Citizenship To Non-Muslim Refugees: ದೇಶದ 13 ಜಿಲ್ಲೆಗಳಲ್ಲಿ ವಾಸಿಸುವ ಮುಸ್ಲಿಮೇತರ ಶರಣಾರ್ಥಿಗಳಿಂದ ಭಾರತೀಯ ಪೌರತ್ವಕ್ಕೆ ಅರ್ಜಿ ಆಹ್ವಾನ

Citizenship To Non-Muslim Refugees - ಕೇಂದ್ರ ಸರ್ಕಾರ ದೇಶದ ಸುಮಾರು 13 ಜಿಲ್ಲೆಗಳಲ್ಲಿರುವ ಪಾಕಿಸ್ತಾನ, ಅಫ್ಘಾನಿಸ್ಥಾನ ಹಾಗೂ ಬಾಂಗ್ಲಾದೇಶದ ಮುಸ್ಲಿಮೇತರ ಶರಣಾರ್ಥಿಭಾರತೀಯ ಪೌರತ್ವಕ್ಕಾಗಿ ಅರ್ಜಿಗಳನ್ನು ಆಹ್ವಾನಿಸಿದೆ.

Written by - Nitin Tabib | Last Updated : May 29, 2021, 05:30 PM IST
  • ಪಾಕ್, ಬಾಂಗ್ಲಾ ಹಾಗೂ ಅಫ್ಘಾನಿಸ್ಥಾನದ ಮುಸ್ಲಿಮೇತರ ಶರಣಾರ್ಥಿಗಳ ಭಾರತೀಯ ಪೌರತ್ವಕ್ಕೆ ಅರ್ಜಿ ಆಹ್ವಾನ.
  • ಕೇಂದ್ರ ಗೃಹ ಸಚಿವಾಲಯ ಈ ಅರ್ಜಿಗಳನ್ನು ಆಹ್ವಾನಿಸಿದೆ.
  • ಬನ್ನಿ ಈ ಕುರಿತು ಹೆಚ್ಚಿನ ವಿವರಗಳನ್ನು ತಿಳಿದುಕೊಳ್ಳೋಣ.
Citizenship To Non-Muslim Refugees: ದೇಶದ 13 ಜಿಲ್ಲೆಗಳಲ್ಲಿ ವಾಸಿಸುವ ಮುಸ್ಲಿಮೇತರ ಶರಣಾರ್ಥಿಗಳಿಂದ ಭಾರತೀಯ ಪೌರತ್ವಕ್ಕೆ ಅರ್ಜಿ ಆಹ್ವಾನ title=
Citizenship To Non-Muslim Refugees (Representational Image)

ನವದೆಹಲಿ: Citizenship To Non-Muslim Refugees - ಕೇಂದ್ರ ಸರ್ಕಾರ ದೇಶದ ಸುಮಾರು 13 ಜಿಲ್ಲೆಗಳಲ್ಲಿರುವ ಪಾಕಿಸ್ತಾನ (Pakistan), ಅಫ್ಘಾನಿಸ್ಥಾನ ಹಾಗೂ ಬಾಂಗ್ಲಾದೇಶದ ಮುಸ್ಲಿಮೇತರ ಶರಣಾರ್ಥಿಗಳಿಂದ ಭಾರತೀಯ ಪೌರತ್ವಕ್ಕಾಗಿ (Indian Citizenship) ಅರ್ಜಿಗಳನ್ನು ಆಹ್ವಾನಿಸಿದೆ. ಈ ದೇಶಗಳಿಂದ ಬಂದ ಹಿಂದೂ, ಶಿಖ್, ಜೈನ ಹಾಗೂ ಬೌದ್ಧ ಜನರು ಗುಜರಾತ, ರಾಜಸ್ಥಾನ, ಚತ್ತೀಸ್ಗಡ್, ಹರಿಯಾಣಾ ಹಾಗೂ ಪಂಜಾಬ್ ನ ಸುಮಾರು 13 ಜಿಲ್ಲೆಗಳಲ್ಲಿ ವಾಸವಾಗಿದ್ದು ಅವರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಕೇಂದ್ರ ಗೃಹ ಸಚಿವಾಲಯ ಪೌರತ್ವ ಕಾಯ್ದೆ 1955 ಹಾಗೂ ಅದರ ಅಡಿ 2009 ರಲ್ಲಿ ತಿದ್ದುಪಡಿ ಮಾಡಲಾದ ಕಾನೂನಿನ ಅಡಿ ಈ ನಿರ್ಣಯ ಕೈಗೊಂಡಿದೆ ಹಾಗೂ ಅದನ್ನು ಕೂಡಲೇ ಅನುಷ್ಠಾನಗೊಳಿಸಲು ಅಧಿಸೂಚನೆ ಜಾರಿಗೊಳಿಸಿದೆ. ಆದರೆ, ಈ ಜನರಿಂದ ಕೊರಲಾಗಿರುವ ಅರ್ಜಿ ಪ್ರಕ್ರಿಯೆಗೂ ಮತ್ತು 2019 ರಲ್ಲಿ ರಚಿಸಲಾಗಿರುವ ನಾಗರಿಕ ತಿದ್ದುಪಡಿ ವಿಧೇಯಕಕ್ಕೆ ಯಾವುದೇ ರೀತಿಯ ಸಂಬಂಧ ಇಲ್ಲ ಎಂದು ತಿಳಿಸಲಾಗಿದೆ. CAA ಗೆ ಸಂಬಂಧಿಸಿದ ನಿಯಮಗಳನ್ನು ಇದುವರೆಗೆ ಜಾರಿಗೆ ತರಲಾಗಿಲ್ಲ.

