Changes from April 1, 2021 - ಏಪ್ರಿಲ್ 1 ರಿಂದ ಹಣದುಬ್ಬರದ ಹೊಡೆತ, Car, Bike, TV, AC ಎಲ್ಲವು ದುಬಾರಿ

Changes From April1 2021: ಬರುವ ಏಪ್ರಿಲ್ 1, 2021 ರಿಂದ ನೂತನ ಆರ್ಥಿಕ ವರ್ಷ ಆರಂಭಗೊಳ್ಳುತ್ತಿದೆ. ಆದರೆ, ಮುಂದಿನ ಆರ್ಥಿಕ ವರ್ಷದ ಆರಂಭದಲ್ಲಿಯೇ ಹಣದುಬ್ಬರದ ಹೊಡೆತ ಬೀಳಲಿದೆ. ನಿಮಗೆ ಆವಶ್ಯಕ ಎಂದಿರುವ ಹಾಗೂ ದಿನನಿತ್ಯ ಬಳಕೆಯಾಗುವ ಹಲವು ವಸ್ತುಗಳು ಏಪ್ರಿಲ್ 1 ರಿಂದ ದುಬಾರಿಯಾಗಲಿವೆ. ಹಾಲಿನಿಂದ ಹಿಡಿದು ವಿದ್ಯುತ್ ವರೆಗೆ, ಎಸಿಯಿಂದ ಹಿಡಿದು ವಿಮಾನಯಾನದವರೆಗೆ ಎಲ್ಲ ಸಂಗತಿಗಳು ದುಬಾರಿಯಾಗಲಿವೆ.

Written by - Nitin Tabib | Last Updated : Mar 26, 2021, 04:52 PM IST
  • ಬರುವ ಏಪ್ರಿಲ್ 1, 2021 ರಿಂದ ನೂತನ ಆರ್ಥಿಕ ವರ್ಷ ಆರಂಭಗೊಳ್ಳುತ್ತಿದೆ.
  • ಮುಂದಿನ ಆರ್ಥಿಕ ವರ್ಷದ ಆರಂಭದಲ್ಲಿಯೇ ಹಣದುಬ್ಬರದ ಹೊಡೆತ ಬೀಳಲಿದೆ.
  • ನಿಮಗೆ ಆವಶ್ಯಕ ಎಂದಿರುವ ಹಾಗೂ ದಿನನಿತ್ಯ ಬಳಕೆಯಾಗುವ ಹಲವು ವಸ್ತುಗಳು ಏಪ್ರಿಲ್ 1 ರಿಂದ ದುಬಾರಿಯಾಗಲಿವೆ.
Changes from April 1, 2021 - ಏಪ್ರಿಲ್ 1 ರಿಂದ ಹಣದುಬ್ಬರದ ಹೊಡೆತ, Car, Bike, TV, AC ಎಲ್ಲವು ದುಬಾರಿ title=
Changes From April1 2021 (File Photo)

ನವದೆಹಲಿ: Changes from April 1, 2021 - ಏಪ್ರಿಲ್ 1, 2021 ರಿಂದ ನೂತನ ಆರ್ಥಿಕ ವರ್ಷ ಆರಂಭವಾಗುತ್ತಿದೆ. ಆದರೆ, ಮುಂದಿನ ಆರ್ಥಿಕ ವರ್ಷದ ಆರಂಭದಲ್ಲಿಯೇ ಹಣದುಬ್ಬರದ ಹೊಡೆತ ಬೀಳಲಿದೆ. ನಿಮಗೆ ಆವಶ್ಯಕ ಎಂದಿರುವ ಹಾಗೂ ದಿನನಿತ್ಯ ಬಳಕೆಯಾಗುವ ಹಲವು ವಸ್ತುಗಳು ಏಪ್ರಿಲ್ 1 ರಿಂದ ದುಬಾರಿಯಾಗಲಿವೆ. ಹಾಲಿನಿಂದ ಹಿಡಿದು ವಿದ್ಯುತ್ ವರೆಗೆ, ಎಸಿಯಿಂದ ಹಿಡಿದು ವಿಮಾನಯಾನದವರೆಗೆ ಎಲ್ಲ ಸಂಗತಿಗಳು ದುಬಾರಿಯಾಗಲಿವೆ. ಒಂದೆಡೆ ಕಾರುಗಳಲ್ಲಿ ಪ್ರಯಾಣ ದುಬಾರಿಯಾಗಲಿದ್ದರೆ, ಇನ್ನೊಂದೆಡೆ ಸ್ಮಾರ್ಟ್ ಫೋನ್ ಖರೀದಿ ಕೂಡ ನಿಮ್ಮ ಜೇಬಿಗೆ ಭಾರಿ ಬೀಳಲಿದೆ.

