ದೇಶದಲ್ಲಿ ಇದೆ ಮೊದಲ ಬಾರಿಗೆ ಶೇ.2.5ಕ್ಕಿಂತ ಕೆಳಗೆ ಜಾರಿದ Coronavirus Death Rate

ದೇಶಾದ್ಯಂತ ಕೊರೊನಾ ವೈರಸ್ ಪ್ರಕರಣಗಳಲ್ಲಿ ನಿರಂತರ ಏರಿಕೆಯಾಗುತ್ತಿದೆ. ಆದರೆ ನೆಮ್ಮದೀಯ ಸುದ್ದಿ ಎಂದರೆ ದೇಶಾದ್ಯಂತ ಕೊರೊನಾ ಮಹಾಮಾರಿಯಿಂದ ಸಂಭವ್ಹಿಸುತ್ತಿರುವ ಸಾವಿನ ಸಂಖ್ಯೆಯಲ್ಲಿ ನಿರಂತರ ಇಳಿಕೆಯಾಗುತ್ತಿದೆ.  

Last Updated : Jul 19, 2020, 04:33 PM IST
ದೇಶದಲ್ಲಿ ಇದೆ ಮೊದಲ ಬಾರಿಗೆ ಶೇ.2.5ಕ್ಕಿಂತ ಕೆಳಗೆ ಜಾರಿದ Coronavirus Death Rate title=

ನವದೆಹಲಿ: ದೇಶದಲ್ಲಿ ಕರೋನವೈರಸ್ ಪ್ರಕರಣಗಳು ನಿರಂತರವಾಗಿ ಹೆಚ್ಚುತ್ತಿವೆ. ಆದರೆ ಕರೋನಾದಿಂದ ಸಾವಿನ ಪ್ರಮಾಣ (ಸಿಎಫ್‌ಆರ್) ಕಡಿಮೆಯಾಗಿದೆ ಎಂಬುದು ನೆಮ್ಮದಿಯ ಸುದ್ದಿ. ಮೊದಲ ಬಾರಿಗೆ, ದೇಶದಲ್ಲಿ ಸಾವಿನ ಪ್ರಮಾಣ 2.5% ಕ್ಕೆ ಇಳಿದಿದೆ. 29 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿನ ಸಾವಿನ ಪ್ರಮಾಣ ರಾಷ್ಟ್ರೀಯ ಸರಾಸರಿಗಿಂತ ಕಡಿಮೆಯಾಗಿದೆ. ಇವುಗಳಲ್ಲಿ ಉತ್ತರ ಪ್ರದೇಶವೂ ಸೇರಿದೆ.

ಇದಕ್ಕೆ ಸಂಬಂಧಿಸಿದಂತೆ ಆರೋಗ್ಯ ಸಚಿವಾಲಯ ಬಿಡುಗಡೆ ಮಾಡಿರುವ ಹೇಳಿಕೆಯ ಪ್ರಕಾರ ಆಸ್ಪತ್ರೆಗೆ ದಾಖಲಾದ ಪ್ರಕರಣಗಳ ಪರಿಣಾಮಕಾರಿ ಕ್ಲಿನಿಕಲ್ ಮ್ಯಾನೇಜ್ಮೆಂಟ್ ಗೆ ಸಂಬಂಧಿಸಿದಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಪ್ರಯತ್ನದಿಂದಾಗಿ, ಭಾರತದಲ್ಲಿ ಸಾವಿನ ಪ್ರಮಾಣವು 2.5% ಕ್ಕಿಂತ ಕಡಿಮೆಯಾಗಿದೆ ಎನ್ನಲಾಗಿದೆ.

