Arvind Kejriwal : ಕೊರೋನಾದಿಂದ ಮಗನ ಕಳೆದುಕೊಂಡ ತಂದೆಗೆ ₹ 1 ಕೋಟಿ ಪರಿಹಾರ ನೀಡಿದ ದೆಹಲಿ ಸಿಎಂ​!

ದೆಹಲಿಯ 26 ವರ್ಷದ ಡಾ.ಅನಾಸ್ ಎಂಬುವವರು ಕೊರೊನದಿಂದ ಇತ್ತೀಚೆಗಷ್ಟೇ ಮೃತಪಟ್ಟಿದ್ದರು.

Last Updated : May 22, 2021, 06:27 PM IST
  • ವೈದ್ಯರು, ಅರೆ ವೈದ್ಯಕೀಯ ಸಿಬ್ಬಂದಿ, ಪೊಲೀಸ್ ಮುಂತಾದವರನ್ನೆಲ್ಲ ಕೊರೋನಾ ವಾರಿಯರ್
  • ದೆಹಲಿಯಲ್ಲಿ ಹೀಗೆ ವೈದ್ಯರೊಬ್ಬರು ಕೊರೋನಾಗೆ ಬಲಿಯಾಗಿದ್ದು
  • ಸಿಎಂ ಅರವಿಂದ ಕೇಜ್ರಿವಾಲ್​ ಕೊಟ್ಟಿರುವ ಪರಿಹಾರ ಮೊತ್ತವಾಗಿ ಬರೋಬ್ಬರಿ 1 ಕೋಟಿ ರೂ.
Arvind Kejriwal : ಕೊರೋನಾದಿಂದ ಮಗನ ಕಳೆದುಕೊಂಡ ತಂದೆಗೆ ₹ 1 ಕೋಟಿ ಪರಿಹಾರ ನೀಡಿದ ದೆಹಲಿ ಸಿಎಂ​! title=

ನವದೆಹಲಿ : ಕೊರೋನಾ ವಾರಿಯರ್​ ಆಗಿ ಮುಂಚೂಣಿಯಲ್ಲಿ ಕೆಲಸ ಮಾಡುತ್ತಿರುವ ವರ್ಗದವರು ಬಹಳಷ್ಟಿದ್ದಾರೆ. ಆ ಪೈಕಿ ಪ್ರಮುಖವಾಗಿ ಇರುವಂಥವರು ಎಂದರೆ ವೈದ್ಯರು, ಅರೆ ವೈದ್ಯಕೀಯ ಸಿಬ್ಬಂದಿ, ಪೊಲೀಸ್ ಮುಂತಾದವರನ್ನೆಲ್ಲ ಕೊರೋನಾ ವಾರಿಯರ್ ಎಂದು ಪರಿಗಣಿಸಲಾಗಿದ್ದು, ಅವರು ಕೋವಿಡ್​ನಿಂದಾಗಿ ಮೃತಪಟ್ಟರೆ ಸರ್ಕಾರದಿಂದ ಲಕ್ಷಾಂತರ ರೂ. ಪರಿಹಾರವಾಗಿ ಸಿಗಲಿದೆ.

ದೆಹಲಿಯಲ್ಲಿ ಹೀಗೆ ವೈದ್ಯರೊಬ್ಬರು ಕೊರೋನಾಗೆ ಬಲಿಯಾಗಿದ್ದು, ಅವರ ಕುಟುಂಬಕ್ಕೆ ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್​(Arvind Kejriwal) ಕೊಟ್ಟಿರುವ ಪರಿಹಾರ ಮೊತ್ತವಾಗಿ ಬರೋಬ್ಬರಿ 1 ಕೋಟಿ ರೂಪಾಯಿ ನೀಡಿದ್ದಾರೆ. ದೆಹಲಿಯ 26 ವರ್ಷದ ಡಾ.ಅನಾಸ್ ಎಂಬುವವರು ಕೊರೊನದಿಂದ ಇತ್ತೀಚೆಗಷ್ಟೇ ಮೃತಪಟ್ಟಿದ್ದರು.

ಇದನ್ನೂ ಓದಿ : ಕಪ್ಪು ಶೀಲಿಂದ್ರ ಪ್ರಕರಣ ಹೆಚ್ಚಳ: ತುರ್ತು ಕ್ರಮಕ್ಕೆ ಪ್ರಧಾನಿ ಮೋದಿಗೆ ಸೋನಿಯಾ ಗಾಂಧಿ ಪತ್ರ

ಡಾ. ಅನಾಸ್(Dr Anas) ಅವರ ಮನೆಗೆ ಭೇಟಿ ನೀಡಿ ಅವರ ತಂದೆಗೆ ಸಾಂತ್ವನ ಹೇಳಿರುವ ಸಿಎಂ ಅರವಿಂದ ಕೇಜ್ರಿವಾಲ್ 1 ಕೋಟಿ ರೂಪಾಯಿಯ ಚೆಕ್​ ನೀಡಿದ್ದಾರೆ. 'ನನ್ನ ಪುತ್ರ ಕರ್ತವ್ಯದ ಮೇಲಿದ್ದ, ಜನರ ಸೇವೆ ಮಾಡಿ ಜೀವ ಕಳೆದುಕೊಂಡಿದ್ದಾನೆ. ನನ್ನ ಇತರ ಮಕ್ಕಳೂ ಅವನಂತೆಯೇ ದೇಶಕ್ಕಾಗಿ ಸೇವೆ ಮಾಡಲಿ ಎಂದು ಬಯಸುತ್ತೇನೆ' ಎಂಬುದಾಗಿ ಅನಾಸ್ ಅವರ ತಂದೆ ಈ ವೇಳೆ ಹೇಳಿದರು.

ಇದನ್ನೂ ಓದಿ : CBSE, ICSE 12ನೇ ತರಗತಿ ಪರೀಕ್ಷೆ: ನಾಳೆ ಕೇಂದ್ರದ ಮಹತ್ವದ ಸಭೆ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News