New Drone Rules: ದೇಶದಲ್ಲಿ ಡ್ರೋನ್ ಬಳಕೆಗೆ ಹೊಸ ನಿಯಮ ಜಾರಿಗೊಳಿಸಿದ ಕೇಂದ್ರ ಸರ್ಕಾರ

ದೇಶದಲ್ಲಿ ಡ್ರೋನ್ ಬಳಕೆ ಮಾಡಲು ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯವು ಹೊಸ ನಿಯಮ ಜಾರಿಗೊಳಿಸಿದೆ.

Written by - Puttaraj K Alur | Last Updated : Aug 26, 2021, 01:40 PM IST
  • ಮನಸೋಇಚ್ಛೆ ಡ್ರೋನ್ ಬಳಕೆಗೆ ಕಡಿವಾಣ ಹಾಕಲು ಮುಂದಾದ ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯ
  • ದೇಶದಲ್ಲಿ ಡ್ರೋನ್ ಬಳಕೆಗೆ ಹೊಸ ನಿಯಮಗಳನ್ನು ಜಾರಿಗೊಳಿಸಿದ ಕೇಂದ್ರ ಸರ್ಕಾರ
  • ಡ್ರೋನ್‌ಗಳ ಬಳಕೆಗೆ ಗುರುತಿನ ಸಂಖ್ಯೆಗಳ ಅಗತ್ಯವಿರಲಿದೆ ಎಂದು ಗೆಜೆಟ್ ಅಧಿಸೂಚನೆ
New Drone Rules: ದೇಶದಲ್ಲಿ ಡ್ರೋನ್ ಬಳಕೆಗೆ ಹೊಸ ನಿಯಮ ಜಾರಿಗೊಳಿಸಿದ ಕೇಂದ್ರ ಸರ್ಕಾರ  title=
ಡ್ರೋನ್ ಬಳಕೆಗೆ ಹೊಸ ನಿಯಮ ಜಾರಿ (Photo Courtesy: @Zee News)

ನವದೆಹಲಿ: ದೇಶದಲ್ಲಿ ಡ್ರೋನ್ ಬಳಕೆ ಮಾಡಲು ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯವು ಹೊಸ ನಿಯಮಗಳನ್ನು ಗುರುವಾರ(ಆಗಸ್ಟ್ 26) ಜಾರಿಗೊಳಿಸಿದೆ. ಗೆಜೆಟ್ ಅಧಿಸೂಚನೆಯ ಮೂಲಕ ‘ನೂತನ ಡ್ರೋನ್ ನಿಯಮಗಳು 2021’ ಜಾರಿಗೊಳಿಸುತ್ತಿರುವುದಾಗಿ ಕೇಂದ್ರ ಸರ್ಕಾರ ಮಾಹಿತಿ ನೀಡಿದೆ. 2021ರ ‘ಮಾನವರಹಿತ ವಿಮಾನ ವ್ಯವಸ್ಥೆ(Unmanned Aircraft Systems)ಗಳ ನಿಯಮಗಳ ಬದಲಾಗಿ ಈ ಹೊಸ ನಿಯಮಗಳನ್ನು ಜಾರಿಗೊಳಿಸಲಾಗಿದೆ.

ಮನಸೋಇಚ್ಛೆ ಡ್ರೋನ್ ಬಳಕೆ ಮೇಲೆ ಕಡಿವಾಣ ಹಾಕಲು ಮುಂದಾಗಿರುವ ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯ(Civial Aviation Ministry)ಈ ನಿಟ್ಟಿನಲ್ಲಿ ಹೊಸ ನಿಯಮಾವಳಿಗಳನ್ನು ಜಾರಿಗೆ ತಂದಿದೆ. ಸದ್ಯ ಡ್ರೋನ್‌ಗಳ ಬಳಕೆಗೆ ವಿನಾಯಿತಿ ನೀಡದ ಹೊರತು ಗುರುತಿನ ಸಂಖ್ಯೆಗಳ ಅಗತ್ಯವಿದೆ. ಡಿಜಿಟಲ್ ಸ್ಕೈ ಪ್ಲಾಟ್‌ಫಾರ್ಮ್‌ನಲ್ಲಿ ಅಗತ್ಯವಾದ ವಿವರಗಳನ್ನು ನೀಡುವ ಮೂಲಕ ಡ್ರೋನ್‌ನ ವಿಶಿಷ್ಟ ಗುರುತಿನ ಸಂಖ್ಯೆಯನ್ನು ಪಡೆದುಕೊಳ್ಳಬಹುದು ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ: PM Kisan ಯೋಜನೆಯ ಲಾಭವನ್ನು ಗಂಡ ಮತ್ತು ಹೆಂಡತಿ ಇಬ್ಬರೂ ಪಡೆಯಬಹುದೇ? ಇಲ್ಲಿದೆ ನೋಡಿ!

