ಯುಕೆಪಿ ಸಂತ್ರಸ್ತರಿಗೆ ಹಕ್ಕು ಪತ್ರ ವಿತರಿಸಿದ ಡಿಸಿಎಂ ಗೋವಿಂದ ಕಾರಜೋಳ

ಚರಂತಿಮಠ ಅವರು ಯುಕೆಪಿ, ಪುನರ್ವಸತಿ, ಪುನರ್ ನಿರ್ಮಾಣ ಕುರಿತ  ಸಮಸ್ಯೆಗಳನ್ನು  ಸಮಗ್ರವಾಗಿ ಮಾಹಿತಿ ಹೊಂದಿದ್ದು, ಸುಸಲಿತವಾಗಿ ತ್ವರಿತವಾಗಿ ಸಮಸ್ಯೆಗಳನ್ನು  ಪರಿಹರಿಸಲಿದ್ದಾರೆ. ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. 

Last Updated : Aug 18, 2020, 02:10 PM IST
ಯುಕೆಪಿ ಸಂತ್ರಸ್ತರಿಗೆ ಹಕ್ಕು ಪತ್ರ ವಿತರಿಸಿದ ಡಿಸಿಎಂ ಗೋವಿಂದ ಕಾರಜೋಳ  title=

ಬಾಗಲಕೋಟೆ: ಯುಕೆಪಿ ಯೋಜನೆಯ 2ನೇ ಘಟಕದ ವ್ಯಾಪ್ತಿಯ ಬಾಡಿಗೆದಾರರು ಹಾಗೂ ಇತರೆ  ಸಂತ್ರಸ್ತರಿಗೆ ಹಕ್ಕು ಪತ್ರಗಳನ್ನು ಬಾಗಲಕೋಟೆಯಲ್ಲಿ ಇಂದು  ಉಪಮುಖ್ಯಮಂತ್ರಿ ಗೋವಿಂದ ಎಂ ಕಾರಜೋಳ (Govinda M Karajola) ವಿತರಿಸಿದರು. 

ನಂತರ ಮಾತನಾಡಿದ ಗೋವಿಂದ ಎಂ ಕಾರಜೋಳ, ಮಾಜಿ ಮುಖ್ಯಮಂತ್ರಿಗಳಾದ ದಿ. ರಾಮಕೃಷ್ಣ ಹೆಗ್ಗಡೆ ಅವರು ಬಾಗಲಕೋಟೆ ನವನಗರವನ್ನು ಚಂಡಿಗಡದ ಮಾದರಿಯಲ್ಲಿ ನಿರ್ಮಿಸುವ ಕನಸನ್ನು ಹೊಂದಿದ್ದರು. ಬಿಡಿಟಿಎ ಅಧ್ಯಕ್ಷರಾಗಿರುವ ಶಾಸಕರಾದ ಡಾ. ವೀರಣ್ಣ ಚರಂತಿಮಠ ಅವರು ರಾಮಕೃಷ್ಣ ಹೆಗಡೆ ಅವರ ಕನಸನ್ನು  ಸಾಕಾರಗೊಳಿಸಲಿದ್ದಾರೆ ಎಂದರು.

ಚರಂತಿಮಠ ಅವರು ಯುಕೆಪಿ, ಪುನರ್ವಸತಿ, ಪುನರ್ ನಿರ್ಮಾಣ ಕುರಿತ  ಸಮಸ್ಯೆಗಳನ್ನು  ಸಮಗ್ರವಾಗಿ ಮಾಹಿತಿ ಹೊಂದಿದ್ದು, ಸುಸಲಿತವಾಗಿ ತ್ವರಿತವಾಗಿ ಸಮಸ್ಯೆಗಳನ್ನು  ಪರಿಹರಿಸಲಿದ್ದಾರೆ. ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.  ನಿವೇಶನ ಪಡೆದ ಸಂತ್ರಸ್ತರು ನಿವೇಶನಗಳನ್ನು ಮಾರಾಟ ಮಾಡಬಾರದು. ಯೋಜನಾ ಬದ್ದವಾಗಿ ನೀಡಿದ ಈ ನಿವೇಶನಗಳು  ತಮ್ಮ ಮನೆತನಕ್ಕೆ, ಮುಂದಿನ ಜನಾಂಗಕ್ಕೆ ಆಸ್ತಿಯಾಗಿ ರೂಪುಗೊಳ್ಳುತ್ತವೆ. ಈ ನಿವೇಶನಗಳನ್ನು‌  ಮಾರಾಟ ಮಾಡಬಾರದು.  ಬಾಗಲಕೋಟೆ ನಗರವು ಮಾದರಿ ನಗರವಾಗಿ ರೂಪಿಸಲು ಎಲ್ಲರೂ ಶ್ರಮಿಸಬೇಕು ಎಂದರು.

ಕೋವಿಡ್-19 (Covid 19) ಹಿನ್ನೆಲೆಯಲ್ಲಿ ಯುಕೆಪಿ ಅನುಷ್ಠಾನಕ್ಕೆ ಹಿನ್ನಡೆಯಾಗಿದೆ. ಕೊವಿಡ್ ವೈರಸ್ ಸಮಸ್ಯೆ  ಇಲ್ಲದಿದ್ದರೆ ಯುಕೆಪಿ ಯೋಜನೆ ಯಶಸ್ವಿಯಾಗಿ ಅನುಷ್ಠಾನಗೊಂಡು ಈ ಭಾಗದ  ಸ್ವರೂಪವೇ ಬದಲಾಗುತ್ತಿತ್ತು ಎಂದು ಅವರು ತಿಳಿಸಿದರು. 

ಶಾಸಕರಾದ ಡಾ. ವೀರಣ್ಣ ಚರಂತಿಮಠ ಅಧ್ಯಕ್ಷತೆ ವಹಿಸಿ ತಾವು ಬಿಟಿಡಿಎ ಅಧ್ಯಕ್ಷರಾಗಿ  ಅಧಿಕಾರ  ಸ್ವೀಕರಿಸಿದ ನಂತರ ಕೈಗೊಂಡ ಕ್ರಮಗನ್ನು ವಿವರಿಸಿದರು. 

ಸಂಸದರಾದ ಪಿ.ಸಿ.ಗದ್ದಿಗೌಡರ್, ಜಿಲ್ಲಾಧಿಕಾರಿಗಳಾದ ಡಾ. ಕ್ಯಾಪ್ಟನ್ ರಾಜೇಂದ್ರ , ಬಿಟಿಡಿಎ ಸದಸ್ಯರು, ಅಧಿಕಾರಿಗಳು ಉಪಸ್ಥಿತರಿದ್ದರು.

Trending News