CBSE VS ICSE: ಯಾವ ಬೋರ್ಡ್ ಅಡಿ ಮಕ್ಕಳ Admission ಮಾಡಿಸುವುದು ಉಚಿತ?

Education In India - ಇಂದು ಶಾಲೆಗಳಲ್ಲಿ ಪ್ರವೇಶ ಪಡೆಯುವುದು ಸುಲಭದ ಮಾತಲ್ಲ. ಭಾರತದಲ್ಲಿ ಶಿಕ್ಷಣಕ್ಕಾಗಿ (Education In India) ರಾಜ್ಯ ಮಂಡಳಿ (State Board)ಯೊಂದಿಗೆ, ಸಿಬಿಎಸ್‌ಇ (CBSE Board) ಮತ್ತು ಐಸಿಎಸ್‌ಇ (ICSE Board)ಮಂಡಳಿಯನ್ನು ಸಹ ಪ್ರಮುಖವೆಂದು ಪರಿಗಣಿಸಲಾಗಿದೆ. ಶಾಲೆಯನ್ನು ಆಯ್ಕೆಮಾಡುವಾಗ ಪೋಷಕರು ಹೆಚ್ಚಾಗಿ ಸಿಬಿಎಸ್‌ಇ ಮತ್ತು ಐಸಿಎಸ್‌ಇ ಮಂಡಳಿಯ ನಡುವೆ ಗೊಂದಲಕ್ಕೊಳಗಾಗುತ್ತಾರೆ (CBSE vs ICSE). ಎರಡು ಮಂಡಳಿಗಳ ನಡುವಿನ ಸಾಮ್ಯತೆ ಮತ್ತು ವ್ಯತ್ಯಾಸಗಳ ಬಗ್ಗೆ ತಿಳಿದುಕೊಳ್ಳೋಣ ಬನ್ನಿ.

Written by - Nitin Tabib | Last Updated : Feb 23, 2021, 07:18 PM IST

    ಸಿಬಿಎಸ್ಇ ಹಾಗೂ ಐಸಿಎಸ್ಇ ಬೋರ್ಡ್ ಗಳ ನಡುವಿನ ಅಂತರ.

    ಮಕ್ಕಳ ದಾಖಲಾತಿಗೂ ಮೊದಲು ಅವಶ್ಯವಾಗಿ ಓದಿ.

    ಶಿಕ್ಷಣದ ಮಾಧ್ಯಮದಿಂದ ಹಿಡಿದು ಸಿಲೆಬಸ್ ಹಾಗೂ ಪುಸ್ತಕಗಳವರೆಗೆ ಭಿನ್ನವಾಗಿವೆ.

CBSE VS ICSE: ಯಾವ ಬೋರ್ಡ್ ಅಡಿ ಮಕ್ಕಳ Admission ಮಾಡಿಸುವುದು ಉಚಿತ? title=
CBSE vs ICSE (File Photo)

ನವದೆಹಲಿ: Education In India -  ಇಂದು ದೇಶಾದ್ಯಂತ ಬಹುತೇಕ ಶಾಲೆಗಳಲ್ಲಿ ಪ್ರವೇಶ  (Admission) ಪ್ರಕ್ರಿಯೆ ಆರಂಭಗೊಂಡಿದೆ. ಫೆಬ್ರವರಿ ಮತ್ತು ಏಪ್ರಿಲ್ ನಡುವೆ, ಕೆಲವು ಮಕ್ಕಳು ನರ್ಸರಿ  (Nursery School Admission) ಶಾಲೆಯಲ್ಲಿ ಪ್ರವೇಶವನ್ನು ಪಡೆದರೆ. ಕೆಲವು ದೊಡ್ಡ ವರ್ಗದ ವಿದ್ಯಾರ್ಥಿಗಳು ಬೇರೆ ಬೇರೆ ಕಾರಣಗಳಿಗಾಗಿ ತಮ್ಮ ಶಾಲೆಯನ್ನು ಬದಲಾಯಿಸುತ್ತಾರೆ. ಇಂತಹ ಪರಿಸ್ಥಿತಿಯಲ್ಲಿ, ಪೋಷಕರು ಅಸಮಾಧಾನಗೊಳ್ಳುತ್ತಾರೆ. ಇಂದಿನ ಕಾಲದಲ್ಲಿ, ಶಿಕ್ಷಣವನ್ನು (Education) ಪಡೆಯುವುದು ಸುಲಭದ ಮಾತಲ್ಲ. ಶಾಲೆಯ ಹೆಚ್ಚಳದ ಜೊತೆಗೆ ಶಾಲಾ  ಮಂಡಳಿಯ ಆಯ್ಕೆಗಳೂ ಕೂಡ ಹೆಚ್ಚಾದ ಕಾರಣ ಪೋಷಕರ ಮುಂದೆ ತಮ್ಮ ಮಕ್ಕಳಿಗೆ ಯಾವ ಬೋರ್ಡ್ (School Board) ನಲ್ಲಿ ಓದಿಸಿದರೆ ಉತ್ತಮ ಎಂಬ ಪ್ರಶ್ನೆ ಉದ್ಭವಿಸುತ್ತದೆ.

