OMG..! Plasma Therapy ಕಾರಣ Coronavirus ಮತ್ತಷ್ಟು ಮಾರಕವಾಗುತ್ತಿದೆಯೇ? ಸರ್ಕಾರಕ್ಕೆ ಪತ್ರ ಬರೆದ Covid-19 ತಜ್ಞರು

Covid-19 Experts Oppose Plasma Therapy: Covid-19 ರೋಗಿಗಳ ಚಿಕಿತ್ಸೆಯಲ್ಲಿ Plasma Therapy ಬಳಕೆಗೆ ಸಂಬಂಧಿಸಿದಂತೆ ವೈದ್ಯರು ಹಾಗೂ ವಿಜ್ಞಾನಿಗಳು ಪ್ರಶ್ನಿಸುತ್ತಿದ್ದಾರೆ. ಅಷ್ಟೇ ಅಲ್ಲ ಅವರು ಇದಕ್ಕೆ ಸಂಬಂಧಿಸಿದಂತೆ ಸರ್ಕಾರದ ಮುಖ್ಯ ವೈಜ್ಞಾನಿಕ ಸಲಹೆಗಾರ ಡಾ. ಕೆ. ವಿಜಯ್ ರಾಘವನ್ ಅವರಿಗೆ ಪತ್ರ ಕೂಡ ಬರೆದಿದ್ದಾರೆ.

Written by - Nitin Tabib | Last Updated : May 11, 2021, 07:34 PM IST
  • ಕೊರೊನಾ ಚಿಕಿತ್ಸೆಯಲ್ಲಿ ಪ್ಲಾಸ್ಮಾ ಥೆರಪಿ ಬಳಕೆಯ ವಿರುದ್ಧ ಸರ್ಕಾರಕ್ಕೆ ಪತ್ರ.
  • ಕೊರೊನಾ ಚಿಕಿತ್ಸೆಯಲ್ಲಿ ಈ ವಿಧಾನದ ಬಳಕೆ ಅಭಾಗಲಬ್ಧ ಮತ್ತು ಅವೈಜ್ಞಾನಿಕ.
  • ಸರ್ಕಾರದ ವೈಜ್ಞಾನಿಕ ಸಲಹೆಗಾರ ವಿಜಯ್ ರಾಘವನ್ ಗೆ ಪತ್ರ ಬರೆದ ತಜ್ಞರು ಹಾಗೂ ವೈದ್ಯರು.
OMG..! Plasma Therapy ಕಾರಣ Coronavirus ಮತ್ತಷ್ಟು ಮಾರಕವಾಗುತ್ತಿದೆಯೇ? ಸರ್ಕಾರಕ್ಕೆ ಪತ್ರ ಬರೆದ Covid-19 ತಜ್ಞರು title=
Covid-19 Experts Oppose Plasma Therapy (File Photo)

ನವದೆಹಲಿ: Covid-19 Experts Oppose Plasma Therapy - ಕರೋನಾ (Coronavirus) ಸೊಂಕಿತರಿಗೆ ಚಿಕಿತ್ಸೆ ನೀಡಲು ಪ್ಲಾಸ್ಮಾ ಚಿಕಿತ್ಸೆಯನ್ನು ಹೆಚ್ಚಿನ ಆಸ್ಪತ್ರೆಗಳಲ್ಲಿ ಬಳಸಲಾಗುತ್ತಿದೆ. ಈಗ ಕೆಲವು ವೈದ್ಯರು ಮತ್ತು ವಿಜ್ಞಾನಿಗಳು ಈ ವಿಧಾನವನ್ನು ಪ್ರಶ್ನಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ ಅವರು ಭಾರತ ಸರ್ಕಾರದ ಮುಖ್ಯ ವೈಜ್ಞಾನಿಕ ಸಲಹೆಗಾರ ಡಾ. ಕೆ.ವಿಜಯ್ ರಾಘವನ್ ಅವರಿಗೆ ಪತ್ರ ಬರೆದಿದ್ದಾರೆ. ಕರೋನಾ ಸೋಂಕಿನಿಂದ ಗುಣಮುಖರಾದ ಜನರಿಂದ ಪ್ಲಾಸ್ಮಾವನ್ನು ಸ್ವೀಕರಿಸುವ ಮೂಲಕ ಕರೋನಾ ಸೋಂಕುಗಳಿಗೆ ಚಿಕಿತ್ಸೆ ನೀಡಲು ಇದನ್ನು ಬಳಸಲಾಗುತ್ತಿದೆ, ಇದನ್ನು ಕೆಲವು ವೈದ್ಯರು ಮತ್ತು ವಿಜ್ಞಾನಿಗಳು ಅಭಾಗಲಬ್ಧ ಮತ್ತು ಅವೈಜ್ಞಾನಿಕ ಎಂದು ಬಣ್ಣಿಸಿದ್ದಾರೆ.

