Cyclone Sitrang Alert! ಭಾರಿ ಅನಾಹುತಕ್ಕೆ ಕಾರಣವಾಗಲಿದೆಯಾ ಸಿತರಂಗ್ ಚಂಡಮಾರುತ! ಈ ರಾಜ್ಯಗಳಿಗೆ ಭಾರಿ ಮಳೆಯ ಎಚ್ಚರಿಕೆ

Sitrang Alert! ಹವಾಮಾನ ಇಲಾಖೆ ಹೊರಡಿಸಿದ ಎಚ್ಚರಿಕೆಯ ಪ್ರಕಾರ, ಉತ್ತರ ಅಂಡಮಾನ್ ಸಮುದ್ರ ಮತ್ತು ಪಕ್ಕದ ದಕ್ಷಿಣ ಅಂಡಮಾನ್ ಸಮುದ್ರ ಮತ್ತು ಆಗ್ನೇಯ ಬಂಗಾಳ ಕೊಲ್ಲಿಯಲ್ಲಿ ಕಡಿಮೆ ಒತ್ತಡದ ಪ್ರದೇಶ ರಚನೆಯಾಗಿದೆ ಎನ್ನಲಾಗಿದೆ.

Written by - Nitin Tabib | Last Updated : Oct 21, 2022, 01:51 PM IST
  • ಅಕ್ಟೋಬರ್ 24-25 ರಂದು ಒಡಿಶಾದಲ್ಲಿ ಭಾರೀ ಮಳೆಯಾಗುವ ಮುನ್ಸೂಚನೆ ನೀಡಲಾಗಿದೆ.
  • ಇದೇ ವೇಳೆ ಅಕ್ಟೋಬರ್ 24-25 ರಂದು ಪಶ್ಚಿಮ ಬಂಗಾಳದಲ್ಲಿ ಭಾರೀ ಮಳೆಯಾಗಬಹುದು.
  • ಅಕ್ಟೋಬರ್ 26 ರಂದು ಪ್ರತ್ಯೇಕ ಸ್ಥಳಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ.
Cyclone Sitrang Alert! ಭಾರಿ ಅನಾಹುತಕ್ಕೆ ಕಾರಣವಾಗಲಿದೆಯಾ ಸಿತರಂಗ್ ಚಂಡಮಾರುತ! ಈ ರಾಜ್ಯಗಳಿಗೆ ಭಾರಿ ಮಳೆಯ ಎಚ್ಚರಿಕೆ title=
Cyclone Sitrang

Cyclone Sitrang: ಹವಾಮಾನ ಇಲಾಖೆ ಹೊರಡಿಸಿದ ಎಚ್ಚರಿಕೆಯ ಪ್ರಕಾರ, ಉತ್ತರ ಅಂಡಮಾನ್ ಸಮುದ್ರ ಮತ್ತು ಪಕ್ಕದ ದಕ್ಷಿಣ ಅಂಡಮಾನ್ ಸಮುದ್ರ ಮತ್ತು ಆಗ್ನೇಯ ಬಂಗಾಳ ಕೊಲ್ಲಿಯಲ್ಲಿ ಕಡಿಮೆ ಒತ್ತಡದ ಪ್ರದೇಶ ರಚನೆಯಾಗಿದೆ. ಅಕ್ಟೋಬರ್ 22 ರ ಸುಮಾರಿಗೆ ಇದು ಪಶ್ಚಿಮ-ವಾಯುವ್ಯ ದಿಕ್ಕಿನಲ್ಲಿ ಚಲಿಸುವ ಸಾಧ್ಯತೆಯಿದೆ. ಇದು ಅಕ್ಟೋಬರ್ 23 ರಂದು ಬಂಗಾಳಕೊಲ್ಲಿಯನ್ನು ತಲುಪಬಹುದು.

ಈ ಕಡಿಮೆ ಒತ್ತಡದ ಪ್ರದೇಶವು ಕ್ರಮೇಣ ಚಂಡಮಾರುತದ ರೂಪ ತಳೆದುಕೊಳ್ಳುವ ತೀವ್ರ ಸಾಧ್ಯತೆ ಇದೆ ಎನ್ನಲಾಗಿದೆ.  ನಂತರ ಅದು ಈಶಾನ್ಯಕ್ಕೆ ಚಲಿಸಿ ಅಕ್ಟೋಬರ್ 25 ರಂದು ಪಶ್ಚಿಮ ಬಂಗಾಳ-ಬಾಂಗ್ಲಾದೇಶ ಕರಾವಳಿಯನ್ನು ತಲುಪುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಚಂಡಮಾರುತದಿಂದ ಭಾರೀ ಮಳೆ ಮತ್ತು ಗಾಳಿಯ ವೇಗದ ಬಗ್ಗೆ IMD ಇನ್ನೂ ಯಾವುದೇ ಮುನ್ಸೂಚನೆ ನೀಡದಿರುವುದು ಪ್ರಸ್ತುತ ಸಮಾಧಾನದ ವಿಷಯವಾಗಿದೆ.