ಕಾರ್, ಬೈಕ್ ಖರೀದಿ ದುಬಾರಿಯಾಗಲಿದೆ
ಒಂದು ವೇಳೆ ನೀವು ಕಾರು (Car), ಬೈಕ್ (Bike) ಖರೀದಿಸಲು ಯೋಜನೆ ರೂಪಿಸುತ್ತಿದ್ದರೆ, ಏಪ್ರಿಲ್ 1 ರ ಮೊದಲೇ ಖರೀದಿಸಿ. ಏಕೆಂದರೆ, ನಂತರ ಬಹುತೇಕ ಕಂಪನಿಗಳು ತಮ್ಮ ವಾಹನಗಳ ಬೆಲೆ ಏರಿಕೆ ಮಾಡಲಿವೆ. ಮಾರುತಿ, ನಿಸಾನ್ ಗಳಂತಹ ಕಂಪನಿಗಳು ತಮ್ಮ ವಾಹನಗಳ ಬೆಲೆ ಏರಿಕೆ ಮಾಡುವುದಾಗಿ ಘೋಷಿಸಿವೆ. ನಿಸಾನ್ ತನ್ನ ಎರಡನೇ ಬ್ರಾಂಡ್ ಆಗಿರುವ Datsun ವಾಹನಗಳ ಬೆಲೆ ಏರಿಕೆ ಮಾಡುವುದಾಗಿ ಘೋಷಿಸಿದೆ. 

ಏಪ್ರಿಲ್ 1 ರಿಂದ ಟಿವಿ ದುಬಾರಿಯಾಗಲಿದೆ
ಏಪ್ರಿಲ್ 1 ರಿಂದ ಟಿವಿ ಖರೀದಿ ಕೂಡ ದುಬಾರಿಯಾಗಲಿದೆ. ಏಕೆಂದರೆ ಕಳೆದ 8 ತಿಂಗಳುಗಳಲ್ಲಿ ಟಿವಿ (TV) ಬೆಲೆಯಲ್ಲಿ ಸುಮಾರು 3 ರಿಂದ 4 ಸಾವಿರವರೆಗೆ ಹೆಚ್ಚಾಗಿದೆ. ಟಿವಿ ಉತ್ಪಾದಕ ಕಂಪನಿಗಳೂ ಕೂಡ ಟಿವಿಯನ್ನು PLI ಸ್ಕೀಮ್ ನಲ್ಲಿ ತರಲು ಬೇಡಿಕೆ ಇಟ್ಟಿವೆ. ಹೀಗಾಗಿ ಏಪ್ರಿಲ್ 1, 2021 ರಿಂದ ಟಿವಿ ಬೆಲೆಯಲ್ಲಿ ಸುಮಾರು 2 ರಿಂದ 3 ಸಾವಿರ ರೂಗಳವರೆಗೆ ಹೆಚ್ಚಾಗಲಿದೆ. 

