Cylinder Blast: ಜೋಧ್‌ಪುರದಲ್ಲಿ ಮದುವೆ ಸಮಾರಂಭದಲ್ಲಿ 5 ಸಿಲಿಂಡರ್ ಸ್ಫೋಟ, 60 ಜನರಿಗೆ ಗಾಯ, ನಾಲ್ವರ ದುರ್ಮರಣ

Cylinder Blast: ಮದುವೆ ಸಮಾರಂಭವೊಂದರಲ್ಲಿ ಗ್ಯಾಸ್ ಸಿಲಿಂಡರ್‌ಗಳು ಸ್ಫೋಟಗೊಂಡ ಕಾರಣ ಅಪಘಾತದಲ್ಲಿ ಸುಮಾರು 60 ಜನರಿಗೆ ಸುಟ್ಟ ಗಾಯಗಳಾಗಿದ್ದು, ನಾಲ್ಕು ಮಂದಿ ಮೃತಪಟ್ಟಿರುವ ದುರ್ಘಟನೆ ಜೋಧ್‌ಪುರದ ಭುಂಗ್ರಾ ಗ್ರಾಮದಲ್ಲಿ ನಡೆದಿದೆ.

Written by - Yashaswini V | Last Updated : Dec 9, 2022, 10:19 AM IST
  • ಜೋಧ್‌ಪುರದ ಭುಂಗ್ರಾ ಗ್ರಾಮದಲ್ಲಿ ಮದುವೆ ಸಮಾರಂಭದಲ್ಲಿ ಗ್ಯಾಸ್ ಸಿಲಿಂಡರ್‌ಗೆ ಬೆಂಕಿ
  • ಒಂದೊಂದಾಗಿ ಸ್ಫೋಟಗೊಂಡ ಸಮೀಪದಲ್ಲಿ ಇರಿಸಲಾಗಿದ್ದ 5 ಸಿಲಿಂಡರ್‌ಗಳು
  • ಈ ಅಪಘಾತದಲ್ಲಿ 60 ಜನರಿಗೆ ಗಾಯ, ನಾಲ್ವರ ಮರಣ
Cylinder Blast: ಜೋಧ್‌ಪುರದಲ್ಲಿ ಮದುವೆ ಸಮಾರಂಭದಲ್ಲಿ 5 ಸಿಲಿಂಡರ್ ಸ್ಫೋಟ, 60 ಜನರಿಗೆ ಗಾಯ, ನಾಲ್ವರ ದುರ್ಮರಣ  title=
LPG Cylinder Blast

Cylinder Blast: ಮದುವೆ ಸಮಾರಂಭವೊಂದರಲ್ಲಿ ಗ್ಯಾಸ್ ಸಿಲಿಂಡರ್‌ಗಳು ಏಕಾಏಕಿ ಸ್ಫೋಟಗೊಂಡ ಪರಿಣಾಮ ನಾಲ್ವರು ಸಾವನ್ನಪ್ಪಿರುವ ದುರ್ಘಟನೆ ಜೋಧ್‌ಪುರದ ಭುಂಗ್ರಾ ಗ್ರಾಮದ ಶೇರ್‌ಗಢ್ ಪ್ರದೇಶದಲ್ಲಿ ನಡೆದಿದೆ. ಈ ಅಗ್ನಿ ಅವಘಡದಲ್ಲಿ ಸುಮಾರು 60 ಮಂದಿ ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ. ಈ ಘಟನೆಯಲ್ಲಿ ಗಾಯಗೊಂಡಿರುವ ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ವರದಿಯಾಗಿದೆ.

ಜೋಧ್‌ಪುರದ ಶೇರ್‌ಗಢ್‌ನ ಭುಂಗ್ರಾ ಗ್ರಾಮದಲ್ಲಿ ಮದುವೆ ಸಮಾರಂಭದಲ್ಲಿ ಭಕ್ಷ್ಯಗಳನ್ನು ತಯಾರಿಸುತ್ತಿದ್ದ ಅಡುಗೆ ಮನೆಯಲ್ಲಿ ಮೊದಲಿಗೆ ಸಿಹಿ ತಿನಿಸುಗಳನ್ನು ತಯಾರಿಸುತ್ತಿದ್ದ ಸ್ಟವ್ ಬಳಿ ಅಳವಡಿಸಲಾಗಿದ್ದ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡಿದೆ. ಇದರ ಹಿಂದೆಯೇ ಸಮೀಪದಲ್ಲಿ ಇರಿಸಲಾಗಿದ್ದ 5 ಸಿಲಿಂಡರ್‌ಗಳು ಒಂದೊಂದಾಗಿ ಸ್ಫೋಟಗೊಂಡಿವೆ. 

