ನವದೆಹಲಿ : ಚಿರತೆ ಮತ್ತು ಹುಲಿ ನುರಿತ ಪರಭಕ್ಷಕ ಪ್ರಾಣಿಗಳು. ಚಿರತೆ ಕ್ಷಣ ಮಾತ್ರದಲ್ಲಿ ತನ್ನ ಬೇಟೆಯನ್ನು ಬೇಟೆಯಾಡಿ ಬಿಡುತ್ತದೆ. ಚಿರತೆ ಅತ್ಯಂತ ವೇಗವಾಗಿ ಓಡುವ ಪ್ರಾಣಿಯಾಗಿರುವ ಕಾರಣ ಅದರಿಂದ ತಪ್ಪಿಸಿಕೊಳ್ಳುವುದು ಇತರ ಪ್ರಾಣಿಗಳಿಗೆ ಕಷ್ಟ ಸಾಧ್ಯ. ಚಿರತೆ ಯಾವುದಾದರೂ ಪ್ರಾಣಿಯ ಮೇಲೆ ಕಣ್ಣು ಹಾಯಿಸಿತು ಎಂದಾದರೆ ಆ ಪ್ರಾಣಿಯನ್ನು ಬೇಟೆಯಾಡಿಯೇ ತೀರುತ್ತದೆ (Animal virl video). ಚಿರತೆ ಈ ಸೃಷ್ಟಿಯ ಅದ್ಬುತ ಎಂದರೆ ತಪ್ಪಾಗುವುದಿಲ್ಲ. ಇದು ಅತ್ಯಂತ ವೇಗವಾಗಿ ಓಡುವುದಕ್ಕೂ ಸೈ. ಮರವೆರುವುದಕ್ಕೂ ಸೈ. ಇನ್ನು ನೀರಿನೊಳಗೆ ಜಿಗಿದು ಈಜಾಡುವುದರಲ್ಲೂ ಎತ್ತಿದ ಕೈ.
ಸಾಮಾಜಿಕ ಮಾಧ್ಯಮಗಳಲ್ಲಿ (Social Media) ಶೇರ್ ಆಗುವ ಅನೇಕ ವಿಡಿಯೋಗಳನ್ನು (Viral Video) ನಾವು ನೋಡುತ್ತೇವೆ. ಇದರಲ್ಲಿ ಚಿರತೆಯಿಂದ ತಪ್ಪಿಸಿಕೊಳ್ಳುವ ಸಲುವಾಗಿ ಜಿಂಕೆ ಸೇರಿದಂತೆ ಅನೇಕ ಪ್ರಾಣಿಗಳು ನದಿ ತೊರೆಗಳತ್ತ ಓಡುತ್ತವೆ. ಆದರೆ, ಚಿರತೆ ಅಲ್ಲಿಗೂ ಹೋಗಿ ಅವುಗಳನ್ನು ಬೇಟೆಯಾಡದೇ ಬಿಡುವುದಿಲ್ಲ. ಈ ರೀತಿಯ ಅನೇಕ ವಿಡಿಯೋ ಗಳನ್ನು (Viarl video) ನೀವು ಕೂಡಾ ನೋಡಿರಬಹುದು.
ಇದನ್ನೂ ಓದಿ : ಲತಾ ಮಂಗೇಶ್ಕರ್ ಅಂತ್ಯಕ್ರಿಯೆಯಲ್ಲಿ ಶಾರುಖ್ ಉಗುಳಿದ್ದಾರಾ?
ಆದರೆ ನೀವು ಎಂದಾದರೂ ನೀರಿನೊಳಗೆ ಹೋಗಿ ಮಣ್ಣಿನಲ್ಲಿ ಹುದುಗಿರುವ ಮೀನು ಸೇರಿದಂತೆ ಜಲಚರಗಳನ್ನು ಬೇಟೆಯಾಡುವ ಚಿರತೆಯನ್ನು (Animal video) ನೋಡಿದ್ದೀರಾ? ಇಲ್ಲಿ ಅಂಥದ್ದೇ ಒಂದು ವಿಡಿಯೋವಿದೆ.
Jaguars are excellent swimmers. @ Andru Edwards pic.twitter.com/2RwbADybH5
— Amazing Nature (@AmazingNature00) January 31, 2022
ಇದನ್ನೂ ಓದಿ : ಭಯಂಕರ ಆಕ್ಸಿಡೆಂಟ್ ನ Live Video, ನಡುರಸ್ತೇಲಿ ಟ್ರ್ಯಾಕ್ಟರ್ ಉಡಾಯಿಸಿದ ಲಾರಿ
ಈ ವಿಡಿಯೋದಲ್ಲಿ ಚಿರತೆ ನೀರಿನ ಒಳಗೆ ಹೋಗಿ ಬೇಟೆಯಾಡುತ್ತಿದೆ. ಮಣ್ಣನ್ನು ಅಗೆದು ಕೈಗೆ ಸಿಕ್ಕ ಜಲಚರಗಳನ್ನು ಭಕ್ಷಿಸುತ್ತಿದೆ. ಇದೊಂದು ಅಪರೂಪದ ವಿಡಿಯೋ ಆಗಿದೆ. Amazing Nature ಎಂಬ twitter ಖಾತೆಯಲ್ಲಿ ಈ ವಿಡಿಯೋವನ್ನು ಶೇರ್ ಮಾಡಲಾಗಿದೆ. ನೀರೊಳಗೆ ಚಿರತೆ ಬೇಟೆಯಾಡುತ್ತಿರುವ ವಿಡಿಯೋ ಫುಲ್ ವೈರಲ್ ಆಗಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.