Corona Vaccine: ಈ ನಾಲ್ಕು ರಾಜ್ಯಗಳಲ್ಲಿ ಮೇ 1ರಿಂದ ಎಲ್ಲರಿಗೂ ಸಿಗಲ್ಲ ಕರೋನಾ ಲಸಿಕೆ!

ಮೇ 1 ರಿಂದ 18 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನವರಿಗೆ ಲಸಿಕೆ ಅಭಿಯಾನ ಮೇ 1 ರಿಂದ ಆರಂಭವಾಗಲಿದೆ. ಆದರೆ ಈ ಮಧ್ಯೆ 4 ರಾಜ್ಯಗಳಲ್ಲಿ ಮೇ 1 ರಿಂದ ಎಲ್ಲರಿಗೂ ಲಸಿಕೆ ನೀಡಲು ಸಾಧ್ಯವಿಲ್ಲ ಎಂದು ಹೇಳಲಾಗುತ್ತಿದೆ.

Written by - Zee Kannada News Desk | Last Updated : Apr 26, 2021, 02:25 PM IST
  • ಮೇ 1 ರಿಂದ 18 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲರಿಗೂ ಲಸಿಕೆ ಹಾಕಲು ಕೇಂದ್ರ ಸರ್ಕಾರ ಅನುಮತಿ ನೀಡಿದೆ
  • ಇದಕ್ಕಾಗಿ ಏಪ್ರಿಲ್ 28 ರಿಂದ ನೋಂದಣಿ ಪ್ರಕ್ರಿಯೆ ಆರಂಭವಾಗಿದೆ
  • ಬಿಜೆಪಿಯೇತರ ಸರ್ಕಾರವಿರುವ ರಾಜ್ಯಗಳಲ್ಲಿ ಲಸಿಕೆ ಕೊರತೆ ಆರೋಪ
Corona Vaccine: ಈ ನಾಲ್ಕು ರಾಜ್ಯಗಳಲ್ಲಿ ಮೇ 1ರಿಂದ ಎಲ್ಲರಿಗೂ ಸಿಗಲ್ಲ ಕರೋನಾ ಲಸಿಕೆ! title=
Corona Vaccine

ನವದೆಹಲಿ: ಭಾರತದಲ್ಲಿ ಕರೋನವೈರಸ್ ಸೋಂಕನ್ನು ನಿಯಂತ್ರಿಸುವ ಸಲುವಾಗಿ, ಮೇ 1 ರಿಂದ 18 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲರಿಗೂ ಲಸಿಕೆ ಹಾಕಲು ಕೇಂದ್ರ ಸರ್ಕಾರ ಅನುಮತಿ ನೀಡಿದೆ. ಏತನ್ಮಧ್ಯೆ, ದೇಶದ 4 ರಾಜ್ಯಗಳಲ್ಲಿ ಕರೋನಾ ಲಸಿಕೆಯ ಕೊರತೆಯಿಂದಾಗಿ ಮೇ 1 ರಿಂದ ಎಲ್ಲರಿಗೂ ಕೋವಿಡ್ ಲಸಿಕೆ ನೀಡಲು ಸಾಧ್ಯವಿಲ್ಲ ಎಂದು ಹೇಳಲಾಗುತ್ತಿದೆ.

