Corona Vaccine for Children: ಚಿಕ್ಕ ಮಕ್ಕಳ ಕೊರೊನಾ ಲಸಿಕೆಗೆ ಡಿಸಿಜಿಐ ಅನುಮೋದನೆ

Corona Vaccine for Children:  ಕರೋನಾ ಸಾಂಕ್ರಾಮಿಕದ ಮಧ್ಯೆ, ಚಿಕ್ಕ ಮಕ್ಕಳ ಸುರಕ್ಷತೆಯ ಬಗ್ಗೆ ಚಿಂತಿತರಾಗಿರುವ ಪೋಷಕರ ಆತಂಕ ಕೊಂಚ ಕಡಿಮೆ ಆಗಲಿದೆ. ಭಾರತದ ಡ್ರಗ್ ಕಂಟ್ರೋಲರ್ ಜನರಲ್ (ಡಿಸಿಜಿಐ) ಮಂಗಳವಾರ 7 ರಿಂದ 11 ವರ್ಷದೊಳಗಿನ ಮಕ್ಕಳಿಗೆ ಕರೋನಾ ಲಸಿಕೆಯನ್ನು ಕೆಲವು ಷರತ್ತುಗಳೊಂದಿಗೆ ಹಾಕಲು ಅನುಮೋದನೆ ನೀಡಿದೆ.

Written by - Yashaswini V | Last Updated : Jun 29, 2022, 07:19 AM IST
  • ಡಿಸಿಜಿಐ ಮಂಗಳವಾರ ಕೆಲವು ಷರತ್ತುಗಳೊಂದಿಗೆ ಸೀರಮ್ ಇನ್‌ಸ್ಟಿಟ್ಯೂಟ್‌ನ ಲಸಿಕೆ ಕೊವೊವಾಕ್ಸ್ ಅನ್ನು ಅನುಮೋದಿಸಿದೆ.
  • ಈ ಲಸಿಕೆಯನ್ನು 7 ರಿಂದ 11 ವರ್ಷ ವಯಸ್ಸಿನ ಮಕ್ಕಳಿಗೆ ನೀಡಲಾಗುತ್ತದೆ.

    ಸೀಮಿತ ತುರ್ತು ಬಳಕೆಗಾಗಿ ಡಿಸಿಜಿಐ ಈ ಅನುಮೋದನೆಯನ್ನು ನೀಡಿದೆ.
Corona Vaccine for Children: ಚಿಕ್ಕ ಮಕ್ಕಳ ಕೊರೊನಾ ಲಸಿಕೆಗೆ ಡಿಸಿಜಿಐ ಅನುಮೋದನೆ title=
Corona Vaccine for Children

ಮಕ್ಕಳಿಗೆ ಕೊರೊನಾ ಲಸಿಕೆ: ಕೊರೊನಾ ವೈರಸ್‌ನ ನಾಲ್ಕನೇ ಅಲೆಯ ಭಯದ ನಡುವೆ, ದೇಶವಾಸಿಗಳಿಗೆ ಸಂತಸದ ಸುದ್ದಿ ಇದೆ.  ಭಾರತದ ಡ್ರಗ್ ಕಂಟ್ರೋಲರ್ ಜನರಲ್ (ಡಿಸಿಜಿಐ) ಮಂಗಳವಾರ ಕೆಲವು ಷರತ್ತುಗಳೊಂದಿಗೆ ಸೀರಮ್ ಇನ್‌ಸ್ಟಿಟ್ಯೂಟ್‌ನ ಲಸಿಕೆ ಕೊವೊವಾಕ್ಸ್ ಅನ್ನು ಅನುಮೋದಿಸಿದೆ. ಈ ಲಸಿಕೆಯನ್ನು 7 ರಿಂದ 11 ವರ್ಷ ವಯಸ್ಸಿನ ಮಕ್ಕಳಿಗೆ ನೀಡಲಾಗುತ್ತದೆ. ಸೀಮಿತ ತುರ್ತು ಬಳಕೆಗಾಗಿ ಡಿಸಿಜಿಐ ಈ ಅನುಮೋದನೆಯನ್ನು ನೀಡಿದೆ. 

ಮಕ್ಕಳ ಲಸಿಕೆಗೆ ಡಿಸಿಜಿಐ ಅನುಮೋದನೆ:
ಕಳೆದ ವಾರ ಸರ್ಕಾರದ ಕೋವಿಡ್ ತಜ್ಞರ ಸಮಿತಿಯು ಈ ಲಸಿಕೆಯ ತುರ್ತು ಬಳಕೆಯನ್ನು ಅನುಮೋದಿಸಲು ಶಿಫಾರಸು ಮಾಡಿತ್ತು. ಅದರ ನಂತರ ಡಿಸಿಜಿಐ ಮಂಗಳವಾರ ಈ ಘೋಷಣೆ ಮಾಡಿದೆ. ಇದಕ್ಕೂ ಮುನ್ನ ಮಾರ್ಚ್ 16 ರಂದು ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ (ಎಸ್‌ಐಐ) ಮತ್ತು ನಿಯಂತ್ರಣ ವ್ಯವಹಾರಗಳ ನಿರ್ದೇಶಕ ಪ್ರಕಾಶ್ ಕುಮಾರ್ ಸಿಂಗ್ ಅವರು ಡಿಸಿಜಿಐಗೆ ಈ ಸಂಬಂಧ ಮನವಿ ಪತ್ರವನ್ನು ಸಲ್ಲಿಸಿದ್ದರು.