ಕೇಂದ್ರ ಸರ್ಕಾರ ಈ ಅಧಿಸೂಚನೆಯನ್ನು ಪೌರತ್ವ ಕಾಯ್ದೆ 1955 ರ ಸೆಕ್ಷನ್ 16 ರ ಅಡಿ ಅಧಿಕಾರಗಳನ್ನೂ ಉಪಯೋಗಿಸಿ ಈ ಅಧಿಸೂಚನೆಯನ್ನು ಜಾರಿಗೆ ತಂದಿದೆ. ಈ ಅಕಾನೂನಿನ ಸೆಕ್ಷನ್ 5 ಅಡಿ ಪಾಕಿಸ್ತಾನ, ಅಫ್ಘಾನಿಸ್ತಾನ (Afghanistan) ಹಾಗೂ ಬಾಂಗ್ಲಾದೇಶಗಳಲ್ಲಿ ವಾಸಿಸುತ್ತಿದ್ದ ಅಲ್ಪಸಂಖ್ಯಾತ ನಾಗರಿಕರಿಗೆ ಭಾರತೀಯ (India) ಪೌರತ್ವ ನೀಡಿ, ಸೆಕ್ಷನ್ 6 ರ ಅಡಿ ಪ್ರಮಾಣ ಪತ್ರ ನೀಡಲಾಗುವುದು ಎನ್ನಲಾಗಿದೆ.