ಸಿತರಂಗ್ ಚಂಡಮಾರುತ
ಈ ಚಂಡಮಾರುತಕ್ಕೆ ಸಿತರಂಗ್ ಎಂದು ಹೆಸರಿಡಲಾಗಿದೆ. ಆರ್‌ಎಸ್‌ಎಂಸಿ, ಆರು ಹವಾಮಾನ ಕೇಂದ್ರಗಳು ಮತ್ತು ಐದು ಪ್ರಾದೇಶಿಕ ಉಷ್ಣವಲಯದ ಸೈಕ್ಲೋನ್ ಎಚ್ಚರಿಕೆ ಕೇಂದ್ರಗಳು (TCWC) ಒಟ್ಟಾಗಿ ಈ ಹೆಸರನ್ನು ಚಂಡಮಾರುತಕ್ಕೆ ನೀಡಿವೆ. 13 ಸದಸ್ಯ ರಾಷ್ಟ್ರಗಳು ಈ ಸಮಿತಿಯ ಅಡಿಯಲ್ಲಿ ಬರುತ್ತವೆ. ಈ ಸಮಿತಿಯು ಚಂಡಮಾರುತದ ಕುರಿತು ಸಲಹೆಯನ್ನು ನೀಡುತ್ತದೆ.

ಇದನ್ನೂ ಓದಿ-Viral Video:ವಿದೇಶಿ ಯುವತಿಗೆ ಪ್ರಪೋಸ್ ಮಾಡಲು ಭಾರತೀಯ ಹುಡುಗ ಹೇಗೆ ಸ್ಟಂಟ್ ಮಾಡಿದ್ದಾನೆ ನೋಡಿ!

ಇದರಲ್ಲಿ ಭಾರತ, ಬಾಂಗ್ಲಾದೇಶ, ಇರಾನ್, ಮಾಲ್ಡೀವ್ಸ್, ಮ್ಯಾನ್ಮಾರ್, ಓಮನ್, ಪಾಕಿಸ್ತಾನ, ಕತಾರ್, ಸೌದಿ ಅರೇಬಿಯಾ, ಶ್ರೀಲಂಕಾ, ಥೈಲ್ಯಾಂಡ್, ಯುನೈಟೆಡ್ ಅರಬ್ ಎಮಿರೇಟ್ಸ್ ಮತ್ತು ಯೆಮೆನ್ ಶಾಮೀಲಾಗಿವೆ. ಈ ಚಂಡಮಾರುತ ಹೆಸರನ್ನು ಸಿತರಂಗ್ ಎಂದು ಥೈಲ್ಯಾಂಡ್ ಸೂಚಿಸಿದೆ.

ಇದನ್ನೂ ಓದಿ-Viral Video : ಆನೆಯ ಬೇಟೆಗಾಗಿ ಬಂದಿತ್ತು ಹುಲಿ.! ಗಜರಾಜ ತಿರುಗಿ ಬಿದ್ದಾಗ ನಡೆದದ್ದು...

ಮಳೆ ಮುನ್ಸೂಚನೆ
ಅಕ್ಟೋಬರ್ 24-25 ರಂದು ಒಡಿಶಾದಲ್ಲಿ ಭಾರೀ ಮಳೆಯಾಗುವ ಮುನ್ಸೂಚನೆ ನೀಡಲಾಗಿದೆ. ಇದೇ ವೇಳೆ ಅಕ್ಟೋಬರ್ 24-25 ರಂದು ಪಶ್ಚಿಮ ಬಂಗಾಳದಲ್ಲಿ ಭಾರೀ ಮಳೆಯಾಗಬಹುದು. ಅಕ್ಟೋಬರ್ 26 ರಂದು ಪ್ರತ್ಯೇಕ ಸ್ಥಳಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ. ನಾಗಾಲ್ಯಾಂಡ್, ಮಣಿಪುರ, ಮಿಜೋರಾಂ ಮತ್ತು ತ್ರಿಪುರಾದಲ್ಲಿ ಇದೇ ರೀತಿಯ ಮಳೆಯಾಗುವ ನಿರೀಕ್ಷೆಯಿದೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News