ಅರವಿಂದ್ ಕೇಜ್ರಿವಾಲ್ ನಿವಾಸದಲ್ಲಿ ಐದು ಗಂಟೆವರೆಗೆ ಕಾದು ನೋಟೀಸ್ ನೀಡಿ ಹಿಂದಿರುಗಿದ ಕ್ರೈಂ ಬ್ರಾಂಚ್

MLA Poaching Case: ಪ್ರಕರಣದ ತನಿಖೆಗೆ ಹಾಜರಾಗುವಂತೆ ಸಿಎಂ ಕೇಜ್ರಿವಾಲ್‌ಗೆ ನೋಟಿಸ್ ನೀಡಲು ದೆಹಲಿ ಕ್ರೈಂ ಬ್ರಾಂಚ್ ದೆಹಲಿ ಸಿಎಂ ನಿವಾಸಕ್ಕೆ ತೆರಳಿದೆ. 

Written by - Ranjitha R K | Last Updated : Feb 3, 2024, 06:00 PM IST
  • ದೆಹಲಿಯಲ್ಲಿ ಬಿಜೆಪಿ ಮತ್ತು ಆಮ್ ಆದ್ಮಿ ಪಕ್ಷದ ನಡುವೆ ಹೊಸ ವಿವಾದ ಶುರುವಾಗಿದೆ
  • ದೂರು ದಾಖಲಿಸಿರುವ ಬಿಜೆಪಿ ತನಿಖೆಗೆ ಆಗ್ರಹಿಸಿದೆ
  • ಶಾಸಕರ ಕುದುರೆ ವ್ಯಾಪಾರ ನಡೆಸುತ್ತಿರುವ ಆರೋಪ
ಅರವಿಂದ್ ಕೇಜ್ರಿವಾಲ್ ನಿವಾಸದಲ್ಲಿ ಐದು ಗಂಟೆವರೆಗೆ ಕಾದು ನೋಟೀಸ್ ನೀಡಿ ಹಿಂದಿರುಗಿದ ಕ್ರೈಂ ಬ್ರಾಂಚ್  title=

MLA Poaching Case: ದೆಹಲಿಯಲ್ಲಿ ಬಿಜೆಪಿ ಮತ್ತು ಆಮ್ ಆದ್ಮಿ ಪಕ್ಷದ ನಡುವೆ ಹೊಸ ವಿವಾದ ಶುರುವಾಗಿದೆ.  ಶಾಸಕರ ಕುದುರೆ ವ್ಯಾಪಾರ ನಡೆಸುತ್ತಿದೆ ಎಂದು ಬಿಜೆಪಿ ವಿರುದ್ದ ಎಎಪಿ ಆರೋಪಿಸಿದೆ. ಈ ಆರೋಪದ ಹಿನ್ನೆಲೆಯಲ್ಲಿ ದೂರು ದಾಖಲಿಸಿರುವ ಬಿಜೆಪಿ ತನಿಖೆಗೆ ಆಗ್ರಹಿಸಿದೆ. ಇದಾದ ನಂತರ ದೆಹಲಿ ಪೊಲೀಸರ ಅಪರಾಧ ವಿಭಾಗದ ತಂಡ ಕೇಜ್ರಿವಾಲ್ ನಿವಾಸ ತಲುಪಿದೆ. ಪ್ರಕರಣದ ತನಿಖೆಗೆ ಹಾಜರಾಗುವಂತೆ ಸಿಎಂ ಕೇಜ್ರಿವಾಲ್‌ಗೆ ನೋಟಿಸ್ ನೀಡಲು ದೆಹಲಿ ಕ್ರೈಂ ಬ್ರಾಂಚ್ ದೆಹಲಿ ಸಿಎಂ ನಿವಾಸಕ್ಕೆ ತೆರಳಿದೆ. 

