ಕಾರು ಖರೀದಿಸಲು 12ನೇ ತರಗತಿ ವಿದ್ಯಾರ್ಥಿ ಮಾಡಿದ ಕೆಲಸ ಏನ್ ಗೊತ್ತಾ?

ಕಾರು ಖರೀದಿಸುವ ಸಲುವಾಗಿ ಸುಳ್ಳು ಅಪಹರಣದ ಆರೋಪಕ್ಕೆ ಸಂಬಂಧಿಸಿದಂತೆ ಗುರ್ಗಾಂವ್ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

Last Updated : Apr 3, 2019, 10:29 AM IST
ಕಾರು ಖರೀದಿಸಲು 12ನೇ ತರಗತಿ ವಿದ್ಯಾರ್ಥಿ ಮಾಡಿದ ಕೆಲಸ ಏನ್ ಗೊತ್ತಾ? title=
Image Courtesy: Pixabay

ಗುರ್ಗಾಂವ್: ಐಶಾರಾಮಿ ಕಾರು ಖರೀದಿಸಲು ತಾನು ಕಿಡ್ನಾಪ್ ಆಗಿರುವುದಾಗಿ ಸುಳ್ಳು ಹೇಳಿ ತನ್ನ ಕುಟುಂಬದ ಸದಸ್ಯರಿಂದಲೇ ಮೂರು ಕೋಟಿ ರೂ. ಬೇಡಿಕೆ ಇಟ್ಟಿದ್ದ 19 ವರ್ಷದ ಯುವಕನನ್ನು ಗುರ್ಗಾಂವ್ ಪೊಲೀಸರು ಬಂಧಿಸಿದ್ದಾರೆ.

12 ನೇ ತರಗತಿಯ ವಿದ್ಯಾರ್ಥಿ ಸಂದೀಪ್ ಕುಮಾರ್ (19) ಕೃಷ್ಣ ಕಾಲೋನಿಯ ನಿವಾಸಿಯಾಗಿದ್ದು, ಮಾರ್ಚ್ 29 ರಂದು ಕ್ರಿಕೆಟ್ ಅಕಾಡೆಮಿಗೆಂದು ತೆರಳಿದ್ದವ ಬಳಿಕ ನಾಪತ್ತೆಯಾಗಿದ್ದನು.

ತನ್ನ ಸಹೋದರ ನವೀನ್ ಕುಮಾರ್ ಗೆ ಕರೆ ಮಾಡಿ ತನ್ನನ್ನು(ಸಂದೀಪ್ ಕುಮಾರ್) ಕಿಡ್ನಾಪ್ ಮಾಡಿರುವುದಾಗಿ ಹೇಳಿ ಮೂರು ಕೋಟಿ ರೂ. ಬೇಡಿಕೆಯಿಡುವಂತೆ ಅಪರಿಚಿತನೊಬ್ಬನಿಂದ ಸ್ವತಃ ಕರೆ ಮಾಡಿಸಿದ್ದಾನೆ. ಅಲ್ಲದೆ ಆ ವ್ಯಕ್ತಿಗೆ ಸಂದೀಪ್ ಕುಮಾರ್ 500 ರೂ. ಕೂಡ ಕೊಟ್ಟಿದ್ದಾನೆ. ಬಳಿಕ ಸಂದೀಪ್ ಕುಮಾರ್ ತನ್ನ ಮೋಟರ್ ಸೈಕಲ್ ಅನ್ನು ಸೆಕ್ಟರ್ 5ರ ದೇವಸ್ಥಾನದ ಬಳಿ ಬಿಟ್ಟು ಒಂದೆರಡು ದಿನ ಭಿವಾಡಿಯಲ್ಲಿ ನೆಲೆಸಿದ್ದ ಎಂದು ಗುರ್ಗಾಂವ್ ಪೊಲೀಸ್ PRO ಸುಭಾಷ್ ಬೋಕನ್ ಮಾಹಿತಿ ನೀಡಿದರು.

ಒಂದೆರಡು ದಿನಗಳ ಬಳಿಕ ಸಂದೀಪ್ ಗುರ್ಗಾಂವ್ ಗೆ ಹಿಂದಿರುಗಿದಾಗ ಟ್ರಾಫಿಕ್ ಪೊಲೀಸರು ಆತನನ್ನು ಗುರುತಿಸಿ ಸ್ಥಳೀಯ ಪೊಲೀಸರಿಗೆ ಒಪ್ಪಿಸಿದರು. ಅವರ ಕುಟುಂಬ ಸದಸ್ಯರು ಆತನ ಕಿಡ್ನಾಪ್ ಬಗ್ಗೆ ಈಗಾಗಲೇ ಎಫ್ಐಆರ್ ದಾಖಲಿಸಿದ್ದಾರೆ ಎಂದು ಬೋಕನ್ ಹೇಳಿದರು.

ತನಿಖೆ ವೇಳೆ ಸುಳ್ಳು ಕಥೆ ಕಟ್ಟಿ ತನ್ನ ಅಪಹರಣದ ಬಳಿಕ ತಾನು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದೆ ಎಂದು ಪೊಲೀಸರಿಗೆ ದಿಕ್ಕು ತಪ್ಪಿಸುವ ಪ್ರಯತ್ನ ಮಾಡಿದ್ದ. ಆದರೆ ಪೊಲೀಸರು ಆತ ಅಪಹರಣಗೊಂಡ ಸ್ಥಳಕ್ಕೆ ಕರೆದೊಯ್ದಾಗ ಆತ ಸಿಕ್ಕಿ ಬಿದ್ದಿದ್ದಾನೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಐಶಾರಾಮಿ ಕಾರು ಖರೀದಿಸುವ ಸಲುವಾಗಿ ತಾನೇ ಸುಳ್ಳು ಅಪಹರಣದ ಕರೆ ಮಾಡಿಸಿರುವುದಾಗಿ ನಂತರದಲ್ಲಿ ಸಂದೀಪ್ ಪೊಲೀಸರ ಬಳಿ ತಪ್ಪೊಪ್ಪಿಕೊಂಡಿದ್ದಾನೆ ಎನ್ನಲಾಗಿದೆ.
 

Trending News