ಮುಂದಿನ ಎರಡು ದಿನ ಮಾಡಲಾಗುವುದಿಲ್ಲ ಕೊರೋನಾ ಟೆಸ್ಟ್, ಕಾರಣ ಏನೆಂದು ತಿಳಿಯಿರಿ

ಮುಂದಿನ ಎರಡು ದಿನಗಳವರೆಗೆ ರಾಜ್ಯಗಳಲ್ಲಿ COVID-19 ಮಾದರಿಗಳನ್ನು ಪರೀಕ್ಷಿಸದಿರಲು ಸರ್ಕಾರ ನಿರ್ಧರಿಸಿದೆ. 

Last Updated : Apr 22, 2020, 09:50 AM IST
ಮುಂದಿನ ಎರಡು ದಿನ ಮಾಡಲಾಗುವುದಿಲ್ಲ ಕೊರೋನಾ ಟೆಸ್ಟ್, ಕಾರಣ ಏನೆಂದು ತಿಳಿಯಿರಿ title=

ನವದೆಹಲಿ : ಕರೋನಾ ವೈರಸ್ ಸಾಂಕ್ರಾಮಿಕ ರೋಗದ ಬಗ್ಗೆ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ICMR) ಮಂಗಳವಾರ ಮಾಹಿತಿ ನೀಡಿದ್ದು ಮುಂದಿನ ಎರಡು ದಿನಗಳವರೆಗೆ ರಾಜ್ಯಗಳಿಗೆ ಕೋವಿಡ್-19 (Covid-19) ಪರೀಕ್ಷಾ ಕಿಟ್‌ಗಳನ್ನು ಬಳಸದಂತೆ ಸೂಚಿಸಿದೆ. ಈ ಟೆಸ್ಟ್ ಕಿಟ್‌ನ ಬ್ಯಾಚ್‌ನಲ್ಲಿ ಏನಾದರೂ ದೋಷ ಕಂಡುಬಂದಲ್ಲಿ ಕಿಟ್‌ ಅನ್ನು ಬದಲಾಯಿಸಲು ಕಂಪನಿಗೆ ಕೇಳಲಾಗುತ್ತದೆ ಎಂದು ಅದು ತಿಳಿಸಿದೆ.

ಟೆಸ್ಟ್ ನಲ್ಲಿ ವೇರಿಯೇಶನ್:
ವಾಸ್ತವವಾಗಿ  ಕೊರೊನಾವೈರಸ್ (Coronavirus)  ಸೋಂಕಿನ ಪ್ರಕರಣಗಳ ತನಿಖೆಗಾಗಿ ಎಲ್ಲಾ ರಾಜ್ಯಗಳಿಗೆ ಕ್ಷಿಪ್ರ ಪರೀಕ್ಷಾ ಕಿಟ್‌ಗಳನ್ನು ಲಭ್ಯಗೊಳಿಸಲಾಗಿದೆ. ಈ ಕಿಟ್ ಮೂಲಕ ಕರೋನಾ ಸೋಂಕನ್ನು ನಿಖರವಾಗಿ ಕಂಡುಹಿಡಿಯುವುದು ಕಷ್ಟ ಎಂದು ದೂರಲಾಯಿತು. ಈ ರೀತಿಯ ದೂರುಗಳನ್ನು ಸ್ವೀಕರಿಸಿದ ನಂತರ ಐಸಿಎಂಆರ್ ಮೂರು ರಾಜ್ಯಗಳಿಂದ ಮಾಹಿತಿಯನ್ನು ಕೋರಿತು. ಅದರ ಆಧಾರದ ಮೇಲೆ ಆರ್ಟಿ-ಪಿಸಿಆರ್ + ವೆ (RT-PCR + ve) ಪ್ರಕರಣಗಳಲ್ಲಿನ ವ್ಯತ್ಯಾಸವು 6% ರಿಂದ 71% ರವರೆಗೆ ಬರುತ್ತಿದೆ ಎಂದು ಕಂಡುಬಂದಿದೆ. ಇದನ್ನು ಗಂಭೀರವಾಗಿ ಪರಿಗಣಿಸಿರುವ ಐಸಿಎಂಆರ್ ಈ ಸಮಯದಲ್ಲಿ Covid-19 ಮಾದರಿಯ ತನಿಖೆಯನ್ನು ನಿಲ್ಲಿಸಲು ನಿರ್ಧರಿಸಿದೆ.

