New Year ಸಂಭ್ರಮಾಚರಣೆಗೆ ಕರೋನಾ ಗ್ರಹಣ, ಹಲವೆಡೆ ಸೆಕ್ಷನ್ 144 ಜಾರಿ

New Year Celebration:  ಹೊಸ ವರ್ಷದ ಸಂಭ್ರಮಾಚರಣೆಯ ಮೊದಲು ಮುಂಬೈ ಮತ್ತು ಪುಣೆ ಸೇರಿದಂತೆ ಮಹಾರಾಷ್ಟ್ರದ ಹಲವು ನಗರಗಳಲ್ಲಿ ಬೆಳಿಗ್ಗೆ 11 ರಿಂದ ಬೆಳಿಗ್ಗೆ 6 ರವರೆಗೆ ಕರ್ಫ್ಯೂ ವಿಧಿಸಲಾಗಿದೆ. ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಲು ಮುಂಬೈ ಮತ್ತು ಪುಣೆಯಲ್ಲಿ ಸೆಕ್ಷನ್ 144 ವಿಧಿಸಲಾಗಿದೆ.

Written by - Yashaswini V | Last Updated : Dec 31, 2020, 01:00 PM IST
  • ಐದಕ್ಕಿಂತ ಹೆಚ್ಚು ಜನರು ಒಟ್ಟುಗೂಡುವಂತಿಲ್ಲ
  • ರೆಸ್ಟೋರೆಂಟ್‌ಗಳು, ಬಾರ್‌ಗಳು, ಪಬ್‌ಗಳಲ್ಲಿ ಪಾರ್ಟಿ ಮಾಡಲು ಅನುಮತಿಯಿಲ್ಲ
  • ಧಾರ್ಮಿಕ ಸ್ಥಳಗಳಲ್ಲಿ ಜನ ದಟ್ಟಣೆಗೆ ಅವಕಾಶವಿಲ್ಲ
New Year ಸಂಭ್ರಮಾಚರಣೆಗೆ ಕರೋನಾ ಗ್ರಹಣ, ಹಲವೆಡೆ ಸೆಕ್ಷನ್ 144 ಜಾರಿ title=
New year celebration

ಮುಂಬೈ: ಹೊಸ ವರ್ಷದ ಸಂಭ್ರಮಾಚರಣೆಗೂ ಕೊರೊನಾವೈರಸ್ ಗ್ರಹಣ ತಟ್ಟಿದ್ದು ಮಹಾರಾಷ್ಟ್ರದ ಅನೇಕ ನಗರಗಳಲ್ಲಿ ರಾತ್ರಿ ಕರ್ಫ್ಯೂ ವಿಧಿಸಲಾಗಿದೆ. ಮಹಾರಾಷ್ಟ್ರ ಸರ್ಕಾರ ರಾಜ್ಯದ ನಗರ ಪ್ರದೇಶಗಳಲ್ಲಿ ರಾತ್ರಿ ಕರ್ಫ್ಯೂ ವಿಧಿಸಿದೆ. ಅಲ್ಲದೆ ಇದನ್ನು ಕಟ್ಟುನಿಟ್ಟಾಗಿ ಅನುಸರಿಸಲು ಮುಂಬೈ ಮತ್ತು ಪುಣೆಯಲ್ಲಿ ಸೆಕ್ಷನ್ 144 ಅನ್ನು ವಿಧಿಸಲಾಗಿದೆ.

ರಾತ್ರಿ 11 ರ ನಂತರ ಪಾರ್ಟಿಗೆ ಅವಕಾಶವಿಲ್ಲ:
ನೈಟ್ ಕರ್ಫ್ಯೂ (Night Curfew) ಅಡಿಯಲ್ಲಿ 5 ಅಥವಾ ಹೆಚ್ಚಿನ ಜನರು ರಾತ್ರಿ 11 ರಿಂದ ಬೆಳಿಗ್ಗೆ 6 ರವರೆಗೆ ಒಟ್ಟುಗೂಡಲು ಅವಕಾಶವಿಲ್ಲ. ಇದಲ್ಲದೆ ರಾತ್ರಿ 11 ರ ನಂತರ ರೆಸ್ಟೋರೆಂಟ್‌ಗಳು, ಬಾರ್‌ಗಳು, ಪಬ್‌ಗಳಲ್ಲಿ ದೊಡ್ಡ ಕೂಟಗಳಲ್ಲಿ ಪಾರ್ಟಿ ಮಾಡಲು ಅನುಮತಿಸಲಾಗುವುದಿಲ್ಲ. ಇದರೊಂದಿಗೆ ಧಾರ್ಮಿಕ ಸ್ಥಳಗಳಿಗೆ ಹೋಗುವ ಜನರಿಗೆ ಜನದಟ್ಟಣೆ ತಪ್ಪಿಸಲು ಸೂಚಿಸಲಾಗಿದೆ.

