Coronavirus 3rd Wave ತಡೆಗೆ ಸಿದ್ಧತೆ: 1500 ಆಕ್ಸಿಜನ್ ಸ್ಥಾವರ ಸ್ಥಾಪಿಸಲು ಮೋದಿ ಸರ್ಕಾರದ ಆದೇಶ

Covid-19 Third Wave - ಕರೋನಾ ವೈರಸ್ ಮೂರನೇ ಅಲೆಯ (Coronavirus Third Wave) ಭೀತಿಯ ನಡುವೆಯೇ ಕೇಂದ್ರ ಸರ್ಕಾರ ತನ್ನ ಸಿದ್ಧತೆಗಳನ್ನು ತೀವ್ರಗೊಳಿಸಿದೆ. ಪಿಎಂ ನರೇಂದ್ರ ಮೋದಿ (PM Narendra Modi) ಅವರು ಶುಕ್ರವಾರ ದೇಶದಲ್ಲಿ ವೈದ್ಯಕೀಯ ಆಮ್ಲಜನಕದ ಲಭ್ಯತೆ ಕುರಿತು ಉನ್ನತ ಮಟ್ಟದ ಸಭೆ ನಡೆಸಿ 1,500 ಆಮ್ಲಜನಕ ಸ್ಥಾವರಗಳನ್ನು (Oxygen Plants) ಸ್ಥಾಪಿಸಲು ಆದೇಶಿಸಿದ್ದಾರೆ. 

Written by - Nitin Tabib | Last Updated : Jul 9, 2021, 05:53 PM IST

    ಸಂಪುಟ ಪುನರ್ರಚನೆಯ ಬಳಿಕ ಕೊರೊನಾ ಕುರಿತಂತೆ ಪ್ರಧಾನಿ ಮೋದಿ ಅವರ ಮೊದಲ ಉನ್ನತಮಟ್ಟದ ಸಭೆ.

    ಸಭೆಯಲ್ಲಿ ದೇಶಾದ್ಯಂತ ಸುಮಾರು 1500 ಆಕ್ಸಿಜನ್ ಸ್ಥಾವರ ಸ್ಥಾಪನೆಗೆ ಪ್ರಧಾನಿ ಮೋದಿ ಆದೇಶ.

    ಮೂರನೇ ಅಲೆಯನ್ನು ಗಮನದಲ್ಲಿಟ್ಟುಕೊಂಡು ಆದಷ್ಟು ಬೇಗ ಕೆಲಸ ಪೂರ್ಣಗೊಳಿಸಲು ಅಧಿಕಾರಿಗಳಿಗೆ ಸೂಚನೆ.

Coronavirus 3rd Wave ತಡೆಗೆ ಸಿದ್ಧತೆ: 1500 ಆಕ್ಸಿಜನ್ ಸ್ಥಾವರ ಸ್ಥಾಪಿಸಲು ಮೋದಿ ಸರ್ಕಾರದ ಆದೇಶ title=
Covid-19 Third Wave (File Photo)

Covid-19 Third Wave - ಕರೋನಾ ವೈರಸ್ ಮೂರನೇ ಅಲೆಯ (Coronavirus Third Wave) ಭೀತಿಯ ನಡುವೆಯೇ ಕೇಂದ್ರ ಸರ್ಕಾರ ತನ್ನ ಸಿದ್ಧತೆಗಳನ್ನು ತೀವ್ರಗೊಳಿಸಿದೆ. ಪಿಎಂ ನರೇಂದ್ರ ಮೋದಿ (PM Narendra Modi) ಅವರು ಶುಕ್ರವಾರ ದೇಶದಲ್ಲಿ ವೈದ್ಯಕೀಯ ಆಮ್ಲಜನಕದ ಲಭ್ಯತೆ ಕುರಿತು ಉನ್ನತ ಮಟ್ಟದ ಸಭೆ ನಡೆಸಿ 1,500 ಆಮ್ಲಜನಕ ಸ್ಥಾವರಗಳನ್ನು (Oxygen Plants) ಸ್ಥಾಪಿಸಲು ಆದೇಶಿಸಿದ್ದಾರೆ. ಈ ಸ್ಥಾವರಗಳನ್ನು ದೇಶದ ವಿವಿಧ ಭಾಗಗಳಲ್ಲಿ ಸ್ಥಾಪಿಸಲಾಗುವುದು. ಈ ಸಭೆಯಲ್ಲಿ ಪಿಎಂ ಮೋದಿ ಅವರು ಆದಷ್ಟು ಬೇಗ ಕೆಲಸ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಇದರೊಂದಿಗೆ ಸಭೆಯಲ್ಲಿ ಪಿಎಂ ಮೋದಿ ಅವರು ಆಕ್ಷಿಜನ ಘಟಕದ ಕಾರ್ಯಾಚರಣೆ ಮತ್ತು ನಿರ್ವಹಣೆಗಾಗಿ ಆಸ್ಪತ್ರೆಯ ಸಿಬ್ಬಂದಿಗಳಿಗೆ  ಅಗತ್ಯ ತರಬೇತಿ (Oxygen Plant Maintainance Training) ನೀಡುವ ಬಗ್ಗೆ ಕೂಡ ಒತ್ತು ನೀಡಿದ್ದಾರೆ.

