ನ್ಯಾಯಾಂಗದಲ್ಲಿ ಮಹಿಳೆಯರಿಗೆ ಶೇ 50 ರಷ್ಟು ಮೀಸಲಾತಿ ವಿಚಾರಕ್ಕೆ ಸಿಜೆಐ ಎನ್.ವಿ.ರಮಣ ಹೇಳಿದ್ದೇನು?

ಭಾರತದ ಮುಖ್ಯ ನ್ಯಾಯಮೂರ್ತಿ ಎನ್ ವಿ ರಮಣ ಅವರು ಮಹಿಳಾ ನ್ಯಾಯವಾದಿಗಳಿಗೆ ನ್ಯಾಯಾಂಗದಲ್ಲಿ ಶೇಕಡ 50 ರಷ್ಟು ಮೀಸಲಾತಿ ನೀಡಬೇಕೆಂಬ ಬೇಡಿಕೆಯನ್ನು ಬಲವಾಗಿ ಎತ್ತುವಂತೆ ಸಲಹೆ ನೀಡಿದರು, ಅಷ್ಟೇ ಅಲ್ಲದೆ ಅದಕ್ಕೆ ಸಂಪೂರ್ಣ ಬೆಂಬಲ ನೀಡುವುದಾಗಿ ಹೇಳಿದರು.

Written by - Zee Kannada News Desk | Last Updated : Sep 26, 2021, 07:50 PM IST
  • ಭಾರತದ ಮುಖ್ಯ ನ್ಯಾಯಮೂರ್ತಿ ಎನ್ ವಿ ರಮಣ ಅವರು ಮಹಿಳಾ ನ್ಯಾಯವಾದಿಗಳಿಗೆ ನ್ಯಾಯಾಂಗದಲ್ಲಿ ಶೇಕಡ 50 ರಷ್ಟು ಮೀಸಲಾತಿ ನೀಡಬೇಕೆಂಬ ಬೇಡಿಕೆಯನ್ನು ಬಲವಾಗಿ ಎತ್ತುವಂತೆ ಸಲಹೆ ನೀಡಿದರು, ಅಷ್ಟೇ ಅಲ್ಲದೆ ಅದಕ್ಕೆ ಸಂಪೂರ್ಣ ಬೆಂಬಲ ನೀಡುವುದಾಗಿ ಹೇಳಿದರು.
ನ್ಯಾಯಾಂಗದಲ್ಲಿ ಮಹಿಳೆಯರಿಗೆ ಶೇ 50 ರಷ್ಟು ಮೀಸಲಾತಿ ವಿಚಾರಕ್ಕೆ ಸಿಜೆಐ ಎನ್.ವಿ.ರಮಣ ಹೇಳಿದ್ದೇನು? title=
file photo

ನವದೆಹಲಿ: ಭಾರತದ ಮುಖ್ಯ ನ್ಯಾಯಮೂರ್ತಿ ಎನ್ ವಿ ರಮಣ ಅವರು ಮಹಿಳಾ ನ್ಯಾಯವಾದಿಗಳಿಗೆ ನ್ಯಾಯಾಂಗದಲ್ಲಿ ಶೇಕಡ 50 ರಷ್ಟು ಮೀಸಲಾತಿ ನೀಡಬೇಕೆಂಬ ಬೇಡಿಕೆಯನ್ನು ಬಲವಾಗಿ ಎತ್ತುವಂತೆ ಸಲಹೆ ನೀಡಿದರು, ಅಷ್ಟೇ ಅಲ್ಲದೆ ಅದಕ್ಕೆ ಸಂಪೂರ್ಣ ಬೆಂಬಲ ನೀಡುವುದಾಗಿ ಹೇಳಿದರು.

'ನೀವು ಅಳುವುದನ್ನು ನಾನು ಬಯಸುವುದಿಲ್ಲ, ಆದರೆ ಕೋಪದಿಂದ ನೀವು ಕೂಗಬೇಕು ಮತ್ತು ನಮಗೆ ಶೇಕಡಾ 50 ರಷ್ಟು ಮೀಸಲಾತಿ ಬೇಕು ಎಂದು ಒತ್ತಾಯಿಸಬೇಕು" ಎಂದು ಅವರು ಹೇಳಿದರು.ಸಿಜೆಐ ಇದು ಸಾವಿರಾರು ವರ್ಷಗಳ ಶೋಷಣೆಗೆ ಒಳಪಟ್ಟಿರುವ ಮಹಿಳೆಯರಿಗೆ ಮೀಸಲಾತಿ ಪಡೆಯುವ ಅರ್ಹತೆ ಇದೆ, ಇದು ಹಕ್ಕಿನ ವಿಚಾರವಾಗಿದೆ ಹೊರತು ದಾನದ್ದು ಅಲ್ಲ ಎಂದು ಅವರು ಹೇಳಿದರು.

