ನಾಗೊನ್: ಅಸ್ಸಾಂ ನಲ್ಲಿ ಮಹಿಳೆಯೊಬ್ಬಳು ಮಗನ ಪ್ರೀತಿಗಿಂತ ಈ ದೇಶದ ಪ್ರೀತಿ ದೊಡ್ಡದು ಎನ್ನುವುದನ್ನು ತೋರಿಸಿದ್ದಾಳೆ.
ಹೌದು ,ತಾಹೆರಾ ಬೇಗಮ್ ಎನ್ನುವ ಮಹಿಳೆಯು ತನ್ನ ಮಗ ಖಮೇರ್-ಉಝ್-ಝಮಾನ್ ಕಾಶ್ಮೀರ ಭಯೋತ್ಪಾದಕ ಸಂಘಟನೆ ಹಿಜ್ಬ್-ಉಲ್-ಮುಜಾಹಿದೀನ್ಗೆ ಸೇರಿದ ನಂತರ ಅವನನ್ನು ತಿರಸ್ಕರಿಸಿದ್ದಾರೆ.
ಈ ಕುರಿತಾಗಿ ವರದಿಗಾರರೊಂದಿಗೆ ಮಾತನಾಡಿದ ತಾಹೆರಾ ಬೇಗಮ್, " ಅವನು ನಿಜವಾಗಿಯೂ ಹಿಜ್ಬ್-ಉಲ್-ಮುಜಾಹಿದೀನ್ಗೆ ಸೇರಿದಿದ್ದರೆ ಅವನಿಗೆ ಸರ್ಕಾರ ತನಗೆ ತಿಳಿದಿದ್ದನ್ನು ಮಾಡಲಿ, ನಾನು ಅವನ ಮೃತ ದೇಹವನ್ನು ಸಹ ಸ್ವೀಕರಿಸುವುದಿಲ್ಲ, ನಾವು ರಾಷ್ಟ್ರದೊಂದಿಗೆ ಇದ್ದೇವೆ" ಎಂದು ತಿಳಿಸಿದ್ದಾರೆ.ಸಾಮಾಜಿಕ ಜಾಲತಾಣದಲ್ಲಿ ಝಮಾನ್ ರೈಪಲ್ ಹೊಂದಿರುವ ಚಿತ್ರವೂ ವೈರಲ್ ಆದ ನಂತರ ಥಾಹೆರಾ ಅವರು ಈ ರೀತಿ ಹೇಳಿಕೆ ನೀಡಿದ್ದಾರೆ, ಆದರೆ ಛಾಯಾಗ್ರಹಣದ ನಿಖರತೆಯನ್ನು ಇನ್ನೂ ದೃಢಪಡಿಸಬೇಕಾಗಿದೆ.
ಅಮೇರಿಕಾದಲ್ಲಿ ನಾಲ್ಕು ವರ್ಷ ಕಳೆದ ನಂತರ 2006 ರಲ್ಲಿ ಭಾರತಕ್ಕೆ ಹಿಂದಿರುಗಿ ಬಿಸಿನೆಸ್ ನ್ನು ಪ್ರಾರಂಭಿಸಬೇಕೆಂದು ಕುಟುಂಬಕ್ಕೆ ತಿಳಿಸಿದ್ದರು. ಆದರೆ ಜಮಾನ್ ಕಾಣೆಯಾದ ನಂತರ ಅವರ ಕುಟುಂಬವು ನಾಪತ್ತೆಯಾದ ಕುರಿತಾಗಿ ದೂರು ದಾಖಲಿಸಿದೆ. ಈ ಕುರಿತಾಗಿ ಅಸ್ಸಾಂ ಪೊಲೀಸರು ತನಿಖೆಯನ್ನು ನಡೆಸಿದ್ದಾರೆ ಎಂದು ತಿಳಿದುಬಂದಿದೆ.