ಸಂಪುಟದ ಅನುಮೋದನೆ
ದೆಹಲಿಯಲ್ಲಿ ಸರ್ಕಾರಕ್ಕೆ ತನ್ನದೇ ಆದ ಶಿಕ್ಷಣ ಬೋರ್ಡ್ ಹೊಂದಲು ದೆಹಲಿ ಸಚಿವ ಸಂಪುಟದ ಅನುಮೋದನೆ ದೊರೆತಿದೆ. ಶೈಕ್ಷಣಿಕ ವರ್ಷ 2021-22ರಲ್ಲಿ ದೆಹಲಿಯ ಕೆಲವು ಶಾಲೆಗಳಲ್ಲಿ ನೂತನ ಬೋರ್ಡ್ ಅಡಿಯಲ್ಲಿ ಶಿಕ್ಷಣ ಆರಂಭಿಸಲಾಗುವುದು ಎಂದು ದೆಹಲಿ ಸಿಎಂ ಅರವಿಂದ್ ಕೆಜ್ರಿವಾಲ್ (Delhi CM Arvind Kejriwal) ಘೋಷಿಸಿದ್ದಾರೆ. ದೆಹಲಿಯನ್ನು ಹೊರತುಪಡಿಸಿ ಉಳಿದೆಲ್ಲ ರಾಜ್ಯಗಳು ತನ್ನದೇ ಆದ ಶಿಕ್ಷಣ ಮಂಡಳಿಯನ್ನು(Delhi Education Board) ಹೊಂದಿವೆ ಎಂಬುದು ಇಲ್ಲಿ ಗಮನಾರ್ಹ. ಅಷ್ಟೇ ಅಲ್ಲ ರಾಜ್ಯ ಮಂಡಳಿಗಳ ಆಡಿಯೇ ಪರೀಕ್ಷೆಗಳನ್ನು ಕೂಡ ನಡೆಸಲಾಗುತ್ತದೆ. ಇದೇ ಮಾದರಿಯಲ್ಲಿ ಇದೀಗ ದೆಹಲಿಯೂ ಕೂಡ ತನ್ನದೇ ಆದ ಶಿಕ್ಷಣ ಮಂಡಳಿ ಕುರಿತು ನಿರ್ಣಯ ಕೈಗೊಂಡಿದೆ. 

ಈ ಶೈಕ್ಷಣಿಕ ವರ್ಷದಲ್ಲಿ ದೆಹಲಿಯ ಸುಮಾರು 20-25 ಸರ್ಕಾರಿ ಶಾಲೆಗಳನ್ನು ಈ ಬೋರ್ಡ್ ಅಡಿ ಸೇರಿಸಲಾಗುವುದು ಎಂದು ಸಿಎಂ ಅರವಿಂದ್ ಕೆಜ್ರಿವಾಲ್ ಹೇಳಿದ್ದಾರೆ. ಈ ಕುರಿತು ಮಾಹಿತಿ ನೀಡಿರುವ ಅವರು ಒಮ್ಮೆಲೇ ಎಲ್ಲಾ ಶಾಲೆಗಳನ್ನು ಈ ಬೋರ್ಡ್ ಗೆ ಸೇರಿಸಲಾಗುವುದಿಲ್ಲ. ಯಾವ ಶಾಲೆಗಳನ್ನು ಈ ಬೋರ್ಡ್ ಅಡಿ ಸೇರಿಸಲಾಗುವುದು ಎಂಬುದರ ನಿರ್ಣಯವನ್ನು ಅಲ್ಲಿರುವ ಶಿಕ್ಷಕ ವೃಂದ, ಶಾಲೆಯ ಪ್ರಿನ್ಸಿಪಾಲ್ ಹಾಗೂ ಪೋಷಕರ ಸಲಹೆ ಆಧರಿಸಿ ಮಾಡಲಾಗುವುದು ಎಂದು ಕೆಜ್ರಿವಾಲ್ ಹೇಳಿದ್ದಾರೆ.

