Covid-19: ದೇಶದಲ್ಲಿ ಮತ್ತೆ ಕೊರೊನಾ ಅಬ್ಬರ, 24 ಗಂಟೆಯಲ್ಲಿ ಶೇ.38ರಷ್ಟು ಹೆಚ್ಚಳ!

Covid-19 Cases rise 38 percent in India: ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 10,542 ಜನರು ಕೊರೊನಾ ವೈರಸ್ ಸೋಂಕಿಗೆ ಒಳಗಾಗಿದ್ದರೆ. ಈ ಅವಧಿಯಲ್ಲಿ 38 ಮಂದಿ ಸಾವನ್ನಪ್ಪಿದ್ದಾರೆ. ಕೋವಿಡ್ -19 ಸೋಂಕಿತ ಸಕ್ರಿಯ ರೋಗಿಗಳ ಸಂಖ್ಯೆ 63,562ಕ್ಕೆ ತಲುಪಿದೆ.

Written by - Puttaraj K Alur | Last Updated : Apr 19, 2023, 12:27 PM IST
  • ದೇಶದಲ್ಲಿ ಮತ್ತೆ ಕೊರೊನಾ ವೈರಸ್ ಪ್ರಕರಣಗಳು ರಣಕೇಕೆ ಹಾಕುತ್ತಿವೆ
  • ಕಳೆದ 24 ಗಂಟೆಗಳಲ್ಲಿ ಶೇ.38ರಷ್ಟು ಹೊಸ ಪ್ರಕರಣಗಳು ದಾಖಲಾಗಿವೆ
  • ದೇಶದಲ್ಲಿ 10,542 ಹೊಸ ಪ್ರಕರಣ ಮತ್ತು 38 ಮಂದಿ ಸಾವನ್ನಪ್ಪಿದ್ದಾರೆ
Covid-19: ದೇಶದಲ್ಲಿ ಮತ್ತೆ ಕೊರೊನಾ ಅಬ್ಬರ, 24 ಗಂಟೆಯಲ್ಲಿ ಶೇ.38ರಷ್ಟು ಹೆಚ್ಚಳ! title=
ದೇಶದಲ್ಲಿ ಕೊರೊನಾ ರಣಕೇಕೆ!

ನವದೆಹಲಿ: ಭಾರತದಲ್ಲಿ ಕೊರೊನಾ ವೈರಸ್ ಪ್ರಕರಣಗಳು ಮತ್ತೊಮ್ಮೆ ಭಯ ಹುಟ್ಟಿಸುತ್ತಿವೆ. ಕಳೆದ 24 ಗಂಟೆಗಳಲ್ಲಿ ಶೇ.38ರಷ್ಟು ಹೊಸ ಪ್ರಕರಣಗಳು ದಾಖಲಾಗಿವೆ. ಕೇಂದ್ರ ಆರೋಗ್ಯ ಸಚಿವಾಲಯ ಬಿಡುಗಡೆ ಮಾಡಿರುವ ಅಂಕಿಅಂಶಗಳ ಪ್ರಕಾರ, ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ 10,542 ಹೊಸ ಕೊರೊನಾ ಪ್ರಕರಣಗಳು ವರದಿಯಾಗಿದ್ದು, ಮಂಗಳವಾರ ದೇಶಾದ್ಯಂತ 7,633 ಜನರು ಕೋವಿಡ್ ಸೋಂಕಿಗೆ ಒಳಗಾಗಿದ್ದಾರೆ.

ಯಾವ ರಾಜ್ಯದಲ್ಲಿ ಎಷ್ಟು ಪ್ರಕರಣ?  

