LPG Cylinder price: ಮತ್ತೆ ಎಲ್‌ಪಿಜಿ ಸಿಲಿಂಡರ್ ಬೆಲೆ ಏರಿಕೆ

ದ್ರವೀಕೃತ ಪೆಟ್ರೋಲಿಯಂ ಗ್ಯಾಸ್ (ಎಲ್‌ಪಿಜಿ) ಗ್ಯಾಸ್ ಸಿಲಿಂಡರ್‌ಗಳ ಬೆಲೆ ಮತ್ತೆ ಏರಿಕೆಯಾಗಿದೆ.

Written by - Yashaswini V | Last Updated : Dec 15, 2020, 11:08 AM IST
  • ಜನಸಾಮಾನ್ಯರ ಮೇಲೆ ಬರೆ
  • ಎಲ್‌ಪಿಜಿ ಸಿಲಿಂಡರ್ ಬೆಲೆ ಮತ್ತೆ ಏರಿಕೆ
  • ಪ್ರತಿ ಸಿಲಿಂಡರ್‌ ಬೆಲೆ 50 ರೂ. ಏರಿಕೆ
LPG Cylinder price: ಮತ್ತೆ ಎಲ್‌ಪಿಜಿ ಸಿಲಿಂಡರ್ ಬೆಲೆ ಏರಿಕೆ title=

ಬೆಂಗಳೂರು: ದ್ರವೀಕೃತ ಪೆಟ್ರೋಲಿಯಂ ಗ್ಯಾಸ್ (ಎಲ್‌ಪಿಜಿ) ಗ್ಯಾಸ್ ಸಿಲಿಂಡರ್‌ಗಳ ಬೆಲೆ ಮತ್ತೆ ಏರಿಕೆಯಾಗಿದೆ. ದೇಶೀಯ 14.2 ಕೆಜಿ ಎಲ್‌ಪಿಜಿ ಸಿಲಿಂಡರ್‌ನ ಬೆಲೆ 50 ರೂ.ಗಳಷ್ಟು ಹೆಚ್ಚಾಗಿದೆ. ಅದೇ ರೀತಿ 5 ಕೆಜಿ ಶಾರ್ಟ್ ಸಿಲಿಂಡರ್‌ನ ಬೆಲೆಯನ್ನು 18 ರೂ. ಹೆಚ್ಚಿಸಲಾಗಿದೆ ಮತ್ತು 19 ಕೆಜಿ ಸಿಲಿಂಡರ್ ಬೆಲೆಯನ್ನು 36.50 ರೂ.ಗೆ ಹೆಚ್ಚಿಸಲಾಗಿದೆ. ಕಳೆದ 15 ದಿನಗಳಲ್ಲಿ ಸಿಲಿಂಡರ್‌ಗಳ ಬೆಲೆಯನ್ನು ಎರಡು ಬಾರಿ 100 ರೂ.ಗೆ ಏರಿಸಲಾಗಿದೆ.

ದೇಶದ ಅತಿದೊಡ್ಡ ತೈಲ ಕಂಪನಿ ಐಒಸಿ ಪ್ರಕಾರ ದೆಹಲಿಯಲ್ಲಿ ಸಬ್ಸಿಡಿ ರಹಿತ 14.2 ಕೆಜಿ ಗ್ಯಾಸ್ ಸಿಲಿಂಡರ್ (Gas Cylinder) ಬೆಲೆ ಈಗ 644 ರೂ.ಗೆ ತಲುಪಿದೆ. ಇದು ಕೋಲ್ಕತ್ತಾದಲ್ಲಿ 670.50 ರೂ., ಮುಂಬೈನಲ್ಲಿ 644 ರೂ. ಮತ್ತು ಚೆನ್ನೈನಲ್ಲಿ 660 ರೂ. ಇದೆ.

'LPG ಸಿಲಿಂಡರ್'‌ ಬಳಕೆದಾರರಿಗೊಂದು ಮುಖ್ಯ ಮಾಹಿತಿ!

