Randeep Surjewala : ಪಂಚರಾಜ್ಯ ಚುನಾವಣಾ ಫಲಿತಾಂಶದ ನಡುವೆಯೇ ಕಾಂಗ್ರೆಸ್ ನಿಂದ​ ಮಹತ್ವದ ನಿರ್ಧಾರ!

ಫಲಿತಾಂಶದ ಕುರಿತು ಮಾಧ್ಯಮ ಚರ್ಚೆಗಳಲ್ಲಿ  ಭಾಗವಹಿಸುವುದಿಲ್ಲ ಎಂದ ಕಾಂಗ್ರೆಸ್

Last Updated : May 2, 2021, 11:31 AM IST
  • ಪಂಚರಾಜ್ಯ ಚುನಾವಣಾ ಫಲಿತಾಂಶದ ನಡುವೆಯೇ ಕಾಂಗ್ರೆಸ್ ಶನಿವಾರ​ ಮಹತ್ವದ ನಿರ್ಧಾರ ತೆಗೆದುಕೊಂಡಿದ್ದು
  • ಫಲಿತಾಂಶದ ಕುರಿತು ಮಾಧ್ಯಮ ಚರ್ಚೆಗಳಲ್ಲಿ ಭಾಗವಹಿಸುವುದಿಲ್ಲ ಎಂದ ಕಾಂಗ್ರೆಸ್
  • ಈ ಕುರಿತು ಟ್ವೀಟ್​ ಮಾಡಿರುವ ಕಾಂಗ್ರೆಸ್​ ಮುಖ್ಯ ವಕ್ತಾರ ರಣದೀಪ್​ ಸುರ್ಜೇವಾಲ
Randeep Surjewala : ಪಂಚರಾಜ್ಯ ಚುನಾವಣಾ ಫಲಿತಾಂಶದ ನಡುವೆಯೇ ಕಾಂಗ್ರೆಸ್ ನಿಂದ​ ಮಹತ್ವದ ನಿರ್ಧಾರ! title=

ನವದೆಹಲಿ: ಪಂಚರಾಜ್ಯ ಚುನಾವಣಾ ಫಲಿತಾಂಶದ ನಡುವೆಯೇ ಕಾಂಗ್ರೆಸ್ ಶನಿವಾರ​ ಮಹತ್ವದ ನಿರ್ಧಾರವೊಂದನ್ನು ತೆಗೆದುಕೊಂಡಿದ್ದು, ಫಲಿತಾಂಶದ ಕುರಿತು ಮಾಧ್ಯಮ ಚರ್ಚೆಗಳಲ್ಲಿ  ಭಾಗವಹಿಸುವುದಿಲ್ಲ ಎಂದು ಹೇಳಿದೆ.

ಈ ಕುರಿತು ಟ್ವೀಟ್​ ಮಾಡಿರುವ ಕಾಂಗ್ರೆಸ್​ ಮುಖ್ಯ ವಕ್ತಾರ ರಣದೀಪ್​ ಸುರ್ಜೇವಾಲ(Randeep Surjewala), ದೇಶದಲ್ಲಿ ಮಾಹಾಮರಿ ಕೊರೋನಾ ವೈರಸ್​ ಎರಡನೇ ಅಲೆಯು ತೀವ್ರವಾಗಿದೆ. ಇಂತಹ ಬಿಕ್ಕಟ್ಟಿನ ಸಮಯದಲ್ಲಿ ನಾವು ಚುನಾವಣಾ ಫಲಿತಾಂಶ ಕುರಿತಾದ ಮಾಧ್ಯಮ ಚರ್ಚೆಗಳಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ಹೇಳಿದ್ದಾರೆ.

ಇದನ್ನೂ ಓದಿ : Kerala Election Results 2021 : ಬಿಜೆಪಿ ಅಭ್ಯರ್ಥಿ ಮೆಟ್ರೋಮ್ಯಾನ್ ಇ. ಶ್ರೀಧರನ್ ಮುನ್ನಡೆ!