ಆರೋಗ್ಯ ಸಚಿವಾಲಯದ ಅಂಕಿಅಂಶಗಳ ಪ್ರಕಾರ, ಕಳೆದ 24 ಗಂಟೆಗಳಲ್ಲಿ ಕೇರಳದಲ್ಲಿ ಗರಿಷ್ಠ ಸಂಖ್ಯೆಯ ಕೊರೊನಾ ವೈರಸ್ ಪ್ರಕರಣಗಳು ದಾಖಲಾಗಿವೆ. ರಾಜ್ಯದಲ್ಲಿ 2041 ಜನರು ಸೋಂಕಿಗೆ ಒಳಗಾಗಿದ್ದಾರೆ. ಇದರ ನಂತರ ದೆಹಲಿಯಲ್ಲಿ ಗರಿಷ್ಠ ಸಂಖ್ಯೆಯ ಜನರು ಸೋಂಕಿಗೆ ಒಳಗಾಗಿದ್ದು, 1537 ಜನರು ಸಾಂಕ್ರಾಮಿಕ ರೋಗಕ್ಕೆ ತುತ್ತಾಗಿದ್ದಾರೆ. ಹರಿಯಾಣದಲ್ಲಿ 965, ಮಹಾರಾಷ್ಟ್ರದಲ್ಲಿ 949, ಉತ್ತರ ಪ್ರದೇಶದಲ್ಲಿ 818, ಛತ್ತೀಸ್‌ಗಢದಲ್ಲಿ 531 ಮತ್ತು ತಮಿಳುನಾಡಿನಲ್ಲಿ 527 ಹೊಸ ಪ್ರಕರಣಗಳು ವರದಿಯಾಗಿವೆ.

ಇದನ್ನೂ ಓದಿ: ಶಾಲಾ ಬಾಲಕಿ ಮೇಲೆ ಅತ್ಯಾಚಾರವೆಸಗಿ ಕೊಲೆಗೈದ ಕ್ಯಾಬ್ ಡ್ರೈವರ್

24 ಗಂಟೆಗಳಲ್ಲಿ 38 ಮಂದಿ ಸಾವು

ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ (MOHFW) ಅಂಕಿಅಂಶಗಳ ಪ್ರಕಾರ, ಕಳೆದ 24 ಗಂಟೆಗಳಲ್ಲಿ ದೇಶದಾದ್ಯಂತ 38 ರೋಗಿಗಳು ಸಾವನ್ನಪ್ಪಿದ್ದಾರೆ. ಈ ಪೈಕಿ 11 ಮಂದಿ ಕೇರಳದಲ್ಲಿಯೇ ಸಾವನ್ನಪ್ಪಿದ್ದಾರೆ. ಇದುವರೆಗೆ ದೇಶದಲ್ಲಿ ಸೋಂಕಿನಿಂದ ಸಾವನ್ನಪ್ಪಿದವರ ಒಟ್ಟು ಸಂಖ್ಯೆ 5,31,190ಕ್ಕೆ ಏರಿಕೆಯಾಗಿದೆ.

ಸಕ್ರಿಯ ರೋಗಿಗಳ ಸಂಖ್ಯೆ 63,562ಕ್ಕೆ ಏರಿಕೆ

ಭಾರತದಲ್ಲಿ ಸೋಂಕಿನ ದೈನಂದಿನ ಪ್ರಮಾಣವು ಶೇ.4.39ರಷ್ಟಿದೆ ಮತ್ತು ವಾರದ ದರವು ಶೇ.5.1ರಷ್ಟಿದೆ. ಪ್ರಸ್ತುತ ದೇಶದಲ್ಲಿ 63,562 ಜನರು ಚಿಕಿತ್ಸೆ ಪಡೆಯುತ್ತಿದ್ದಾರೆ, ಇದು ಒಟ್ಟು ಪ್ರಕರಣಗಳಲ್ಲಿ ಶೇ.0.14ರಷ್ಟಾಗಿದೆ. ಭಾರತದಲ್ಲಿ ರೋಗಿಗಳ ಚೇತರಿಕೆಯ ರಾಷ್ಟ್ರೀಯ ದರವು ಶೇ.98.67ರಷ್ಟಿದೆ. ಇಲ್ಲಿಯವರೆಗೆ ದೇಶದಲ್ಲಿ ಒಟ್ಟು 4,42,50,649 ಜನರು ಸೋಂಕು ಮುಕ್ತರಾಗಿದ್ದಾರೆ. ಕೋವಿಡ್ -19ನಿಂದ ಸಾವಿನ ಪ್ರಮಾಣ ಶೇ.1.18ರಷ್ಟಿದೆ.

ಇದನ್ನೂ ಓದಿ: Viral News : ಕುಡಿದ ಮತ್ತಿನಲ್ಲಿ ಎಲ್ಲಾ ಬಟ್ಟೆ ಬಿಚ್ಚಿದ ಮೇಯರ್‌

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News