ಸುದ್ದಿಗೋಷ್ಟಿಯ ಸಂದರ್ಭದಲ್ಲಿ ಮಾತನಾಡಿರುವ ಸಿಎಂ ಕೆಜ್ರಿವಾಲ್, 'ಕಳೆದ ಸುಮಾರು ಆರು ವರ್ಷಗಳಲ್ಲಿ ನಾವು ದೆಹಲಿಯ ಸರ್ಕಾರಿ ಶಾಲೆಗಳ ಗುಣಮಟ್ಟವನ್ನು ಹೆಚ್ಚಿಸಿದ್ದೇವೆ. ಪ್ರಸ್ತುತ ನಾವು ಶಿಕ್ಷಣ ಮಂಡಳಿಯನ್ನು ಸ್ಥಾಪಿಸುವುದರ ಜೊತೆಗೆ ಮುಂದಿನ ಹಂತಕ್ಕೆ ಸಾಗುತ್ತಿದ್ದೇವೆ. ದೆಹಲಿ ಬೋರ್ಡ್ ಆಫ್ ಸ್ಕೂಲ್ ಎಜುಕೇಶನ್ (Delhi Board Of School Education) ನ ಸ್ಥಾಪನೆ ದೆಹಲಿ ಶಿಕ್ಷಣ ವ್ಯವಸ್ಥೆಯಲಾಗುತ್ತಿರುವ ಕ್ರಾಂತಿಕಾರಿ ಬದಲಾವಣೆಗಳಿಗೆ ನೂತನ ಆಯಾಮ ಒದಗಿಸಲಿದೆ. ಈ ಮಂಡಳಿಯೇ ಒಂದು ಗವರ್ನಿಂಗ್ ಬಾಡಿ ಇರಲಿದೆ. ರಾಜ್ಯ ಶಿಕ್ಷಣ ಸಚಿವರು ಇದರ ಅಧ್ಯಕ್ಷರಾಗಿರಲಿದ್ದಾರೆ. ಈ ಮಂಡಳಿ ಒಂದು ಎಕ್ಸಿಕ್ಯೂಟಿವ್ ಬಾಡಿ ಕೂಡ ಹೊಂದಿರಲಿದೆ ಮತ್ತು ಅದರ ನಿರ್ವಹಣೆಯನ್ನು CEO ನೋಡಿಕೊಳ್ಳಲಿದ್ದಾರೆ. ಎರಡೂ ಸಮಿತಿಗಳಲ್ಲಿ ಉದ್ಯೋಗ, ಶಿಕ್ಷಣ ಕ್ಷೇತ್ರದ ನುರಿತ ತಜ್ಞರು ಸರ್ಕಾರಿ ಹಾಗೂ ಖಾಸಗಿ ಶಾಲೆಗಳ ಪ್ರಿನ್ಸಿಪಾಲರು ಹಾಗೂ ಅಧಿಕಾರಿಗಳು ಇರಲಿದ್ದಾರೆ' ಎಂದು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ-ಈ ರಾಜ್ಯದಲ್ಲಿ ಕರೋನಾ RT-PCR ಟೆಸ್ಟ್ ಆಗಲಿದೆ ಅಗ್ಗ

