ಹಿಂದಿ ಮೂಲ: ದಯಾಶಂಕರ್ ಮಿಶ್ರಾ
ಈ ಸಂಗತಿ ಅಷ್ಟೇನೂ ಹಳೆಯದಲ್ಲ, ಡಿಯರ್ ಜಿಂದಗಿ ಪ್ರಾರಂಭವಾಗುವುದಕ್ಕಿಂತ ಮೊದಲೇ ಇದಕ್ಕೆ ಚಾಲನೆ ದೊರಕಿತು ಎಂದು ಹೇಳಬಹುದು .ಆ ಸಂದರ್ಭದಲ್ಲಿ ಬಹುತೇಕ ಮಿತ್ರರಿಂದ ಈ ಪ್ರಯತ್ನಕ್ಕೆ ಅಷ್ಟೇನು ಬೆಂಬಲ ದೊರಕಲಿಲ್ಲ. ಹೀಗೆ ಕೊನೆಗೂ ಆತ್ಮಹತ್ಯಾ ವಿಚಾರದ ಸಂವಾದ ಹುಟ್ಟಿಕೊಂಡಿತು. ನಾವು ಯಾವಾಗಲು ಬಾಹ್ಯ ಜಗತ್ತಿನ ಸಮಸ್ಯೆಗಳ ಬಗ್ಗೆ ಮಾತನಾಡುತ್ತಿರುತ್ತೇವೆ ಆದರೆ ವಾಸ್ತವ ಸಂಗತಿ ಏನೇನೆಂದರೆ ಬಹುತೇಕ ಸಮಸ್ಯೆಗಳು ನಮ್ಮ ಅಂಗಳದಲ್ಲಿಯೇ ಇರುತ್ತದೆ.
ಈಗ ಪ್ರಸ್ತಾಪಿಸಿರುವ ಬಹುತೇಕ ಆತ್ಮಹತ್ಯೆಗಳು ಜೀವಕ್ಕೆ ಬೆಲೆ ಇಲ್ಲವೆನ್ನುವಂತೆ ಮಾಡಿವೆ. ಆದ್ದರಿಂದ ಬಹುತೇಕ ಜನರು ಕೇವಲ ಆತ್ಮಹತ್ಯೆಯಿಂದಲೇ ತಮ್ಮ ಜೀವನವನ್ನು ಕಳೆದುಕೊಂಡಿದ್ದಾರೆ. ಆದರೆ ಇದು ಕೇವಲ ನಾಣ್ಯದ ಒಂದು ಭಾಗವಷ್ಟೇ, ಭಾರತದಲ್ಲಿ ರೈತರು ಸಾಲದ ವಿಚಾರವಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾನೆ. ಒಂದು ವೇಳೆ ನೌಕರನು ಕೂಡ ಉದ್ಯೋಗ ಕಳೆದುಕೊಂಡು ನಂತರ ಇದೇ ಮಾರ್ಗ ಹಿಡಿದರೆ ಅದು ಕೂಡ ನಿಜಕ್ಕೂ ದುಃಖದ ಸಂಗತಿಯಾಗುತ್ತದೆ. ಇನ್ನೊಂದೆಡೆಗೆ ಸರ್ಕಾರವು ಕೂಡ ಅಷ್ಟೇ ಜನಪರವಲ್ಲದ ನಿಲುವುಗಳನ್ನು ತಾಳುತ್ತಿದೆ. ಆದರೆ ಅದಾಗಬಾರದು ಕಾರಣವಿಷ್ಟೇ ಜೀವನ ಎನ್ನುವುದು ಎಲ್ಲ ಸಾಲಕ್ಕಿಂತಲೂ ಅಮೂಲ್ಯವಾದದ್ದು ಎನ್ನುವುದನ್ನು ಅರಿತುಕೊಳ್ಳಬೇಕಾಗಿದೆ.
