Covid: ಮುಂಬೈನಲ್ಲಿ ಕೋವಿಡ್‌ 'ಎಕ್ಸ್‌.ಇ' ತಳಿ ಪತ್ತೆ ಪ್ರಕರಣ: ವರದಿಗಳನ್ನು ಅಲ್ಲಗಳೆದ ಕೇಂದ್ರ

ಬಾಲಿವುಡ್‌ನಲ್ಲಿ ಕಾಸ್ಟ್ಯೂಮ್‌ ಡಿಸೈನರ್‌ ಆಗಿ ಕೆಲಸ ಮಾಡುತ್ತಿದ್ದ ಮಹಿಳೆಯೊಬ್ಬರಲ್ಲಿ  'ಎಕ್ಸ್‌.ಇ' ತಳಿಯ ಸೋಂಕು ಪತ್ತೆಯಾಗಿರುವುದಾಗಿ ಮಹಾರಾಷ್ಟ್ರ ಸರ್ಕಾರ ಹೇಳಿತ್ತು. ಸೋಂಕಿತರು ಸದ್ಯ ಗುಣಮುಖರಾಗಿದ್ದು, ಫೆಬ್ರವರಿ ತಿಂಗಳಲ್ಲಿ ದಕ್ಷಿಣ ಆಫ್ರಿಕಾದಿಂದ ವಾಪಾಸ್ಸಾಗಿದ್ದರು ಎನ್ನಲಾಗಿದೆ.

Written by - Zee Kannada News Desk | Last Updated : Apr 7, 2022, 11:27 AM IST
  • ಮುಂಬೈನಲ್ಲಿ ಪತ್ತೆಯಾದ ಹೊಸ 'ಎಕ್ಸ್‌.ಇ' (XE)ಸೋಂಕಿನ ಮೊದಲ ಪ್ರಕರಣ
  • ವರದಿಗಳನ್ನು ಅಲ್ಲಗಳೆದ ಕೇಂದ್ರ ಸರ್ಕಾರದ ಅಧಿಕಾರಿಗಳು
  • ಜನವರಿ 19ರಂದು ಮೊದಲ ಬಾರಿಗೆ ಬ್ರಿಟನ್‌ನಲ್ಲಿ ಕಾಣಿಸಿಕೊಂಡಿದ್ದ ಎಕ್ಸ್.ಇ ತಳಿ
Covid: ಮುಂಬೈನಲ್ಲಿ ಕೋವಿಡ್‌ 'ಎಕ್ಸ್‌.ಇ' ತಳಿ ಪತ್ತೆ ಪ್ರಕರಣ: ವರದಿಗಳನ್ನು ಅಲ್ಲಗಳೆದ ಕೇಂದ್ರ title=
Corona

ನವದೆಹಲಿ: ಕೊರೊನಾ (Corona) ವೈರಸ್‌ನ ಇತರೆ ತಳಿಗಳಿಗಿಂತ ವೇಗವಾಗಿ ಪ್ರಸರಣವಾಗಬಲ್ಲ ಹೊಸ 'ಎಕ್ಸ್‌.ಇ' (XE)ಸೋಂಕಿನ ಮೊದಲ ಪ್ರಕರಣ ಮುಂಬೈನಲ್ಲಿ ಪತ್ತೆಯಾಗಿದೆ ಎಂದು  ಬೃಹನ್‌ ಮುಂಬೈ ಮಹಾನಗರ ಪಾಲಿಕೆ (BMC) ಅಧಿಕಾರಿಗಳು ತಿಳಿಸಿದ್ದರು. ಆದರೆ ಈ ವರದಿಯನ್ನು ಕೇಂದ್ರ ಸರ್ಕಾರ ಅಲ್ಲಗಳೆದಿದೆ. 

ಇನ್ನು ಬಾಲಿವುಡ್‌ನಲ್ಲಿ ಕಾಸ್ಟ್ಯೂಮ್‌ ಡಿಸೈನರ್‌ ಆಗಿ ಕೆಲಸ ಮಾಡುತ್ತಿದ್ದ ಮಹಿಳೆಯೊಬ್ಬರಲ್ಲಿ  'ಎಕ್ಸ್‌.ಇ' ತಳಿಯ ಸೋಂಕು ಪತ್ತೆಯಾಗಿರುವುದಾಗಿ ಮಹಾರಾಷ್ಟ್ರ ಸರ್ಕಾರ ಹೇಳಿತ್ತು. ಸೋಂಕಿತರು ಸದ್ಯ ಗುಣಮುಖರಾಗಿದ್ದು, ಫೆಬ್ರವರಿ ತಿಂಗಳಲ್ಲಿ ದಕ್ಷಿಣ ಆಫ್ರಿಕಾದಿಂದ ವಾಪಾಸ್ಸಾಗಿದ್ದರು ಎನ್ನಲಾಗಿದೆ.

