ನವದೆಹಲಿ : ಕೋವಿಡ್‌ನ ಮೂರನೇ ಅಲೆ (Covid Third Wave) ಮಕ್ಕಳ ಮೇಲೆ ಹೆಚ್ಚು ಪರಿಣಾಮ ಬೀರಲಿದೆ ಎಂಬ ಭೀತಿಯ ಮಧ್ಯೆ, ನಿಟ್ಟುಸಿರು ಬಿಡುವಂಥಹ ಸುದ್ದಿ ಕೇಳಿ ಬಂದಿದೆ. ಭಾರತದಲ್ಲಿ ಸೆಪ್ಟೆಂಬರ್ 2021 ರಿಂದ ಮಕ್ಕಳಿಗೆ ಕೋವಿಡ್ ವ್ಯಾಕ್ಸಿನೇಷನ್ (Covid Vaccination) ನೀಡುವ ಸಾಧ್ಯತೆ ಇದೆ ಎಂದು, ಏಮ್ಸ್ ಮುಖ್ಯಸ್ಥ ಡಾ.ರಂದೀಪ್ ಗುಲೇರಿಯಾ (Dr Randeep Guleria) ಹೇಳಿದ್ದಾರೆ. ಆದರೆ, ಈವರೆಗೆ ಭಾರತದಲ್ಲಿ ಮಕ್ಕಳ ಕೋವಿಡ್ -19 ಲಸಿಕೆಗೆ ಅನುಮೋದನೆ ನೀಡಲಾಗಿಲ್ಲ.
2 ರಿಂದ 6 ವರ್ಷ ವಯಸ್ಸಿನ ಮಕ್ಕಳಿಗೆ ಕೋವಾಕ್ಸಿನ್ ಟ್ರಯಲ್ :
ಮುಂದಿನ ವಾರದಿಂದ 2-6 ವರ್ಷ ವಯಸ್ಸಿನ ಮಕ್ಕಳ ಮೇಲೆ ಭಾರತ್ ಬಯೋಟೆಕ್‌ನ ಕೋವಾಕ್ಸಿನ್‌ನ (COVAXIN) ಎರಡನೇ ಡೋಸ್‌ನ ಕ್ಲಿನಿಕಲ್ ಪ್ರಯೋಗವನ್ನು ಪ್ರಾರಂಭಿಸಲು ಏಮ್ಸ್ (AIIMS) ಸಜ್ಜಾಗಿದೆ. ಜನವರಿ 16 ರಿಂದ ದೇಶದಲ್ಲಿ ಪ್ರಾರಂಭವಾದ ಕೋವಿಡ್ -19 ವ್ಯಾಕ್ಸಿನೇಷನ್ ಅಭಿಯಾನದಲ್ಲಿ ಕೋವಾಕ್ಸಿನ್ ಅನ್ನು ವಯಸ್ಕರಿಗೆ ಬಳಸಲಾಗುತ್ತಿದೆ.
Bharat Biotech's Covaxin trials for children are presently underway and the results are expected to be released by September: Dr Randeep Guleria, AIIMS Director pic.twitter.com/IzcNppK6OR
— ANI (@ANI) July 24, 2021
ಇದನ್ನೂ ಓದಿ: Corona Third Wave: ಈ ನಿಯಮಗಳನ್ನು ಅನುಸರಿಸಿದರೆ ಕರೋನಾ ಮೂರನೇ ತರಂಗ ತಪ್ಪಿಸಬಹುದು- ಏಮ್ಸ್ ಮುಖ್ಯಸ್ಥ ಡಾ. ಗುಲೇರಿಯಾ
ಡಿಸಿಜಿಐ ಅನುಮೋದನೆಗಾಗಿ ಕಾಯುತ್ತಿದೆ Zydus Cadila :
Zydus Cadila ತನ್ನ COVID-19 ಲಸಿಕೆ ZyCoV-D ಯ ತುರ್ತು ಬಳಕೆಗಾಗಿ ಅನುಮತಿ ನೀಡುವಂತೆ DCGIಯನ್ನು ಕೋರಿದೆ. DCGI ಯಿಂದ ಅನುಮೋದನೆ ಸಿಕ್ಕಿದ ತಕ್ಷಣ 12 ರಿಂದ 18 ವರ್ಷದೊಳಗಿನವರಿಗೆ ಈ ವಾಕ್ಸಿನ್ ನೀಡಲಾಗುವುದು. ತನ್ನ covid-19 ಲಸಿಕೆಯ ಅತಿದೊಡ್ಡ ಕ್ಲಿನಿಕಲ್ ಪ್ರಯೋಗವನ್ನು ಇದುವರೆಗೆ ಭಾರತದ 50 ಕ್ಕೂ ಹೆಚ್ಚು ಕೇಂದ್ರಗಳಲ್ಲಿ ನಡೆಸಿದೆ ಎಂದು ಕಂಪನಿ ಹೇಳಿದೆ.
'ಬೂಸ್ಟರ್ ಡೋಸ್ ತೆಗೆದುಕೊಳ್ಳುವ ಅಗತ್ಯ ಇದೆ':
ಮತ್ತೊಂದೆಡೆ, ಸದ್ಯದ ಪರಿಸ್ಥಿತಿಯನ್ನು ಗಮನಿಸಿದರೆ, ಬೂಸ್ಟರ್ ಡೋಸ್ ತೆಗೆದುಕೊಳ್ಳುವ ಅಗತ್ಯ ಇದೆ ಎಂದು, ಡಾ. ರಂದೀಪ್ ಗುಲೇರಿಯಾ, ತಿಳಿಸಿದ್ದಾರೆ. ಸಮಯ ಕಳೆದಂತೆ ರೋಗನಿರೋಧಕ ಶಕ್ತಿ (Immunity) ಕಡಿಮೆಯಾಗುತ್ತದೆ. ವೈರಸ್ ನ ಹೊಸ ರೂಪಾಂತರಗಳಿಂದ ರಕ್ಷಿಸುವ ಸಲುವಾಗಿ ಬೂಸ್ಟರ್ ಡೋಸ್ ತೆಗೆದುಕೊಳ್ಳುವ ಅವಸ್ಯಕತೆಯಿದೆ ಎಂದವರು ಹೇಳಿದ್ದಾರೆ.
ಇದನ್ನೂ ಓದಿ: Maharashtra Flooding: Raigad ಜಿಲ್ಲೆಯಲ್ಲಿ 11 ರೋಗಿಗಳ ಸಾವು
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