ಕರೋನಾ ವಿರುದ್ದದ ಹೋರಾಟವನ್ನು ಸುಲಭಗೊಳಿಸಲಿದೆ ಈ ಸ್ವದೇಶೀ ಕಿಟ್

ಕೋವಿಡ್ -19 ಗೆ ಪ್ರತಿಕಾಯಗಳನ್ನು ಪತ್ತೆಹಚ್ಚಲು ಪುಣೆಯ ರಾಷ್ಟ್ರೀಯ ವೈರಾಲಜಿ ಸಂಸ್ಥೆ ಮೊದಲ ಸ್ಥಳೀಯ ವಿರೋಧಿ SARS-COV-2 ಮಾನವ ಐಜಿಜಿ ಎಲಿಸಾ ಪರೀಕ್ಷಾ ಕಿಟ್ ಅನ್ನು ಯಶಸ್ವಿಯಾಗಿ ಅಭಿವೃದ್ಧಿಪಡಿಸಿದೆ.  

Last Updated : May 12, 2020, 10:25 AM IST
ಕರೋನಾ ವಿರುದ್ದದ ಹೋರಾಟವನ್ನು ಸುಲಭಗೊಳಿಸಲಿದೆ  ಈ ಸ್ವದೇಶೀ ಕಿಟ್ title=

ನವದೆಹಲಿ: ದೇಶದಲ್ಲಿ ಕೊರೊನಾವೈರಸ್ (Coronavirus)  ಸಾಂಕ್ರಾಮಿಕ ಬಿಕ್ಕಟ್ಟು ಹೆಚ್ಚುತ್ತಲೇ ಇದೆ. ಇಂತಹ ಪರಿಸ್ಥಿತಿಯಲ್ಲಿ ಸರ್ಕಾರಕ್ಕೆ ದೊಡ್ಡ ಯಶಸ್ಸು ಸಿಕ್ಕಿದೆ. ಕರೋನಾ ವೈರಸ್ ಪ್ರಕರಣಗಳ ತನಿಖೆಗಾಗಿ ಕೋವಿಡ್ -19 ಅನ್ನು ಪ್ರತಿಕಾಯಗಳ ಪತ್ತೆಗಾಗಿ ಭಾರತವು ಪರೀಕ್ಷಾ ಕಿಟ್ ಅನ್ನು ಅಭಿವೃದ್ಧಿಪಡಿಸಿದೆ.

ಅಭಿವೃದ್ಧಿಪಡಿಸಲಾಗಿದೆ ಎಲಿಸಾ ಪರೀಕ್ಷಾ ಕಿಟ್ :
ಕೋವಿಡ್ -19ಗೆ ಪ್ರತಿಕಾಯಗಳನ್ನು ಪತ್ತೆ ಹಚ್ಚಲು ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ICMR) ಮತ್ತು ಪುಣೆಯ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ವೈರಾಲಜಿ (National Institute of Virology) ಸ್ಥಳೀಯ ಐಜಿಜಿ ಎಲಿಸಾ ಪರೀಕ್ಷೆಯನ್ನು 'ಕೋವಿಡ್ ಕವಾಚ್ ಎಲಿಸಾ' ಅಭಿವೃದ್ಧಿಪಡಿಸಿದೆ.

ಕೋವಿಡ್-19 (Covid-19) ಗೆ ಪ್ರತಿಕಾಯಗಳನ್ನು ಪತ್ತೆಹಚ್ಚಲು ಪುಣೆಯ ರಾಷ್ಟ್ರೀಯ ವೈರಾಲಜಿ ಸಂಸ್ಥೆ ಮೊದಲ ಸ್ಥಳೀಯ ವಿರೋಧಿ SARS-COV-2 ಮಾನವ ಐಜಿಜಿ ಎಲಿಸಾ ಪರೀಕ್ಷಾ ಕಿಟ್ ಅನ್ನು ಯಶಸ್ವಿಯಾಗಿ ಅಭಿವೃದ್ಧಿಪಡಿಸಿದೆ. ಈ ಕಿಟ್ ಅನ್ನು ಮುಂಬಯಿಯಲ್ಲಿ ಎರಡು ಸ್ಥಳಗಳಲ್ಲಿ ಬಳಸಲು ಗುರುತಿಸಲಾಗಿದೆ. ಇದು ಸೂಕ್ಷ್ಮತೆ ಮತ್ತು ನಿಖರತೆಯನ್ನು ಹೊಂದಿದೆ. 2.5 ಗಂಟೆಗಳಲ್ಲಿ ಏಕಕಾಲದಲ್ಲಿ 90 ಮಾದರಿ ಪರೀಕ್ಷೆಗಳನ್ನು ಮಾಡಬಹುದು ಎಂದು ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷವರ್ಧನ್ (Dr. Harshvardhan) ಮಾಹಿತಿ ನೀಡಿದ್ದಾರೆ.

ಐಜಿಜಿ ಎಲಿಸಾ ಟೆಸ್ಟ್ ಕಿಟ್‌ನ ಬೃಹತ್ ಉತ್ಪಾದನೆಗಾಗಿ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಜೈಡಸ್ ಕ್ಯಾಡಿಲಾ (Zydus Cadila) ಫಾರ್ಮಾಸ್ಯುಟಿಕಲ್ ಕಂಪನಿಯೊಂದಿಗೆ ಸಹಭಾಗಿತ್ವವನ್ನು ಹೊಂದಿದೆ ಎಂದು ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಹೇಳಿದ್ದಾರೆ.

ಚೀನಾದಿಂದ ತರೆಸಲಾದ ಕಿಟ್ ವಿಫಲ:
ಐಸಿಎಂಆರ್ ಇತ್ತೀಚೆಗೆ ಚೀನಾದಿಂದ ಸುಮಾರು ಐದು ಲಕ್ಷ ಕೋವಿಡ್ -19 ಕ್ಷಿಪ್ರ ಪ್ರತಿಕಾಯ ಪರೀಕ್ಷಾ ಕಿಟ್‌ಗಳ ಆದೇಶಗಳನ್ನು ರದ್ದುಗೊಳಿಸಿದೆ ಎಂದು ತಿಳಿದುಬಂದಿದೆ, ಏಕೆಂದರೆ ಅವು ಸರಿಯಾದ ಫಲಿತಾಂಶವನ್ನು ನೀಡುತ್ತಿಲ್ಲ. ಇದರ ಬದಲಿಗೆ ಭಾರತದ ಈ ಸ್ಥಳೀಯ ಕಿಚ್ ಕ್ಷಿಪ್ರ ಪರೀಕ್ಷಾ ಕಿಟ್‌ಗಳಂತೆಯೇ (Rapid Testing Kits) ಇದೆ ಮತ್ತು ಶೀಘ್ರದಲ್ಲೇ ಜನರನ್ನು ಈ ಪರೀಕ್ಷಾ ಕಿಟ್ ಮೂಲಕ ದೊಡ್ಡ ಪ್ರಮಾಣದಲ್ಲಿ ಪರೀಕ್ಷಿಸಲಾಗುತ್ತದೆ. 

Trending News