ನವದೆಹಲಿ: ಭಾರತದಲ್ಲಿ ಕೊರೊನಾವೈರಸ್ (Coronavirus) ಅಂಕಿಅಂಶಗಳು ಸ್ಥಿರವಾಗಿ ಹೆಚ್ಚುತ್ತಿವೆ. ಆದರೆ ಪರಿಹಾರದ ವಿಷಯವೆಂದರೆ ಭಾರತವು ಇತರ ದೇಶಗಳಿಗಿಂತ ಉತ್ತಮ ಸ್ಥಾನದಲ್ಲಿದೆ. ವಿಶ್ವ ಆರೋಗ್ಯ ಸಂಸ್ಥೆ (WHO) ಪ್ರಕಾರ ಭಾರತದಲ್ಲಿ ಕರೋನಾದ ಪ್ರಕರಣಗಳ ಪ್ರಮಾಣವು ಪ್ರತಿ ಲಕ್ಷಕ್ಕೆ 7.1 ಆಗಿದ್ದರೆ, ವಿಶ್ವದ ಕೋವಿಡ್ -19 (Covid-19) ದರ ಲಕ್ಷಕ್ಕೆ 60 ಆಗಿದೆ.
ವಿಶ್ವವನ್ನೇ ತಲ್ಲಣಗೊಳಿಸಿರುವ ಕೊರೋನಾವೈರಸ್ ಕುರಿತಂತೆ ವಿಶ್ವ ಆರೋಗ್ಯ ಸಂಸ್ಥೆ (WHO)
ಬಿಡುಗಡೆ ಮಾಡಿರುವ ಮಾಹಿತಿಯ ಪ್ರಕಾರ (ಮೇ 17 ರಂತೆ) ಯುಎಸ್‌ನಲ್ಲಿ ಒಟ್ಟು ಕರೋನಾ ಪ್ರಕರಣಗಳು 14,09,452 ಆಗಿದ್ದರೆ, ದೃಢಪಡಿಸಿದ ಪ್ರಕರಣಗಳು ಪ್ರತಿ ಲಕ್ಷಕ್ಕೆ 431 ಆಗಿದೆ. ಕೋವಿಡ್ -19 ರ ಒಟ್ಟು 2,81,752 ಪ್ರಕರಣಗಳು ರಷ್ಯಾದಲ್ಲಿ ದಾಖಲಾಗಿದ್ದು, ಅಲ್ಲಿ ದೃಢಪಡಿಸಿದ ಪ್ರಕರಣಗಳ ಪ್ರಮಾಣ ಲಕ್ಷಕ್ಕೆ 195 ಆಗಿದೆ.
ರಷ್ಯಾ ನಂತರ ಕರೋನಾ ಪ್ರಕರಣಗಳಲ್ಲಿ ಯುಕೆ ಮೂರನೇ ಸ್ಥಾನದಲ್ಲಿದೆ. ಯುಕೆಯಲ್ಲಿ ಮೇ 17ರ ಹೊತ್ತಿಗೆ ಒಟ್ಟು 2,40,165 ಕರೋನಾ ಪ್ರಕರಣಗಳು ವರದಿಯಾಗಿದ್ದರೆ, ದೃಢಪಡಿಸಿದ ಪ್ರಕರಣಗಳ ಶೇಕಡಾ 361 ಆಗಿದೆ. ಯುಕೆ ನಂತರ ಈ ಪಟ್ಟಿಯಲ್ಲಿ ಸ್ಪೇನ್, ಇಟಲಿ, ಬ್ರೆಜಿಲ್, ಜರ್ಮನಿ, ಟರ್ಕಿ, ಫ್ರಾನ್ಸ್ ಮತ್ತು ಇರಾನ್ ದೇಶಗಳು ಸೇರಿವೆ.
ಭಾರತದ ಸ್ಥಿತಿ:
ಮೇ 17ರ ಹೊತ್ತಿಗೆ ಭಾರತದಲ್ಲಿ ಇದುವರೆಗೆ ಒಟ್ಟು 1 ಲಕ್ಷ 1 ಸಾವಿರ 139 ಸಕಾರಾತ್ಮಕ ಪ್ರಕರಣಗಳು ಈವರೆಗೆ ವರದಿಯಾಗಿವೆ. ದೃಢಪಡಿಸಿದ ಪ್ರಕರಣಗಳ ದರ ಲಕ್ಷಕ್ಕೆ 7.1 ಆಗಿತ್ತು. ಇದರಲ್ಲಿ 58 ಸಾವಿರ 802 ಸಕ್ರಿಯ ಪ್ರಕರಣಗಳಿವೆ. ಅಂದರೆ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಅದೇ ಸಮಯದಲ್ಲಿ 39 ಸಾವಿರ 174 ಜನರು ಗುಣಮುಖರಾಗಿದ್ದಾರೆ. ಈವರೆಗೆ 3163 ಜನರು ಸಾವನ್ನಪ್ಪಿದ್ದಾರೆ.