7 ದಿನಗಳಿಂದ ಪ್ರತಿನಿತ್ಯವೂ 6 ಸಾವಿರಕ್ಕೂ ಹೆಚ್ಚು ಜನರಲ್ಲಿ COVID 19 ವೈರಸ್ ಪತ್ತೆ

ಕಳೆದ ವಾರಾಂತ್ಯದಲ್ಲೇ ದಿನವೊಂದರಲ್ಲಿ 6 ಸಾವಿರಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗುವ ಟ್ರೆಂಡ್ ಶುರುವಾಗಿತ್ತು. ಇದು ಹಾಗೆ ಮುಂದುವರೆದಿದ್ದು ಭಾರತದಲ್ಲಿ ನಿನ್ನೆ ಒಂದೇ ದಿನ 6,566 ಜನರಿಗೆ COVID 19 ಸೋಂಕು ಇರುವುದು ದೃಢಪಟ್ಟಿದೆ. 

Last Updated : May 28, 2020, 11:45 AM IST
7 ದಿನಗಳಿಂದ ಪ್ರತಿನಿತ್ಯವೂ 6 ಸಾವಿರಕ್ಕೂ ಹೆಚ್ಚು ಜನರಲ್ಲಿ COVID 19 ವೈರಸ್ ಪತ್ತೆ title=

ನವದೆಹಲಿ: ಲಾಕ್​ಡೌನ್ ಜಾರಿಗೊಳಿಸಿದ್ದು ನಿರರ್ಥಕವಾಗಿದೆ. ಅಥವಾ ಸೂಕ್ತ ಸಂದರ್ಭದಲ್ಲಿ ಸೂಕ್ತ ರೀತಿಯಲ್ಲಿ ಮಾಡಿಲ್ಲವೆನಿಸುತ್ತಿದೆ. ಏಕೆಂದರೆ ದೇಶಕ್ಕೆ ದೇಶವನ್ನೇ ದಿಗ್ಬಂಧನಗೊಳಿಸಿದರೂ  ಕರೋನವೈರಸ್ (Coronavirus) COVID 19 ಎಂಬ ಕಂಡುಕೇಳರಿಯದ ಸೋಂಕು ಹರಡುವಿಕೆ ಕಮ್ಮಿ ಆಗಿಲ್ಲ. ಕಳೆದ 7 ದಿನಗಳಿಂದ ಪ್ರತಿನಿತ್ಯವೂ 6 ಸಾವಿರಕ್ಕೂ ಹೆಚ್ಚು ಜನರಲ್ಲಿ COVID 19 ವೈರಸ್ ಪತ್ತೆಯಾಗುತ್ತಿದ್ದು ಆತಂಕ ಮೂಡಿಸಿದೆ.

ಇಂದಿನಿಂದ ಬಡ ಕುಟುಂಬಗಳಿಗೆ ತಲಾ 10 ಸಾವಿರ ರೂ. ನೀಡುವ ಅಭಿಯಾನ ಕೈಗೆತ್ತಿಕೊಂಡ ಕಾಂಗ್ರೆಸ್

ಕಳೆದ ವಾರಾಂತ್ಯದಲ್ಲೇ ದಿನವೊಂದರಲ್ಲಿ 6 ಸಾವಿರಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗುವ ಟ್ರೆಂಡ್ ಶುರುವಾಗಿತ್ತು. ಇದು ಹಾಗೆ ಮುಂದುವರೆದಿದ್ದು ಭಾರತದಲ್ಲಿ ನಿನ್ನೆ ಒಂದೇ ದಿನ 6,566 ಜನರಿಗೆ COVID 19 ಸೋಂಕು ಇರುವುದು ದೃಢಪಟ್ಟಿದೆ. ಇದರಿಂದ ಭಾರತದ COVID 19 ಸೋಂಕು ಪೀಡಿತರ ಸಂಖ್ಯೆ 1,58,333ಕ್ಕೆ ಏರಿಕೆಯಾಗಿದೆ.

ಕೆಲವರು COVID 19 ವಿಷಯ ನಿಭಾಯಿಸಿರುವುದರಲ್ಲಿ ಭಾರತ ಬೇರೆ ದೇಶಗಳಿಗೆ ಹೋಲಿಸಿಕೊಂಡರೆ ಪರವಾಗಿಲ್ಲ ಎಂದು ಬೀಗುತ್ತಿದ್ದಾರೆ. ಆದರೆ ದೇಶದ ಪರಿಸ್ಥಿತಿ ಆಗಿಲ್ಲ ಎಂಬುದನ್ನು ಅಂಕಿಅಂಶಗಳು ಸಾರಿ ಸಾರಿ ಹೇಳುತ್ತವೆ. 