ಇದನ್ನೂ ಓದಿ- Meningococcal: ಕೊರೊನಾ - ಮಂಕಿಪಾಕ್ಸ್ ನಡುವೆ ಮತ್ತೊಂದು ಮಾರಣಾಂತಿಕ ವೈರಸ್ ಪತ್ತೆ

7 ರಿಂದ 14 ವರ್ಷ ವಯಸ್ಸಿನ ಮಕ್ಕಳಿಗೆ ಲಸಿಕೆ:
ವಯಸ್ಕರಲ್ಲಿ ತುರ್ತು ಸಂದರ್ಭಗಳಲ್ಲಿ ಸೀಮಿತ ಬಳಕೆಗಾಗಿ ಡಿಸಿಜಿಐ ಮೊದಲು ಡಿಸೆಂಬರ್ 28 ರಂದು   ಕೊವೊವಾಕ್ಸ್ ಲಸಿಕೆ ಅನ್ನು ಅನುಮೋದಿಸಿತ್ತು. ಮಾರ್ಚ್ 9 ರಂದು, ಕೆಲವು ಷರತ್ತುಗಳೊಂದಿಗೆ 12 ರಿಂದ 17 ವರ್ಷ ವಯಸ್ಸಿನ ಮಕ್ಕಳಿಗೆ ಅನುಮೋದನೆ ನೀಡಲಾಯಿತು. ಭಾರತವು ಮಾರ್ಚ್ 16 ರಂದು 12-14 ವಯಸ್ಸಿನ ಮಕ್ಕಳಿಗೆ ರೋಗನಿರೋಧಕವನ್ನು ಪ್ರಾರಂಭಿಸಿತು. ಈ ರೀತಿಯಾಗಿ, ಈಗ ದೇಶದಲ್ಲಿ 7 ವರ್ಷದಿಂದ 18 ವರ್ಷದ ಹದಿಹರೆಯದವರಿಗೆ ಕರೋನಾ ಲಸಿಕೆಯನ್ನು ಅನುಮೋದಿಸಲಾಗಿದೆ.

ಇದನ್ನೂ ಓದಿ- Coronavirus 4th Wave: ದೇಶದಲ್ಲಿ ಕೊರೊನಾ ನಾಲ್ಕನೇ ಅಲೆ ಶುರುವಾಗಿದೆಯೇ? ಅಂಕಿಅಂಶಗಳು ಏನು ಹೇಳುತ್ತಿವೆ?

ದೇಶದಲ್ಲಿ ಮತ್ತೆ ಕರೋನಾ ಆತಂಕ:
ದೇಶದಲ್ಲಿ ಮತ್ತೆ ಹೆಚ್ಚುತ್ತಿರುವ ಕರೋನಾ ಪ್ರಕರಣಗಳ ಬಗ್ಗೆ ಸರ್ಕಾರದ ಕಾಳಜಿ ಹೆಚ್ಚುತ್ತಿದೆ. ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಅವರು ಇತ್ತೀಚೆಗೆ ದೇಶದ ಆರೋಗ್ಯ ಸಚಿವರು ಮತ್ತು ಆರೋಗ್ಯ ಕಾರ್ಯದರ್ಶಿಗಳೊಂದಿಗೆ ಸಭೆ ನಡೆಸಿದ್ದರು ಮತ್ತು ಈ ವಿಷಯದ ಬಗ್ಗೆ ಎಚ್ಚರದಿಂದ ಇರುವಂತೆ ಸೂಚಿಸಿದ್ದರು. ಸರ್ಕಾರದ ಪ್ರಕಾರ, ಇದುವರೆಗೆ ಹೊಸ ಪ್ರಕರಣದಲ್ಲಿ ರೋಗಲಕ್ಷಣಗಳು ಬಹಳ ಕಡಿಮೆ ತೋರಿಸುತ್ತಿವೆ ಮತ್ತು ಯಾರ ಆರೋಗ್ಯವು ಹೆಚ್ಚು ಗಂಭೀರವಾಗುತ್ತಿಲ್ಲ. ಅದೇನೇ ಇದ್ದರೂ, ಸರ್ಕಾರಗಳು ಹಾಸಿಗೆಗಳು, ಆಮ್ಲಜನಕ ಸೇರಿದಂತೆ ಎಲ್ಲಾ ಸಿದ್ಧತೆಗಳನ್ನು ಕ್ರಮವಾಗಿ ಇರಿಸಬೇಕಾಗುತ್ತದೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News