ನವದೆಹಲಿ: ಸೋಷಿಯಲ್ ಮೀಡಿಯಾ(Social Media)ದಲ್ಲಿ ಪ್ರತಿದಿನ ಅನೇಕ ವಿಡಿಯೋಗಳು ವೈರಲ್ ಆಗುತ್ತಿರುತ್ತವೆ. ಕೆಲವು ಮರೆತುಹೋದರೆ, ಇನ್ನು ಕೆಲವು ನಮ್ಮ ಮನಸ್ಸಿಗೆ ತಟ್ಟುತ್ತವೆ. ಅದೇ ರೀತಿಯ ಮತ್ತೊಂದು ವಿಡಿಯೋ ಇದೀಗ ನೆಟಿಜನ್ ಗಳ ಮನಸೆಳೆದಿದೆ. ಮುದ್ದಾದ ಬಾಲಕಿಯೊ ಜೊತೆಗೆ ಶ್ವಾನವೊಂದು ಕಣ್ಣಾಮುಚ್ಚಾಲೆ ಆಟವಾಡಿ ಗಮನ ಸೆಳೆದಿದೆ.
ಕೋವಿಡ್-19 ಸಾಂಕ್ರಾಮಿಕ(COVID-19 Pandemic)ದಿಂದ ಬಹುತೇಕ ಜನರು ಮನೆಯಿಂದ ಹೊರಗೆ ಹೋಗದ ಪರಿಸ್ಥಿತಿ ನಿರ್ಮಾಣವಾಗಿತ್ತು. ಇಂತಹ ಕಠಿಣ ಸಂದರ್ಭದಲ್ಲಿ ಅನೇಕ ಜನರು ಮನೆಯಿಂದಲೇ ಕೆಲಸ ಮಾಡುತ್ತಿದ್ದಾರೆ. ಮಕ್ಕಳು ಕೂಡ ಮನೆಯೊಳಗೆ ಆಟವಾಡುತ್ತಾ ಕಾಲ ಕಳೆಯುತ್ತಿದ್ದಾರೆ. ಯಾವಾಗಲೂ ಮನೆ ಹೊರಗಡೆ ಆಟವಾಡುವ ರೂಢಿ ಮಾಡಿಕೊಂಡಿದ್ದ ಮಕ್ಕಳಿಗೆ ಕೊರೊನಾ ನಿರ್ಬಂಧ ಹೇರಿದೆ. ಆಟವಾಡಲು ಸ್ನೇಹಿತರಿಲ್ಲದೆ ಮಕ್ಕಳು ಮನೆಯಲ್ಲಿಯೇ ಆಟಿಕೆಗಳ ಜೊತೆ ಆಟವಾಡುತ್ತ ದಿನದೂಡುತ್ತಿದ್ದಾರೆ.
ಇದನ್ನೂ ಓದಿ: Indian Railways : ರೈಲು ಟಿಕೆಟ್ ಬುಕ್ ಮಾಡುವಾಗ ನೆನಪಿರಲಿ ಈ ಕೋಡ್ ಇಲ್ಲವಾದರೆ ಸಿಗುವುದಿಲ್ಲ ಸೀಟ್
ಕೊರೊನಾ ಸಂಕಷ್ಟದ ಪರಿಸ್ಥಿತಿಯಲ್ಲಿ ಮಕ್ಕಳು ಆಟವಾಡಲು ಹಲವು ಮಾರ್ಗಗಳನ್ನು ಕಂಡುಕೊಂಡಿದ್ದಾರೆ. ಮಕ್ಕಳು ಮನೆಯಲ್ಲಿ ಮಾಡುವ ತಮಾಷೆಯ ಕೆಲಸಗಳ ಹಲವಾರು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ಈ ಪೈಕಿ ಪುಟ್ಟ ಬಾಲಕಿಯೊಬ್ಬಳು ತಮ್ಮ ಶ್ವಾನದ ಜೊತೆ ಕಣ್ಣಾಮುಚ್ಚಾಲೆ(Hide & Seek)ಆಟವಾಡುತ್ತಿರುವ ವಿಡಿಯೋ ನೋಡುಗರ ಗಮನ ಸೆಳೆಯುತ್ತಿದೆ.
Dog playing hide and seek.. 😀 pic.twitter.com/voSIUZnATO
— Buitengebieden (@buitengebieden_) August 7, 2021
ಈ ವಿಡಿಯೋದಲ್ಲಿ ಶ್ವಾನ(Dog)ಕ್ಕೆ ನಾವಿಬ್ಬರೂ ಕಣ್ಣಾಮುಚ್ಚಾಲೆ ಆಟವಾಡೋಣ ಅಂತಾ ಮುದ್ದಾದ ಬಾಲಕಿ ಹೇಳುತ್ತಾಳೆ. ಕೂಡಲೇ ಶ್ವಾನ ಆಟವಾಡಲು ಒಪ್ಪಿಕೊಂಡಿದೆ. ಅದರಂತೆ ಬಾಲಕಿ ಒಂದೊಂದೇ ಅಂಕಿಗಳನ್ನು ಎಣಿಸುತ್ತಾ ಅಡಗಿಕೊಳ್ಳಲು ಹೋಗುತ್ತಾಳೆ. ಶ್ವಾನವೂ ಕೂಡ ಗೋಡೆಗೆ ಒರಗಿ ತನ್ನ ಮುಖವನ್ನು ಮುಚ್ಚಿಕೊಳ್ಳುತ್ತದೆ. ಬಳಿಕ ಬಾಲಕಿ ಎಲ್ಲಿ ಅಡಗಿಕೊಂಡಿದ್ದಾಳೆಂದು ಹುಡುಕಲು ಶ್ವಾನ ತೆರಳುತ್ತದೆ.
ಇದನ್ನೂ ಓದಿ: Assam Land Dispute: ಈ ರಾಜ್ಯಗಳಲ್ಲಿ ತಲೆದೋರಿತು ತೈಲ ಸಮಸ್ಯೆ : ಬೈಕ್ ಗೆ ಸಿಗಲಿದೆ ಕೇವಲ 5 ಲೀ. ಪೆಟ್ರೋಲ್
ಕೇವಲ 25 ಸೆಕೆಂಡುಗಳ ಈ ವಿಡಿಯೋ(Viral Video)ಸಖತ್ ಸೌಂಡ್ ಮಾಡುತ್ತಿದೆ. ಬಾಲಕಿ ಮತ್ತು ಶ್ವಾನದ ಕಣ್ಣಾಮುಚ್ಚಾಲೆ ವಿಡಿಯೋವನ್ನು ಅನೇಕ ನೆಟಿಜನ್ ಗಳು ಮೆಚ್ಚಿಕೊಂಡಿದ್ದಾರೆ. ಶೇರ್ ಆದ ಬಳಿಕ ಈ ವಿಡಿಯೋವನ್ನು ಲಕ್ಷಾಂತರ ಜನರು ವೀಕ್ಷಿಸಿದ್ದಾರೆ. ಅನೇಕರು ಶ್ವಾನ ಮತ್ತು ಬಾಲಕಿಯ ಕಣ್ಣಾಮುಚ್ಚಾಲೆ ಆಟವನ್ನು ಮೆಚ್ಚಿ ಕಾಮೆಂಟ್ ಕೂಡ ಮಾಡಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