ಕರೋನಾ (Covid-19) ಸೋಂಕಿನ ಚಿಕಿತ್ಸೆಯಲ್ಲಿ ಪ್ಲಾಸ್ಮಾ ಚಿಕಿತ್ಸೆಯ (Plasma Therapy) ಬಳಕೆ ಮತ್ತು ಅದಕ್ಕೆ ಸಂಬಂಧಿಸಿದ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ICMR) ಮಾರ್ಗಸೂಚಿಗಳು ಸತ್ಯವನ್ನು ಆಧರಿಸಿಲ್ಲ ಎಂದು ಕೆಲವು ಸಾರ್ವಜನಿಕ ಆರೋಗ್ಯ ವೃತ್ತಿಪರರು ಹೇಳುತ್ತಾರೆ. ಮಾತ್ರವಲ್ಲದೆ, ಪ್ಲಾಸ್ಮಾ ಚಿಕಿತ್ಸೆಯ ತರ್ಕರಹಿತ ಬಳಕೆಯು ಕರೋನಾ ವೈರಸ್‌ನ ಹೆಚ್ಚು ಅಪಾಯಕಾರಿ ರೂಪಾಂತರಿ ತಳಿ ಬರುವ ಅಪಾಯ ಹೆಚ್ಚಿಸುತ್ತಿದೆ ಎಂಬ ಆತಂಕವನ್ನೂ ಕೂಡ ಅವರು ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ-WHO On Ivermectin Use For Corona Treatment: Ivermectin ಬಳಕೆಯ ಕುರಿತು ಎಚ್ಚರಿಕೆ ನೀಡಿದ WHO

MCI ಹಾಗೂ AIIMS ನಿರ್ದೇಶಕರ ಹಸ್ತಕ್ಷೇಪಕ್ಕೆ ಕೋರಿಕೆ
ರಾಘವನ್ ಅವರಿಗೆ ಬರೆದ ಪತ್ರದಲ್ಲಿ, ಪ್ಲಾಸ್ಮಾ ಚಿಕಿತ್ಸೆಯ ಅಭಾಗಲಬ್ಧ ಬಳಕೆಯಿಂದ ಹೆಚ್ಚು ಅಪಾಯಕಾರಿ ತಳಿಗಳನ್ನು ಅಭಿವೃದ್ಧಿಯಾಗುವ ಅಪಾಯವಿದೆ. ಇದು ಮಹಾಮಾರಿಯನ್ನು ಇನ್ನಷ್ಟು ತೀವ್ರಗೊಳಿಸಲಿದೆ ಎಂದು ಹೇಳಯಾಲಾಗಿದೆ. ಈ ಪತ್ರಕ್ಕೆ ಲಸಿಕೆ ತಜ್ಞ ಗಗನ್ ದೀಪ್ ಕಾಂಗ್ ಮತ್ತು ಶಸ್ತ್ರಚಿಕಿತ್ಸಕ ಪ್ರಮೇಶ್ ಸಿ.ಎಸ್ ಸೇರಿದಂತೆ ಹಲವಾರು ತಜ್ಞರು ಸಹಿ ಹಾಕಿದ್ದಾರೆ. ಪತ್ರದ ಪ್ರಕಾರ, ದೇಶದ ಅನೇಕ ವೈದ್ಯರು, ಸಾರ್ವಜನಿಕ ಆರೋಗ್ಯ ವೃತ್ತಿಪರರು ಮತ್ತು ವಿಜ್ಞಾನಿಗಳು ಅಭಾಗಲಬ್ಧ ಮತ್ತು ಅವೈಜ್ಞಾನಿಕ ಪ್ಲಾಸ್ಮಾ ಚಿಕಿತ್ಸೆಯ ಬಳಕೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಕರೋನಾ ರೋಗಿಗಳು ಮತ್ತು ಅವರ ಸಂಬಂಧಿಕರಿಗೆ ಕಿರುಕುಳ ನೀಡುವುದನ್ನು ತಡೆಗಟ್ಟಲು ಮೆಡಿಕಲ್ ಕೌನ್ಸಿಲ್ ಆಫ್ ಇಂಡಿಯಾ (MCI) ಡಿಜಿ ಬಲರಾಮ್ ಭಾರ್ಗವ ಮತ್ತು ಏಮ್ಸ್ ನಿರ್ದೇಶಕ (AIIMS) ರಂದೀಪ್ ಗುಲೇರಿಯಾ ಅವರ ಹಸ್ತಕ್ಷೇಪದ ಅವಶ್ಯಕತೆ ಇದೆ ಎಂದು ಈ ಪತ್ರದಲ್ಲಿ ಹೇಳಲಾಗಿದೆ. ಯುಎಸ್ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಹೆಲ್ತ್ ಮತ್ತು ಇನ್ಫೆಕ್ಷಿಯಸ್ ಡಿಸೀಸೆಸ್ ಸೊಸೈಟಿ ಆಫ್ ಕರೋನಾ ಚಿಕಿತ್ಸೆಯಲ್ಲಿ ಪ್ಲಾಸ್ಮಾ ಚಿಕಿತ್ಸೆಯ ಸಾಮಾನ್ಯ ಪ್ರಯೋಗದ ವಿರುದ್ದ ರೆಕಮಂಡೆಶನ್ ನ ಪುರಾವೆ ಕೂಡ ಒದಗಿಸಲಾಗಿದೆ.

