India-Russia partnership:ರಕ್ಷಣಾ ಸಹಕಾರವು ದ್ವಿಪಕ್ಷೀಯ ಪಾಲುದಾರಿಕೆಯ ಪ್ರಮುಖ ಸ್ತಂಭಗಳಲ್ಲಿ ಒಂದಾಗಿದೆ: ರಾಜನಾಥ್ ಸಿಂಗ್

India-Russia partnership:ರಕ್ಷಣಾ ಸಹಕಾರವು ದ್ವಿಪಕ್ಷೀಯ ಪಾಲುದಾರಿಕೆಯ ಪ್ರಮುಖ ಸ್ತಂಭಗಳಲ್ಲಿ ಒಂದಾಗಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸೋಮವಾರ ಹೇಳಿದ್ದಾರೆ.

Edited by - Zee Kannada News Desk | Last Updated : Dec 6, 2021, 01:29 PM IST
  • ಭಾರತ-ರಷ್ಯಾ ನಡುವಿನ ಸಂಬಂಧಗಳ ಪ್ರಾಮುಖ್ಯತೆ ಒತ್ತಿಹೇಳಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
  • ರಕ್ಷಣಾ ಸಹಕಾರವು ದ್ವಿಪಕ್ಷೀಯ ಪಾಲುದಾರಿಕೆಯ ಪ್ರಮುಖ ಸ್ತಂಭಗಳಲ್ಲಿ ಒಂದು
  • ಇಂದು ನಡೆಯಲಿರುವ ಭಾರತ-ರಷ್ಯಾ ಮೊದಲ 2+2 ಮಾದರಿಯ ಸಂವಾದ
India-Russia partnership:ರಕ್ಷಣಾ ಸಹಕಾರವು ದ್ವಿಪಕ್ಷೀಯ ಪಾಲುದಾರಿಕೆಯ ಪ್ರಮುಖ ಸ್ತಂಭಗಳಲ್ಲಿ ಒಂದಾಗಿದೆ: ರಾಜನಾಥ್ ಸಿಂಗ್ title=
ಭಾರತ-ರಷ್ಯಾ ಮೊದಲ 2+2 ಮಾದರಿಯ ಸಂವಾದ

ನವದೆಹಲಿ: ಭಾರತ ಮತ್ತು ರಷ್ಯಾ ನಡುವಿನ ಸಂಬಂಧಗಳ ಪ್ರಾಮುಖ್ಯತೆಯನ್ನು ಒತ್ತಿಹೇಳಿರುವ ರಕ್ಷಣಾ ಸಚಿವ ರಾಜನಾಥ್ ಸಿಂಗ್ (Defence Minister Rajnath Singh) ಅವರು ರಕ್ಷಣಾ ಸಹಕಾರವು ದ್ವಿಪಕ್ಷೀಯ ಪಾಲುದಾರಿಕೆಯ ಪ್ರಮುಖ ಸ್ತಂಭಗಳಲ್ಲಿ ಒಂದಾಗಿದೆ ಎಂದು ಸೋಮವಾರ ಹೇಳಿದ್ದಾರೆ ಮತ್ತು ಬಲವಾದ ಬೆಂಬಲಕ್ಕಾಗಿ ರಷ್ಯಾಕ್ಕೆ ಧನ್ಯವಾದ ಅರ್ಪಿಸಿದ್ದಾರೆ. 

ರಕ್ಷಣಾ ಸಹಕಾರವು ನಮ್ಮ ಪಾಲುದಾರಿಕೆಯ ಪ್ರಮುಖ ಸ್ತಂಭಗಳಲ್ಲಿ ಒಂದಾಗಿದೆ. ಭಾರತ-ರಷ್ಯಾ ಮಿಲಿಟರಿ-ತಾಂತ್ರಿಕ ಸಹಕಾರದ ಅಂತರ-ಸರ್ಕಾರಿ ಆಯೋಗ (IRIGC-MTC) ಕಳೆದ ಎರಡು ದಶಕಗಳಿಂದ ಸುಸ್ಥಾಪಿತವಾದ ಕಾರ್ಯವಿಧಾನವಾಗಿದೆ. ಭಾರತ-ರಷ್ಯಾ ಪಾಲುದಾರಿಕೆಯನ್ನು (India-Russia partnership) ಇಡೀ ಪ್ರದೇಶಕ್ಕೆ ಶಾಂತಿಯನ್ನು ತರುತ್ತದೆ ಮತ್ತು ಈ ಪ್ರದೇಶಕ್ಕೆ ಸ್ಥಿರತೆಯನ್ನು ನೀಡುತ್ತದೆ ಎಂದು ರಷ್ಯಾದ ರಕ್ಷಣಾ ಸಚಿವ ಜನರಲ್ ಸೆರ್ಗೆ ಶೋಯಿಗು (Russian Defence Minister General Sergey Shoigu) ಅವರೊಂದಿಗಿನ ಸಭೆಯ ಸಂದರ್ಭದಲ್ಲಿ ಹೇಳಿದರು.