ನಿಯಮಗಳ ಅನುಸರಣೆಯ ಪ್ರಮಾಣಪತ್ರ, ನಿರ್ವಹಣೆ ಪ್ರಮಾಣಪತ್ರ, ಆಮದು ಕ್ಲಿಯರೆನ್ಸ್, ಅಸ್ತಿತ್ವದಲ್ಲಿರುವ ಡ್ರೋನ್‌ಗಳ ಸ್ವೀಕಾರ, ಆಪರೇಟರ್ ಅನುಮತಿಗಳು, ಆರ್ & ಡಿ ಸಂಸ್ಥೆಯ ಅನುಮತಿ ಮತ್ತು ವಿದ್ಯಾರ್ಥಿ ರಿಮೋಟ್ ಪೈಲಟ್ ಪರವಾನಗಿ ಸೇರಿದಂತೆ ವಿವಿಧ ಅನುಮೋದನೆಗಳ ಅಗತ್ಯವನ್ನು ಈ ನಿಯಮಗಳು ರದ್ದುಗೊಳಿಸಿದೆ ಎಂದು ಸರ್ಕಾರ ತಿಳಿಸಿದೆ.

‘ಡ್ರೋನ್ ನಿಯಮಗಳು 2021’(New Drone Rules 2021)ರಡಿ, ಕೇಂದ್ರ ಸರ್ಕಾರವು ಡ್ರೋನ್ ಅನ್ನು ನಾಮಿನಲ್ ಮಟ್ಟಕ್ಕೆ ಚಲಾಯಿಸಲು ಶುಲ್ಕವನ್ನು ಕಡಿಮೆ ಮಾಡಿದೆ ಮತ್ತು ಡ್ರೋನ್ ಗಾತ್ರದಿಂದ ಡಿ-ಲಿಂಕ್ ಮಾಡಲಾಗಿದೆ. ಹೆಚ್ಚಿನ ಪೇಲೋಡ್ ಹೊತ್ತೊಯ್ಯುವ ಡ್ರೋನ್ ಮತ್ತು ಡ್ರೋನ್ ಟ್ಯಾಕ್ಸಿಗಳನ್ನು ಸೇರಿಸಲು ಡ್ರೋನ್ ಗಳ ಸಾಮರ್ಥ್ಯವನ್ನು 300 ಕೆಜಿಯಿಂದ 500 ಕೆಜಿಗೆ ಹೆಚ್ಚಿಸಲಾಗಿದೆ.

ಇದನ್ನೂ ಓದಿ: PM Kisan ಯೋಜನೆಯ ಲಾಭವನ್ನು ಗಂಡ ಮತ್ತು ಹೆಂಡತಿ ಇಬ್ಬರೂ ಪಡೆಯಬಹುದೇ? ಇಲ್ಲಿದೆ ನೋಡಿ!

ಜುಲೈ 15 ರಂದು ಕೇಂದ್ರವು ಹೊಸ ಡ್ರೋನ್(Drone)ನಿಯಮಗಳನ್ನು ರೂಪಿಸುವ ನಿರ್ಧಾರವನ್ನು ಘೋಷಿಸಿತ್ತು. ಆಗಸ್ಟ್ 5 ರವರೆಗೆ ಸ್ಟೇಕ್ ಹೋಲ್ಡರ್ ಮತ್ತು ಉದ್ಯಮ ಸಂಬಂಧಿ ವ್ಯಕ್ತಿಗಳಿಂದ ಪ್ರತಿಕ್ರಿಯೆಗಳನ್ನು ಆಹ್ವಾನಿಸಿತ್ತು. ಹೊಸ ನಿಯಮಗಳು ಸರಳವಾಗಿದೆ ಮತ್ತು ಇದು ಭಾರತದಲ್ಲಿ ಡ್ರೋನ್ ನಿರ್ವಹಿಸಲು ಅನುಸರಣೆಯ ಹೊರೆ ಕಡಿಮೆ ಮಾಡುತ್ತದೆ ಎಂದು ಹೇಳಲಾಗಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News