ಬಿಜೆಪಿಯೇತರ ಸರ್ಕಾರವಿರುವ ರಾಜ್ಯಗಳಲ್ಲಿ ಲಸಿಕೆ ಕೊರತೆ:
ಕರೋನಾ ವ್ಯಾಕ್ಸಿನೇಷನ್‌ನ (Corona Vaccination) ಮೂರನೇ ಹಂತದಲ್ಲಿ 18 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲರಿಗೂ ಮೇ 1 ರಿಂದ ಲಸಿಕೆ ನೀಡಲಾಗುವುದು, ಇದಕ್ಕಾಗಿ ಏಪ್ರಿಲ್ 28 ರಿಂದ ನೋಂದಣಿ ಪ್ರಕ್ರಿಯೆ ಆರಂಭವಾಗಿದೆ. ಆದರೆ ದಿ ಹಿಂದೂ ವರದಿಯ ಪ್ರಕಾರ, ಪಂಜಾಬ್, ರಾಜಸ್ಥಾನ, ಛತ್ತೀಸ್‌ಗಢ ಮತ್ತು ಜಾರ್ಖಂಡ್ ರಾಜ್ಯ ಸರ್ಕಾರಗಳು ಕರೋನಾ ಲಸಿಕೆ ಲಭ್ಯತೆಯ ಬಗ್ಗೆ ಪ್ರಶ್ನೆಗಳು ಎದ್ದಿವೆ. ಗಮನಾರ್ಹವಾಗಿ ಈ ನಾಲ್ಕು ರಾಜ್ಯಗಳು ಬಿಜೆಪಿಯೇತರ ಸರ್ಕಾರವಿರುವ ರಾಜ್ಯಗಳು. ರಾಜಸ್ಥಾನ, ಛತ್ತೀಸ್‌ಗಢ, ಪಂಜಾಬ್‌ನಲ್ಲಿ ಕಾಂಗ್ರೆಸ್ ಆಡಳಿತ ನಡೆಸುತ್ತಿದ್ದರೆ, ಜಾರ್ಖಂಡ್‌ನಲ್ಲಿ ಜೆಎಂಎಂ ಜೊತೆ ಕಾಂಗ್ರೆಸ್ ಸಮ್ಮಿಶ್ರ ಸರ್ಕಾರ ಅಧಿಕಾರದಲ್ಲಿದೆ. 

ಇದನ್ನೂ ಓದಿ - Corona Second Wave: ಕೋವಿಡ್ ನಿರ್ವಹಣೆಗೆ Googleನಿಂದ 135 ಕೋಟಿ ರೂ. ನೆರವು

ಲಸಿಕೆ ಬಗ್ಗೆ ಪ್ರಶ್ನೆ ಎತ್ತಿದ ರಾಜಸ್ಥಾನ :
ರಾಜಸ್ಥಾನ ಆರೋಗ್ಯ ಸಚಿವ ರಘು ಶರ್ಮಾ ಮಾತನಾಡಿ, 'ಲಸಿಕೆ ಕೊಳ್ಳುವ ಬಗ್ಗೆ ನಾವು ಸೀರಮ್ ಸಂಸ್ಥೆಯೊಂದಿಗೆ ಮಾತಾನಾಡಿದ್ದೇವೆ, ಈ ಸಂದರ್ಭದಲ್ಲಿ ಕೇಂದ್ರ ಸರ್ಕಾರದಿಂದ ನಮಗೆ ದೊರೆತ ಆರ್ಡರ್ ಪೂರೈಸಲು ಮೇ 15 ರವರೆಗೆ ನಮಗೆ ಸಮಯ ಬೇಕು ಎಂದು ಅವರು ಹೇಳಿದರು. ಹಾಗಾಗಿ ಅಲ್ಲಿವರೆಗೂ ಸೀರಮ್ ಸಂಸ್ಥೆಯಿಂದ ಲಸಿಕೆ ದೊರೆಯುವ ಸಾಧ್ಯತೆ ಕಡಿಮೆ ಎಂದರು. ವಾಸ್ತವವಾಗಿ, ರಾಜ್ಯಗಳಿಗೆ ಅಗತ್ಯವಾದ ಲಸಿಕೆ ಪಡೆಯಲು ರಾಜ್ಯ ಸರ್ಕಾರಗಳು ಸೀರಮ್ ಸಂಸ್ಥೆ ಮತ್ತು ಭಾರತ್ ಬಯೋಟೆಕ್‌ಗೆ ಆರ್ಡರ್ ನೀಡಬೇಕು.

