CORONA VIRUS ದುರ್ಬಲತೆ ಪತ್ತೆಹಚ್ಚಿದ ವಿಜ್ಞಾನಿಗಳು, ಚಿಟಿಕೆ ಹೊಡೆಯೋದರಲ್ಲಿ..!

ವಿಶ್ವಾದ್ಯಂತ ಹಲವು ಜನರು ಈ ವೈರಸ್ ಸೋಂಕಿನ ಕಾರಣ ತಮ್ಮ ಪ್ರಾಣ ಕೂಡ ಕಳೆದುಕೊಂಡಿದ್ದಾರೆ.

Last Updated : Feb 13, 2020, 07:47 PM IST
CORONA VIRUS ದುರ್ಬಲತೆ ಪತ್ತೆಹಚ್ಚಿದ ವಿಜ್ಞಾನಿಗಳು, ಚಿಟಿಕೆ ಹೊಡೆಯೋದರಲ್ಲಿ..! title=

ನವದೆಹಲಿ: ಕೊರೊನಾ ವೈರಸ್ ನ ಅತಿ ದೊಡ್ಡ ಶಕ್ತಿ ಎಂದರೆ, ಈ ವೈರಸ್ ಸೋಂಕಿನ ಕುರಿತು ಜನಸಾಮಾನ್ಯರಲ್ಲಿ ಇರುವ ಮಾಹಿತಿಯ ಕೊರತೆ. ಇದೇ ಕಾರಣದಿಂದ ಚೀನಾದಲ್ಲಿ ಪ್ರತಿಯೊಬ್ಬ ಸಾಮಾನ್ಯ ಜನರು ಈ ವೈರಸ್ ನ ದಾಳಿಗೆ ತುತ್ತಾಗುತ್ತಿದ್ದಾರೆ. ಅಷ್ಟೇ ಅಲ್ಲ ಹಲವರು ಈ ವೈರಸ್ ದಾಳಿಗೆ ಪ್ರಾಣ ಕೂಡ ಕಳೆದುಕೊಂಡಿದ್ದಾರೆ. ಆದರೆ, ಇದೀಗ ವಿಜ್ಞಾನಿಗಳು ಈ ವೈರಸ್ ನ ಶಕ್ತಿಯನ್ನು ಪತ್ತೆ ಹಚ್ಚಿದ್ದಾರೆ. ಮಾಹಿತಿಯನ್ನು ಉಪಯೋಗಿಸಿ ನೀವೂ ಕೂಡ ಸುಲಭವಾಗಿ ಈ ಖತರ್ನಾಕ್ ವೈರಸ್ ಅನ್ನು ಸೋಲಿಸಬಹುದಾಗಿದೆ.

ಉಷ್ಣತೆಯಲ್ಲಿ ಈ ವೈರಸ್ ಹೆಚ್ಚು ಕಾಲ ಬದುಕುವುದಿಲ್ಲ
ವಿಜ್ಞಾನಿಗಳು ಈ ಕುರಿತು ಸಂಶೋಧನೆ ನಡೆಸಿದ್ದು, ಈ ವೈರಸ್ ಕೇವಲ ತಂಪಾಗಿರುವ ಪ್ರದೇಶಗಳಲ್ಲಿ ಮಾತ್ರ ಪವರ್ ಫುಲ್ ಆಗಿರುತ್ತದೆ. 30 ಡಿಗ್ರಿಗಿಂತ ಅಧಿಕ ತಾಪಮಾನ ಹೊಂದಿರುವ ಪ್ರದೇಶದಲ್ಲಿ ಈ ವೈರಸ್ ತನ್ನಷ್ಟಕ್ಕೆ ತಾನೇ ಸಾವನ್ನಪ್ಪುತ್ತದೆ. ಹೀಗಾಗಿ ಒಂದು ವೇಳೆ ನೀವೂ ಕೂಡ ಯಾವುದಾದರೊಂದು ತಂಪಾದ ಪ್ರದೇಶಕ್ಕೆ ಭೇಟಿ ನೀಡುವ ಯೋಚನೆಯಲ್ಲಿದ್ದರೆ, ಸ್ವಲ್ಪ ಕಾಲದವರೆಗೆ ಮುಂದೂಡಿ. ಚೀನಾದ ವುಹಾನ್ ಪಟ್ಟಣದಲ್ಲಿ ಕಳೆದ ಒಂದು ತಿಂಗಳಲ್ಲಿ ತಾಪಮಾನ ಸರಾಸರಿ 6-8 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಇದೇ ಕಾರಣದಿಂದ ಈ ವೈರಸ್ ವುಹಾನ್ ಪಟ್ಟಣದಲ್ಲಿ ಹೆಚ್ಚಿನ ಆತಂಕ ಸೃಷ್ಟಿಸಿದೆ

