Coronavirus In India: ಭಾರತದಲ್ಲಿ ಕೊರೊನಾ ವೈರಸ್ ಅಂತ್ಯದ ಕುರಿತು ತಜ್ಞರು ನೀಡಿದ ಬೆಚ್ಚಿಬೀಳಿಸುವ ಮಾಹಿತಿ ಇದು

Coronavirus In India - ಈ ಕುರಿತು ಹೇಳಿಕೆ ನೀಡಿರುವ ವ್ಯಾಕ್ಸಿನ್ ತಜ್ಞ (Vaccinologist) ಡಾ.ಕಾಂಗ್, ನಾವು ಸ್ಥಳೀಯ ಮಟ್ಟದಲ್ಲಿ ಸೊಂಕು ವೇಗ ಪಡೆದುಕೊಳ್ಳುವುದನ್ನು ನೋಡಬಹುದು ಮತ್ತು ಅದು ತೀರಾ ಸಣ್ಣ ಪ್ರಮಾಣದಲ್ಲಿರಲಿದ್ದು, ನಂತರ ಅಂದು ದೇಶಾದ್ಯಂತ ಹರಡಲಿದೆ.  ಒಂದು ವೇಳೆ ನಾವು ಹಬ್ಬಗಳ ಪ್ರತಿ ನಮ್ಮ ವ್ಯವಹಾರವನ್ನು ಬದಲಾಯಿಸದೆ ಹೋದರೆ, ಇದು ಮೂರನೇ ಅಲೆಯಾಗಿ  (Third Wave) ಪರಿವರ್ತನೆಯಾಗಬಹುದು ಎಂದಿದ್ದಾರೆ.

Written by - Nitin Tabib | Last Updated : Sep 21, 2021, 06:36 PM IST
  • ಕೊರೊನಾ ಮೂರನೇ ಅಲೆ ಹೆಚ್ಚು ಅಪಾಯಕಾರಿಯಾಗಿರುವುದಿಲ್ಲ.
  • 1/3ರಷ್ಟು ಜನಸಂಖ್ಯೆ ಕೊರೊನಾದಿಂದ ಪ್ರಭಾವಿತಗೊಂಡಿದೆ.
  • ಹಬ್ಬದ ಋತುವಿನಲ್ಲಿ ಎಚ್ಚರಿಕೆ ವಹಿಸುವಂತೆ ಹೇಳಿದ ಡಾ. ಕಾಂಗ್
Coronavirus In India: ಭಾರತದಲ್ಲಿ ಕೊರೊನಾ ವೈರಸ್ ಅಂತ್ಯದ ಕುರಿತು ತಜ್ಞರು ನೀಡಿದ ಬೆಚ್ಚಿಬೀಳಿಸುವ ಮಾಹಿತಿ ಇದು title=
Coronavirus in India (File Photo)

Coronavirus In India - ಭಾರತದಲ್ಲಿ ಕರೋನಾ ಸಾಂಕ್ರಾಮಿಕ (Covid-19) ಹರಡಿ ಎರಡು ವರ್ಷಗಳಿಗಿಂತ ಹೆಚ್ಚು ಕಾಲ ಕಳೆದಿದೆ ಮತ್ತು ಪ್ರತಿಯೊಬ್ಬರೂ ಈ ಕಾಯಿಲೆಯನ್ನುಅಂತ್ಯಗೊಳಿಸಲು ಕಾಯುತ್ತಿದ್ದಾರೆ. ಆದರೆ ದೇಶದ ಅಗ್ರ ಲಸಿಕೆ ತಜ್ಞರು ನೀಡಿರುವ ಎಚ್ಚರಿಕೆ ನಮ್ಮೆಲ್ಲರ ಆತಂಕ ಹೆಚ್ಚಿಸಲಿದೆ. ಲಸಿಕೆ ತಜ್ಞ ಡಾ.ಗಗನ್ ದೀಪ್ ಕಾಂಗ್ ಅವರು ಭಾರತದಲ್ಲಿ ಕರೋನಾ ವೈರಸ್ ಸೋಂಕು 'ಸ್ಥಳೀಯತೆ' ಯತ್ತ ಸಾಗುತ್ತಿದೆ, ಅಂದರೆ ಇದು ದೇಶದಲ್ಲಿ ಎಂದಿಗೂ ಮುಗಿಯದ ರೋಗವಾಗಿ ಪರಿಣಮಿಸಲಿದೆ ಎಂದು ಹೇಳಿದ್ದಾರೆ.