ಪರಿಣಾಮಕಾರಿ ಕಂಟೈನ್‌ಮೆಂಟ್ ಸ್ಟ್ರಾಟಜಿ, ಆಕ್ರಮಣಕಾರಿ ಪರೀಕ್ಷೆ ಮತ್ತು ಸ್ಟ್ಯಾಂಡರ್ಡ್ ಕ್ಲಿನಿಕಲ್ ಮ್ಯಾನೇಜ್‌ಮೆಂಟ್ ಪ್ರೋಟೋಕಾಲ್‌ಗಳಿಂದಾಗಿ ಸಾವಿನ ಅಂಕಿ ಅಂಶಗಳು ಕಡಿಮೆಯಾಗಿವೆ. ಕರೋನಾದಿಂದ ಸಂಭವಿಸುತ್ತಿರುವ ಸಾವಿನ ಪ್ರಮಾಣ ವೇಗವಾಗಿ ಇಳಿಕೆಯಾಗುತ್ತಿದೆ. ಕರೋನಾದಿಂದ ಸಂಭವಿಸುತ್ತಿರುವ ಸಾವಿನ ಪ್ರಮಾಣ ಕಡಿಮೆ ಇರುವ ದೇಶಗಳಲ್ಲಿ ಭಾರತವೂ ಕೂಡ ಒಂದಾಗಿದೆ. ದೇಶದಲ್ಲಿ ಕರೋನಾದ ಸಾವಿನ ಪ್ರಮಾಣ ವೇಗವಾಗಿ ಇಳಿಕೆಯಾಗುತ್ತಿದ್ದು, ಇದು ಪ್ರಸ್ತುತ ಶೇ.2.49ರಷ್ಟಿದೆ.

ಆರೋಗ್ಯ ಸಚಿವಾಲಯ ನೀಡಿರುವ ಮಾಹಿತಿ ಪ್ರಕಾರ, ನಿರಂತರವಾಗಿ ಹೆಚ್ಚಾಗುತ್ತಿರುವ ಪರೀಕ್ಷೆ ಮತ್ತು ಆಸ್ಪತ್ರೆಯ ಮೂಲಸೌಕರ್ಯಗಳ ಸುಧಾರಣೆಯಿಂದ ಇದು ಸಾಧ್ಯವಾಗಿದೆ ಎನ್ನಲಾಗಿದೆ. ಅನೇಕ ರಾಜ್ಯಗಳು ಜನಸಂಖ್ಯಾ ಸಮೀಕ್ಷೆಯನ್ನು ನಡೆಸಿದ್ದು, ತನ್ಮೂಲಕ ಸಾಂಕ್ರಾಮಿಕ ರೋಗಕ್ಕೆ ತುತ್ತಾಗುವವರನ್ನು ಗುರುತಿಸಲಾಗುತ್ತಿದೆ. ಇದರ ಅಡಿಯಲ್ಲಿ, ವಯಸ್ಸಾದವರು, ಗರ್ಭಿಣಿಯರು ಮತ್ತು ಈಗಾಗಲೇ ರೋಗ ಹೊಂದಿರುವ ಜನರನ್ನು ಗುರುತಿಸಲಾಗಿದೆ. ಇದರ ಅಡಿಯಲ್ಲಿ, ಹೆಚ್ಚಿನ ಅಪಾಯದ ಜನಸಂಖ್ಯೆಯನ್ನು ಒಬ್ಸೆರ್ವೇಷನ್ ನಲ್ಲಿ ಇರಿಸಲಾಗಿದೆ. ಇದೇ ವೇಳೆ ಆರಂಭಿಕ ಹಂತದಲ್ಲಿ ರೋಗವನ್ನು ಪತ್ತೆಹಚ್ಚುವ ಮತ್ತು ಸಮಯೋಚಿತ ಚಿಕಿತ್ಸೆಯಿಂದ ಜನರ ಜೀವವನ್ನು ಉಳಿಸಬಹುದಾಗಿದೆ ಎಂದು ಸಚಿವಾಲಯ ತನ್ನ ಹೇಳಿಕೆಯಲ್ಲಿ ಹೇಳಿದೆ.

29 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿನ ಸಾವಿನ ಪ್ರಮಾಣವು ರಾಷ್ಟ್ರೀಯ ಸರಾಸರಿ 2.49% ಗಿಂತ ಕಡಿಮೆಯಾಗಿದೆ. ಸಾವಿನ ಪ್ರಮಾಣ 5 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಇದು ಶೇಕಡಾ ಸೊನ್ನೆ ಆಗಿದೆ. ಇದೇ ವೇಳೆ, 14 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿನ ಸಾವಿನ ಪ್ರಮಾಣವು ಶೇಕಡಾ 1 ಕ್ಕಿಂತ ಕಡಿಮೆಯಿದೆ.

Trending News