ಇದಕ್ಕೂ ಮೊದಲು ದೆಹಲಿಯಲ್ಲಿ ಸಬ್ಸಿಡಿ ರಹಿತ 14.2 ಕೆಜಿ ಎಲ್‌ಪಿಜಿ (LPG) ಗ್ಯಾಸ್ ಸಿಲಿಂಡರ್ ಬೆಲೆ 594 ರೂ. ಕೋಲ್ಕತ್ತಾದಲ್ಲಿ 620.50 ರೂ., ಮುಂಬೈನಲ್ಲಿ 594 ರೂ. ಮತ್ತು ಚೆನ್ನೈನಲ್ಲಿ 610 ರೂ. ಆಗಿತ್ತು.

ಸಮಯಕ್ಕೆ ಮೊದಲೇ ಗ್ಯಾಸ್ ಸಿಲಿಂಡರ್ ಖಾಲಿಯಾದರೆ ಇಲ್ಲಿ ದೂರು ನೀಡಿ

ಅಂತೆಯೇ 19 ಕೆಜಿ ಎಲ್‌ಪಿಜಿ ಸಿಲಿಂಡರ್‌ನ (LPG Cylinder) ಬೆಲೆಯನ್ನು ರಾಷ್ಟ್ರ ರಾಜಧಾನಿಯಲ್ಲಿ 54.50 ಸಿಲಿಂಡರ್ ಹೆಚ್ಚಿಸಿದೆ. ಬೆಲೆ ಪರಿಷ್ಕರಣೆಯ ನಂತರ ವಾಣಿಜ್ಯ ಸಿಲಿಂಡರ್‌ನ ಬೆಲೆ ದೆಹಲಿಯಲ್ಲಿ 1,296 ರೂ. ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ನ ನವೆಂಬರ್ ಬೆಲೆ 1,241.50 ರೂ. ತಲುಪಿದೆ.

LPG Cylinder ಮೇಲೆ ಪಡೆಯಿರಿ 500 ರೂ. ಕ್ಯಾಶ್‌ಬ್ಯಾಕ್

ದೇಶದಲ್ಲಿ ವರ್ಷಕ್ಕೆ ಗರಿಷ್ಠ 12 ಎಲ್‌ಪಿಜಿ ಸಿಲಿಂಡರ್ ಖರೀದಿಗೆ ಸಬ್ಸಿಡಿ ಲಭ್ಯವಿದೆ. ಗ್ರಾಹಕರು ಸಿಲಿಂಡರ್ ಖರೀದಿಸುವಾಗ ಪೂರ್ಣ ಹಣವನ್ನು ಪಾವತಿಸಬೇಕಾಗುತ್ತದೆ. ನಂತರ ಸಬ್ಸಿಡಿಯನ್ನು ಸರ್ಕಾರವು ಗ್ರಾಹಕರ ಬ್ಯಾಂಕ್ ಖಾತೆಗೆ ಜಮಾ ಮಾಡುತ್ತದೆ. ಗ್ರಾಹಕರು ಹೆಚ್ಚುವರಿ ಸಿಲಿಂಡರ್‌ಗಳನ್ನು ಖರೀದಿಸಲು ಅಧಿಕ ಹಣ ಪಾವತಿಸಬೇಕಾಗುತ್ತದೆ.

Bharat Petroleum cylinderನಲ್ಲಿ ಸಬ್ಸಿಡಿ ಪಡೆಯುವುದು ಹೇಗೆಂದು ತಿಳಿಯಿರಿ

ಆದಾಗ್ಯೂ ಹೆಚ್ಚಿನ ಗ್ರಾಹಕರು ಮೇ ತಿಂಗಳಿನಿಂದ ಸಬ್ಸಿಡಿಗಳನ್ನು ಸ್ವೀಕರಿಸಿಲ್ಲ, ಏಕೆಂದರೆ ಅಂತರರಾಷ್ಟ್ರೀಯ ತೈಲ ಬೆಲೆ ಕುಸಿತ ಮತ್ತು ದೇಶೀಯ ದರ ಹೆಚ್ಚಳವು ಸಬ್ಸಿಡಿ ಮತ್ತು ಮಾರುಕಟ್ಟೆ ದರಗಳ ನಡುವಿನ ಅಂತರವನ್ನು ಕಡಿಮೆಗೊಳಿಸಿತು.

Trending News