ಮಧ್ಯಪ್ರದೇಶ ವಿಧಾನಸಭೆ ಚುನಾವಣೆ: ಕಾಂಗ್ರೆಸ್ ನೀಡಿದ ಭರವಸೆಗಳೇನು?

ಮಧ್ಯಪ್ರದೇಶ ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್ ತನ್ನ ಚುನಾವಣಾ ಪ್ರಣಾಳಿಕೆಯನ್ನು 'ಘೋಷಣಾ ಪತ್ರ' ಹೆಸರಿನಲ್ಲಿ ಶನಿವಾರ ಬಿಡುಗಡೆ ಮಾಡಿತು. 

Last Updated : Nov 10, 2018, 06:54 PM IST
ಮಧ್ಯಪ್ರದೇಶ ವಿಧಾನಸಭೆ ಚುನಾವಣೆ: ಕಾಂಗ್ರೆಸ್ ನೀಡಿದ ಭರವಸೆಗಳೇನು? title=

ನವದೆಹಲಿ: ಸದ್ಯದಲ್ಲೇ ನಡೆಯಲಿರುವ ಮಧ್ಯಪ್ರದೇಶ ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್ ತನ್ನ ಚುನಾವಣಾ ಪ್ರಣಾಳಿಕೆಯನ್ನು 'ಘೋಷಣಾ ಪತ್ರ' ಹೆಸರಿನಲ್ಲಿ ಶನಿವಾರ ಬಿಡುಗಡೆ ಮಾಡಿತು. ಭೋಪಾಲ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಹಿರಿಯ ಕಾಂಗ್ರೆಸ್ ನಾಯಕರಾದ ದಿಗ್ವಿಜಯ್ ಸಿಂಗ್, ಜ್ಯೋತಿರಾಧಿತ್ಯ ಸಿಂಧ್ಯ ಸೇರಿದಂತೆ ಅನೇಕ ಮುಖಂಡರು ಈ ಸಂದರ್ಭದಲ್ಲಿ ಹಾಜರಿದ್ದರು. 

ಈ ಬಾರಿಯ ವಿಧಾನಸಭೆ ಚುನಾವಣೆ ಪ್ರಣಾಳಿಕೆಯಲ್ಲಿ ಪ್ರತಿಯೊಂದು ಗ್ರಾಮ ಪಂಚಾಯ್ತಿ ಪ್ರದೇಶದಲ್ಲಿ ಗೋಶಾಲೆ ಸ್ಥಾಪನೆ, ರೈತರ ವಿದ್ಯುತ್ ದರ ಕಡಿತ ಸೇರಿದಂತೆ ಹಲವಾರು ಭರವಸೆಗಳನ್ನು ಕಾಂಗ್ರೆಸ್  ನೀಡಿದೆ.

ಪ್ರಣಾಳಿಕೆಯ ಮುಖ್ಯಾಂಶಗಳು...

* ರೈತರಿಗೆ ವಿದ್ಯುತ್ ಬಿಲ್ ನಲ್ಲಿ ಶೇ.50ರಷ್ಟು ದರ ಕಡಿತ
* ಪೆಟ್ರೋಲ್, ಡೀಸೆಲ್ ಬೆಲೆ ಇಳಿಕೆ
* ಪ್ರತಿ ಗ್ರಾಮ ಪಂಚಾಯ್ತಿ ಪ್ರದೇಶದಲ್ಲಿ ಗೋ ಶಾಲೆ ಸ್ಥಾಪನೆ
* ರಾಜ್ಯ ಹಾಗೂ ರಾಷ್ಟ್ರೀಯ ಬ್ಯಾಂಕ್ ಗಳಲ್ಲಿ ಇರುವ ರೈತರ ಸಾಲ ಮನ್ನಾ 
* 17 ಬೆಳೆಗಳಿಗೆ ಬೋನಸ್ ನೀಡಲಾಗುವುದು
* ಪ್ರತಿ ಯುವತಿಯ ಮದುವೆಗೆ 51 ಸಾವಿರ ರೂಪಾಯಿ ಧನಸಹಾಯ
* ರಾಮವನ ಗಮನ ಪಥ ನಿರ್ಮಾಣ
* ಭ್ರಷ್ಟಾಚಾರ ತೊಲಗಿಸಲು ವಿಶೇಷ ಕ್ರಮ
* ಪ್ರತಿ ಕುಟುಂಬದ ಪ್ರತಿ ನಿರುದ್ಯೋಗಿ ಯುವಕರಿಗೆ ತಿಂಗಳಿಗೆ 10 ಸಾವಿರ ರೂ. ನೀಡಿಕೆ

ಮಧ್ಯಪ್ರದೇಶದ 230 ವಿಧಾನಸಭಾ ಕ್ಷೇತ್ರಗಳಿಗೆ ನವೆಂಬರ್ 28ರಂದು ಚುನಾವಣೆ ನಡೆಯಲಿದ್ದು, ಡಿಸೆಂಬರ್ 11 ರಂದು ಫಲಿತಾಂಶ ಪ್ರಕಟವಾಗಲಿದೆ. 
 

Trending News