Coronavirus Vaccine Guidelines: ಕೊರೊನಾ ವೈರಸ್ ನಿಂದ ಮುಕ್ತಿ ಪಡೆಯಲು ವಿಶ್ವಾದ್ಯಂತ ಇದಕ್ಕಾಗಿ ಲಸಿಕೆ ತಯಾರಿಸುವ ಕಾರ್ಯ ಯುದ್ಧಮಟ್ಟದಲ್ಲಿ ನಡೆದಿದೆ . ಭಾರತದಲ್ಲಿಯೂ ಕೂಡ ಕೊರೊನಾ ಮಹಾಮಾರಿಯಿಂದ ಮುಕ್ತಿಪಡೆಯಲು ಇದುವರೆಗೆ ಒಟ್ಟು 8 ಲಸಿಕೆಗಳ ಮೇಲೆ ಕೆಲಸ ಮಾಡಲಾಗುತ್ತಿದೆ. ಇವುಗಳಲ್ಲಿ ಮೂರರಿಂದ ನಾಲ್ಕು ಲಸಿಕೆಗಳು ಶೀಘ್ರದಲ್ಲಿಯೇ ಲಭ್ಯವಾಗಲಿವೆ ಎನ್ನಲಾಗುತ್ತಿದೆ. ಇದರ ಲಸೀಕಾಕರಣ ಕಾರ್ಯಕ್ರಮಕ್ಕೆ ಸರ್ಕಾರ ಕೂಡ ಸಿದ್ಧತೆಗಳನ್ನು ಪೂರ್ಣಗೊಳಿಸಿದೆ. ಕೇಂದ್ರ ಸರ್ಕಾರ ಈಗಾಗಲೇ ಎಲ್ಲ ರಾದ್ಯಗಳಿಗೆ ಕೊರೊನಾ ವೈರಸ್ ಲಸಿಕಾಕರಣ ಅಭಿಯಾನಕ್ಕಾಗಿ ಮಾರ್ಗಸೂಚಿಗಳನ್ನು ಸಹ ಜಾರಿಗೊಳಿಸಿದೆ.
ಕೊರೊನಾ ವೈರಸ್ ಗಾಗಿ ನೀಡಲಾಗುವ ವ್ಯಾಕ್ಸಿನ್ ಅನ್ನು ಯಾರಿಗೆ, ಯಾವಾಗ ಮತ್ತು ಹೇಗೆ ಲಸಿಕೆ ನೀಡಲಾಗುವುದು ಎಂಬುದನ್ನು ಹೇಳಲಾಗಿದೆ. ಈ ಮಾರ್ಗಸೂಚಿಗಳ ಪ್ರಕಾರ ಲಸಿಕಾಕರಣ ಕಾರ್ಯಕ್ರಮಕಾಗಿ ಗೊತ್ತು ಪಡಿಸಲಾಗಿರುವ ಕೇಂದ್ರಗಳಲ್ಲಿ ನಿತ್ಯ ಒಂದು ಸೆಶನ್ ನಲ್ಲಿ 100-200 ಜನರಿಗೆ ಲಸಿಕೆ ನೀಡಲಾಗುವುದು ಬಳಿಕ ಅವರನ್ನು 30 ನಿಮಿಷಗಳ ಕಾಲ ಒಬ್ಸೆರ್ವೆಶನ್ ನಲ್ಲಿ ಇರಿಸಲಾಗುವುದು.
12 ದಾಖಲೆಗಳಲ್ಲಿ ಒಂದು ದಾಖಲೆ ಕಡ್ಡಾಯ
ಲಸಿಕಾಕರಣ ಕಾರ್ಯಕ್ರಮದಲ್ಲಿ ಮೊದಲು ಹೆಸರು ನೋಂದಣಿ ಕಡ್ಡಾಯವಾಗಿದೆ. ಲಸಿಕಾಕರಣ ಕೇಂದ್ರಗಲ್ಲಿ ರಿಜಿಸ್ಟ್ರೆಷನ್ ವ್ಯವಸ್ಥೆ ಇರುವುದಿಲ್ಲ. ಹೆಸರು ನೋಂದಾಯಿಸಲು ಮತದಾರರ ಗುರುತು ಚೀಟಿ, ಆಧಾರ್ ಕಾರ್ಡ್, ಡ್ರೈವಿಂಗ್ ಲೈಸನ್ಸ್, ಪಾಸ್ಪೋರ್ಟ್, ಪೆನ್ಷನ್ ದಾಖಲೆಗಳು ಸೇರಿದಂತೆ ಒಟ್ಟು 12 ದಾಖಲೆಗಳ ಪೈಕಿ ಒಂದು ಕಡ್ಡಾಯವಾಗಿರಲಿದೆ.
