ಶಾಲೆಯಿಂದ ಮನೆಗೆ ಹಿಂತಿರುಗುತ್ತಿದ್ದ ಮಗು ಅಪಹರಣ!

ಶಾಲೆಯಿಂದ ಮನೆಗೆ ಹಿಂತಿರುಗುತ್ತಿದ್ದ 10 ವರ್ಷದ ಮಗುವನ್ನು ಅಪಹರಿಸಿದ ದುಷ್ಕರ್ಮಿಗಳು, ಮಗುವಿನ ಪೋಷಕರಿಂದ 20 ಲಕ್ಷ ರೂ.ಗಳನ್ನೂ ಡಿಮ್ಯಾಂಡ್ ಮಾಡಿದ್ದರು ಎನ್ನಲಾಗಿದೆ. 

Last Updated : Jul 17, 2019, 10:40 AM IST
ಶಾಲೆಯಿಂದ ಮನೆಗೆ ಹಿಂತಿರುಗುತ್ತಿದ್ದ ಮಗು ಅಪಹರಣ!  title=

ನವದೆಹಲಿ: ಉತ್ತರಪ್ರದೇಶದಲ್ಲಿ ಕೊಲೆ, ಸುಲಿಗೆ, ಅಪಹರಣ, ಅತ್ಯಾಚಾರದಂತಹ ಘಟನೆಗಳಿಗೆ ಲೆಕ್ಕವೇ ಇಲ್ಲದಂತಾಗಿದೆ. ಅಂತಹದೇ ಒಂದು ಘಟನೆ ಸೋಮವಾರ ಸಫೇದಾಬಾದ್‌ನಲ್ಲಿ ನಡೆದಿದೆ. 

ಶಾಲೆಯಿಂದ ಮನೆಗೆ ಹಿಂತಿರುಗುತ್ತಿದ್ದ 10 ವರ್ಷದ ಮಗುವನ್ನು ಅಪಹರಿಸಿದ ದುಷ್ಕರ್ಮಿಗಳು, ಮಗುವಿನ ಪೋಷಕರಿಂದ 20 ಲಕ್ಷ ರೂ.ಗಳನ್ನೂ ಡಿಮ್ಯಾಂಡ್ ಮಾಡಿದ್ದರು ಎನ್ನಲಾಗಿದೆ. 

ಕೂಡಲೇ ಪೊಲೀಸರಿಗೆ ವಿಷಯ ಮುಟ್ಟಿಸಿದ ಪೋಷಕರು ಪ್ರಕರಣ ದಾಖಲಿಸಿದ್ದರು. ಈ ಬಗ್ಗೆ ಲಕ್ನೋ ಮತ್ತು ಹಾರ್ಡೊಯ್ ಪೊಲೀಸರ ಸಹಯೋಗದೊಂದಿಗೆ ಎಸ್‌ಪಿ (ಉತ್ತರ) ಬರಾಬಂಕಿ ನೇತೃತ್ವದಲ್ಲಿ ತ್ವರಿತ ತನಿಖೆ ಆರ್ಮಭಿಸಿದ ಪೊಲೀಸರು 72 ಗಂಟೆಗಳಲ್ಲಿ ಮಗುವನ್ನು ಸುರಕ್ಷಿತವಾಗಿ ಪತ್ತೆಹಚ್ಚಿ ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ.

Trending News