Covid-19 Vaccination: ಕೋವಿಡ್ -19 ಲಸಿಕೆ ಹಾಕಿದ ನಂತರ ಪೈಲಟ್ಗಳು ಮತ್ತು ಕ್ಯಾಬಿನ್ ಸಿಬ್ಬಂದಿಗಳು 48 ಗಂಟೆಗಳ ಕಾಲ ವಿಮಾನಗಳನ್ನು ನಿರ್ವಹಿಸುವ ಹಾಗಿಲ್ಲ ಎಂದು ಡೈರೆಕ್ಟರೇಟ್ ಜನರಲ್ ಆಫ್ ಸಿವಿಲ್ ಏವಿಯೇಷನ್ (DGCA) ಹೇಳಿದೆ. ಈ ಕುರಿತು ಸುತ್ತೋಲೆ ಹೊರಡಿಸಿರುವ ನಾಗರಿಕ ವಿಮಾನಯಾನ ನಿರ್ದೇಶನಾಲಯ DGCA, 48 ಗಂಟೆಗಳ ಬಳಿಕ ಒಂದು ವೇಳೆ ಪೈಲಟ್ ಗಳಲ್ಲಿ (Pilot) ಅಥವಾ ಕ್ಯಾಬಿನ್ ಸಿಬ್ಬಂದಿಗಳಿಗೆ (Cabin Crew) ಯಾವುದೇ ಅಡ್ಡಪರಿಣಾಮಗಳು ಕಾಣಿಸಿಕೊಳ್ಳದೆ ಹೋದಲ್ಲಿ ಅವರಿಗೆ ವಿಮಾನ ನಿರ್ವಹಿಸುವ ಅನುಮತಿ ನೀಡಲಾಗುವುದು ಎಂದು ಹೇಳಿದೆ. ಪೈಲಟ್ ಹಾಗೂ ಸದಸ್ಯರಿಗೆ ಲಸಿಕೆ ಹಾಕಿಸಿದ ಬಳಿಕ ಮುಂದಿನ ಅರ್ಧಗಂಟೆಯವರೆಗೆ ಅವರ ಮೇಲೆ ನಿಗಾವಹಿಸಲಾಗುವುದು ಎಂದು DGCA ಹೇಳಿದೆ.
ಈ ಕುರಿತು ತನ್ನ ಸುತ್ತೋಲೆಯಲ್ಲಿ ಹೇಳಿರುವ DGCA, 48 ಗಂಟೆಗಳವರೆಗೆ ವಿಮಾನ ಚಾಲಕರು ಹಾಗೂ ಸಿಬ್ಬಂದಿಗಳು ಚಿಕಿತ್ಸಾತ್ಮಕ ರೂಪದಲ್ಲಿ ವಿಮಾನ ನಿರ್ವಹಿಸಲು ಅಯೋಗ್ಯರಾಗಿರುತ್ತಾರೆ. ಒಂದು ವೇಳೆ 48 ಗಂಟೆಗಳ ಬಳಿಕ ಪೈಲಟ್ ಗಳಲ್ಲಿ ಯಾವುದೇ ಲಕ್ಷಣಗಳು ಕಂಡು ಬಂದಲ್ಲಿ ಅವರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗುವುದು ಎನ್ನಲಾಗಿದೆ. ಒಂದು ವೇಳೆ ಲಸಿಕೆ ಹಾಕಿಸಿದ ಬಳಿಕ 14 ದಿನಗಳಿಗಿಂತ ಅಧಿಕ ಸಮಯದವರೆಗೆ ಪೈಲಟ್ ಗಳು ಅನ್ಫಿಟ್ ಆಗಿದ್ದರೆ, ವಿಮಾನ ಚಾಲನೆಯ ಅನುಮತಿ ನೀಡುವ ಮೊದಲು ಅವರನ್ನು ವಿಶೇಷ ವೈದ್ಯಕೀಯ ಪರೀಕ್ಷೆ ನಡೆಸಲಾಗುವುದು ಎಂದು DGCA ಹೇಳಿದೆ.
ಒಂದೇ ದಿನದಲ್ಲಿ 20 ಲಕ್ಷಕ್ಕೂ ಅಧಿಕ ಡೋಸ್ಗಳು
ಇನ್ನೊಂದೆಡೆ, ದೇಶಾದ್ಯಂತ ಕೊವಿಡ್-19 ವ್ಯಾಕ್ಸಿನೆಶನ್ ಅಭಿಯಾನ ಭರದಿಂದ ಸಾಗುತ್ತಿದೆ. ದೇಶಾದ್ಯಂತ ಮಾರ್ಚ್ 8 ರಂದು 20 ಲಕ್ಷಕ್ಕೂ ಅಧಿಕ ಜನರಿಗೆ ಲಸಿಕೆಯ ಮೊದಲ ಡೋಸ್ ನೀಡಲಾಗಿದೆ. ಯಾವುದೇ ಒಂದು ದಿನದಲ್ಲಿ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ವ್ಯಾಕ್ಸಿನ್ ನೀಡಿರುವ ಇದು ಗರಿಷ್ಟ ಸಂಖ್ಯೆಯಾಗಿದೆ. ದೇಶಾದ್ಯಂತ ಇದುವರೆಗೆ 2.3 ಕೋಟಿಗೂ ಅಧಿಕ ಜನರಿಗೆ ವ್ಯಾಕ್ಸಿನ್ ಡೋಸ್ ನೀಡಲಾಗಿದೆ.