'ಜನರು ವೈರಸ್ ನೊಂದಿಗೆ ಬದುಕುವುದನ್ನು ಕಲಿತಿದ್ದಾರೆ'
ಈ ಕುರಿತು ಹೇಳಿಕೆ ನೀಡಿರುವ ಕಾಂಗ್ 'ಭಾರತದಲ್ಲಿ ಸ್ಥಳೀಯ ಮಟ್ಟದಲ್ಲಿ ಸೋಂಕು ವೇಗ ಪಡೆದುಕೊಳ್ಳಲಿದೆ ಹಾಗೂ ದೇಶಾದ್ಯಂತ ಹರಡಿ ಮಹಾಮಾರಿಯ ಮೂರನೇ ಅಲೆಯ ರೂಪ ಪಡೆದುಕೊಳ್ಳಲಿದೆ. ಆದರೆ, ಅದರ ಪ್ರಭಾವ ಮೊದಲಿನಂತೆ ಇರಲ್ಲ. ಯಾವುದೇ ಒಂದು ಕಾಯಿಲೆಯ ಎಂಡೆಮಿಕ್ (Endemic) ಹಂತದಲ್ಲಿ ಜನಸಂಖ್ಯೆ ವೈರಸ್ ನೊಂದಿಗೆ ಬದುಕುವುದನ್ನು ಕಲಿತುಕೊಳ್ಳುತ್ತದೆ. ಇದು ಎಪಿಡೇಮಿಕ್ (Epidemic) ಗಿಂತ ತೀರಾ ಭಿನ್ನವಾಗಿದ್ದು, ಎಪಿಡೆಮಿಕ್ ಅತಿ ಹೆಚ್ಚು ಜನರನ್ನು ತನ್ನ ತೆಕ್ಕೆಗೆ ಸೆಳೆಯುತ್ತದೆ.

PTI ಸುದ್ದಿ ಸಂಸ್ಥೆಗೆ ನೀಡಿರುವ ಸಂದರ್ಶನವೊಂದರಲ್ಲಿ ಮಾತನಾಡಿರುವ ಗಗನದೀಪ್ ಕಾಂಗ್, 'ಭಾರತದಲ್ಲಿ ಕೋವಿಡ್ -19 ರ ಪರಿಸ್ಥಿತಿ ಕುರಿತು ಚರ್ಚಿಸುತ್ತ, ಎರಡನೇ ಅಲೆಯ ನಂತರ, ದೇಶದ ಜನಸಂಖ್ಯೆಯ ಮೂರನೇ ಒಂದು ಭಾಗದಷ್ಟು ಜನರು ಇದರಿಂದ ಪ್ರಭಾವಿತರಾಗಿದ್ದಾರೆ ಎಂದು ಅವರು ಹೇಳಿದ್ದಾರೆ. "ಹಾಗಾದರೆ ಎರಡನೇ ಅಲೆಯಲ್ಲಿ ನಾವು ನೋಡಿದ ಅದೇ ಅಂಕಿಅಂಶಗಳು ಮತ್ತು ಅದೇ ಮಾದರಿಗಳನ್ನು ನಾವು ಮೂರನೆಯದರಲ್ಲಿ ಕಂಡುಹಿಡಿಯಲು ಸಾಧ್ಯವೇ? ಇದು ಕಡಿಮೆ ಸಾಧ್ಯತೆ ಎಂದು ನಾನು ಭಾವಿಸುತ್ತೇನೆ ಎಂದು ಅವರು ಹೇಳಿದ್ದಾರೆ. ಸ್ಥಳೀಯ ಮಟ್ಟದಲ್ಲಿ ಸೋಂಕು ಹರಡುವುದನ್ನು ನಾವು ನೋಡುತ್ತಿದ್ದೇವೆ. ಅದು ಚಿಕ್ಕದಾಗಿದ್ದರು ದೇಶದಾದ್ಯಂತ ಹರಡಲಿದೆ. ಇದು  ಮೂರನೇ ಅಲೆಯಾಗಿ ಪರಿಣಮಿಸಬಹುದು, ಮತ್ತು ನಾವು ಹಬ್ಬಗಳ ಬಗೆಗಿನ ನಮ್ಮ ನಡುವಳಿಕೆಯನ್ನು ಬದಲಾಯಿಸದಿದ್ದರೆ ಅದು ಸಂಭವಿಸಬಹುದು. ಆದರೆ ಅದರ ಪ್ರಮಾಣವು ನಾವು ಮೊದಲು ನೋಡಿದಂತೆ ಇರುವುದಿಲ್ಲ' ಎಂದು ಹೇಳಿದ್ದಾರೆ.

