ಓಣಂ ಪ್ರಯುಕ್ತ ಕೊಚುವೇಲಿ-ಬೆಂಗಳೂರು ನಡುವೆ ವಿಶೇಷ ರೈಲು ಆರಂಭ: ದಕ್ಷಿಣ ರೈಲ್ವೆ ನಿರ್ಧಾರ

Specail Rail: ರೈಲು ಸಂಖ್ಯೆ 06083 ಕೊಚುವೇಲಿ - ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು ಸಾಪ್ತಾಹಿಕ ಓಣಂ ವಿಶೇಷ ಎಕ್ಸ್‌ಪ್ರೆಸ್ ರೈಲು ಆಗಸ್ಟ್‌ 22, 29 ಮತ್ತು ಸೆಪ್ಟೆಂಬರ್‌ 05 ರಂದು ಪ್ರತಿ ಮಂಗಳವಾರ ಸಂಜೆ 6.05 ಕ್ಕೆ ಕೊಚುವೇಲಿಯಿಂದ ಹೊರಟು ಮರುದಿನ ಬೆಳಿಗ್ಗೆ 10.55 ಕ್ಕೆ ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು ನಿಲ್ದಾಣಕ್ಕೆ ಆಗಮಿಸಲಿದೆ. 

Written by - Manjunath Hosahalli | Edited by - Bhavishya Shetty | Last Updated : Aug 2, 2023, 09:17 AM IST
    • ವಿಶೇಷ (06083/06084) ರೈಲುಗಳ 3 ಟ್ರಿಪ್‌ಗಳನ್ನು ಓಡಿಸಲು ದಕ್ಷಿಣ ರೈಲ್ವೆ ವಲಯವು ನಿರ್ಧರಿಸಿದೆ.
    • ಕೊಚುವೇಲಿಯಿಂದ ಹೊರಟು ಮರುದಿನ ಬೆಳಿಗ್ಗೆ 10.55 ಕ್ಕೆ ಬೆಂಗಳೂರು ನಿಲ್ದಾಣಕ್ಕೆ ಆಗಮಿಸಲಿದೆ.
    • ಇಂಜಿನಿಯರಿಂಗ್‌ ಕೆಲಸಗಳ ಕಾರಣದಿಂದ ಈ ಕೆಳಗಿನ ಕೆಲವು ರೈಲುಗಳನ್ನು ಭಾಗಶಃ ರದ್ದುಗೊಳಿಸಲಾಗುತ್ತಿದೆ
ಓಣಂ ಪ್ರಯುಕ್ತ ಕೊಚುವೇಲಿ-ಬೆಂಗಳೂರು ನಡುವೆ ವಿಶೇಷ ರೈಲು ಆರಂಭ: ದಕ್ಷಿಣ ರೈಲ್ವೆ ನಿರ್ಧಾರ title=
Indian Railway

Special Train for Onam: ಬೆಂಗಳೂರು: ಪ್ರಯಾಣಿಕರ ಹೆಚ್ಚುವರಿ ದಟ್ಟಣೆ ತೆರವುಗೊಳಿಸುವ ನಿಟ್ಟಿನಲ್ಲಿ ಹಾಗೂ ಓಣಂ ಹಬ್ಬದ ಪ್ರಯುಕ್ತ ಕೊಚುವೇಲಿ-ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು ನಡುವೆ ವಿಶೇಷ (06083/06084) ರೈಲುಗಳ 3 ಟ್ರಿಪ್‌ಗಳನ್ನು ಓಡಿಸಲು ದಕ್ಷಿಣ ರೈಲ್ವೆ ವಲಯವು ನಿರ್ಧರಿಸಿದೆ.

ರೈಲು ಸಂಖ್ಯೆ 06083 ಕೊಚುವೇಲಿ - ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು ಸಾಪ್ತಾಹಿಕ ಓಣಂ ವಿಶೇಷ ಎಕ್ಸ್‌ಪ್ರೆಸ್ ರೈಲು ಆಗಸ್ಟ್‌ 22, 29 ಮತ್ತು ಸೆಪ್ಟೆಂಬರ್‌ 05 ರಂದು ಪ್ರತಿ ಮಂಗಳವಾರ ಸಂಜೆ 6.05 ಕ್ಕೆ ಕೊಚುವೇಲಿಯಿಂದ ಹೊರಟು ಮರುದಿನ ಬೆಳಿಗ್ಗೆ 10.55 ಕ್ಕೆ ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು ನಿಲ್ದಾಣಕ್ಕೆ ಆಗಮಿಸಲಿದೆ. 

