ರಾಜಸ್ತಾನ ಸ್ಥಳೀಯ ಸಂಸ್ಥೆ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಗೆ ಜಯಭೇರಿ

   

Last Updated : Mar 7, 2018, 08:50 PM IST
ರಾಜಸ್ತಾನ ಸ್ಥಳೀಯ ಸಂಸ್ಥೆ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಗೆ ಜಯಭೇರಿ  title=

ಜೈಪುರ: ರಾಜಸ್ತಾನದ ಸ್ಥಳೀಯ ಸಂಸ್ಥೆಗಳಾದ ಜಿಲ್ಲಾ ಪರಿಷತ್, ಪಂಚಾಯತ್ ಸಮಿತಿ ಮತ್ತು ನಗರ್ ಪಾಲಿಕಾ /ನಗರ್ ಪರಿಷತ್ ಗಳಿಗಾಗಿ ನಡೆದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ಭರ್ಜರಿ ಜಯ ಗಳಿಸಿದೆ.  

ಜಿಲ್ಲಾ ಪರಿಷತ್ ನಲ್ಲಿ  6 ಸ್ಥಾನಗಳಲ್ಲಿ ಕಾಂಗ್ರೆಸ್ 4 ಸ್ಥಾನ ಗಳಿಸಿದರೆ, ಬಿಜೆಪಿ ಮತ್ತು ಸ್ವತಂತ್ರ ಅಭ್ಯರ್ಥಿಗಳು ತಲಾ ಒಂದು ಸ್ಥಾನವನ್ನು ಗೆದ್ದಿದ್ದಾರೆ. ಪಂಚಾಯತ್ ಸಮಿತಿಯಲ್ಲಿ  21ರಲ್ಲಿ ಕಾಂಗ್ರೆಸ್ ಗೆ 12, ಬಿಜೆಪಿಗೆ 8, ಸ್ವತಂತ್ರ ಅಭ್ಯರ್ಥಿಗೆ 1 ಸ್ಥಾನ ಲಭಿಸಿದೆ. ನಗರಸಭೆಯಲ್ಲಿ ಕಾಂಗ್ರೆಸ್ ಗೆ 4 ,ಬಿಜೆಪಿಗೆ 2 ಸ್ಥಾನ ಲಭಿಸಿದೆ.

ರಾಜಸ್ಥಾನದಲ್ಲಿ ಕಾಂಗ್ರೆಸ್ ಪಕ್ಷವು ಇತ್ತೀಚಿಗೆ ಎರಡು ಲೋಕಸಭೆ ಮತ್ತು ಒಂದು ವಿಧಾನಸಭಾ ಕ್ಷೇತ್ರಗಳಿಗಾಗಿ ನಡೆದ ಉಪ ಚುನಾವಣೆಯಲ್ಲಿ ಗೆಲುವು ಸಾಧಿಸಿತ್ತು. ಈಗ ಮತ್ತೆ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದು ಮುಂಬರುವ ರಾಜಸ್ತಾನದ ವಿಧಾನಸಭೆಯಲ್ಲಿ ಅಧಿಕಾರಕ್ಕೆ ಬರುವ ಸೂಚನೆಯನ್ನು ಈ ಎಲ್ಲ ಫಲಿತಾಂಶವು ನೀಡುತ್ತಿದೆ ಎಂದು ಹೇಳಲಾಗಿದೆ.

Trending News