ನಮ್ಮಲ್ಲಿ ಲಸಿಕೆ ಲಭ್ಯವಿಲ್ಲ: ಛತ್ತೀಸ್‌ಗಢ
"18 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಲಸಿಕೆ ನೀಡಲು ನಾವು ಸಿದ್ಧರಿದ್ದೇವೆ, ಆದರೆ ನಮ್ಮಲ್ಲಿ ಲಸಿಕೆ (Corona Vaccine) ಲಭ್ಯವಿಲ್ಲ ಮತ್ತು ಮೇ 1 ರಿಂದ ಎಲ್ಲರಿಗೂ ಲಸಿಕೆ ನೀಡಲು ಸಾಧ್ಯವಿಲ್ಲ" ಎಂದು ಛತ್ತೀಸ್‌ಗಢ ಮುಖ್ಯಮಂತ್ರಿ ಭೂಪೇಶ್ ಬಾಗೆಲ್ ಹೇಳಿದರು. ಅದೇ ಸಮಯದಲ್ಲಿ, ಛತ್ತೀಸ್‌ಗಢದ ಆರೋಗ್ಯ ಸಚಿವ ಟಿ.ಎಸ್. ಸಿಂಗ್, "ನಮ್ಮಲ್ಲಿ ಲಸಿಕೆ ಇಲ್ಲ ಮತ್ತು ಲಸಿಕೆಗೆ ಆರ್ಡರ್ ನೀಡಲಾಗಿದೆ, ಆದರೆ ಒಂದು ತಿಂಗಳ ನಂತರವೇ ಲಸಿಕೆ ಲಭ್ಯವಾಗಲಿದೆ" ಎಂದವರು ತಿಳಿಸಿದರು.

ಇದನ್ನೂ ಓದಿ - Covid Care Center: ರಾಷ್ಟ್ರ ರಾಜಧಾನಿಯಲ್ಲಿ ನಗರದ ಅತಿದೊಡ್ಡ ಕೋವಿಡ್ ಕೇರ್ ಸೆಂಟರ್

ಮೇ 1 ರಿಂದ ಎಲ್ಲರಿಗೂ ಲಸಿಕೆ ಸಾಧ್ಯವಿಲ್ಲ- ಪಂಜಾಬ್ ಸಿಎಂ 
'ನಮ್ಮಲ್ಲಿ ಈಗ ಕೇವಲ 4 ಲಕ್ಷ ಲಸಿಕೆಗಳು ಮಾತ್ರ ಉಳಿದಿವೆ ಮತ್ತು ಕೇಂದ್ರ ಸರ್ಕಾರದಿಂದ ಲಸಿಕೆ ಲಭ್ಯವಾಗುವವರೆಗೆ, ಮೇ 1 ರಿಂದ ನಾವು ಎಲ್ಲರಿಗೂ ಲಸಿಕೆ ಹಾಕುವುದು ಹೇಗೆ? ಎಂದು ಪಂಜಾಬ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಪ್ರಶ್ನಿಸಿದ್ದಾರೆ. ಪಂಜಾಬ್ ಸರ್ಕಾರದ ಆರೋಗ್ಯ ಸಚಿವ ಬಲ್ಬೀರ್ ಸಿಂಗ್ ಸಿಧು ಮಾತನಾಡಿ, ಮೇ 1 ರಿಂದ ಎಲ್ಲರಿಗೂ ಲಸಿಕೆ ನೀಡಲಾಗುವುದು ಎಂದು ಕೇಂದ್ರ ಸರ್ಕಾರ ಹೇಳಿದೆ, ಆದರೆ ಲಸಿಕೆ ಎಲ್ಲೂ ಇಲ್ಲ. ಅಂತಹ ಪರಿಸ್ಥಿತಿಯಲ್ಲಿ, ನಾವು 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಲಸಿಕೆ ನೀಡುವುದು ಹೇಗೆ ಎಂದಿದ್ದಾರೆ.

ಲಸಿಕೆ ಹೈಜಾಕ್ ಆರೋಪ ಮಾಡಿದ ಜಾರ್ಖಂಡ್:
ಲಸಿಕೆ ಬಗ್ಗೆ ಜಾರ್ಖಂಡ್‌ನ ಆರೋಗ್ಯ ಸಚಿವರು ಕೇಂದ್ರವನ್ನು ಪ್ರಶ್ನಿಸಿದ್ದು, ಎರಡೂ ಲಸಿಕೆ ಉತ್ಪಾದನೆಯನ್ನೂ ಅಂದರೆ ಸೀರಮ್ ಸಂಸ್ಥೆ ಮತ್ತು ಭಾರತ್ ಬಯೋಟೆಕ್‌ ಲಸಿಕೆಯನ್ನು ಕೇಂದ್ರ ಸರ್ಕಾರ ಸಂಪೂರ್ಣವಾಗಿ  ಹೈಜಾಕ್ ಮಾಡಿದೆ ಎಂದು ಆರೋಪಿಸಿದ್ದಾರೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News