ಈಗ ಪ್ರಸ್ತಾಪಿಸಿರುವ ಅಂಶವು ಕೇವಲ ನಾಣ್ಯದ ಒಂದು ಭಾಗ, ಆದರೆ ಅದಕ್ಕೆ ಸೂಕ್ತವಾದ ಮಾರ್ಗವನ್ನು ಇದುವರೆಗೂ ಹುಡುಕಿಲ್ಲ. ಈಗ ಇಲ್ಲಿ ನಾವು ಹೇಳ ಹೊರಟಿರುವ ವಿಷಯ ಭಿನ್ನವಾದದ್ದು.ಇ ದು ಉತ್ತಮ ಜೀವನ ಮಾರ್ಗವನ್ನು ಹೊಂದಿದ್ದರು ಸಹಿತ ಭಾರತದ ಬಹುತೇಕ ಮಧ್ಯಮ ವರ್ಗದ ಜನರು ತಮ್ಮ ಜೀವನವನ್ನು ಕಳೆದುಕೊಳ್ಳುತ್ತಿದ್ದಾರೆ.
ಆದ್ದರಿಂದ ಈ ಆತ್ಮಹತ್ಯೆಯ ಕುರಿತಾದ ಪ್ರಶ್ನೆ ಅಮೇರಿಕಾದವರೆಗೂ ತಲುಪಿ ಇವೆರೆಲ್ಲರೂ ಕೂಡ ಯಾಕೆ ಜೀವನದ ಎಲ್ಲ ರೀತಿಯ ಭೌತಿಕ ಸಂತೋಷಗಳನ್ನು ಬಿಟ್ಟು ಸಾಗುತ್ತಿದ್ದಾರೆ ಎನ್ನುವ ವಿಚಾರ ಈಗ ಚರ್ಚೆಯ ವಿಷಯವಾಗಿದೆ . ಇವರೆಲ್ಲರೂ ಕೂಡ ಸಾಮಾನ್ಯ ವ್ಯಕ್ತಿಯಂತೆಯೇ ಜೀವನವನ್ನು ತೊರೆಯುತ್ತಿದ್ದಾರೆ. ಈ ವಿಚಾರವಾಗಿ ಕಳೆದ ವಾರ ಅಮೆರಿಕಾದ ಇಬ್ಬರು ಮಹಾನ್ ವ್ಯಕ್ತಿಗಳು ಆತ್ಮಹತ್ಯೆಯ ಮೂಲಕ ಜೀವನಕ್ಕೆ ವಿಧಾಯ ಹೇಳಿದರು.
ಇದರಲ್ಲಿ ಮೊದಲನೆಯದಾಗಿ ಪ್ರಸಿದ್ದ ಫ್ಯಾಶನ್ ಡಿಸೈನರ್ ಕೆಟ್ ಸ್ಪೀಡ್( 55 )ನ್ಯೂಯಾರ್ಕ್ ನಲ್ಲಿ ಮಾನಸಿಕ ಖಿನ್ನತೆಯಿಂದ ಮೃತಪಟ್ಟರು. ಮಾನಸಿಕ ಖಿನ್ನತೆಗೆ ಅವರು ಚಿಕಿತ್ಸೆಯನ್ನು ಸಹ ಪಡೆಯುತ್ತಿದರು ಎಂದು ಪತಿ ಪೋಲೀಸರ ಮುಂದೆ ಹೇಳಿಕೆ ದಾಖಲಿಸಿದರು.
ಈ ಸಾವು ಪ್ರಮುಖವಾಗಿ ಲೇಖಕ ಹಾಗೂ ಆಹಾರ ವಿಶ್ಲೇಷನೆಗಳ ಕುರಿತಾಗಿ ಬರೆಯುತ್ತಿದ್ದ ಅಂತೋಣಿ ಬೋರ್ಡನ್ ಅವರ ಆತ್ಮಹತ್ಯೆ ನಂತರ ಬಂದಿರುವ ಸುದ್ದಿಯಾಗಿದೆ. 61 ವರ್ಷದ ಅಂತೋಣಿಯವರು ಸಿಎನ್ಎನ್ ನಲ್ಲಿ ಸರಣಿ ಕಾರ್ಯಕ್ರಮವಾದ 'Parts Unknown' ಸಾಕಷ್ಟು ಜನಪ್ರಿಯವಾಗಿತ್ತು. ಅಲ್ಲದೆ ಅವರ 'Kitchen Confidential: Adventures in the Culinary Underbelly ಎನ್ನುವ ಪುಸ್ತಕ ಸಹ ಆಹಾರದ ವಿಷಯವಾಗಿ ಸಾಕಷ್ಟು ಜನಪ್ರೀಯತೆ ಗಳಿಸಿತ್ತು.