AC, ಫ್ರಿಡ್ಜ್ ಗಳ ತಂಪು ಗಾಳಿ ಕೂಡ ದುಬಾರಿ ಬೀಳಲಿದೆ
ಈ ವರ್ಷ ಬೇಸಿಗೆಯ ಕಾಲದಲ್ಲಿ ಎಸಿ (AC) ಅಥವಾ ಫ್ರಿಡ್ಜ್ (Fridge) ಖರೀದಿಸುವವರಿಗೆ ಹಣದುಬ್ಬರದ ಹೊಡೆತ ಬೀಳಲಿದೆ. ಏಪ್ರಿಲ್ 1 ರಿಂದ ಎಸಿ ಕಂಪನಿಗಳು ಬೆಲೆ ಏರಿಕೆಯ ಕುರಿತು ಪ್ಲಾನ್ ನಡೆಸುತ್ತಿವೆ. ಕಚ್ಚಾಪದಾರ್ಥಗಳ ಬೆಲೆ ಏರಿಕೆಗೆ ತತ್ತರಿಸಿ ಹೋಗಿರುವ ಕಂಪನಿಗಳು ತಮ್ಮ ತುಪನ್ನಗಳ ಬೆಲೆ ಏರಿಕೆಗೆ ಸಿದ್ಧತೆ ನಡೆಸುತಿವೆ. ಎಸಿ (AC Price Hike) ತಯಾರಕ ಕಂಪನಿಗಳು ತಮ್ಮ ಉತ್ಪನ್ನಗಳ ಬೆಲೆಯಲ್ಲಿ ಶೇ.4 ರಿಂದ ಶೇ.6 ರಷ್ಟು ಹೆಚ್ಚಳ ಮಾಡಲು ಯೋಜನೆ ರೂಪಿಸುತ್ತಿವೆ. ಅಂದರೆ ಪ್ರತಿ ಯುನಿಟ್ ಎಸಿ ಬೆಲೆ ಸುಮಾರು 1500 ರಿಂದ 2000 ಗಳಷ್ಟು ಏರಿಕೆಯಾಗಲಿದೆ.

ಏಪ್ರಿಲ್ 1 ರಿಂದ ದುಬಾರಿಯಾಗಲಿದೆ ವಿಮಾನ ಪ್ರಯಾಣ
ಏಪ್ರಿಲ್ 1 ರಿಂದ ವಿಮಾನದಲ್ಲಿ ಪ್ರಯಾಣ ಬೆಳೆಸಲು ಬಯಸುವವರ ಜೇಬಿಗೆ ಭಾರಿ ಹೊರೆ ಬೀಳಲಿದೆ. ಸರ್ಕಾರ ಸ್ಥಳೀಯ ವಿಮಾನಗಳಿಗೆ ಬಾಡಿಗೆಯ ಕನಿಷ್ಠ ಮಿತಿ ಶೇ.5 ರಷ್ಟು ಹೆಚ್ಚಿಸುವ ನಿರ್ಣಯ ಕೈಗೊಂಡಿದೆ. ಇದಲ್ಲದೆ ವಿಮಾನಯಾನ ಕಂಪನಿಗಳು Aviation Security Fees ಕೂಡ ಹೆಚ್ಚಿಸುತ್ತಿವೆ. ಏಪ್ರಿಲ್ 1 ರಿಂದ ಇದರ ಶುಲ್ಕ ರೂ.200 ಆಗಿರಲಿದೆ. ಪ್ರಸ್ತುತ ಇದು ರೂ.160 ಆಗಿದೆ. ಇಂಟರ್ನ್ಯಾಷನಲ್ ಫ್ಲೈಟ್ ಗಳಲ್ಲಿ ಈ ಶುಲ್ಕ 5.2 ಡಾಲರ್ ನಿಂದ 12 ಡಾಲರ್ ಗೆ ಏರಿಕೆಯಾಗಲಿದೆ. ನೂತನ ದರಗಳು ಏಪ್ರಿಲ್ 1 ರಿಂದ ಜಾರಿಗೆ ಬರಲಿವೆ.

