Central Government : ಗ್ರಾಮೀಣ ಸಂಸ್ಥೆಗಳಿಗೆ '₹ 8,923 ಕೋಟಿ' ಆರ್ಥಿಕ ನೆರವು ಘೋಷಿಸಿದ ಕೇಂದ್ರ ಸರ್ಕಾರ!

ಗ್ರಾಮ, ಬ್ಲಾಕ್​ ಮತ್ತು ಜಿಲ್ಲಾ ಪಂಚಾಯತ್​ ರಾಜ್​ ಸಂಸ್ಥೆಗಳಿಗೆ ಅನುದಾನ

Last Updated : May 9, 2021, 04:49 PM IST
  • ದೇಶದಲ್ಲಿ ಕೊರೋನಾ ತೀವ್ರತೆ ಹೆಚ್ಚಾಗುತ್ತಿರುವ ಬೆನ್ನಲ್ಲೇ ಕೇಂದ್ರ ಸರ್ಕಾರ
  • ಕೇಂದ್ರ ಸರ್ಕಾರ ಗ್ರಾಮೀಣ ಸ್ಥಳೀಯ ಸಂಸ್ಥೆಗಳಿಗೆ ಅನುದಾನ ಬಿಡುಗಡೆ
  • ಗ್ರಾಮ, ಬ್ಲಾಕ್​ ಮತ್ತು ಜಿಲ್ಲಾ ಪಂಚಾಯತ್​ ರಾಜ್​ ಸಂಸ್ಥೆಗಳಿಗೆ ಅನುದಾನ
Central Government : ಗ್ರಾಮೀಣ ಸಂಸ್ಥೆಗಳಿಗೆ '₹ 8,923 ಕೋಟಿ' ಆರ್ಥಿಕ ನೆರವು ಘೋಷಿಸಿದ ಕೇಂದ್ರ ಸರ್ಕಾರ! title=

ನವದೆಹಲಿ : ದೇಶದಲ್ಲಿ ಕೊರೋನಾ ತೀವ್ರತೆ ಹೆಚ್ಚಾಗುತ್ತಿರುವ ಬೆನ್ನಲ್ಲೇ ಕೇಂದ್ರ ಸರ್ಕಾರ ಗ್ರಾಮೀಣ ಸ್ಥಳೀಯ ಸಂಸ್ಥೆಗಳಿಗೆ ಅನುದಾನ ಬಿಡುಗಡೆ ಮಾಡಿದೆ. ಗ್ರಾಮ, ಬ್ಲಾಕ್​ ಮತ್ತು ಜಿಲ್ಲಾ ಪಂಚಾಯತ್​ ರಾಜ್​ ಸಂಸ್ಥೆಗಳಿಗೆ ಅನುದಾನವನ್ನು ನೀಡಲಾಗಿದೆ.

25 ರಾಜ್ಯಗಳಿಗೆ 8,923 ಕೋಟಿ ರೂಪಾಯಿ ಅನುದಾನ ಬಿಡುಗಡೆ ಮಾಡಲಾಗಿದೆ. ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡಲು ಇದು ಮೂರು ಹಂತದ ಪಂಚಾಯತ್‌(Panchayati Raj institutions)ಗಳಿಗೆ ಸಂಪನ್ಮೂಲಗಳನ್ನು ಹೆಚ್ಚಿಸುತ್ತದೆ ಎಂದು ಹಣಕಾಸು ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.

ಇದನ್ನೂ ಓದಿ : Vadodara Rape - 'SUV ಗಳಲ್ಲಿ ರೇಪ್ ಮಾಡುವಷ್ಟು ಜಾಗ ಇರುತ್ತಾ?' RTO ಪ್ರಶ್ನಿಸಿದ ವಡೋದರಾ ಕ್ರೈಂ ಬ್ರಾಂಚ್

15 ನೇ ಹಣಕಾಸು ಆಯೋಗದ ಶಿಫಾರಸುಗಳ ಪ್ರಕಾರ, ಅನುದಾನದ ಮೊದಲ ಭಾಗವನ್ನು ಜೂನ್‌ ತಿಂಗಳಲ್ಲಿ ಬಿಡುಗಡೆ ಮಾಡಬೇಕಿತ್ತು. ಆದರೆ ಕೊರೋನಾ(Corona) ಎದುರಿಸಲು ಬೇಕಾಗ ಅಗತ್ಯತೆ ಮತ್ತು ಸೋಂಕಿನ ನಿಯಂತ್ರಣ ಕ್ರಮಗಳಿಗಾಗಿ ಒಂದು ತಿಂಗಳು ಮುಂಚಿತವಾಗಿ ಈ ಅನುದಾನ ಬಿಡುಗಡೆ ಮಾಡಲಾಗಿದೆ. ಹೆಚ್ಚುವರಿಯಾಗಿ, ಚಾಲ್ತಿಯಲ್ಲಿರುವ ಸಂಕಷ್ಟವನ್ನು ಗಣನೆಗೆ ತೆಗೆದುಕೊಂಡು ಹಣವನ್ನು ಬಿಡುಗಡೆ ಮಾಡಲು ಇರುವ ಕೆಲವು ಷರತ್ತುಗಳನ್ನು ಸಹ ತೆಗೆದುಹಾಕಲಾಗಿದೆ.

ಇದನ್ನೂ ಓದಿ : Assam New CM : ಅಸ್ಸಾಂನ ನೂತನ ಸಿಎಂ ಆಗಿ ಹಿಮಂತ ಬಿಸ್ವ ಶರ್ಮಾ ಆಯ್ಕೆ!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News