ಇದನ್ನು ಓದಿ: ದೆಹಲಿ ಭೇಟಿ ಫಲಪ್ರದ, ಸಚಿವರಿಂದ ಸಕಾರಾತ್ಮಕ ಸ್ಪಂದನೆ : ಸಿಎಂ ಬೊಮ್ಮಾಯಿ

ಮಹಾರಾಷ್ಟ್ರದ ಸಾರ್ವಜನಿಕ ಆರೋಗ್ಯ ಇಲಾಖೆಯ ಪ್ರಕಟಣೆಯ ಪ್ರಕಾರ, 'ಕಸ್ತೂರ್ಬಾ ಆಸ್ಪತ್ರೆಯ ಪ್ರಯೋಗಾಲಯದಲ್ಲಿ ಜಿನೋಮ್ ಸೀಕ್ವೆನ್ಸಿಂಗ್‌ ವಿಶ್ಲೇಷಣೆಗಾಗಿ ರೋಗಿಯಿಂದ ಸಂಗ್ರಹಿಸಲಾಗಿರುವ ಮಾದರಿಯನ್ನು ಕಳುಹಿಸಲಾಗಿತ್ತು. ಪ್ರಾಥಮಿಕ ವಿಶ್ಲೇಷಣೆಯಲ್ಲಿ 'ಎಕ್ಸ್‌.ಇ' ತಳಿ ಇರುವುದು ಪತ್ತೆಯಾಗಿದೆ'.‌  ಆದರೆ ಮಹಾರಾಷ್ಟ್ರದ ಈ ವರದಿಯನ್ನು ಕೇಂದ್ರ ಸರ್ಕಾರದ ಅಧಿಕಾರಿಗಳು ಅಲ್ಲಗಳೆದಿದ್ದಾರೆ. 'ಎಕ್ಸ್‌.ಇ' ತಳಿ ಪತ್ತೆಯಾಗಿರುವುದಕ್ಕೆ ವೈಜ್ಞಾನಿಕ ಪುರಾವೆಗಳಿಲ್ಲ ಎಂದಿದೆ. 

ಇನ್ನು ಭಾರತದ ಸಾರ್ಸ್‌ ಕೋವ್‌–2 ಜೆನೆಟಿಕ್ಸ್ ಕಾನ್ಸೊರ್ಟಿಯಮ್‌ನ (ಐಎನ್‌ಎಸ್‌ಎಸಿಒಜಿ) ಜಿನೋಮ್ ಸೀಕ್ವೆನ್ಸಿಂಗ್‌ ತಜ್ಞರು ವಿವರವಾಗಿ ಪರಿಶೀಲನೆ ನಡೆಸಿದ್ದು, ಮಾದರಿಯಲ್ಲಿ ಪತ್ತೆಯಾಗಿರುವ ತಳಿಯ ಜಿನೋಮ್‌ ರಚನೆಗಳಿಗೂ ಎಕ್ಸ್‌.ಇ ತಳಿಯ ರಚನೆಗಳೂ ಹೋಲಿಕೆಯಾಗಿಲ್ಲ' ಎಂದು ಅಧಿಕೃತ ಮೂಲಗಳಿಂದ ತಿಳಿದುಬಂದಿದೆ. 

ಇದನ್ನು ಓದಿ: IPL ಮಾಧ್ಯಮ ಹಕ್ಕಿಗಾಗಿ ಪ್ರತ್ಯೇಕ ಬಿಡ್ಡಿಂಗ್ : ಬಿಸಿಸಿಐನ ನೂತನ ಪ್ಲ್ಯಾನ್‌

ಜನವರಿ 19ರಂದು ಮೊದಲ ಬಾರಿಗೆ ಬ್ರಿಟನ್‌ನಲ್ಲಿ ಎಕ್ಸ್.ಇ ತಳಿ (BA.1-BA.2) ಪತ್ತೆಯಾಗಿತ್ತು. ಈ ತಳಿಯು ಇತರೆ ಕೊರೊನಾ ವೈರಸ್‌ ವೇರಿಯೆಂಟ್‌ಗಳಿಗಿಂತಲೂ ಶೇ. 10ರಷ್ಟು ವೇಗವಾಗಿ ಹರಡಬಹುದಾಗಿದ್ದು, ಹೆಚ್ಚಿನ ಅಧ್ಯಯನದ ಅವಶ್ಯಕತೆ ಇದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News