'ದೆಹಲಿಯಲ್ಲಿ ಇದೀಗ ಏನು ಮತ್ತು ಹೇಗೆ ಕಲಿಕೆ ಮಾಡಿಸಲಾಗುವುದು ಎಂಬುದರ ನಿರ್ಧಾರ ಮಾಡುವ ಸಮಯ ಬಂದಿದೆ. ಈ ಬೋರ್ಡ್ (DBSE) ಪ್ರಮುಖ ಮೂರು ಉದ್ದೇಶಗಳನ್ನು ಹೊಂದಿರಲಿದೆ. ಪ್ರತಿಯೊಂದು ಮಗು ದೇಶಭಕ್ತನಾಗಬೇಕೆಂಬುದು ಮೊದಲ ಗುರಿಯಾಗಿದ್ದು, ಪ್ರತಿಯೊಂದು ಕ್ಷೇತ್ರದಲ್ಲಿಯೂ ಆತ ದೇಶದ ಜವಾಬ್ದಾರಿ ಹೊರಲು ಸಿದ್ಧನಾಗಿರಬೇಕು. ನಮ್ಮ ಮಕ್ಕಳು ಧರ್ಮ ಮತ್ತು ಜಾತಿಯ ಕಟ್ಟಳೆಗಳಿಂದ ಮೇಲೆದ್ದು ಉತ್ತಮ ನಾಗರಿಕರಾಗಬೇಕು ಎಂಬುದು ಎರಡನೇ ಉದ್ದೇಶ. ಮಕ್ಕಳು ಶಿಕ್ಷಣ ಪಡೆದ ಬಳಿಕ ನೌಕರಿ ಹೊಂದಬೇಕು ಮತ್ತು ಇದಕ್ಕಾಗಿ ಸೂಕ್ತ ಪ್ರನಾಳಿಕೆ ಸಿದ್ಧ ಪಡಿಸುವುದು ಈ ಬೋರ್ಡ್ ನ ಮೂರನೇ ಗುರಿಯಾಗಿರಲಿದೆ. ಇಂದಿನ ಶಿಕ್ಷಣ ನೀತಿ ಬಾಯಿಪಾಠ ಮಾಡುವುದರ ಮೇಲೆ ಹೆಚ್ಚಿನ ಒಟ್ಟು ನೀಡುತ್ತವೆ. ಆದರೆ, ದೆಹಲಿ ಶಿಕ್ಷಣ ಮಂಡಳಿ ಬಾಯಿಪಾಠ ಮಾಡುವುದರ ಮೇಲೆ ಒಲವು ತೋರುವುದಿಲ್ಲ. ಇಡೀ ವರ್ಷ ಮಕ್ಕಳ ಅಸೆಸ್ಮೆಂಟ್ ನಡೆಯಲಿದೆ. ಇದೊಂದು ಅಂತಾರಾಷ್ಟ್ರೀಯ ಮಟ್ಟದ ಬೋರ್ಡ್ ಆಗಿರಲಿದ್ದು, ಇದರಲ್ಲಿ ಮಕ್ಕಳ ವೈಯಕ್ತಿಕ ಅಭಿವೃದ್ಧಿಗೆ ಹೆಚ್ಚಿನ ಗಮನ ನೀಡಲಾಗುವುದು' ಎಂದು ಕೆಜ್ರಿವಾಲ್ ಹೇಳಿದ್ದಾರೆ.

ಇದನ್ನೂ ಓದಿ-ಕರೋನಾ ನಿಯಂತ್ರಣಕ್ಕೆ ದಂಡ ಪ್ರಯೋಗ: ದೆಹಲಿ ಸರ್ಕಾರದ ಕಠಿಣ ನಿರ್ಧಾರ

ಈ ಮಂಡಳಿ ಪ್ರತಿಯೊಂದು ಮಗುವಿನಲ್ಲಿ ಅಡಗಿರುವ ವಿಶೇಷತೆಯನ್ನು ಕಂಡುಹಿಡಿದು. ಆ ಮಗುವಿಗೆ ಅದರ ಆಸಕ್ತಿಯ ಕ್ಷೇತ್ರದಲ್ಲಿ ಮುಂದುವರೆಯಲು ದಾರಿ ತೋರಿಸಲಿದೆ. ದೆಹಲಿಯಲ್ಲಿ ಸುಮಾರು 1000 ಸರ್ಕಾರಿ ಹಾಗೂ 1700 ಖಾಸಗಿ ಶಾಲೆಗಳಿವೆ. ಇದರಲ್ಲಿ ಹೆಚ್ಚುವರಿ ಶಾಲೆಗಳು CBSE ಶಾಲೆಗಳಾಗಿವೆ. ಈ ವರ್ಷ 20 ರಿಂದ 25 ಸರ್ಕಾರಿ ಶಾಲೆಗಳಿಂದ ಇದನ್ನು ಆರಂಭಿಸಲಾಗುವುದು. ಮುಂದಿನ 4 ರಿಂದ ಐದು ವರ್ಷಗಳಲ್ಲಿ ಇತರೆ ಶಾಲೆಗಳು ಖುದ್ದಾಗಿ ಈ ಬೋರ್ಡ್ ಸೇರಲಿವೆ ಎಂದು ಕೆಜ್ರಿವಾಲ್ ಹೇಳಿದ್ದಾರೆ.

ಇದನ್ನೂ ಓದಿ-ಹೆಚ್ಚುತ್ತಿರುವ ಕರೋನಾ ನಿಗ್ರಹಿಸಲು ಕೇಜ್ರಿವಾಲ್ ಮಹತ್ವದ ಹೆಜ್ಜೆ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News