ಇದನ್ನೂ ಓದಿ: PM Modi-Putin Summit Today: ಪ್ರಧಾನಿ ಮೋದಿ-ಪುಟಿನ್ ಶೃಂಗಸಭೆಯತ್ತ ಎಲ್ಲರ ಚಿತ್ತ

ಬಹುಪಕ್ಷೀಯತೆ, ಜಾಗತಿಕ ಶಾಂತಿ, ಸಮೃದ್ಧಿ ಮತ್ತು ಪರಸ್ಪರ ತಿಳುವಳಿಕೆ ಮತ್ತು ನಂಬಿಕೆಯಲ್ಲಿ ಸಾಮಾನ್ಯ ಆಸಕ್ತಿಯ ಆಧಾರದ ಮೇಲೆ ಭಾರತ-ರಷ್ಯಾ ಸಂಬಂಧಗಳು  (India-Russia relations) ಸಮಯ-ಪರೀಕ್ಷಿತವಾಗಿವೆ" ಎಂದು ಅವರು ಹೇಳಿದರು.

ಭಾರತಕ್ಕೆ ರಷ್ಯಾದ ಬಲವಾದ ಬೆಂಬಲವನ್ನು ರಾಜನಾಥ್ ಸಿಂಗ್ ಶ್ಲಾಘಿಸಿದರು. "ನಮ್ಮ ನಿಕಟ ಸಹಕಾರವು ಯಾವುದೇ ದೇಶದ ವಿರುದ್ಧ ಗುರಿಯಾಗಿಲ್ಲ. ನಮ್ಮ ಪಾಲುದಾರಿಕೆಯು ಇಡೀ ಪ್ರದೇಶಕ್ಕೆ ಶಾಂತಿ ಮತ್ತು ಸಮೃದ್ಧಿಯನ್ನು ತರುತ್ತದೆ ಎಂದು ನಾವು ಭಾವಿಸುತ್ತೇವೆ" ಎಂದು ಅವರು ಹೇಳಿದರು.

ರಾಜನಾಥ್ ಸಿಂಗ್ ಅವರು ದೆಹಲಿಯಲ್ಲಿ ಶೋಯಿಗು ಅವರನ್ನು ಭೇಟಿ ಮಾಡಿದರು ಮತ್ತು ದ್ವಿಪಕ್ಷೀಯ ಸಂಬಂಧಗಳ ಪ್ರಮುಖ ವಿಷಯವೆಂದು ಪರಿಗಣಿಸಲಾದ ಮಿಲಿಟರಿ-ತಾಂತ್ರಿಕ ಸಹಕಾರದ (IRIGC-MTC) ಅಂತರ-ಸರ್ಕಾರಿ ಆಯೋಗದ ಕುರಿತು ಮಾತುಕತೆ ನಡೆಸಿದರು.

ಉಭಯ ದೇಶಗಳ ನಡುವಿನ ಮಿಲಿಟರಿ-ತಾಂತ್ರಿಕ ಸಹಕಾರವು (The Military-Technical Cooperation) ಸಂಶೋಧನೆ ಮತ್ತು ಅಭಿವೃದ್ಧಿ, ಉತ್ಪಾದನೆ ಮತ್ತು ಶಸ್ತ್ರಾಸ್ತ್ರ ವ್ಯವಸ್ಥೆಗಳು ಮತ್ತು ವಿವಿಧ ಮಿಲಿಟರಿ ಉಪಕರಣಗಳ ಮಾರಾಟದ ನಂತರದ ಬೆಂಬಲದ ಕ್ಷೇತ್ರದಲ್ಲಿ ಮಿಲಿಟರಿ ಮತ್ತು ತಾಂತ್ರಿಕ ಸಹಕಾರವನ್ನು ಮತ್ತಷ್ಟು ಅಭಿವೃದ್ಧಿಪಡಿಸುವ ಮತ್ತು ಬಲಪಡಿಸುವ ಆಸಕ್ತಿಯನ್ನು ಒಳಗೊಂಡಿದೆ.