ಈ 60 ಜಿಲ್ಲೆಗಳಲ್ಲಿ ಕಳೆದ 14 ದಿನಗಳಲ್ಲಿ ಯಾವುದೇ ಕರೋನವೈರಸ್ ಪ್ರಕರಣ ವರದಿಯಾಗಿಲ್ಲ

ಪರೀಕ್ಷಾ ಕಿಟ್‌ಗಳನ್ನು ಪರೀಕ್ಷಿಸಲಾಗುವುದು:
ಮುಂದಿನ ಎರಡು ದಿನಗಳಲ್ಲಿ ಐಸಿಎಂಆರ್‌ನ ಎಂಟು ಸಂಸ್ಥೆಗಳ ತಂಡಗಳು ಮೈದಾನಕ್ಕೆ ಹೋಗಿ ಕೊರೋನಾ ತಪಾಸಣೆಗೆ ಬಳಸುವ ಪರೀಕ್ಷಾ ಕಿಟ್‌ಗಳನ್ನು ಪರಿಶೀಲಿಸುತ್ತವೆ ಎಂದು ಐಸಿಎಂಆರ್ ಮಾಹಿತಿ ನೀಡಿದೆ. ಮುಂದಿನ ಕಿಟ್‌ನಲ್ಲಿ ಯಾವುದೇ ದೋಷ ಕಂಡುಬಂದಲ್ಲಿ ಈ ಪರೀಕ್ಷಾ ಕಿಟ್‌ಗಳ ಬ್ಯಾಚ್ ಅನ್ನು ಬದಲಾಯಿಸಲು ಕಂಪನಿಗೆ ಕೇಳಲಾಗುತ್ತದೆ ಎಂದು ಅದು ಹೇಳಿದೆ.

ಈ ವಿಶೇಷ ಚಿಕಿತ್ಸೆಯಿಂದ ಕೋವಿಡ್ -19 ರೋಗಿಯ ಸ್ಥಿತಿಯಲ್ಲಿ ಸುಧಾರಣೆ

4.5 ಲಕ್ಷ ಮಾದರಿಗಳನ್ನು ತನಿಖೆ ಮಾಡಲಾಗಿದೆ:
ಐಸಿಎಂಆರ್ ಒದಗಿಸಿದ ಮಾಹಿತಿಯ ಪ್ರಕಾರ ದೇಶದಲ್ಲಿ ಈವರೆಗೆ 4,49,810 ಮಾದರಿಗಳನ್ನು ಪರೀಕ್ಷಿಸಲಾಗಿದೆ. ಸೋಮವಾರ 35,852 ಮಾದರಿಗಳನ್ನು ಪರಿಶೀಲಿಸಲಾಗಿದೆ. 201 ಐಸಿಎಂಆರ್ ಲ್ಯಾಬ್ ನೆಟ್‌ವರ್ಕ್‌ನಲ್ಲಿ 29,776 ಮಾದರಿಗಳನ್ನು ಪರೀಕ್ಷಿಸಲಾಯಿತು. ಖಾಸಗಿ ಲ್ಯಾಬ್‌ನಲ್ಲಿ 6,076 ಮಾದರಿಗಳನ್ನು ಪರೀಕ್ಷಿಸಲಾಯಿತು ಎಂದು ತಿಳಿದುಬಂದಿದೆ.

ಸರ್ಕಾರಕ್ಕೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ ದೇಶದಲ್ಲಿ ಬದಲಾಗುತ್ತಿರುವ ಕರೋನಾವೈರಸ್‌ನ ಲಕ್ಷಣಗಳು

80% ಪೀಡಿತರಲ್ಲಿ ಕಂಡು ಬಂದಿಲ್ಲ ರೋಗ ಲಕ್ಷಣ:
ಆರೋಗ್ಯ ಸಚಿವಾಲಯದ ಪ್ರಕಾರ ಇಲ್ಲಿಯವರೆಗೆ ವರದಿಯಾದ 80 ಪ್ರತಿಶತ ಪ್ರಕರಣಗಳಲ್ಲಿ  ಕೊರೋನಾವೈರಸ್ ನ ಯಾವುದೇ ಲಕ್ಷಣಗಳು ಕಂಡುಬಂದಿಲ್ಲ. ಅಂದರೆ 100 ರೋಗಿಗಳಲ್ಲಿ 80 ಮಂದಿಯಲ್ಲಿ ರೋಗಲಕ್ಷಣಗಳು ಪತ್ತೆಯಾಗಿಲ್ಲ ಎಂದರ್ಥ. ಕರೋನಾ ಸೋಂಕು ಇನ್ನೂ ದೇಶದಲ್ಲಿ ಹರಡುತ್ತಿದೆ ಮತ್ತು ಪ್ರತಿದಿನ ಕರೋನಾ ಸೋಂಕಿನ ಸಂಖ್ಯೆ ಹೆಚ್ಚುತ್ತಿದೆ. ವಿಜ್ಞಾನಿಗಳ ಪ್ರಕಾರ 80 ಪ್ರತಿಶತದಷ್ಟು ಕರೋನಾ ಪ್ರಕರಣಗಳಲ್ಲಿ ಸೋಂಕಿನ  ಲಕ್ಷಣ ಕಂಡು ಬರದೇ ಇರುವುದು ಆಘಾತಕಾರಿ ಮತ್ತು ಚಿಂತಾಜನಕವಾಗಿದೆ. ಈ ರೀತಿಯಾದರೆ ಯಾರು ಕರೋನಾ ಸೋಂಕಿಗೆ ಒಳಗಾಗಿದ್ದಾರೆ ಎಂಬುದನ್ನು ಅರ್ಥಮಾಡಿಕೊಳ್ಳುವುದೇ ಕಷ್ಟವಾಗುತ್ತದೆ ಎಂಬುದು ಇದೀಗ ಎಲ್ಲರ ಆತಂಕಕ್ಕೆ ಕಾರಣವಾಗಿದೆ.

Trending News