ನವದೆಹಲಿ : ನವದೆಹಲಿ: ಕೋವಿಡ್ -19 ಸಾಂಕ್ರಾಮಿಕವು ಸ್ವಾತಂತ್ರ್ಯದ ನಂತರ ಭಾರತ ಎದುರಿಸುತ್ತಿರುವ ಬಹುದೊಡ್ಡ ಸವಾಲು ಎಂದು ಆರ್ಬಿಐ ಮಾಜಿ ಗವರ್ನರ್ ರಘುರಾಮ್ ರಾಜನ್ ಹೇಳಿದ್ದಾರೆ.
ದೆಹಲಿಯ ಚಿಕಾಗೊ ವಿಶ್ವವಿದ್ಯಾಲಯದ ಪರವಾಗಿ ಶನಿವಾರ ವಿಶೇಷ ವಿಡಿಯೋ ಕಾನ್ಫರೆನ್ಸ್ ನಡೆಯಿತು. ಭಾರತದ ಉನ್ನತ ಅರ್ಥಶಾಸ್ತ್ರಜ್ಞರು ಭಾಗವಹಿಸಿದ್ದ ಈ ವಿಡಿಯೋ ಕಾನ್ಫರೆನ್ಸ್ ನಲ್ಲಿ ರಿಸರ್ವ್ ಬ್ಯಾಂಕಿನ ಮಾಜಿ ಗವರ್ನರ್ ಮತ್ತು ವಿಶ್ವವಿದ್ಯಾಲಯದ ಪ್ರಾಧ್ಯಾಪಕ ರಘುರಾಮ್ ರಾಜನ್(Raghuram Rajan) ಭಾಗವಹಿಸಿದ್ದರು. ರಘುರಾಮ್ ರಾಜನ್ ಅವರು ಹೆಚ್ಚುತ್ತಿರುವ ಕೊರೋನಾ ಮತ್ತು ಭಾರತೀಯ ಆರ್ಥಿಕತೆಯ ಬಗ್ಗೆ ಮಾತನಾಡಿದರು. ಅನೇಕ ಕಡೆ ಕೊರೋನಾ ರೋಗಿಗಳು ಕನಿಷ್ಠ ಚಿಕಿತ್ಸೆ ಸೌಲಭ್ಯ ಇಲ್ಲದೆ ಒದ್ದಾಡುತ್ತಿದ್ದಾರೆ ಅಂತಹವರ ಪಾಲಿಗೆ ಸರ್ಕಾರ ಇಲ್ಲವೇ ಇಲ್ಲ ಎಂಬ ಭಾವನೆ ಬಂದಿದ್ದರೆ ಅದು ಸಹಜವೇ ಅಗಿದೆ ಎಂದರು.
ಇದನ್ನೂ ಓದಿ : ರಾಷ್ಟ್ರ ರಾಜಧಾನಿಯಲ್ಲಿ ಮೇ 24ರವರೆಗೆ ಲಾಕ್ ಡೌನ್ ವಿಸ್ತರಣೆ
ದೇಶದಲ್ಲಿ ಕೊರೋನ(Corona) ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಕಳೆದ 8 - 10 ದಿನಗಳಿಂದ ಪ್ರತಿದಿನ ಮೂರರಿಂದ 4 ಲಕ್ಷ ಕೊರೋನಾ ಪ್ರಕರಣಗಳು ವರದಿಯಾಗುತ್ತಿವೆ. ಪರಿಣಾಮವಾಗಿ ಪ್ರತಿನಿತ್ಯ 3 ರಿಂದ 4 ಸಾವಿರ ಜನರು ತಮ್ಮದಲ್ಲದ ತಪ್ಪಿಗೆ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ ಎಂದು ಹೇಳಿದ್ದಾರೆ.
ಇದನ್ನೂ ಓದಿ : ರಕ್ಕಸ ಚಂಡಮಾರುತ ಆರ್ಭಟಿಸುವಾಗ ಏನು ಮಾಡಬೇಕು.? ಏನು ಮಾಡಬಾರದು ತಿಳಿದಿರಲಿ
ಸ್ವಾತಂತ್ರ್ಯ ಹೋರಾಟದ ನಂತರ ಭಾರತ ಸರ್ಕಾರ(Govt of India) ಎದುರಿಸುತ್ತಿರುವ ದೊಡ್ಡ ಸವಾಲು ಕೋವಿಡ್-19 ಸಾಂಕ್ರಾಮಿಕ ರೋಗವಾಗಿದೆ. ಸಾಂಕ್ರಾಮಿಕದಿಂದಾಗಿ ದೇಶದ ಸಣ್ಣ, ಸೂಕ್ಷ್ಮ ಮತ್ತು ಮಧ್ಯಮ ಕ್ಷೇತ್ರಗಳ ಬಹುತೇಕ ಸಂಸ್ಥೆಗಳು ದಿವಾಳಿತನದತ್ತ ಸಾಗಿವೆ. ಭಾರತವು ಸಂದಿಗ್ಧತೆಯನ್ನು ಎದುರಿಸುತ್ತಿದೆ. ಭಾರತದಲ್ಲಿ ದಿನಕ್ಕೆ ಸರಾಸರಿ 3 ಲಕ್ಷ ಜನರಲ್ಲಿ ಕೊರೋನಾ ವರದಿಯಾಗುತ್ತಿದೆ. ಸಾವಿನ ಸಂಖ್ಯೆ ಇತ್ತೀಚೆಗೆ ಹೆಚ್ಚಾಗಿದೆ. ಈ ಕೊರೋನಾ ಅವಧಿಯಲ್ಲಿ ವಿವಿಧ ಕಾರಣಗಳಿಗಾಗಿ ಜನರಿಗೆ ಸಹಾಯ ಮಾಡಲು ಸರ್ಕಾರಕ್ಕೆ ಸಾಧ್ಯವಾಗಲಿಲ್ಲ. ಇದು ಕೂಡ ಒಂದು ರೀತಿಯ ಕೊರೋನಾ ಪರಿಣಾಮ ಎಂದು ನಾನು ಹೇಳಬಯಸುತ್ತೇನೆ ಎಂದು ಹೇಳಿದ್ದಾರೆ.
ಇದನ್ನೂ ಓದಿ : Rajeev Satav : ಕಾಂಗ್ರೆಸ್ ಹಿರಿಯ ನಾಯಕ ಮತ್ತು ಸಂಸದ ರಾಜೀವ್ ಸತಾವ್ ನಿಧನ..!
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.