ಇದನ್ನೂ ಓದಿ : Provident Fund: ಅಗತ್ಯವಿದ್ದರೆ ನಿಮ್ಮ PF ಹಣ ಹಿಂಪಡೆಯಬಹುದು, ಆದರೆ ಎಷ್ಟು Tax ಪಾವತಿಸಬೇಕೆಂದು ತಿಳಿಯಿರಿ

ದೇಶದ ಎಲ್ಲಾ ಕಾನೂನು ಶಾಲೆಗಳಲ್ಲಿ ಮಹಿಳೆಯರಿಗೆ ಮೀಸಲಾತಿಯ ನಿರ್ದಿಷ್ಟ ಶೇಕಡಾವಾರು ಮೀಸಲಾತಿಯ ಬೇಡಿಕೆಯನ್ನು ನಾನು ಬಲವಾಗಿ ಶಿಫಾರಸು ಮಾಡುತ್ತೇನೆ ಮತ್ತು ಬೆಂಬಲಿಸುತ್ತೇನೆ ಎಂದು ನಾನು ಹೇಳಲು ಬಯಸುತ್ತೇನೆ, ಇದರಿಂದ ಅವರು ನ್ಯಾಯಾಂಗಕ್ಕೆ ಸೇರಬಹುದು" ಎಂದು ಎನ್ ವಿ ರಮಣ (N V Ramana)  ಹೇಳಿದರು.

ಮೂವರು ಮಹಿಳಾ ನ್ಯಾಯಾಧೀಶರು ಸೇರಿದಂತೆ ಹೊಸದಾಗಿ ನೇಮಕಗೊಂಡ ಒಂಬತ್ತು ನ್ಯಾಯಾಧೀಶರಿಗಾಗಿ ಸುಪ್ರೀಂ ಕೋರ್ಟ್ ನ ಲೇಡಿ ಅಡ್ವೊಕೇಟ್ಸ್ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಸಿಜೆಐ ರಮಣ ಅವರು ಕಾರ್ಲ್ ಮಾರ್ಕ್ಸ್ ನ ವಿಶ್ವದ ಕಾರ್ಮಿಕರೇ ಒಂದಾಗಿ ನೀವು ಕಳೆದುಕೊಳ್ಳುವುದು ನಿಮ್ಮ ಸರಪಳಿಯನ್ನೇ ಹೊರತು ಬೇರೆ ಏನೂ ಅಲ್ಲ ಎನ್ನುವುದನ್ನು ಉಲ್ಲೇಖಿಸುತ್ತಾ ಅವರು 'ಪ್ರಪಂಚದ ಮಹಿಳೆಯರು ಒಂದಾಗಿ.ನೀವು ನಿಮ್ಮ ಸರಪಳಿಯನ್ನು ಹೊರತುಪಡಿಸಿ ನೀವು ಕಳೆದುಕೊಳ್ಳುವುದು ಏನೂ ಇಲ್ಲ"ಎಂದು ಹೇಳಿದರು.

ಇದನ್ನೂ ಓದಿ : Bank Working Hour: ಕರೋನಾದಿಂದಾಗಿ ಬ್ಯಾಂಕುಗಳ ಕೆಲಸದ ಸಮಯದಲ್ಲಿ ಕಡಿತ!

"ನೀವೆಲ್ಲರೂ ನಗುತ್ತಿದ್ದೀರಿ. ಹೌದು, ನೀವು ಅಳುವುದು ನನಗೆ ಇಷ್ಟವಿಲ್ಲ, ಆದರೆ ಕೋಪದಿಂದ, ನೀವು ಕೂಗಬೇಕು ಮತ್ತು ನಮಗೆ ಶೇಕಡಾ 50 ರಷ್ಟು ಮೀಸಲಾತಿ ಬೇಕು ಎಂದು ಒತ್ತಾಯಿಸಬೇಕು. ಇದು ಸಣ್ಣ ಸಮಸ್ಯೆಯಲ್ಲ ಸಾವಿರಾರು ವರ್ಷಗಳ ಸಮಸ್ಯೆ, ನ್ಯಾಯಾಂಗದಲ್ಲಿ ನಮಗೆ ಮಹಿಳೆಯರ ಶೇಕಡಾ 50 ರಷ್ಟು ಪ್ರಾತಿನಿಧ್ಯ ಇರುವ ಸಮಯ ಬಂದಿದೆ. ನಿಮಗೆ (ಅದಕ್ಕೆ) ಅರ್ಹತೆ ಇದೆ, ಇದು ಹಕ್ಕಿನ ವಿಷಯವಾಗಿದೆ. ಇದು ದಾನದ ವಿಷಯವಲ್ಲ. ಆದರೆ ದುರದೃಷ್ಟಕರ  ಏನೆಂದರೆ ಕೆಲವು ವಿಷಯಗಳನ್ನು ಅರಿತುಕೊಳ್ಳುವುದು ತಡವಾಗಿ" ಎಂದು ಅವರು ಹೇಳಿದರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News