ಈಗ ಆತ್ಮಹತ್ಯೆಯು ಅಮೆರಿಕದಲ್ಲಿರುವ ಉಪಯೋಗಿಸಿ ಎಸೆ ಎನ್ನುವ ಜೀವನ ಶೈಲಿಯ ಮೂಲಕ ಪ್ರಭಾವ ಬೀರುತ್ತಿದೆ. ಆದ್ದರಿಂದ ಈಗ ಹಣದ ನಂತರದ ಸ್ಥಿತಿಯೇನು,ಅಥವಾ ಪಾಪುಲಾರಿಟಿ ನಂತರದ ಸ್ಥಿತಿಯೇನು ಎನ್ನುವಂತಾಗಿದೆ. ಇದಕ್ಕೆ ಇನ್ನು ಉತ್ತರವೂ ಸಿಕ್ಕಿಲ್ಲ. ಆದ್ದರಿಂದ 2016 ರಲ್ಲಿ 45,000 ಹೆಚ್ಚು ಜನರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪ್ರಮುಖವಾಗಿ ಪ್ರತಿದಿನ ಇಂತಹ ಪ್ರಕರಣಗಳು ಹೆಚ್ಚುತ್ತಲೇ ಇವೆ ಎಂದು ಹೇಳಬಹುದು. 1999 ಕ್ಕೆ ಹೋಲಿಸಿದರೆ ಇಂತಹ ಪ್ರಕರಣಗಳ ಸಂಖ್ಯೆಯಲ್ಲಿ ಶೇ 24 ರಷ್ಟು ಹೆಚ್ಚಳ ಕಂಡಿದೆ. ಇದು ಪ್ರಮುಖವಾಗಿ ಇಂತಹ ಸಂಗತಿಗಳು ಹೇರಳವಾಗಿ ಸಂಪತ್ಪರಿತ ವ್ಯಕ್ತಿಗಳು ಇದಕ್ಕೆ ಈಡಾಗುತ್ತಿದ್ದಾರೆ.
ಇಲ್ಲಿ ನಾವು ಅಮೆರಿಕಾವನ್ನು ಕೇಂದ್ರವಾಗಿಟ್ಟುಕೊಂಡು ಈ ಎರಡು ಸೆಲೆಬ್ರಿಟಿಗಳ ಉದಾಹರಣೆಯನ್ನು ನೀಡುತ್ತಿಲ್ಲ ಬದಲಾಗಿ ಹಣ ಸಂಪತ್ತು ಸಮೃದ್ಧಿ ಎಲ್ಲವು ಇರುವ ಅಮೆರಿಕಾದಂತಹ ದೇಶದಲ್ಲಿ ಆತ್ಮಹತ್ಯಾ ಪ್ರಕರಣಗಳು ಹೆಚ್ಚುತ್ತಿರುವುದೇಕೆ?. ಇನ್ನು ಇಲ್ಲಿ ಹೆಚ್ಚುತ್ತಿರುವ ಆತ್ಮಹತ್ಯೆಯ ಪ್ರಕರಣಗಳು ನಿಜಕ್ಕೂ ಯಾವ ದಿಕ್ಕಿಗೆ ಕರೆದೊಯ್ಯುತ್ತಿವೆ.?ಎನ್ನುವುದು ನಿಜಕ್ಕೂ ಆತಂಕದ ಸಂಗತಿಯಾಗಿದೆ.