ಮಾಧ್ಯಮ ಚರ್ಚೆ(Media Debates)ಯಿಂದ ನಮ್ಮ ವಕ್ತಾರರನ್ನು ನಾವು ಹಿಂಪಡೆದುಕೊಂಡಿದ್ದೇವೆ ಎಂದು ಸುರ್ಜೇವಾಲ ಹೇಳಿದ್ದಾರೆ. ಅಲ್ಲದೆ, ಮಾಧ್ಯಮ ಸ್ನೇಹಿತರು ಬಯಸುವ ಯಾವುದೇ ಕಾಮೆಂಟ್‌ಗೆ ಪ್ರತಿಕ್ರಿಯಿಸುವುದಕ್ಕೆ  ನಾವು ಲಭ್ಯವಿರುವುದಿಲ್ಲ. ನಾವು ಗೆಲ್ಲಬಹುದು ಅಥವಾ ಸೋಲಬಹುದು, ಆದರೆ ಜನರು ಆಕ್ಸಿಜನ್, ಬೆಡ್ , ಔಷಧಿಗಳು ಮತ್ತು ವೆಂಟಿಲೇಟರ್‌ಗಳನ್ನು ಹುಡುಕುತ್ತಿರುವ ಸಮಯದಲ್ಲಿ ನಮ್ಮ ಕರ್ತವ್ಯವು ಅವರೊಂದಿಗೆ ನಿಲ್ಲುವುದಾಗಿದೆ ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ : Assembly Election Results 2021 : ಪಶ್ಚಿಮ ಬಂಗಾಳದಲ್ಲಿ ಮ್ಯಾಜಿಕ್ ನಂಬರ್ ರಿಚ್ ಆದ ಟಿಎಂಸಿ..!

ಪಶ್ಚಿಮ ಬಂಗಾಳ, ತಮಿಳುನಾಡು, ಕೇರಳ, ಪುದುಚೇರಿ ಮತ್ತು ಅಸ್ಸಾಂ ಪಂಚರಾಜ್ಯಗಳ ವಿಧಾನ ಸಭಾ(Election Results 2021)  ಮತಎಣಿಕೆ ಕಾರ್ಯ ಮುಂದುವರಿದಿದೆ.

ಇದನ್ನೂ ಓದಿ : Coronavirus: ಭೂಸೇನೆ, ವಾಯುಸೇನೆ ಬಳಿಕ ಅಖಾಡಕ್ಕಿಳಿದ ನೌಕಾದಳ : ಆಪರೇಶನ್ Samudra Setu II ಆರಂಭ

ಎಕ್ಸಿಟ್​ ಪೋಲ್​ ಪ್ರಕಾರ ಈ ಚುನಾವಣೆಗಳಲ್ಲಿ ಕಾಂಗ್ರೆಸ್(Congress)​ಗೆ ನಿರೀಕ್ಷಿತ ಫಲಿತಾಂಶ ದೊರೆಯುವುದಿಲ್ಲ ಎಂದು ಊಹಿಸಿವೆ. ತಮಿಳುನಾಡಿನಲ್ಲಿ ಮಿತ್ರಪಕ್ಷ ಡಿಎಂಕೆ ಅಧಿಕಾರಕ್ಕೆ ಬರಬಹುದು ಎಂದು ನಿರೀಕ್ಷೆ ಹೊರತುಪಡಿಸಿ, ಕಾಂಗ್ರೆಸ್ ಇತರ ರಾಜ್ಯಗಳಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುವುದಿಲ್ಲ ಎಂದು ಸಮೀಕ್ಷೆಗಳು ತಿಳಿಸಿವೆ. 

ಇದನ್ನೂ ಓದಿ : Assembly Election Results 2021: ಮಮತಾ ಬ್ಯಾನರ್ಜಿಯಿಂದ ಎಂ.ಕೆ. ಸ್ಟಾಲಿನ್‌ರವರೆಗಿನ ಟಾಪ್ 10 ಅಭ್ಯರ್ಥಿಗಳಿವರು

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News