ಇದನ್ನೂ ಓದಿ-"ನಮಗೆ ಈ ರೀತಿ ಅವಮಾನ ಮಾಡಬೇಡಿ"-ಪ್ರಧಾನಿ ಮೋದಿ ವಿರುದ್ಧ ದೀದಿ ಟೀಕಾ ಪ್ರಹಾರ

ಈ ಪ್ರಕ್ರಿಯೆ ಯಾವ ರೀತಿ ಇರಲಿದೆ?
ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಅಧಿಸೂಚನೆಯ ಪ್ರಕಾರ ಗುಜರಾತ್ ನ ಮೊರ್ಬಿ, ರಾಜ್ ಕೊಟ್, ಪಟಾನ್ ಹಾಗೂ ವಡೋದರಾದಲ್ಲಿರುವ, ಚತ್ತಿಸಗಡ್ ದ ದುರ್ಗಾ ಹಾಗೂ ಬಲೋಡ ಬಜಾರ್, ರಾಜಸ್ಥಾನದ ಜಾಲೋರ್, ಉದಯಪುರ್, ಪಾಲಿ, ಬಾಡಮೆರ್ ಹಾಗೂ ಸಿರೋಹಿ, ಹರಿಯಾಣಾದ ಫರಿದಾಬಾದ್ ಹಾಗೂ ಪಂಜಾಬ್ ನ ಜಾಲಂಧರನಲ್ಲಿ ವಾಸಿರುವ ಮುಸ್ಲಿಮೇತರ (Non-Muslim Refugees) ಶರಣಾರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಈ ಅರ್ಜಿಗಳನ್ನು ಆನ್ಲೈನ್ ನಲ್ಲಿ ಸ್ವೀಕರಿಸಲಾಗುತ್ತಿದೆ. ಈ ಅರ್ಜಿಗಳ ಪರಿಶೀಲನೆ ರಾಜ್ಯ ಮಟ್ಟದಲ್ಲಿ ಹಾಗೂ ಜಿಲ್ಲಾ ಮಟ್ಟದಲ್ಲಿ ರಾಜ್ಯ ಗೃಹ ಸಚಿವರು ಹಾಗೂ ಜಿಲ್ಲಾಧಿಕಾರಿಗಳು ಪರಿಶೀಲನೆ ನಡೆಸಲಿದ್ದಾರೆ. ಇದಾದ ಬಳಿಕ ಈ ಅರ್ಜಿಗಳನ್ನು ಹಾಗೂ ವರದಿಗಳನ್ನು ಒಂದು ಆನ್ಲೈನ್ ಪೋರ್ಟಲ್ ಮೇಲೆ ಕೇಂದ್ರ ಸರ್ಕಾರಕ್ಕೆ ತಕ್ಷಣ ಒದಗಿಸಬೇಕು. ಕಲೆಕ್ಟರ್ ಹಾಗೂ ಸಚಿವರು ಆನ್ಲೈನ್ ಹೊರತುಪಡಿಸಿ ಆಫ್ಲೈನ್ ಅಂದರೆ ಭೌತಿಕ ರಿಜಿಸ್ಟರ್ ಮೂಲಕ ಕೂಡ ಸಲ್ಲಿಸಲಿದ್ದಾರೆ. ಇದರಿಂದ ಭಾರತಿಯ ಪೌರತ್ವಕ್ಕಾಗಿ ಶರಣಾರ್ಥಿಗಳ ಭೌತಿಕ ರಜಿಸ್ಟರ್ ಕೂಡ ಸಿದ್ಧವಾಗಲಿದೆ.   ಬಳಿಕ ಅದರ ಒಂದು ಪ್ರತಿಯನ್ನು ಒಂದು ವಾರದ ಒಳಗೆ ಕೇಂದ್ರ ಸರ್ಕಾರಕ್ಕೆ ಕಳುಹಿಸಬೇಕಾಗಲಿದೆ. 

ಇದನ್ನೂ ಓದಿ-PMJD: ತುರ್ತು ಸಂದರ್ಭಗಳಲ್ಲಿ ಜನ್-ಧನ್ ಖಾತೆಯಿಂದ ನೀವು ಒಂದೂವರೆ ಲಕ್ಷ ಪಡೆದುಕೊಳ್ಳಬಹುದು, ಇಲ್ಲಿದೆ ವಿವರ

CAA ಗೆ ದೇಶದ ಹಲವು ಭಾಗಗಳಲ್ಲಿ ವಿರೋಧ ವ್ಯಕ್ತವಾಗಿತ್ತು
2019ರಲ್ಲಿ ಕೇಂದ್ರ ಸರ್ಕಾರ CAA ಕಾನೂನು ತಂದಾಗ, ಕಾನೂನಿಗೆ ಸಂಬಂಧಿಸಿದಂತೆ ದೇಶದ ಹಲವು ಭಾಗಗಳಲ್ಲಿ ಪ್ರತಿಭಟನೆ ವ್ಯಕ್ತವಾಗಿತ್ತು. ಇದಲ್ಲದೆ ಕಳೆದ ವರ್ಷ ಅಂದರೆ 2020ರ ಆರಂಭದಲ್ಲಿ ಪ್ರದರ್ಶನಕ್ಕೆ ಸಂಬಂಧಿಸಿದಂತೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿಯೂ ಕೂಡ ದಂಗೆಗಳು ಉಂಟಾಗಿದ್ದವು. CAA ಅಡಿ ಬಾಂಗ್ಲಾದೇಶ (Bangladesh), ಪಾಕಿಸ್ತಾನ ಹಾಗೂ ಆಫ್ಘಾನಿಸ್ತಾನದ ಹಿಂದೂ, ಶಿಖ್, ಜೈನ್, ಬುದ್ಧ, ಪಾರಸಿ ಹಾಗೂ ಕ್ರಿಶ್ಚನ್ ನಾಗರಿಕರಿಗೆ ಭಾರತೀಯ ಪೌರತ್ವ ನೀಡಲು ಪ್ರಸ್ತಾಪಿಸಲಾಗಿದೆ. ಈ ಜನರು ಡಿಸೆಂಬರ್ 31, 2014ರ ಮೊದಲು ಭಾರತಕ್ಕೆ ಬಂದವರಾಗಿರಬೇಕು.

ಇದನ್ನೂ ಓದಿ-Cyclone Yaas : ಕೇಂದ್ರ ಸರ್ಕಾರದಿಂದ 3 ರಾಜ್ಯಗಳಿಗೆ ₹ 1000 ಕೋಟಿ ನೆರವು!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News