ಇದನ್ನೂ ಓದಿ- CSIR Research: ಈ ಎರಡು Blood Group ಹೊಂದಿರುವ ಜನರಿಗೆ ಕೊರೊನಾ ಸೋಂಕಿನ ಅಪಾಯ ಹೆಚ್ಚು

ಕೇಂದ್ರ ಸಚಿವಾಲಯ 7 ದಿನಗಳ ಒಳಗೆ ಪ್ಲಾಸ್ಮಾ ಥೆರಪಿಗೆ ನಿರ್ದೇಶನಗಳನ್ನು ನೀಡಿದೆ
ಕರೋನಾ (Coronavirus) ರೋಗಿಗಳ ಚಿಕಿತ್ಸೆಗಾಗಿ ಕಳೆದ ತಿಂಗಳು ಕೇಂದ್ರ ಆರೋಗ್ಯ ಸಚಿವಾಲಯ ಮಾರ್ಗ ಸೂಚಿಗಳನ್ನು ಜಾರಿಗೊಳಿಸಿತ್ತು. ಇದರಲ್ಲಿ, ಕರೋನದ ಲಕ್ಷಣಗಳು ಬಹಿರಂಗವಾದಾಗ ಮೊದಲ ಏಳು ದಿನಗಳಲ್ಲಿ ಪ್ಲಾಸ್ಮಾವನ್ನು ನೀಡಲು ಸೂಚಿಸಲಾಗಿದೆ.. ಸಚಿವಾಲಯ ಹೊರಡಿಸಿದ ಮಾರ್ಗಸೂಚಿಗಳ ಪ್ರಕಾರ, ಏಳು ದಿನಗಳ ನಂತರ ಪ್ಲಾಸ್ಮಾ ನೀಡುವಲ್ಲಿ ಯಾವುದೇ ಅರ್ಥವಿಲ್ಲ ಎನ್ನಲಾಗಿದೆ. ಪತ್ರದ ಪ್ರಕಾರ, ಪ್ಲಾಸ್ಮಾ ಚಿಕಿತ್ಸೆಯ ಯಾವುದೇ ವಾಸ್ತವಿಕ ಪುರಾವೆಗಳಿಲ್ಲ. ಆದರೆ, ದೇಶಾದ್ಯಂತದ ಆಸ್ಪತ್ರೆಗಳಲ್ಲಿ ಇದನ್ನು ನಿರ್ದಾಕ್ಷಿಣ್ಯವಾಗಿ ಬಳಸಲಾಗುತ್ತಿದೆ. ಪ್ಲಾಸ್ಮಾ ಚಿಕಿತ್ಸೆಯಲ್ಲಿ, ಕರೋನಾದಿಂದ ಚೇತರಿಸಿಕೊಂಡವರ ರಕ್ತದಿಂದ ಪ್ರತಿಕಾಯಗಳನ್ನು ತೆಗೆದುಕೊಳ್ಳುವ ಮೂಲಕ ಕರೋನಾ-ಸೋಂಕಿತ ಜನರ ದೇಹಕ್ಕೆ ಪ್ರತಿಕಾಯಗಳನ್ನು ಸೇರಿಸಲಾಗುತ್ತದೆ.

ಇದನ್ನೂ ಓದಿ-Good News: ವ್ಯಾಕ್ಸಿನ್ ಹಾಕಿಸಿಕೊಂಡ್ರಾ? ಇಲ್ಲ ಎಂದಾದರೆ ಮೊದಲು ಈ ಮಾಹಿತಿ ತಿಳಿದುಕೊಳ್ಳಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News