ಅಷ್ಟಕ್ಕೋ ಈ ಸಂಗತಿ ಹೇಳುವುದಿಷ್ಟೇ ಕೇವಲ ಹಣಮತ್ತು ಸೌಕರ್ಯಗಳಿಂದ ಈ ಜಗತ್ತು ಚಲಿಸುವುದಿಲ್ಲ.ಬದಲಾಗಿ ಜೀವನದಲ್ಲಿನ ಸ್ನೇಹ,ಪ್ರೇಮ,ಅಥವಾ ಆತ್ಮೀಯತೆ ಮನುಷ್ಯನಿಗೆ ಈಗ ಅವಶ್ಯಕವಾಗಿದೆ. ಈಗ ಪ್ರತಿ ದಿನ ಬರುತ್ತಿರುವ ಗೆಜೆಟ್ ಗಳು ಮನುಷ್ಯ ಸಂಬಂಧವನ್ನು ದೂರವಿಡುತ್ತಿದೆ. ಇವೆಲ್ಲವೂ ಅವನನ್ನು ಏಕಾಂತತೆಗೆ ತಳ್ಳುತ್ತಿದೆ. ಆದ್ದರಿಂದ ಇದು ಅವನ ಮಾನಸಿಕ ಖಿನ್ನತೆಗೆ ಕಾರಣವಾಗಿ ಆತ್ಮಹತ್ಯೆಗೆ ತಳ್ಳುತ್ತಿದೆ.ಆದ್ದರಿಂದ ಯಾವಾಗಲೂ ಅಮೇರಿಕಾದ ಕಡೆ ನೋಡುವ ಯುವ ಜನತೆ ಈ ಗಂಭೀರ ಸಮಸ್ಯೆಯನ್ನು ಅರಿತುಕೊಳ್ಳಬೇಕಾಗಿದೆ.
ಅಲ್ಲದೆ ಪೋಷಕರು ಸಹಿತ ತಮ್ಮ ಮಗು ತಮಗೆ ಎಲ್ಲದಕ್ಕಿಂತಲೂ ಮಹತ್ವದ್ದು ಎನ್ನುವುದನ್ನು ಅರಿಯಬೇಕಾಗಿದೆ. ಇದಾದ ನಂತರ ಈ ವಿಷಯ ಮಗುವಿನಲ್ಲಿಯೂ ಕೂಡ ವೃದ್ದಿಗೊಳಿಸಬೇಕಾಗಿದೆ.ಎಲ್ಲಿಯವರೆಗೂ ಮಗುವಿನಲ್ಲಿ ಸ್ನೇಹ,ಪ್ರೇಮದ ವಿಚಾರಗಳನ್ನು ತುಂಬುವುದಿಲ್ಲವೋ ಅಲ್ಲಿಯವರೆಗೆ ಸಮಸ್ಯೆಯ ಸುಳಿಯಲ್ಲಿ ಸಿಲುಕಿರುವವರನ್ನು ಯಾರು ರಕ್ಷಿಸುತ್ತಾರೆ ಎನ್ನುವುದು ಪ್ರಮುಖ ಸಂಗತಿಯಾಗಿದೆ.
ಆದ್ದರಿಂದ ಸ್ನೇಹಿತರೆ ನಾವು ಮಕ್ಕಳ ಜೊತೆ, ಪತಿಯ ಜೊತೆ, ನಮ್ಮ ಸಮಯವನ್ನು ಮಿಸಲಿಡಬೇಕಾಗಿದೆ. ಏಕೆಂದರೆ ನಾವು ಈಗ ಪ್ರೀತಿ ಆತ್ಮಿಯತೆಗಳ ಕೊರತೆಯಿಂದ ಆತ್ಮಹತ್ಯೆಯ ಘಟಕ್ಕೆ ತಲುಪಿದ್ದೇವೆ. ಆದ್ದರಿಂದ ಈ ಒಬ್ಬಂಟಿತನ ಎನ್ನುವುದು ಇಡೀ ಜೀವನವನ್ನೇ ಬಲಿ ತೆಗೆದುಕೊಳ್ಳುತ್ತಿದೆ.