ಸ್ಕೂಲ್ ಬೋರ್ಡ್ ಆಯ್ಕೆ ಸುಲಭದ ಮಾತಲ್ಲ
ಹೆಚ್ಚಿನ ನಗರಗಳಲ್ಲಿ, ಶಾಲಾ ಶಿಕ್ಷಣಕ್ಕಾಗಿ  (School Education) 3 ಬೋರ್ಡ್‌ಗಳು ಪ್ರಮುಖವಾಗಿ ಅಸ್ತಿತ್ವದಲ್ಲಿವೆ. ಇವುಗಳಲ್ಲಿ ರಾಜ್ಯ ಮಂಡಳಿ (State Board), ಸಿಬಿಎಸ್‌ಇ (CBSE Board)ಮಂಡಳಿ ಮತ್ತು ಸಿಐಎಸ್‌ಸಿಇ - ಐಸಿಎಸ್‌ಇ / ಐಎಸ್‌ಸಿ (CISCE- ICSE/ISC Board)ಮಂಡಳಿ ಶಾಮೀಲಾಗಿವೆ. ಪೋಷಕರು ಸಾಮಾನ್ಯವಾಗಿ ತಮ್ಮ ಮಾಹಿತಿ, ಬಜೆಟ್ (Education Budget) ಮತ್ತು ಸೌಲಭ್ಯಗಳ ಆಧಾರದ ಮೇಲೆ ಮಂಡಳಿಯನ್ನು ಆಯ್ಕೆ ಮಾಡುತ್ತಾರೆ. ಕೆಲವು ಜನರು ಶಾಲೆಯನ್ನು ತಮ್ಮ ಮನೆಗೆ ಹತ್ತಿರದಲ್ಲಿದ್ದರೆ ಅಥವಾ ಅವರ ಪರಿಚಯಸ್ಥರಲ್ಲಿ ಯಾರಾದರೂ ಒಂದೇ ಶಾಲೆಯಲ್ಲಿ ಓದುತ್ತಿರುವುದರ ಆಧಾರದ ಮೇಲೆ ಮಾತ್ರ ಮಗುವನ್ನು ಶಾಲೆಗೆ ಸೇರಿಸುತ್ತಾರೆ.

CBSE vs ICSE ಯಾವುದು ಉತ್ತಮ?
ಸಾಮಾನ್ಯವಾಗಿ ಸಿಬಿಎಸ್‌ಇ (CBSE Board) ಮತ್ತು ಸಿಐಎಸ್‌ಸಿಇ - ಐಸಿಎಸ್‌ಇ / ಐಎಸ್‌ಸಿ ಬೋರ್ಡ್ (CISCE- ICSE/ISC Board) ದೊಡ್ಡ ನಗರಗಳಲ್ಲಿ ಸಾಕಷ್ಟು ಜನಪ್ರಿಯವಾಗಿವೆ. ಹೆಚ್ಚಿನ ಪೋಷಕರು ಈ ಎರಡು ಮಂಡಳಿಗಳ ನಡುವೆ ಗೊಂದಲಕ್ಕೊಳಗಾಗುತ್ತಾರೆ. ನಿಮ್ಮ ಮಾಹಿತಿಗಾಗಿ, ಸಿಬಿಎಸ್ಇ ಅಂದರೆ ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ (Central Board Of Secondary Education) 12 ನೇ ತರಗತಿಯವರೆಗಿನ ವಿದ್ಯಾರ್ಥಿಗಳಿಗಾಗಿ ಇರುತ್ತದೆ, ಸಿಐಎಸ್ಸಿಇ ಬೋರ್ಡ್ (CISCE Board) ) ಅನ್ನು 2 ಭಾಗಗಳಾಗಿ ವಿಂಗಡಿಸಲಾಗಿದೆ - ಐಸಿಎಸ್ಇ (ICSE Board) ಬೋರ್ಡ್ ಮತ್ತು ಐಎಸ್ಸಿ ಬೋರ್ಡ್ (ISC Board).