ಈ ಕುರಿತು ಹೇಳಿಕೆ ನೀಡಿರುವ ಕೇಂದ್ರ ಆರೋಗ್ಯ ಸಚಿವಾಲಯ, ಕೊವಿಡ್-19 ಲಸಿಕಾಕರಣ ಮಹಾಅಭಿಯಾನದ 52ನೇ ದಿನವಾದ ಮಾರ್ಚ್ 8 ರಂದು 20,19,723 ಜನರಿಗೆ ಲಸಿಕೆಯ ಪ್ರಮಾಣ ನೀಡಲಾಗಿದ್ದು, ಇದರಲ್ಲಿ 28,884 ಸೆಶನ್ ಗಳಲ್ಲಿ 17,15,380 ಜನರಿಗೆ ಮೊದಲ ಹಾಗೂ ಹೆಲ್ತ್ ವರ್ಕರ್ಸ್ ಹಾಗೂ ಫ್ರಂಟ್ಲೈನ್ ಕಾರ್ಯಕರ್ತರಿಗೆ ಲಸಿಕೆಯ 3,04,343 ಎರಡನೇ ಪ್ರಮಾಣ ನೀಡಲಾಗಿದೆ ಎಂದು ಹೇಳಿದೆ.
ಭಾರತ ಜನವರಿ 16 ರಿಂದ ಕೊವಿಡ್-19 ಲಸಿಕಾ ಮಹಾಅಭಿಯಾನಕ್ಕೆ ಚಾಲನೆ ಮೂಲಕ ಮಹತ್ವದ ಮೈಲಿಗಲ್ಲು ಸಾಧಿಸಿತ್ತು.
ಕೊರೊನಾ ಪ್ರಕರಣಗಳ ಸಂಖ್ಯೆಯಲ್ಲಿ ನಿರಂತರ ಏರಿಕೆ
ಏತನ್ಮಧ್ಯೆ ಮಹಾರಾಷ್ಟ್ರ, ಕೇರಳ, ಪಂಜಾಬ್, ತಮಿಳುನಾಡು, ಗುಜರಾತ್ ಹಾಗೂ ಕರ್ನಾಟಕದಲ್ಲಿ ಕೊವಿಡ್ 19 ಪ್ರಕರಣಗಳ ಸಂಖ್ಯೆಯಲ್ಲಿ ನಿರಂತರ ಏರಿಕೆಯಾಗುತ್ತಿದೆ. ದೇಶಾದ್ಯಂತ ಕಳೆದ 24ಗಂಟೆಗಳಲ್ಲಿ ಬೆಳಕಿಗೆ ಬಂದ ಶೇ.84.04 ರಷ್ಟು ಪ್ರಕರಣಗಳು ಇದೇ ರಾಜ್ಯಗಳಿಂದ ವರದಿಯಾಗಿವೆ.
ಇದನ್ನೂ ಓದಿ- Covaxin IIIrd Phase Trials - ಇನ್ಯಾಕೆ ಭಯ, 3ನೇ ಹಂತದ ಟ್ರಯಲ್ ನಲ್ಲಿ ಶೇ.81 ರಷ್ಟು ಪಾಸಾದ ಸಂಪೂರ್ಣ ಸ್ವದೇಶಿ ವ್ಯಾಕ್ಸಿನ್
ಕಳೆದ 24 ಗಂಟೆಗಳಲ್ಲಿ ಸೋಂಕಿತರ 15,388 ಹೊಸ ಪ್ರಕರಣಗಳು ಬೆಳಕಿಗೆ ಬಂದಿವೆ, ಇವುಗಳಲ್ಲಿ ಎಲ್ಲಕ್ಕಿಂತ ಹೆಚ್ಚು ಅಂದರೆ 8,744 ಪ್ರಕರಣಗಳು ಮಹಾರಾಷ್ಟ್ರದಿಂದ ಬೆಳಕಿಗೆ ಬಂದಿದ್ದರೆ, 1,412 ಪ್ರಕರಣಗಳು ಕೇರಳ ಹಾಗೂ ಪಂಜಾಬ್ ನಿಂದ 1,229 ಹೊಸ ಪ್ರಕರಣಗಳು ಬೆಳಕಿಗೆ ಬಂದಿವೆ ಎಂದು ಸಚಿವಾಲಯ ಹೇಳಿದೆ.
ಇದನ್ನೂ ಓದಿ-SII ಹಾಗೂ Bharat Biotech ಕಂಪನಿಗಳನ್ನು ಗುರಿಯಾಗಿಸಿದ China Hackers, ಕಾರಣ ಇಲ್ಲಿದೆ
ದೆಹಲಿ, ಗುಜರಾತ್, ಕರ್ನಾಟಕ, ಹರ್ಯಾಣಾ, ಮಹಾರಾಷ್ಟ್ರ, ತಮಿಳುನಾಡು, ಪಂಜಾಬ್ ಹಾಗೂ ಮಧ್ಯಪ್ರದೇಶದಲ್ಲಿ ನಿತ್ಯ ಬೆಳಕಿಗೆ ಬರುವ ಪ್ರಕರಣಗಳ ಸಂಖ್ಯೆ ನಿರಂತರವಾಗಿ ಏರಿಕೆಯಾಗುತ್ತಿವೆ.
ಇದನ್ನೂ ಓದಿ-Corona vaccination : ನಾಳೆಯಿಂದ ಸಿಗಲಿದೆ ಕರೋನಾ ಲಸಿಕೆ; ನಿಮ್ಮ ಬಳಿಯಿರಲಿ ಈ ಅಗತ್ಯ ದಾಖಲೆಗಳು
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.