ಶಾಸಕರ ಕುದುರೆ ವ್ಯಾಪಾರ ನಡೆಸುತ್ತಿರುವ ಆರೋಪ : 
ತನ್ನ ಕೆಲವು ಶಾಸಕರನ್ನು ಖರೀದಿಸುವ ಯತ್ನದಲ್ಲಿ ಬಿಜೆಪಿ ತೊಡಗಿದೆ ಎಂದು  ಎಎಪಿ ಆರೋಪ ಹಿನ್ನೆಲೆಯಲ್ಲಿ ದೆಹಲಿ ರಾಜಕೀಯದಲ್ಲಿ ಬಿಸಿ ಬಿಸಿ ಚರ್ಚೆ ಆರಂಭವಾಗಿದೆ. ಎಎಪಿ ಆರೋಪಗಳ ತನಿಖೆಗೆ ಸಂಬಂಧಿಸಿದಂತೆ ನೋಟಿಸ್ ನೀಡಲು ಪೊಲೀಸ್ ತಂಡವು ಕೇಜ್ರಿವಾಲ್ ನಿವಾಸಕ್ಕೆ ಆಗಮಿಸಿತ್ತು. ಮೂಲಗಳ ಪ್ರಕಾರ, ಪೊಲೀಸ್ ತಂಡವು 5 ಗಂಟೆಗಳ ಕಾಲ ಕೇಜ್ರಿವಾಲ್ ಅವರ ನಿವಾಸದಲ್ಲಿ ಕಾದು ಕುಳಿತಿತ್ತು. ಕೇಜ್ರಿವಾಲ್ ಅವರಿಗೆ ನೋಟಿಸ್ ನೀಡುವ ಸಲುವಾಗಿ ಪೋಲಿಸ್ ಅಧಿಕಾರಿಗಳು ಆಗಮಿಸಿದ್ದರು.ನಂತರ ಕೇಜ್ರಿವಾಲ್ ಅಧಿಕಾರಿಗಳಿಗೆ ನೋಟಿಸ್ ನೀಡಿ  ತೆರಳುವಂತಾಯಿತು. 

ಇದನ್ನೂ ಓದಿ : Daily GK Quiz: ಭಾರತದ ರಾಷ್ಟ್ರಧ್ವಜವನ್ನು ವಿನ್ಯಾಸಗೊಳಿಸಿದವರು ಯಾರು?

ಮಾಧ್ಯಮ ಪ್ರತಿನಿಧಿಗಳೊಂದಿಗೆ ತಲುಪಿದ ಪೋಲೀಸ್ : 
ಅಸಿಸ್ಟೆಂಟ್ ಕಮಿಷನರ್ ಆಫ್ ಪೊಲೀಸ್ (ಎಸಿಪಿ) ಮಟ್ಟದ ಅಧಿಕಾರಿ ನೇತೃತ್ವದ ತಂಡವು ಕೇಜ್ರಿವಾಲ್ ನಿವಾಸ ತಲುಪಿತ್ತು. ಅಲ್ಲದೆ ಅರವಿಂದ್ ಕೇಜ್ರಿವಾಲ್ ಕೈಯ್ಯಲ್ಲಿಯೇ ನೋಟೀಸ್ ನೀಡುವುದಾಗಿ ಪಟ್ಟು ಹಿಡಿದಿದ್ದರು. ಆದರೆ, ಮುಖ್ಯಮಂತ್ರಿ ನಿವಾಸದ ಅಧಿಕಾರಿಗಳು ತಾವು ನೋಟಿಸ್ ತೆಗೆದುಕೊಳ್ಳಲು ಸಿದ್ಧ ಎಂದು ಹೇಳಿದರು. ಮುಖ್ಯಮಂತ್ರಿಯ ಗೌರವಕ್ಕೆ ಧಕ್ಕೆ ತರುವ ಉದ್ದೇಶದಿಂದಲೇ ಪೊಲೀಸರು ಮಾಧ್ಯಮದವರನ್ನು ಜೊತೆಯಲ್ಲಿ ಕರೆ ತಂದಿದ್ದರು ಎನ್ನುವುದು ಎಎಪಿ  ಆರೋಪ. 

ಶುಕ್ರವಾರವೂ  ಸಿಎಂ ನಿವಾಸಕ್ಕೆ ಬಂದಿದ್ದ ಪೊಲೀಸರು : 
ಕ್ರೈಂ ಬ್ರಾಂಚ್ ತಂಡವು ಶುಕ್ರವಾರ ಸಂಜೆ ಕೇಜ್ರಿವಾಲ್ ಮತ್ತು ದೆಹಲಿ ಸಚಿವ ಅತಿಶಿ ಅವರ ನಿವಾಸಕ್ಕೆ ತೆರಳಿತ್ತು. ಕೇಜ್ರಿವಾಲ್ ನಿವಾಸದ ಅಧಿಕಾರಿಗಳು ನೋಟೀಸ್  ಸ್ವೀಕರಿಸಲು ನಿರಾಕರಿಸಿದ್ದರಿಂದ ಮತ್ತು ಅತಿಶಿ ನಿವಾಸದಲ್ಲಿ ಇಲ್ಲದ ಕಾರಣ ನಿನ್ನೆ ಸಂಜೆ ಅವರಿಗೆ ನೋಟಿಸ್ ನೀಡಲು ಸಾಧ್ಯವಾಗಲಿಲ್ಲ ಎಂದು ಮೂಲಗಳು ತಿಳಿಸಿವೆ.