ಐಸಿಎಸ್‌ಇ ಮಂಡಳಿ (ICSE Board) 10 ನೇ ತರಗತಿಯವರೆಗಿದ್ದರೆ,  12 ನೇ ವಿದ್ಯಾರ್ಥಿಗಳು ಐಎಸ್‌ಸಿ ಮಂಡಳಿಯ (ISC Board) ಮೂಲಕ ಪರೀಕ್ಷೆಯನ್ನು ತೆಗೆದುಕೊಳ್ಳುತ್ತಾರೆ. ಸಿಬಿಎಸ್‌ಇ ಮತ್ತು ಐಸಿಎಸ್‌ಇ ಬೋರ್ಡ್ (CBSE vs ICSE), ನಡುವೆ ಯಾವುದು ಉತ್ತಮ, ಈ ವಾದ ಯಾವಾಗಲೂ ನಡೆಯುತ್ತಲೇ ಇರುತ್ತದೆ. ಇವೆರಡರ ನಡುವಿನ ಸಾಮ್ಯತೆ ಮತ್ತು ವ್ಯತ್ಯಾಸಗಳನ್ನು ತಿಳಿಯಿರಿ.

ಶಿಕ್ಷಣದ ಮಾಧ್ಯಮಗಳಲ್ಲಿನ ಅಂತರ
ಸಿಬಿಎಸ್ಇಯ ಬಹುತೇಕ ಶಾಲೆಗಳಲ್ಲಿ ಹಿಂದಿ  (Hindi Medium)  ಮತ್ತು ಇಂಗ್ಲಿಷ್  (English Medium) ಎರಡೂ ಭಾಷೆಗಳಲ್ಲಿ ಶಿಕ್ಷಣ ಹೇಳಿಕೊಡಲಾಗುತ್ತದೆ. ಆದರೆ, ಐಸಿಎಸ್ಇ ಬೋರ್ಡ್ ಒಂದು ಆಂಗ್ಲ ಮಾಧ್ಯಮ ಶಾಲೆಯಾಗಿದೆ. ಸಿಬಿಎಸ್ಇ ಬೋರ್ಡ್ ನಲ್ಲಿ NCERT BOOKS ಸಿಲೆಬಸ್ ಆಧರಿಸಿ ಶಿಕ್ಷಣ ಹೇಳಿಕೊಡಲಾಗುತ್ತದೆ. ಈ ಪುಸ್ತಕ ಗಳು ಇಂಗ್ಲಿಷ್, ಹಿಂದಿ ಹಾಗೂ ಉರ್ದು ಭಾಷೆಗಳಲ್ಲಿ ಲಭ್ಯವಿರುತ್ತವೆ. ಐಸಿಎಸ್ಇ ಬೋರ್ಡ್ ನ ಹೆಚ್ಚುವರಿ ಶಾಲೆಗಳಲ್ಲಿ ಸ್ಥಳೀಯ ಪ್ರಕಾಶಕರ ಪುಸ್ತಕಗಳು ಬಳಕೆಯಾಗುತ್ತವೆ. 

