ನವದೆಹಲಿ: ಆಧಾರ್ ಕಾರ್ಡ್ (Aadhaar Card) ಅನ್ನು ಇಂದು ಪ್ರಮುಖ ದಾಖಲೆಗಳಲ್ಲಿ ಒಂದೆಂದು ಪರಿಗಣಿಸಲಾಗುತ್ತದೆ. ಇದನ್ನು ಪಡಿತರ ಚೀಟಿಯಿಂದ (Ration Card) ಹಿಡಿದು ಪ್ಯಾನ್ ಕಾರ್ಡ್ ವರೆಗೆ (Pan Card) ಲಿಂಕ್ ಮಾಡಲು ಮಾರ್ಗಸೂಚಿಗಳನ್ನು ನೀಡಲಾಗಿದೆ, ಆದರೆ ಕಾಲಕಾಲಕ್ಕೆ ನಿಮ್ಮ ಆಧಾರ್ ಕಾರ್ಡ್ನ ಸ್ಥಿತಿ ಮತ್ತು ಇತಿಹಾಸವನ್ನು ಪರಿಶೀಲಿಸುವುದು ಅವಶ್ಯಕ. ಆಧಾರ್ ಕಾರ್ಡ್ನ ದುರುಪಯೋಗವು ನಿಮ್ಮನ್ನು ದೊಡ್ಡ ತೊಂದರೆಗೆ ಸಿಲುಕಿಸಬಹುದು.
Aadhaar Card History ಪರಿಶೀಲಿಸುತ್ತಿರಿ
ಇಂದಿನ ದಿನಗಳಲ್ಲಿ ಆಧಾರ್ ಕಾರ್ಡ್ (Aadhaar Card) ಪ್ರಮುಖ ದಾಖಲೆಯಾಗಿರುವ ಕಾರಣ ಅದನ್ನು ಬಳಸಿ ಅತಿ ಹೆಚ್ಚು ವಂಚನೆಗಳನ್ನು ಎಸಗಲಾಗುತ್ತಿದ್ದು, ಅಮಾಯಕರನ್ನು ವಂಚನೆಯ ಜಾಲಕ್ಕೆ ಬೀಲಿಸಲಾಗುತ್ತಿದೆ. ಬ್ಯಾಂಕಿನೊಂದಿಗೆ ಇರುವ ತಮ್ಮ ಸಂಪರ್ಕದಿಂದಾಗಿ, ಈ ಅಪರಾಧ ಪ್ರವೃತ್ತಿಯ ಜನರು ಬ್ಯಾಂಕಿಂಗ್ ಸಂಬಂಧಿತ ವಂಚನೆಯನ್ನು ಎಸಗುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ, ಬಳಕೆದಾರರು ತಮ್ಮ ಆಧಾರ್ ಕಾರ್ಡ್ನ ಇತಿಹಾಸವನ್ನು ಕಾಲಕಾಲಕ್ಕೆ ಪರಿಶೀಲಿಸುವುದು ಬಹಳ ಮುಖ್ಯವಾಗಿದೆ.
ಇದನ್ನೂ ಓದಿ-Aadhaar-Ration Link:ಈಗ ಮನೆಯಲ್ಲಿಯೇ ಕುಳಿತು ಸುಲಭವಾಗಿ ಆಧಾರ್-ರೇಷನ್ ಕಾರ್ಡ್ ಲಿಂಕ್ ಮಾಡಿ
ಆಧಾರ್ ಇತಿಹಾಸವನ್ನು ಹೇಗೆ ಪರಿಶೀಲಿಸಬೇಕು?
ಆಧಾರ್ ಇತಿಹಾಸವನ್ನು ಪರಿಶೀಲಿಸಲು, ನೀವು ತುಂಬಾ ಸುಲಭವಾದ ಪ್ರಕ್ರಿಯೆಯನ್ನು ಅನುಸರಿಸಬೇಕು. ಇದರಿಂದ ನಿಮ್ಮ ಆಧಾರ್ನ ಎಲ್ಲಾ ವಿವರಗಳನ್ನು ನೀವು ಮನೆಯಲ್ಲಿಯೇ ಕುಳಿತು ಪಡೆಯಬಹುದು.