ಇದನ್ನೂ ಓದಿ: ಇನ್ನು ಮೂರು ತಿಂಗಳಿನಿಂದ ಒಂದೂವರೆ ವರ್ಷದವರೆಗೆ ಈ ರಾಶಿಯವರದ್ದೇ ಮೇಲಾಟ ! ಅಷ್ಟೈಶ್ವರ್ಯ ಹೊತ್ತು ತರುವಳು ಧನಲಕ್ಷ್ಮೀ

ಈ ರೈಲು ಮಾರ್ಗದಲ್ಲಿ ಕೊಲ್ಲಂ-(07:07/07:10PM), ಕಾಯಂಕುಲಂ-(07:43/07:45PM), ಮಾವೇಲಿಕರ-(07:55/07:56PM), ಚೆಂಗನ್ನೂರ್-(08:10/08:12PM), ತಿರುವಳ್ಳ-(08:24/08:25PM), ಚೆಂಗನಸೇರಿ-(08:35/08:37PM), ಕೊಟ್ಟಾಯಂ-(08:57/09:00PM), ಎರ್ನಾಕುಲಂ ಟೌನ್-(10:10/10:15PM), ಅಲುವಾ-(10:37/10:38PM), ತ್ರಿಶೂರ್-(11:37/11:40PM), ಪಾಲಕ್ಕಾಡ್-(12:55/01:05AM), ಪೊದನೂರು-(02:27/02:30AM), ತಿರುಪ್ಪೂರ್-(03:15/03:17AM), ಈರೋಡ್-(04:15/04:20AM), ಸೇಲಂ-(05:07/05:10AM), ತಿರುಪತ್ತೂರ್-(06:30/06:32AM), ಬಂಗಾರಪೇಟೆ-(08:43/08:45AM) ಮತ್ತು ಕೃಷ್ಣರಾಜಪುರಂ-(09:28/09:30AM) ನಿಲ್ದಾಣಗಳಿಗೆ ಆಗಮಿಸಿ/ನಿರ್ಗಮಿಸಲಿದೆ.

ಹಿಂದಿರುಗುವ ದಿಕ್ಕಿನಲ್ಲಿ, ರೈಲು ಸಂಖ್ಯೆ 06084 ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು - ಕೊಚುವೇಲಿ ಓಣಂ ಸಾಪ್ತಾಹಿಕ ವಿಶೇಷ ಎಕ್ಸ್‌ಪ್ರೆಸ್ ರೈಲು ಆಗಸ್ಟ್‌ 23, 30 ಮತ್ತು ಸೆಪ್ಟೆಂಬರ್‌ 06 ರಂದು ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರರು ನಿಲ್ದಾಣದಿಂದ ಮಧ್ಯಾಹ್ನ 12:45 ಕ್ಕೆ ಹೊರಟು, ಮರುದಿನ ಬೆಳಿಗ್ಗೆ 6 ಗಂಟೆಗೆ ಕೊಚುವೇಲಿ ನಿಲ್ದಾಣವನ್ನು ತಲುಪಲಿದೆ.

ಈ ರೈಲು ಮಾರ್ಗದಲ್ಲಿ ಕೃಷ್ಣರಾಜಪುರಂ-(12:53/12:55PM), ಬಂಗಾರಪೇಟೆ-(01:48/01:50PM), ತಿರುಪತ್ತೂರ್-(03:28/03:30PM), ಸೇಲಂ-(04:57/05:00PM), ಈರೋಡ್-(05:55/06:00PM), ತಿರುಪ್ಪೂರ್-(06:43/06:45PM), ಪೊದನೂರು-(08:15/08:20PM), ಪಾಲಕ್ಕಾಡ್-(09:20/09:30PM), ತ್ರಿಶೂರ್-(11:55/11:58PM), ಅಲುವಾ-(01:08/01:10AM), ಎರ್ನಾಕುಲಂ ಟೌನ್-(01:30/01:35AM), ಕೊಟ್ಟಾಯಂ-(02:40/02:43AM), ಚೆಂಗನಸೇರಿ-(03:00/03:02AM), ತಿರುವಳ್ಳ-(03:14/03:15AM), ಚೆಂಗನ್ನೂರ-(03:28/03:30AM), ಮಾವೇಲಿಕರ-(03:44/03:45AM), ಕಾಯಂಕುಲಂ-(03:55/03:56AM) ಮತ್ತು ಕೊಲ್ಲಂ-(04:40/04:43AM) ನಿಲ್ದಾಣಗಳಿಗೆ ಆಗಮಿಸಿ/ನಿರ್ಗಮಿಸಲಿದೆ.