ಮೊದಲ ಹಂತದಲ್ಲಿ 30 ಕೋಟಿ ಜನರಿಗೆ ಲಸಿಕೆ ಹಾಕಲಾಗುವುದು, ಇಲ್ಲಿವೆ ಕೆಲ ಪ್ರಮುಖ ಅಂಶಗಳು
- ಕೊವಿನ್ ವೆಬ್ ಸೈಟ್ ಮೇಲೆ ಸ್ವಯಂ ಪಂಜೀಕರಣ ಮಾಡುವುದು ಆವಶ್ಯಕ.
- Covid Vaccine Intellegence Network (Co-VIN) ಪ್ರಣಾಳಿ ಒಂದು ಡಿಜಿಟಲ್ ಪ್ಲಾಟ್ ಫಾರ್ಮ್ ಆಗಿದೆ. ಲಸಿಕಾಕರಣ ಕಾರ್ಯಕ್ರಮಕ್ಕಾಗಿ ತಯಾರಿಸಲಾಗಿರುವ ಪಟ್ಟಿಯನ್ನು ಲಾಭಾರ್ಥಿಗಳನ್ನು ಪತ್ತೆ ಹಚ್ಚಲು ಉಪಯೋಗಿಸಲಾಗುವುದು.
- ನಿತ್ಯ ಪ್ರತಿಯೊಂದು ಅಧಿವೇಶನದ ವೇಳೆ ಒಟ್ಟು 100-200 ಜನರಿಗೆ ಲಸಿಕೆ ನೀಡಲಾಗುವುದು.
- ವ್ಯಾಕ್ಸಿನ್ ನೀಡಿದ ಬಳಿಕ ಸಂಬಂಧಿತ ವ್ಯಕ್ತಿಯನ್ನು 30 ನಿಮಿಷಗಳ ಕಾಲ ಒಬ್ಸರ್ವೇಶನ್ ನಲ್ಲಿ ಇಡಲಾಗುವುದು.
- ಲಸಿಕಾಕರಣ ಕಾರ್ಯಕ್ರಮದಲ್ಲಿ ಒಟ್ಟು ಐವರು ಸದಸ್ಯರು ಇರಲಿದ್ದಾರೆ.
- ಮೊದಲ ಹಂತದಲ್ಲಿ 50 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸು ಇರುವ ಸುಮಾರು 26.5 ಕೋಟಿ ಜನರಿಗೆ ಈ ವ್ಯಾಕ್ಸಿನ್ ನೀಡಲಾಗುವುದು.
- 50 ವರ್ಷಕ್ಕಿಂತ ಹೆಚ್ಚಿನ ವಯಸ್ಸಿನ ನಾಗರಿಕರನ್ನು ಗುರುತಿಸಲು ಮತದಾರರ ಹೊಸ ಮತದಾರರ ಸೂಚಿಯನ್ನು ಬಳಸಲಾಗುವುದು.
- ಇವರಲ್ಲಿ ವೈದ್ಯರು, ದಾಯಿಯರು ಹಾಗೂ ಮುಂಚೂಣಿಯಲ್ಲಿ ಆರೋಗ್ಯ ರಕ್ಷಕರಿಗೆ ಮೊದಲು ಆದ್ಯತೆ ನೀಡಲಾಗುವುದು.
-ಗಂಭೀರ ಕಾಯಿಲೆಯಿಂದ ಬಳಲುವ 50 ವರ್ಷಕ್ಕಿಂತ ಕಡಿಮೆ ವಯಸ್ಸಿನ ಸುಮಾರು 2.5 ಕೋಟಿ ಜನರಿಗೆ ಲಸಿಕೆ ನೀಡಲಾಗುವುದು.