ಪೋಲಿಸ್ ಹುದ್ದೆಗಳಲ್ಲಿ ಮಂಗಳ ಮುಖಿಯರಿಗೆ ಅವಕಾಶ ನೀಡಿದ ಛತ್ತೀಸ್ ಘಡ್ ಸರ್ಕಾರ!

   

Last Updated : May 4, 2018, 10:09 PM IST
 ಪೋಲಿಸ್ ಹುದ್ದೆಗಳಲ್ಲಿ ಮಂಗಳ ಮುಖಿಯರಿಗೆ ಅವಕಾಶ ನೀಡಿದ ಛತ್ತೀಸ್ ಘಡ್ ಸರ್ಕಾರ! title=

ನವದೆಹಲಿ: ಛತ್ತೀಸ್ ಘಡ್ ನ  ರಮಣ್ ಸಿಂಗ್ ನೇತೃತ್ವದ ಸರಕಾರವು ರಾಜ್ಯ ಪೊಲೀಸ್ ಪಡೆದಲ್ಲಿ ಮಂಗಳ ಮುಖಿಯರಿಗೆ ಅವಕಾಶ ಕಲ್ಪಿಸಲು ನಿರ್ಧರಿಸಿದೆ .

ಸರ್ಕಾರವು ಈ ಕ್ರಮವನ್ನು ಲಿಂಗ ಸಮಾನತೆಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ತೆಗೆದುಕೊಳ್ಳಲಾಗಿದೆ ಎನ್ನಲಾಗಿದೆ.  ಆ ಮೂಲಕ ಮಂಗಳ ಮುಖಿಯರನ್ನು ಪೋಲಿಸ್ ಪಡೆಯಲ್ಲಿ ನೇಮಕ ಮಾಡಿಕೊಳ್ಳುವ ದೇಶದ ಮೊದಲ ರಾಜ್ಯ ಎನ್ನುವ ಹಿರಿಮೆಗೆ ಪಾತ್ರವಾಗಿದೆ.

ಎಎನ್ಐ ಸುದ್ದಿ ಸಂಸ್ಥೆಯಯ ಪ್ರಕಾರ, ಈಗಾಗಲೇ ನೇಮಕಾತಿ  ಪ್ರಕ್ರಿಯೆಯನ್ನು  ಛತ್ತೀಸ್ ಘಡ್ ಸರ್ಕಾರ  ಪ್ರಾರಂಭಿಸಿದ್ದು , ಈ ನಡೆಗೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.ಆ ನಿಟ್ಟಿನಲ್ಲಿ ರಾಯಪುರದ ಮೈದಾನದಲ್ಲಿ  ನೇಮಕಾತಿಗಾಗಿ ಸಿದ್ದತೆಯನ್ನು ನಡೆಸಿದೆ. ಮಂಗಳ ಮುಖಿಯರಿಗೂ ಸಹಿತ ಇತರರಿಗೆ ನೇಮಕ ಮಾಡುವ ಪ್ರಕ್ರಿಯೆಯನ್ನೇ ಸರ್ಕಾರ ಪಾಲಿಸಲಿದೆ ಎಂದು ತಿಳಿದುಬಂದಿದೆ.

ಛತ್ತೀಸ್ ಘಡ್ ದಲ್ಲಿ ಸುಮಾರು 3000ಕ್ಕೂ ಅಧಿಕ ಮಂಗಳಮುಖಿರಿದ್ದು ಅವರನ್ನು ಹಿಂದುಳಿದ ವರ್ಗಕ್ಕೆ ಸೇರಿಸಲಾಗಿದೆ. ಈ ಹಿಂದೆ 2014ರಲ್ಲಿ  ಸುಪ್ರಿಂಕೋರ್ಟ್ ಮಂಗಳಮುಖಿಯರನ್ನು ತೃತೀಯ ಲಿಂಗಿಗಳು ಎಂದು ಮಾನ್ಯತೆ ನೀಡುವುದರ ಮೂಲಕ ಇತರರಿಗೆ ಇರುವ ಎಲ್ಲ ಅವಕಾಶಗಳು ಮಂಗಳಮುಖಿಯರಿಗೂ ಸಿಗಬೇಕು ಎಂದು ಅದು ತೀರ್ಪು ನೀಡಿತ್ತು. 

Trending News