ಏಕಾಏಕಿ ಬೆಂಕಿ ಹೊತ್ತಿಕೊಂಡಿದ್ದರಿಂದ ಕ್ಷಣ ಮಾತ್ರದಲ್ಲಿ ಮದುವೆ ಸಮಾರಂಭದಲ್ಲಿ ಬೆಂಕಿಯ ಕೆನ್ನಾಲಿಗೆ ಹರಡಿದ್ದು, ಈ ವೇಳೆ ಜನರ ಕಿರುಚಾಟದ ರೋಧನ ಕೇಳಿದ ಗ್ರಾಮಸ್ಥರು ಹರಸಾಹಸ ಪಟ್ಟು ಅಲ್ಲಿದ್ದ ಜನರನ್ನು ರಕ್ಷಿಸಿದ್ದಾರೆ. 

ಇದನ್ನೂ ಓದಿ- ಟಿಆರ್‌ಎಸ್ ನ್ನು ಬಿಆರ್‌ಎಸ್ ಎಂದು ಬದಲಾಯಿಸಲು ಚುನಾವಣಾ ಆಯೋಗ ಒಪ್ಪಿಗೆ

ಈ ಘಟನೆಯ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ ಜಿಲ್ಲಾಧಿಕಾರಿ ಹಿಮಾಂಶು ಗುಪ್ತಾ ಮತ್ತು ಗ್ರಾಮಾಂತರ ಎಸ್ಪಿ ಅನಿಲ್ ಕಯಾಲ್, ಗಾಯಾಳುಗಳನ್ನು  ಜೋಧ್‌ಪುರದ ಮಹಾತ್ಮ ಗಾಂಧಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆಗೆ ನೆರವಾಗಿದ್ದಾರೆ.

ಲಭ್ಯವಿರುವ ಪ್ರಾಥಮಿಕ ಮಾಹಿತಿಗಳ ಪ್ರಕಾರ, ಮದುವೆ ಸಮಾರಂಭದಲ್ಲಿ ಅಡುಗೆಗಾಗಿ 20 ಗ್ಯಾಸ್ ಸಿಲಿಂಡರ್‌ಗಳನ್ನು ಆರ್ಡರ್ ಮಾಡಲಾಗಿತ್ತು. ಅವುಗಳಲ್ಲಿ ಒಂದಕ್ಕೆ ಇದ್ದಕ್ಕಿದ್ದಂತೆ ಬೆಂಕಿ ತಗುಲಿದ ಪರಿಣಾಮ ಒಂದರ ಹಿಂದೆ ಒಂದರಂತೆ ಐದು ಸಿಲಿಂಡರ್‌ಗಳು ಒಟ್ಟಿಗೆ ಸ್ಪೋಟಗೊಂಡಿವೆ. 

ಇದನ್ನೂ ಓದಿ- Viral Video: ಪ್ಲೀಸ್‌ ನನ್ನ ಪ್ರೀತಿಸು! ನಡುಬೀದಿಯಲ್ಲಿ ಯುವತಿ ಕಾಲು ಹಿಡಿದು ಬೇಡಿದ ಹುಡುಗ

ಈ ದುರ್ಘಟನೆಯಲ್ಲಿ ವರ ಸುರೇಂದ್ರ ಸಿಂಗ್, ವರನ ತಂದೆ ತಗತ್ ಸಿಂಗ್, ವರನ ತಾಯಿ ದಖು ಕವಾರ್ ಮತ್ತು ಸಹೋದರಿ ರಸಲ್ ಕನ್ವರ್ ಜುಲ್ಸ್ ಸೇರಿದಂತೆ ಸುಮಾರು 60 ಜನರು ಸುಟ್ಟುಕರಕಲಾಗಿದ್ದು ಎಲ್ಲರಿಗೂ ಸ್ಥಳೀಯ ಆಸ್ಪತ್ರೆಯಲ್ಲಿ ಎಲ್ಲರಿಗೂ ಚಿಕಿತ್ಸೆ ಮುಂದುವರೆದಿದೆ ಎಂದು ತಿಳಿದುಬಂದಿದೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News