ಇದನ್ನೂ ಓದಿ-ಭರ್ಜರಿ ಬೇಟೆ: 21 ಸಾವಿರ ಕೋಟಿ ರೂ. ಮೌಲ್ಯದ 3 ಸಾವಿರ ಕೆಜಿ ಡ್ರಗ್ಸ್ ವಶಕ್ಕೆ..!

'ಸದ್ಯಕ್ಕೆ ಮುಗಿಯಲ್ಲ ಕೊರೊನಾ'
ಭಾರತದಲ್ಲಿ ಕೋವಿಡ್ ಸ್ಥಳೀಯ ಸ್ಥಿತಿಯನ್ನು ತಲುಪುವ ಹಾದಿಯಲ್ಲಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿರುವ ವೆಲ್ಲೂರಿನ ಕ್ರಿಶ್ಚಿಯನ್ ವೈದ್ಯಕೀಯ ಕಾಲೇಜಿನ ಪ್ರಾಧ್ಯಾಪಕ ಕಾಂಗ್,  "ಹೌದು, ನಿಮ್ಮ ಬಳಿ ನಿಕಟ ಭವಿಷ್ಯದಲ್ಲಿ ಇನ್ನೂ ಅಸ್ತಿತ್ವದಲ್ಲಿ ಉಳಿಯುವ  ಯಾವುದಾದರೊಂದು ಸಂಗತಿ ಇದ್ದರೆ , ಅದು ಸ್ಥಳೀಯ ಸ್ಥಿತಿಯತ್ತ ಸಾಗುತ್ತಿದೆ ಎಂದೇ ಅರ್ಥ" ಎಂದು  ಹೇಳಿದ್ದಾರೆ. ಪ್ರಸ್ತುತ ನಾವು SARS-CoV2 ವೈರಸ್ ಅನ್ನು ತೊಡೆದುಹಾಕಲು ಕೆಲಸ ಮಾಡುತ್ತಿಲ್ಲ. ಅಂದರೆ ಇದರ ತಾತ್ಪರ್ಯ ಅದು ಎಂಡೆಮಿಕ್ ಸ್ಥಿತಿಯತ್ತ ಸಾಗಬೇಕು ಎಂದರ್ಥ' ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ-ಆಗಸದಲ್ಲಿ ಚಂದ್ರನ ಅದ್ಭುತ ನೋಟ , ಇನ್ನೂ ಎರಡು ದಿನಗಳವರೆಗೆ ಕಾಣಬಹುದು ಈ ಅಮೋಘ ದೃಶ್ಯ

" ನಮ್ಮಲ್ಲಿ ಇನ್ಫ್ಲುಯೆನ್ಸದಂತಹ ಅನೇಕ ಸ್ಥಳೀಯ ರೋಗಗಳಿವೆ, ಆದರೆ ಕೊರೊನಾ ವಿಷಯದಲ್ಲಿ ಸಾಂಕ್ರಾಮಿಕ ರೋಗದ ಅಪಾಯವಿದೆ. ಉದಾಹರಣೆಗೆ, ನಮ್ಮ ದೇಹವು ಹೋರಾಡುವ ಸಾಮರ್ಥ್ಯವನ್ನು ಹೊಂದಿರದ ಒಂದು ಹೊಸ ರೂಪಾಂತರ (Coronavirus) ಬಂದರೆ, ಅದು ಮತ್ತೆ ಸಾಂಕ್ರಾಮಿಕ ರೂಪವನ್ನು ತೆಗೆದುಕೊಳ್ಳಬಹುದು" ಎಂದು ಡಾ. ಕಾಂಗ್ ಹೇಳಿದ್ದಾರೆ. ಈ ವೇಳೆ ಡಾ. ಕಾಂಗ್ (Virologist Gagandeep Kang) ಕೊರೊನಾ ತೊಡೆದುಹಾಕಲು ಒಂದು ಅತ್ಯುತ್ತಮ ಲಸಿಕೆ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಿದ್ದಾರೆ. 

ಇದನ್ನೂ ಓದಿ-Side Effects of Pineapple: ನಿಮಗೂ ಈ ಅಲರ್ಜಿ ಇದ್ದರೆ, ಪೈನಾಪಲ್ ಎಂದಿಗೂ ಸೇವಿಸಬೇಡಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News