ಇದನ್ನೂ ಓದಿ : Bharat Ratna: ಭಾರತ ರತ್ನ ನೀಡಲು ಇರುವ ಮಾನದಂಡಗಳೇನು? ಪುರಸ್ಕೃತರಿಗೆ ಏನೆಲ್ಲಾ ಸೌಲಭ್ಯ ಸಿಗುತ್ತೆ? ಇಲ್ಲಿದೆ ಮಹತ್ವದ ಮಾಹಿತಿ

ಕೇಜ್ರಿವಾಲ್ ಗಂಭೀರ ಆರೋಪ  :
ದೆಹಲಿಯಲ್ಲಿ ತನ್ನ ಸರ್ಕಾರವನ್ನು ಉರುಳಿಸಲು ಬಿಜೆಪಿ ತನ್ನ ಏಳು ಶಾಸಕರಿಗೆ ತಲಾ 25 ಕೋಟಿ ರೂಪಾಯಿಗಳನ್ನು ನೀಡಿದೆ ಎಂದು ಕೇಜ್ರಿವಾಲ್ ಕಳೆದ ವಾರ ಆರೋಪಿಸಿದ್ದರು. ದೆಹಲಿಯಲ್ಲಿ ಬಿಜೆಪಿ ಆಪರೇಷನ್ ಕಮಲ 2.0 ಆರಂಭಿಸಿದೆ ಎಂದು ದೆಹಲಿ ಸಚಿವ ಅತಿಶಿ ಕಳೆದ ವಾರ ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದ್ದರು. ಎಎಪಿ ಶಾಸಕರನ್ನು ಹಣದ ಆಮಿಷವೊಡ್ಡಿ ತಮ್ಮ ಕಡೆಗೆ ಸೆಳೆಯಲು ಪ್ರಯತ್ನ ನಡೆಸಿ, ವಿಫಲರಾಗಿದ್ದಾರೆ ಎಂದು ಅತಿಶಿ  ಆಪಾದಿಸಿದ್ದಾರೆ. 

ಈ ಆರೋಪಗಳ ನಂತರ, ಬಿಜೆಪಿಯ ದೆಹಲಿ ಘಟಕದ ಮುಖ್ಯಸ್ಥ ವೀರೇಂದ್ರ ಸಚ್‌ದೇವ ನೇತೃತ್ವದ ನಿಯೋಗವು ಜನವರಿ 30 ರಂದು ನಗರ ಪೊಲೀಸ್ ಮುಖ್ಯಸ್ಥರನ್ನು ಭೇಟಿ ಮಾಡಿ ಆರೋಪಗಳ ತನಿಖೆಗೆ ಒತ್ತಾಯಿಸಿತ್ತು. ದೆಹಲಿ ಪೊಲೀಸ್ ಪ್ರಧಾನ ಕಚೇರಿಯಲ್ಲಿ ದೆಹಲಿ ಪೊಲೀಸ್ ಕಮಿಷನರ್ ಸಂಜಯ್ ಅರೋರಾ ಅವರನ್ನು ಭೇಟಿ ಮಾಡಿದ ನಂತರ, ಸಚ್‌ದೇವ ಅವರು ಕೇಜ್ರಿವಾಲ್ ಅವರ ಆರೋಪಗಳನ್ನು ಸಾಬೀತುಪಡಿಸುವಂತೆ ಕೇಳಲಾಯಿತು. ಆದರೆ, ಎಎಪಿ ಈ ಆರೋಪ ಸಾಬೀಸುಪಡಿಸಲು ಯಾವುದೇ ರೀತಿಯ ಪುರಾವೆ ನೀಡಿಲ್ಲ ಎನ್ನಲಾಗಿದೆ. 

ಇದನ್ನೂ ಓದಿ :  LK Advani Bharat Ratna: ಬಿಜೆಪಿ ಭೀಷ್ಮ ಎಲ್ ಕೆ ಅಡ್ವಾಣಿಯವರಿಗೆ ‘ಭಾರತ ರತ್ನ’ ಗೌರವ: ಪ್ರಧಾನಿ ಮೋದಿ ಘೋಷಣೆ

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=xFI-KJNrEP8

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News