ಕೇವಲ 15 ಸೆಕೆಂಡ್ ಗಳಲ್ಲಿ ಈ ಸೋಂಕು ಇತರರಿಗೆ ಹರಡುತ್ತದೆ
ಈ ಸೋಂಕಿಗೆ ಗುರಿಯಾದ ವ್ಯಕ್ತಿ ಯಾವುದಾದರೊಂದು ಹ್ಯಾಂಡಲ್ ಅಥವಾ ಡೆಸ್ಕ್ ಮೇಲೆ ಕೈ ಇಟ್ಟರೆ ಮತ್ತು 15 ಸೆಕೆಂಡ್ ಒಳಗಾಗಿ ಬೇರೆ ವ್ಯಕ್ತಿ ಅದನ್ನು ಸ್ಪರ್ಶಿಸಿದರೆ, ಸೋಂಕು ಹರಡುವ ಸಾಧ್ಯತೆ ಶೇ.100ರಷ್ಟು ಹೆಚ್ಚಾಗುತ್ತದೆ. ಈ ಕುರಿತು ಹೇಳಿಕೆ ನೀಡಿರುವ ವೈದ್ಯರು, ಒಂದು ವೇಳೆ ಈ ಸೋಂಕಿಗೆ ಗುರಿಯಾದ ವ್ಯಕ್ತಿಯ ಮುಂದೆ ಕೇವಲ 15 ಸೆಕೆಂಡ್ ನಿಂತರೆ ಸಾಕು, ಪಕ್ಕದಲ್ಲಿರುವ ವ್ಯಕ್ತಿಗೆ ಈ ಸೊಂಕು ಹರಡುತ್ತದೆ. ಹೀಗಾಗಿ ಯಾವುದೇ ಸಾರ್ವಜನಿಕ ಪ್ರದೇಶದಲ್ಲಿ ಮುಖಕ್ಕೆ ಮಾಸ್ಕ್ ಧರಿಸದೆ ಸುತ್ತಾಡಬೇಡಿ ಎಂದು ನಿರ್ದೇಶನಗಳನ್ನು ನೀಡಲಾಗುತ್ತಿದೆ.

4ಡಿಗ್ರೀ ಗಿಂತ ಕಡಿಮೆ ತಾಪಮಾನವಿರುವ ಪ್ರದೆಶದಲಿ 1 ತಿಂಗಳಿಗಿಂತ ಹೆಚ್ಚು ಕಾಲ ಈ ವೈರಸ್ ಬಾಳುತ್ತದೆ
ಈ ಕುರಿತು ಹೇಳಿಕೆ ನೀಡಿರುವ ಜರ್ಮನಿಯ ವೈದ್ಯರು, ಕೊರೊನಾ ವೈರಸ್ ಅತ್ಯಂತ ತಂಪಾದ ಸ್ಥಾನಗಳಲ್ಲಿ ತುಂಬಾ ಶಕ್ತಿಶಾಲಿಯಾಗಿದೆ ಎಂದಿದ್ದಾರೆ. ಈ ಕುರಿತು ಸಂಶೋಧನೆ ನಡೆಸಲಾಗಿದ್ದು 4 ಡಿಗ್ರೀ ಸೆಲ್ಸಿಯಸ್ ಗಿಂತ ಕಡಿಮೆ ತಾಪಮಾನ ಇರುವ ಪ್ರದೇಶಗಳಲ್ಲಿ ಈ ವೈರಸ್ 1 ತಿಂಗಳಿಗೂ ಅಧಿಕ ಕಾಲ ಬದುಕುತ್ತದೆ. ಹೀಗಾಗಿ ತುಂಬಾ ತಂಪಾದ ಸ್ಥಾನಗಳಲ್ಲಿ ಅತ್ಯಂತ ಎಚ್ಚರಿಕೆ ವಹಿಸುವ ಸೂಚನೆ ನೀಡಲಾಗುತ್ತಿದೆ.

Trending News