ಈ ಆಮ್ಲಜನಕ ಸ್ಥಾವರಗಳಿಗೆ ಪಿಎಂ ಕೇರ್ಸ್ ಫಂಡ್‌ನಿಂದ (PM Cares Fund) ಹಣ ಒದಗಿಸಲಾಗುತ್ತಿದೆ. ಇದು ದೇಶದಲ್ಲಿ 4 ಲಕ್ಷ ಆಮ್ಲಜನಕ ಬೆಡ್ ಗಳನ್ನು ನಿರ್ಮಿಸಲು ಸಹಾಯ ಮಾಡಲಿದೆ. ಈ ಮಹತ್ವದ ಸಭೆಯಲ್ಲಿ  ಪ್ರತಿ ಜಿಲ್ಲೆಯಲ್ಲೂ ಕೆಲವು ಜನರನ್ನು ನೇಮಿಸಿ, ಅವರಿಗೆ ಆಮ್ಲಜನಕ ಘಟಕಗಳ ಕಾರ್ಯಾಚರಣೆ ಮತ್ತು ನಿರ್ವಹಣೆ ವಿಷಯದಲ್ಲಿ ತರಬೇತಿ ನೀಡಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಮಾರ್ಚ್ ನಿಂದ ಮೇ ತಿಂಗಳಿನವರೆಗೆ ಇದ್ದ ಕೊರೊನಾ ವೈರಸ್ ನ ಎರಡನೇ ಅಲೆಯ ಸಂದರ್ಭದಲ್ಲಿ  ದೊಡ್ಡ ಪ್ರಮಾಣದಲ್ಲಿ ಕೊರೊನಾ ಪ್ರಕರಣಗಳು ಬೆಳಕಿಗೆ ಬಂದಿದ್ದವು. ಅಷ್ಟೇ ಅಲ್ಲ ಮೊದಲ ಅಲೆಗೆ ಹೋಲಿಸಿದರೆ, ಎರಡನೇ ಅಲೆಯ ಸಂದರ್ಭದಲ್ಲಿ ದೇಶಾದ್ಯಂತ ಭಾರಿ ಆಕ್ಸಿಜನ್ ಕೊರತೆ (Oxygen Crisis)ಎದುರಾಗಿತ್ತು. ಮುಂಬೈ, ದೆಹಲಿ, ಬೆಂಗಳೂರು ಸೇರಿದಂತೆ ದೇಶದ ಎಲ್ಲಾ ಮಹಾ ನಗರಗಳಲ್ಲಿ ವೈದ್ಯಕೀಯ ಆಮ್ಲಜನಕ, ವೆಂಟಿಲೇಟರ್ ಹಾಸಿಗೆ ಇತ್ಯಾದಿಗಳ ಕೊರತೆ ಎದುರಾಗಿತ್ತು.