ಹಾಲಿನ ದರದಲ್ಲಿ ಏರಿಕೆ
ಏಪ್ರಿಲ್ 1 ರಿಂದ ಹಾಲಿನ ದರದಲ್ಲಿ ಏರಿಕೆಯಾಗುವ ಸಾಧ್ಯತೆ ಇದೆ. ಹಾಲಿನ ಬೆಲೆಯನ್ನು ರೂ.3 ರಷ್ಟು ಏರಿಕೆ ಮಾಡಿ ಲೀಟರ್ ಗೆ ರೂ.49 ನಿಗದಿಪಡಿಸಲು ರೈತರು ಈಗಾಗಲೇ ನಿರ್ಧರಿಸಿದ್ದಾರೆ. ಹಾಲಿನ ಈ ನೂತನ ದರ ಕೂಡ ಏಪ್ರಿಲ್ 1 ರಿಂದ ಜಾರಿಗೆ ಬರಲಿದೆ. 

ಇದನ್ನೂ ಓದಿ-Coronavirus: ಕರೋನಾದಿಂದ ರಕ್ಷಿಸಬಹುದಾದ ಹ್ಯಾಂಡ್ ಸ್ಯಾನಿಟೈಜರ್‌ಗಳಿಂದ ಕ್ಯಾನ್ಸರ್ ಅಪಾಯ

ಎಕ್ಸ್ ಪ್ರೆಸ್ ವೆ ಮೇಲೆ ಪ್ರಯಾಣ ಕೂಡ ದುಬಾರಿಯಾಗಲಿದೆ
ಆಗ್ರಾ-ಲಖನೌ ಎಕ್ಸ್ ಪ್ರೆಸ್ ವೆ ಮೇಲೆ ಪ್ರಯಾಣ ಬೆಳೆಸುವುದು ಕೂಡ ಏಪ್ರಿಲ್ 1 ರಿಂದ ದುಬಾರಿಯಾಗಲಿದೆ. ಉತ್ತರ ಪ್ರದೇಶ ಇಂಡಸ್ಟ್ರಿಯಲ್ ಡೆವಲಪ್ಮೆಂಟ್ ಅಥಾರಿಟಿ  ವರ್ಷ 2021-22 ದಲ್ಲಿನ ನೂತನ ದರಗಳಿಗೆ ಅನುಮತಿ ನೀಡಿದೆ. ಹೀಗಾಗಿ ಈ ರೂಟ್ ಮೇಲೆ ಪ್ರಯಾಣ ಬೆಲೆ ರೂ.5 ರಿಂದ ರೂ.25 ರಷ್ಟು ಹೆಚ್ಚಾಗಲಿದೆ. 

ಇದನ್ನೂ ಓದಿ-Driving Licence, RC ಎಕ್ಸ್ಪೈರ್ ಆಗಿದೆಯಾ? ಚಿಂತೆ ಬೇಡ, ಡೆಡ್ ಲೈನ್ ಜೂನ್ 30ಕ್ಕೆ ವಿಸ್ತರಣೆ

ವಿದ್ಯುತ್ ದರ ಏರಿಕೆ
ಏಪ್ರಿಲ್ 1 ರಿಂದ ಬಿಹಾರದ ಜನರಿಗೆ ವಿದ್ಯುತ್ ಶಾಕ್ ತಗುಲಲಿದೆ. ಏಕೆಂದರೆ ಏಪ್ರಿಲ್ 1 ರಿಂದ ಅವರು ಹೆಚ್ಚಿನ ಹಣ ಪಾವತಿಸಬೇಕಾಗಲಿದೆ,.

ಇದನ್ನೂ ಓದಿ-WhatsApp ನೂತನ ಭದ್ರತಾ ನೀತಿಗೆ ತಡೆ ಬೀಳುವ ಸಾಧ್ಯತೆ, ನಡೆಯಲಿದೆ ವಿಸ್ತೃತ ತನಿಖೆ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News