ಇದನ್ನೂ ಓದಿ: 3 ಅಡಿ ಎತ್ತರದ ವ್ಯಕ್ತಿಗೆ ಚಾಲನಾ ಪರವಾನಿಗೆ... Driving license ಪಡೆದ ಭಾರತದ ಮೊದಲ ಕುಬ್ಜ

ಇಬ್ಬರು ರಕ್ಷಣಾ ಮಂತ್ರಿಗಳು ವಾರ್ಷಿಕವಾಗಿ ರಷ್ಯಾ ಮತ್ತು ಭಾರತದಲ್ಲಿ ಪರ್ಯಾಯವಾಗಿ ಭೇಟಿಯಾಗುತ್ತಾರೆ. ನಡೆಯುತ್ತಿರುವ ಯೋಜನೆಗಳ ಸ್ಥಿತಿ ಮತ್ತು ಮಿಲಿಟರಿ-ತಾಂತ್ರಿಕ ಸಹಕಾರದ ಇತರ ಸಮಸ್ಯೆಗಳನ್ನು ಚರ್ಚಿಸಿ, ಪರಿಶೀಲಿಸುತ್ತಾರೆ.

ಇಂದು ಭಾರತ ಮತ್ತು ರಷ್ಯಾ ನಡುವಿನ ಮೊದಲ 2+2 ಮಾದರಿಯ ಸಂವಾದದಲ್ಲಿ, ಭಾರತ ಮತ್ತು ರಷ್ಯಾ ಪ್ರಮುಖ ದ್ವಿಪಕ್ಷೀಯ, ಪ್ರಾದೇಶಿಕ ಮತ್ತು ಅಂತಾರಾಷ್ಟ್ರೀಯ ವಿಷಯಗಳನ್ನು ಚರ್ಚಿಸಲಿವೆ. ತಾಲಿಬಾನ್ ಸ್ವಾಧೀನದ ನಂತರ ಅಫ್ಘಾನಿಸ್ತಾನದ ಪರಿಸ್ಥಿತಿ, ಭಯೋತ್ಪಾದಕ ಗುಂಪುಗಳಿಂದ ಹೊರಹೊಮ್ಮುವ ಬೆದರಿಕೆಗಳು, ಅಲ್ಪಸಂಖ್ಯಾತರು, ಮಹಿಳೆಯರು ಮತ್ತು ಮಕ್ಕಳ ಮಾನವ ಹಕ್ಕುಗಳ ರಕ್ಷಣೆ ಬಗ್ಗೆ ಚರ್ಚಿಸಲಿದ್ದಾರೆ.

ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ (Vladimir Putin) ಅವರು ಪ್ರಧಾನಿ ನರೇಂದ್ರ ಮೋದಿ (PM Modi) ಅವರೊಂದಿಗೆ 21 ನೇ ವಾರ್ಷಿಕ ಭಾರತ-ರಷ್ಯಾ ಶೃಂಗಸಭೆಯನ್ನು (India-Russia summit) ನಡೆಸಲಿದ್ದಾರೆ.

ಪ್ರಧಾನಿ ಮೋದಿ ಮತ್ತು ಅಧ್ಯಕ್ಷ ಪುಟಿನ್ ನಡುವಿನ ವಾರ್ಷಿಕ ಮಾತುಕತೆಗಳ (Talks between PM Modi and President Putin) ನಂತರ ಎರಡೂ ದೇಶಗಳು 10 ಕ್ಕೂ ಹೆಚ್ಚು ಒಪ್ಪಂದಗಳಿಗೆ ಸಹಿ ಹಾಕುವ ನಿರೀಕ್ಷೆಯಿದೆ. ಈ ಒಪ್ಪಂದಗಳು ಬಾಹ್ಯಾಕಾಶ, ಸಂಸ್ಕೃತಿ, ವಿಜ್ಞಾನ ಮತ್ತು ತಂತ್ರಜ್ಞಾನ, ರಕ್ಷಣೆ ಇತ್ಯಾದಿ ಕ್ಷೇತ್ರಗಳಲ್ಲಿ ಇರುತ್ತವೆ.

Trending News