ಇದನ್ನೂ ಓದಿ-ಜುಲೈ 11 ರಂದು ಜನಸಂಖ್ಯಾ ನಿಯಂತ್ರಣಕ್ಕಾಗಿ ಹೊಸ ಕಾಯ್ದೆ ತರಲಿದೆ ಈ ರಾಜ್ಯ

ರಾಜ್ಯಸರ್ಕಾರಗಳ (State Governments) ಜೊತೆಗೆ ಕಾರ್ಯನಿರ್ವಹಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದ ಪ್ರಧಾನಿ
ಎರಡನೇ ಅಲೆಯ ವೇಳೆ ಎದುರಾಗಿದ್ದ ಆಕ್ಸಿಜನ್ ಕೊರತೆಯ ಹಿನ್ನೆಲೆ ಕೇಂದ್ರ ಸರ್ಕಾರ ಭಾರಿ ಟೀಕೆಗೆ ಗುರಿಯಾಗಿತ್ತು. ಈ ಹಿನ್ನೆಲೆ ಮೂರನೇ ಅಲೆಯನ್ನು(Covid-19 Third Wave) ಗಮನದಲ್ಲಿಟ್ಟುಕೊಂಡು ಪ್ರಧಾನಿ ಮೋದಿ ಅವರು ಈ ಸಭೆ ನಡೆಸಿ ಆದಷ್ಟು ಶೀಘ್ರದಲ್ಲಿಯೇ ಆಕ್ಸಿಜನ್ ಘಟಕಗಳನ್ನು ಸ್ಥಾಪಿಸಲು ಆದೆಶಿಸಿರಬೇಕು ಎನ್ನಲಾಗಿದೆ. ಇದಕ್ಕಾಗಿ ಕೇಂದ್ರ ಸರ್ಕಾರದ ಅಧಿಕಾರಿಗಳು ವಿವಿಧ ರಾಜ್ಯಸರಕಾರಗಳೊಂದಿಗೆ ನಿಕಟವಾಗಿ ಕಾರ್ಯನಿರ್ವಹಿಸಬೇಕು ಮತ್ತು ಆಸ್ಪತ್ರೆಗಳ ಸಿಬ್ಬಂದಿಗೆ ಸರಿಯಾದ ತರಬೇತಿ ನೀಡುವಂತೆ ನೋಡಿಕೊಳ್ಳಬೇಕು ಎಂದು ಪ್ರಧಾನಿ ಮೋದಿ ಈ ಸಭೆಯಲ್ಲಿ ಹೇಳಿದ್ದಾರೆ. ಸ್ಥಳೀಯ ಮತ್ತು ರಾಷ್ಟ್ರಮಟ್ಟದಲ್ಲಿ ಆಮ್ಲಜನಕ ಘಟಕಗಳ ಕಾರ್ಯವೈಖರಿಯ ಮೇಲೆ ನಿಗಾ ಇಡಲು ಸರ್ಕಾರಗಳು ಹೊಸ ತಂತ್ರಜ್ಞಾನವನ್ನು ಬಳಸಬೇಕು ಎಂದು ಪ್ರಧಾನಿ ಮೋದಿ ಈ ಸಭೆಯಲ್ಲಿ ಹೇಳಿದ್ದಾರೆ. 

ಇದನ್ನೂ ಓದಿ- ಟೈಪ್ ಮಾಡದೆಯೇ whatsappನಲ್ಲಿ Message ಕಳುಹಿಸುವ ಸುಲಭ ವಿಧಾನ ಇಲ್ಲಿದೆ

ಸಂಪುಟ ವಿಸ್ತರಣೆಯ ಬಳಿಕ ಕೊರೊನಾ ಕುರಿತಂತೆ ಪ್ರಧಾನಿ ಮೋದಿ ಅವರ ಮೊದಲ ಸಭೆ ಇದು
ದೇಶಾದ್ಯಂತ ಒಟ್ಟು ಸುಮಾರು 8000 ಜನರಿಗೆ ತರಬೇತಿ ನೀಡುವ ಟಾರ್ಗೆಟ್ ತಾವು ಹೊಂದಿರುವುದಾಗಿ ಪ್ರಧಾನಿ ಮೋದಿ ಅಧಿಕಾರಿಗಳಿಗೆ ತಿಳಿಸಿದ್ದಾರೆ. ಸಂಪುಟ ಪುನರ್ರಚನೆ ವಿಸ್ತರಣೆಯ ಬಳಿಕ ಕೊರೋನಾಗೆ ಸಂಬಂಧಿಸಿದಂತೆ ಪ್ರಧಾನಿ ನಡೆಸಿರುವ ಮೊದಲ ಉನ್ನತ ಮಟ್ಟದ ಸಭೆ ಇದಾಗಿದೆ. ಸಂಪುಟ ಪುನರ್ರಚನೆಯ ವೇಳೆ ಈ ಹಿಂದೆ ಕೇಂದ್ರ ಆರೋಗ್ಯ ಸಚಿವರಾಗಿದ್ದ ಹರ್ಷ್ ವರ್ಧನ್ ಅವರನ್ನು ಸಂಪುಟದಿಂದ ಕೈಬಿಡಲಾಗಿದೆ ಮತ್ತು ಇದೀಗ ಆ ಹೊಣೆಯನ್ನು ಮನ್ಸುಖ್ ಮಾಂಡವಿಯಾ ಅವರಿಗೆ ವಹಿಸಲಾಗಿದೆ. 

ಇದನ್ನೂ ಓದಿ-Vi App ಮೂಲಕವೂ COVID 19 ಲಸಿಕೆಯ ಸ್ಲಾಟ್ ಬುಕ್ ಮಾಡಬಹುದು, ಹೇಗೆ ತಿಳಿಯಿರಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News