ಇದನ್ನೂ ಓದಿ: New Year's Eve Party: ಹೊಸ ವರ್ಷದ ಸಂಭ್ರಮಾಚರಣೆಗೆ ಬ್ರೇಕ್, Night curfew ಜಾರಿ

ರಾತ್ರಿ ಕರ್ಫ್ಯೂನಲ್ಲಿ ಈ ನಿಯಮಗಳನ್ನು ಪಾಲಿಸುವುದು ಅವಶ್ಯಕ :-
- ನಾಲ್ಕು ಜನರಿಗಿಂತ ಹೆಚ್ಚು ಜನರು ಎಲ್ಲಿಯೂ ಒಟ್ಟಿಗೆ ಸೇರಲು ಸಾಧ್ಯವಾಗುವುದಿಲ್ಲ.
- ಒಂದು ಕಾರಿನಲ್ಲಿ ನಾಲ್ಕು ಜನರಿಗಿಂತ ಹೆಚ್ಚು ಮಂದಿ ಪ್ರಯಾಣಿಸುವಂತಿಲ್ಲ.
- ಯಾವುದೇ ಪಾರ್ಟಿಗೆ ಅನುಮತಿಸಲಾಗುವುದಿಲ್ಲ.
- ಮನೆ ಅಥವಾ ಸಾರ್ವಜನಿಕ ಸ್ಥಳದಲ್ಲಿ ಸ್ನೇಹಿತರು ಮತ್ತು ಸಂಬಂಧಿಕರನ್ನು ಭೇಟಿ ಮಾಡಲು ಯಾವುದೇ ನಿರ್ಬಂಧವಿಲ್ಲ, ಆದರೆ 4 ಕ್ಕೂ ಹೆಚ್ಚು ಜನರು ಒಂದೇ ಸ್ಥಳದಲ್ಲಿ ಸೇರಲು ಸಾಧ್ಯವಿಲ್ಲ.
- ಧ್ವನಿವರ್ಧಕ / ಡಿಜೆ ಮತ್ತು ಪಟಾಕಿಗಳನ್ನು ನಿಷೇಧಿಸಲಾಗಿದೆ.
- ಜನಸಂದಣಿಯನ್ನು ಒಟ್ಟುಗೂಡಿಸುವ ಸ್ಥಳದಲ್ಲಿ ಸಾಂಸ್ಕೃತಿಕ ಅಥವಾ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸಲು ಸಾಧ್ಯವಿಲ್ಲ.

ಇದನ್ನೂ ಓದಿ: Farmers ಆದಾಯ ಹೆಚ್ಚಿಸಲು ಸರ್ಕಾರದಿಂದ ಮಹತ್ವದ ನಿರ್ಧಾರ

ಮಹಾರಾಷ್ಟ್ರದಲ್ಲಿ 54,206 ಸಕ್ರಿಯ ಕರೋನ ಪ್ರಕರಣಗಳು :
ಕೇಂದ್ರ ಆರೋಗ್ಯ ಸಚಿವಾಲಯದ ಮಾಹಿತಿಯ ಪ್ರಕಾರ, ಮಹಾರಾಷ್ಟ್ರದಲ್ಲಿ ಕೊರೊನಾವೈರಸ್ ಪ್ರಕರಣಗಳು 19,28,603 ಕ್ಕೆ ಏರಿಕೆಯಾಗಿದ್ದು ಈ ಪೈಕಿ 49463 ಜನರು ಪ್ರಾಣ ಕಳೆದುಕೊಂಡಿದ್ದಾರೆ. ಆದರೆ ಈವರೆಗೆ ರಾಜ್ಯದಲ್ಲಿ 18,24,934 ಜನರನ್ನು ಕೋವಿಡ್ -19 (Covid 19) ನಿಂದ ಗುಣಪಡಿಸಲಾಗಿದೆ ಮತ್ತು ರಾಜ್ಯದಲ್ಲಿ ಇನ್ನೂ 54,206 ಸಕ್ರಿಯ ಪ್ರಕರಣಗಳಿವೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಆಪ್ ಡೌನ್ ಲೋಡ್ ಮಾಡಿ
Android Link - https://bit.ly/3hDyh4G
iOS Link - https://apple.co/3loQYe 

ನಮ್ಮ ಸೋಶಿಯಲ್ ಮೀಡಿಯಾ ಪುಟಕ್ಕೆ ಸಬ್ ಸ್ಕ್ರೈಬ್ ಮಾಡಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
 

Trending News