>> ಇದಕ್ಕಾಗಿ, ಮೊದಲು ಆಧಾರ್ ಕಾರ್ಡ್ನ ಅಧಿಕೃತ ವೆಬ್ಸೈಟ್ uidai.gov.in ಗೆ ಹೋಗಿ. ಇಲ್ಲಿ My Aadhar ಆಯ್ಕೆಯನ್ನು ಆರಿಸಿ.
>> ಆಧಾರ್ ಸೇವೆಗಳ ಆಯ್ಕೆಯ ಕೆಳಗೆ, ಆಧಾರ್ ದೃಢೀಕರಣ ಇತಿಹಾಸ ಕಾಣಿಸಿಕೊಳ್ಳುತ್ತದೆ. ಅದರ ಮೇಲೆ ಕ್ಲಿಕ್ ಮಾಡಿ.
>> ಇದರ ನಂತರ ನಿಮ್ಮ ಪರದೆಯ ಮೇಲೆ ಹೊಸ ವಿಂಡೋ ತೆರೆಯುತ್ತದೆ. ನಿಮ್ಮ 12 ಅಂಕಿಗಳ >> ಆಧಾರ್ ಸಂಖ್ಯೆಯನ್ನು ಅಲ್ಲಿ ನಮೂದಿಸಿ. ಭದ್ರತಾ ಕೋಡ್ ಅನ್ನು ನಮೂದಿಸಿ ಮತ್ತು OTP ಅನ್ನು ಕಳುಹಿಸಿ ಮೇಲೆ ಕ್ಲಿಕ್ ಮಾಡಿ.
>> OTP ನಮೂದಿಸಿದ ನಂತರ, ನೀವು ನಿಮ್ಮ ಆಧಾರ್ ಕಾರ್ಡ್ನ ಇತಿಹಾಸವನ್ನು ಡೌನ್ಲೋಡ್ ಮಾಡಬಹುದು.
ಇದನ್ನೂ ಓದಿ-Aadhaar Card Update: ಕೇವಲ ಒಂದು ಲಿಂಕ್ನಲ್ಲಿ ನಿಮ್ಮ DOB ಬದಲಾಯಿಸಿ, ಇಲ್ಲಿದೆ ಸುಲಭ ಮಾರ್ಗ
ಹೀಗಿರುವಾಗ ನೀವೂ ಕೂಡ ನಿಮ್ಮ ಆಧಾರ್ ಕಾರ್ಡ್ ಇತಿಹಾಸವನ್ನು ನೀವು ಸಂಪೂರ್ಣವಾಗಿ ಪರಿಶೀಲಿಸುವುದು ಅವಶ್ಯಕ. ನೀವು ಯಾವುದೇ ತಪ್ಪು ಮಾಹಿತಿಯನ್ನು ನೋಡಿದರೆ, ತಕ್ಷಣ ಅದನ್ನು ಸರಿಪಡಿಸಿ. ಇದಕ್ಕೆ ಕಾರಣವೆಂದರೆ ಅನೇಕ ಬಾರಿ ಅಪರಾಧಿಗಳು ಜನರ ಆಧಾರ್ ಕಾರ್ಡ್ಗಳ ನಕಲು ಪ್ರತಿಯಿಂದಲೂ ನಕಲಿ ಸಿಮ್ ಕಾರ್ಡ್ ಅಥವಾ ನಕಲಿ ಬ್ಯಾಂಕ್ ಖಾತೆಗಳನ್ನು ತೆರೆಯುತ್ತಾರೆ.
ಇದನ್ನೂ ಓದಿ-Aadhaar Card:ನಿಮ್ಮ ಪ್ರಾದೇಶಿಕ ಭಾಷೆಯಲ್ಲಿ ಆಧಾರ್ ಕಾರ್ಡ್ ಮಾಡಿಸಿ, ಅನೇಕ ಪ್ರಯೋಜನ ಪಡೆಯಿರಿ!
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.