ಈ ವಿಶೇಷ ರೈಲುಗಳು 20 ಬೋಗಿಗಳ ಸಂಯೋಜನೆ ಹೊಂದಿರಲಿದೆ. 16-ಎಸಿ ತ್ರಿ ಟೈಯರ್‌ ಗರೀಬ್ ರಥ ಬೋಗಿಗಳು, 2-ದ್ವಿತೀಯ ದರ್ಜೆಯ ಸ್ಲೀಪರ್ ಬೋಗಿಗಳು ಮತ್ತು 2-ಜನರೇಟರ್ ಕಾರ್‌ನೊಂದಿಗೆ ಲಗೇಜ್ ಕಮ್ ಬ್ರೇಕ್-ವ್ಯಾನ್ ಇರಲಿವೆ.

ರೈಲುಗಳು ಭಾಗಶಃ ರದ್ದು:

ತಿರುಚ್ಚಿರಾಪಳ್ಳಿ ವಿಭಾಗದಲ್ಲಿ ಇಂಜಿನಿಯರಿಂಗ್‌ ಕೆಲಸಗಳ ಕಾರಣದಿಂದ ಈ ಕೆಳಗಿನ ಕೆಲವು ರೈಲುಗಳನ್ನು ಭಾಗಶಃ ರದ್ದುಗೊಳಿಸಲಾಗುತ್ತಿದೆ ಎಂದು ದಕ್ಷಿಣ ರೈಲ್ವೆಯು ಸೂಚಿಸಿದೆ.

1. ಜುಲೈ 31 ರಂದು ಹುಬ್ಬಳ್ಳಿಯಿಂದ ಹೊರಟ ರೈಲು ಸಂಖ್ಯೆ 07325 ಎಸ್.ಎಸ್.ಎಸ್. ಹುಬ್ಬಳ್ಳಿ - ತಂಜಾವೂರು ಎಕ್ಸ್‌ಪ್ರೆಸ್ ರೈಲನ್ನು ಸೇಲಂ ಮತ್ತು ತಂಜಾವೂರು ನಿಲ್ದಾಣಗಳ ನಡುವೆ ಭಾಗಶಃ ರದ್ದುಗೊಳಿಸಲಾಗುತ್ತಿದೆ. ಈ ರೈಲು ತಂಜಾವೂರು ಬದಲು ಸೇಲಂನಲ್ಲಿ ತನ್ನ ಪ್ರಯಾಣ ಕೊನೆಗೊಳಿಸಲಿದೆ.

2. ಆಗಸ್ಟ್‌ 01 ರಂದು ತಂಜಾವೂರಿನಿಂದ ಹೊರಟ ರೈಲು ಸಂಖ್ಯೆ 07326 ತಂಜಾವೂರು - ಎಸ್‌.ಎಸ್‌.ಎಸ್ ಹುಬ್ಬಳ್ಳಿ ಎಕ್ಸ್‌ಪ್ರೆಸ್ ರೈಲನ್ನು ತಂಜಾವೂರು ಮತ್ತು ಸೇಲಂ ನಿಲ್ದಾಣಗಳ ನಡುವೆ ಭಾಗಶಃ ರದ್ದುಗೊಳಿಸಲಾಗುತ್ತಿದೆ. ಈ ರೈಲು ತಂಜಾವೂರು ಬದಲು ಸೇಲಂನಿಂದ ಪ್ರಾರಂಭವಾಗಲಿದೆ.

ಇದನ್ನೂ ಓದಿ: ಈ ರಾಶಿಗೆ ಅಷ್ಟೈಶ್ವರ್ಯವನ್ನೇ ಹೊತ್ತು ತರುತ್ತಿದ್ದಾನೆ ಚಂದ್ರ! ದುಡ್ಡಿನ ಮಳೆ ಖಂಡಿತ- ಹೆಚ್ಚಾಗುತ್ತೆ ಆಸ್ತಿ, ಸಂಪತ್ತು, ಆಯಸ್ಸು

(ಈ ಎಲ್ಲಾ ಸಮಯಗಳ ಬಗ್ಗೆ ಹುಬ್ಬಳ್ಳಿಯ ನೈರುತ್ಯ ರೈಲ್ವೆ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಅನೀಶ ಹೆಗಡೆ ಮಾಹಿತಿ ನೀಡಿದ್ದಾರೆ)

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News