ದಲಿತ ಬಾಲಕಿ ಅಪಹರಿಸಿ ಅತ್ಯಾಚಾರ; ಇಬ್ಬರು ಯುವಕರ ಬಂಧನ

ಬಾಲಕಿಯನ್ನು ಅಪಹರಿಸಿದ ಯುವಕರು ರಾತ್ರಿ ಶಾಲಾ ಆವರಣಕ್ಕೆ ಕರೆದೊಯ್ದು ಅತ್ಯಾಚಾರ ಎಸಗಿದ್ದಾರೆ.

Last Updated : Mar 29, 2019, 02:34 PM IST
ದಲಿತ ಬಾಲಕಿ ಅಪಹರಿಸಿ ಅತ್ಯಾಚಾರ; ಇಬ್ಬರು ಯುವಕರ ಬಂಧನ title=

ಬಲ್ಲಿಯಾ: ದಲಿತ ಬಾಲಕಿಯನ್ನು ಅಪಹರಿಸಿ ಅತ್ಯಾಚಾರ ಎಸಗಿದ ಇಬ್ಬರು ಯುವಕರನ್ನು ಪೊಲೀಸರು ಬಂಧಿಸಿದ್ದಾರೆ.

ಉತ್ತರಪ್ರದೇಶದ ಬಲ್ಲಿಯಾ ಜಿಲ್ಲೆಯ ನಾಗೋರಾ ಠಾಣಾ ವ್ಯಾಪ್ತಿಯ ಗ್ರಾಮದ ನಿವಾಸಿ 15 ವರ್ಷದ ದಲಿತ ಬಾಲಕಿಯನ್ನು ಮಾರ್ಚ್ 27ರ ರಾತ್ರಿ ಆಕೆಯ ಮನೆಯಿಂದ ಅಪಹರಿಸಿದ ಹಿಮಾಂಶು ಮತ್ತು ರೋಹಿತ್ ಎಂಬ ಯುವಕರು ಬೈಕಿನಲ್ಲಿ ಬಂದು ಒಂಟಿಯಾಗಿದ್ದ ಬಾಲಕಿಯನ್ನು ಅಪಹರಿಸಿದ್ದರು ಎನ್ನಲಾಗಿದೆ. 

ವರದಿಗಳ ಪ್ರಕಾರ,  ಬಾಲಕಿಯನ್ನು ಅಪಹರಿಸಿದ ಯುವಕರು ರಾತ್ರಿ ಶಾಲಾ ಆವರಣಕ್ಕೆ ಕರೆದೊಯ್ದು ಅತ್ಯಾಚಾರ ಎಸಗಿದ್ದಾರೆ. ಈ ಬಗ್ಗೆ ನಾಗೋರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಇಬ್ಬರೂ ಆರೋಪಿಗಳು 18-20 ವರ್ಷಗಳ ವಯಸ್ಸಿನವರಾಗಿದ್ದು ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ. ಅಪ್ರಾಪ್ತ ಬಾಲಕಿಯನ್ನು ಜಿಲ್ಲಾಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ.

Trending News