ಮುಂಬೈ: ಹಳಿ ತಪ್ಪಿದ ಅಂತ್ಯೋದಯ ಎಕ್ಸ್‌ಪ್ರೆಸ್‌

ಗುರುವಾರ ಮುಂಜಾನೆ 3 ಗಂಟೆ ಸುಮಾರಿಗೆ ಅಂತ್ಯೋದಯ ಎಕ್ಸ್‌ಪ್ರೆಸ್‌ನ ಎರಡನೇ ಬೋಗಿಯ ಚಕ್ರಗಳು ಹಳಿ ತಪ್ಪಿದ ಘಟನೆ ನಡೆದಿದೆ. 

Last Updated : Jul 18, 2019, 10:23 AM IST
ಮುಂಬೈ: ಹಳಿ ತಪ್ಪಿದ ಅಂತ್ಯೋದಯ ಎಕ್ಸ್‌ಪ್ರೆಸ್‌ title=

ಮುಂಬೈ: ಇಲ್ಲಿನ ಛತ್ರಪತಿ ಶಿವಾಜಿ ಟರ್ಮಿನಸ್ ನಿಂದ ಹೊರಟ ಅಂತ್ಯೋದಯ ಎಕ್ಸ್‌ಪ್ರೆಸ್‌ನ ಬೋಗಿಯೊಂದು ಮಹಾರಾಷ್ಟ್ರದ ನಾಸಿಕ್ ಸಮೀಪದ ಕಸರಾ ಘಾಟ್ ಬಳಿ ಹಳಿ ತಪ್ಪಿದೆ.

ಗುರುವಾರ ಮುಂಜಾನೆ 3 ಗಂಟೆ ಸುಮಾರಿಗೆ ಅಂತ್ಯೋದಯ ಎಕ್ಸ್‌ಪ್ರೆಸ್‌ನ ಎರಡನೇ ಬೋಗಿಯ ಚಕ್ರಗಳು ಹಳಿತಪ್ಪಿದ ಕಾರಣ ಈ ಘಟನೆ ನಡೆದಿದೆ. ಆದರೆ ಯಾವುದೇ ಸಾವು ನೋವುಗಳು ವರದಿಯಾಗಿಲ್ಲ.

ಕಸರ್ ಘಾಟ್‌ನ ಸೇತುವೆಯೊಂದರ ಮೇಲೆ ಈ ಘಟನೆ ನಡೆದಿದ್ದು, ಹಳಿ ತಪ್ಪಿದ ಕೋಚ್ ಇನ್ನೂ ಸ್ವಲ್ಪ ಮುಂದೆ ಸಾಗಿದ್ದರೆ ಭಾರೀ ಅನಾಹುತ ಸಂಭವಿಸುತ್ತಿತ್ತು. ಆದರೆ ಪ್ರಯಾಣಿಕರು ಹಳಿ ತಪ್ಪಿದ ಅದ್ದು ಕೇಳಿ ಎಮರ್ಜೆನ್ಸಿ ಚೈನ್ ಎಳೆದಿದ್ದರಿಂದ ರೈಲು ನಿಂತು ಭಾರೀ ಅನಾಹುತ ತಪ್ಪಿದೆ ಎಂದು ಹೇಳಲಾಗಿದೆ. 

ಘಟನೆ ವರದಿಯಾದ ಕೂಡಲೇ ತುರ್ತು ಸಿಬ್ಬಂದಿಯನ್ನು ಸ್ಥಳಕ್ಕೆ ಕಳುಹಿಸಲಾಗಿದ್ದು, ಈ ಮಾರ್ಗದ ರೈಲು ಸಂಚಾರ ಸ್ಥಗಿತಗೊಂಡಿದೆ ಎಂದು ಕೇಂದ್ರ ರೈಲ್ವೆ ತಿಳಿಸಿದೆ. ಆದರೆ, ಪ್ರಯಾಣಿಕರು ಬಹುಕಾರ ರೈಲಿನಲ್ಲೇ ಉಳಿಯಬೇಕಾದ್ದರಿಂದ ಅವರಿಗೆ ಅಗತ್ಯವಾದ ನೀರು ಮತ್ತು ಆಹಾರ ಒದಗಿಸದ ಹಿನ್ನೆಲೆಯಲ್ಲಿ ರೈಲ್ವೆ ಅಧಿಕಾರಿಗಳ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. 

Trending News