ಮೇ 31ರಂದು 'ಮನ್ ಕಿ ಬಾತ್ 'ನಲ್ಲಿ ಲಾಕ್​ಡೌನ್ ವಿಸ್ತರಣೆ ಬಗ್ಗೆ ಮಾಹಿತಿ ನೀಡಲಿರುವ ಮೋದಿ

ದಿನದಿಂದ ದಿನಕ್ಕೆ  ಕೋವಿಡ್ -19 (Covid-19) ವೈರಾಣು ಪೀಡಿತರ ಸಂಖ್ಯೆ ದುಪ್ಪಟ್ಟಾಗುತ್ತಿದೆ. ಇತ್ತೀಚೆಗೆ 12ನೇ ಸ್ಥಾನದಲ್ಲಿದ್ದ ಚೀನಾವನ್ನು ಹಿಂದಿಕ್ಕಿ 11ನೇ ಸ್ಥಾನಕ್ಕೆ ಬಂದಿತ್ತು.‌ ಮೊನ್ನೆಯಷ್ಟೇ ಭಾರತದ ‌ಕೊರೋನಾ ಸೋಂಕು ಪೀಡಿತರ ಸಂಖ್ಯೆ ಒಂದೂವರೆ ಲಕ್ಷದ ಗಡಿ ದಾಟಿತ್ತು.

ಇದಕ್ಕೂ ಮೊದಲು ಮೇ 6ರಿಂದ 3 ಸಾವಿರಕ್ಕೂ ಹೆಚ್ಚು ಪ್ರಕರಣಗಳು ಕಾಣಿಸಿಕೊಂಡಿದ್ದವು. ಮೇ 10ರಿಂದ 4 ಸಾವಿರಕ್ಕೂ ಹೆಚ್ಚು ಪ್ರಕರಣಗಳು ವರದಿಯಾಗಿದ್ದವು. ಮೇ17ರಿಂದ 5 ಸಾವಿರಕ್ಕೂ ಹೆಚ್ಚು ಪ್ರಕರಣಗಳು ಪತ್ತೆಯಾದವು. ಈಗ ಮೇ 21ರಿಂದ 6 ಸಾವಿರಕ್ಕೂ ಹೆಚ್ಚು ಪ್ರಕರಣಗಳು ಗೋಚರಿಸಿದ್ದವು. ಪ್ರತಿದಿನ ಭಾರತದ ಕೇಂದ್ರ ಆರೋಗ್ಯ ಇಲಾಖೆ ಪ್ರಕಟಿಸುವ ಮಾಹಿತಿಗಳ ಪ್ರಕಾರ ಮೇ 6ರಿಂದ ಈವರೆಗಿನ ಚಿತ್ರಣ ಹೀಗಿದೆ...
ಮೇ 6ರಂದು 3,561,
ಮೇ 7ರಂದು 3,390,
ಮೇ 8ರಂದು 3,320,
ಮೇ 9ರಂದು 3,277,
ಮೇ 10ರಂದು 4,213,
ಮೇ 11ರಂದು 3,064,
ಮೇ 12ರಂದು 3,525,
ಮೇ 13ರಂದು 3,722,
ಮೇ 14ರಂದು 3,967,
ಮೇ 15ರಂದು 3,970,
ಮೇ 16ರಂದು 4,987,
ಮೇ 17ರಂದು 5,242,
ಮೇ 18ರಂದು 4,970,
ಮೇ 19ರಂದು 5,611,
ಮೇ 20ರಂದು 5,609,
ಮೇ 21ರಂದು 6,088,
ಮೇ 22ರಂದು 6,654,
ಮೇ 23ರಂದು 6,767,
ಮೇ 24ರಂದು 6,977,
ಮೇ‌ 25ರಂದು 6,535,
ಮೇ 26ರಂದು 6,387,
ಮೇ 27ರಂದು 6,566.

ಮೇ 31ರ ಬಳಿಕ‌ ಜಾರಿಯಾಗಲಿರುವ 5ನೇ ಹಂತದ ಲಾಕ್​ಡೌನ್ ಹೇಗಿರಲಿದೆ ಗೊತ್ತಾ?

ಅಲ್ಲದೆ ನಿನ್ನೆ ಒಂದೇ ದಿನ ದೇಶದಲ್ಲಿ 194 ಜನ ಕೊರೋನಾದಿಂದ ಸಾವನ್ನಪ್ಪಿದ್ದಾರೆ. ಇದರಿಂದ ದೇಶದಲ್ಲಿ ಕೊರೋನಾದಿಂದ ಸತ್ತವರ ಸಂಖ್ಯೆ 4,531ಕ್ಕೆ ಏರಿಕೆಯಾಗಿದೆ. ಕೊರೋನಾದಿಂದ ಈವರೆಗೆ ಗುಣಮುಖರಾದವರು  67,692 ಜನ ಮಾತ್ರ ಎಂದು ಕೇಂದ್ರ ಆರೋಗ್ಯ ಇಲಾಖೆ ತಿಳಿಸಿದೆ.
 

Trending News