ಪುಸ್ತಕಗಳ ಬೆಲೆಯಲ್ಲಿಯೂ ಕೂಡ ಅಂತರ
ಸಿಬಿಎಸ್ಇಯ NCERT ಪುಸ್ತಕಗಳ ಬೆಲೆ ICSE ಸ್ಥಳೀಯ ಪ್ರಕಾಶಕರ ಪುಸ್ತಕಗಳಿಗಿಂತ ಕಡಿಮೆಯಾಗಿರುತ್ತದೆ. ಶಾಲೆಯ ಸಿಲೆಬಸ್ ನಲ್ಲಿರುವ ಪುಸ್ತಕಗಳಿಗಿಂತ ಹೊರಗಿನ ಪುಸ್ತಕ ಗಳನ್ನು ಕೂಡ ಐಸಿಎಸ್ಇ ವಿದ್ಯಾರ್ಥಿಗಳು ಖರೀದಿಸಬೇಕಾಗುತ್ತದೆ. ಪರೀಕ್ಷೆಗಳಲ್ಲಿ ಉತ್ತಮ ಅಂಕಗಳಿಸಲು ಈ ಬೋರ್ಡ್ ವಿದ್ಯಾರ್ಥಿಗಳು ವಿವಿಧ ಪ್ರಕಾಶಕರ ಪುಸ್ತಕಗಳಿಂದ ನೋಟ್ಸ್ ತಯಾರಿಸುತ್ತಾರೆ. ಸಿಬಿಎಸ್ಇ ಬೋರ್ಡ್ ನಲ್ಲಿ ಇಂಗ್ಲಿಷ್ ಹಾಗೂ ಹಿಂದಿ ಎರಡೂ ಭಾಷೆಗಳಲ್ಲಿ ಶಿಕ್ಷಣ ಒದಗಿಸಲಾಗುವ ಕಾರಣ ಇದು ಹೆಚ್ಚಿನ ಪೋಷಕರ ಮೊದಲ ಆಯ್ಕೆಯಾಗಿರುತ್ತದೆ.

ನೌಕರಿಯ ಕಾರಣ ವರ್ಗಾವಣೆಯಾಗುವವರ ಮೊದಲ ಆಯ್ಕೆ ಸಿಬಿಎಸ್ಇ ಆಗಿದೆ
ಎಲ್ಲರ ನೌಕರಿ ಒಂದೇ ರೀತಿ ಆಗಿರುವುದಿಲ್ಲ. ಅನೇಕ ಪೋಷಕರು ಕೆಲವು ತಿಂಗಳು ಅಥವಾ ವರ್ಷಗಳಲ್ಲಿ ವರ್ಗಾವಣೆಯನ್ನು ಹೊಂದಿರುತ್ತಾರೆ. ಇಂತಹ ಜನರು ಸಿಬಿಎಸ್ಇ ಬೋರ್ಡ್ ಹೆಚ್ಚು ಆದ್ಯತೆ ನೀಡುತ್ತಾರೆ. ವಾಸ್ತವವಾಗಿ, ಮಕ್ಕಳು ತಮ್ಮದೇ ಆದ ವರ್ಗಾವಣೆಯೊಂದಿಗೆ ಶಾಲೆಯನ್ನು ಬದಲಾಯಿಸಬೇಕಾದರೆ, ಸಿಬಿಎಸ್ಇ ಮಂಡಳಿಯು ಅಧ್ಯಯನದ ನಷ್ಟವನ್ನು ತಪ್ಪಿಸುತ್ತದೆ. ಸಿಬಿಎಸ್‌ಇ ಮಂಡಳಿಗೆ ಸಂಬಂಧಿಸಿದ ಪ್ರತಿಯೊಂದು ಶಾಲೆಯಲ್ಲಿ ಎನ್‌ಸಿಇಆರ್‌ಟಿ ಪುಸ್ತಕಗಳು ಮತ್ತು ಎನ್‌ಸಿಇಆರ್‌ಟಿ ಪಠ್ಯಕ್ರಮವಿದೆ. ಆದ್ದರಿಂದ, ಶಾಲೆ ಅಥವಾ ನಗರವನ್ನು ಬದಲಾಯಿಸುವುದು ವಿದ್ಯಾರ್ಥಿಗಳ ಅಧ್ಯಯನದ ಮೇಲೆ ಪರಿಣಾಮ ಬೀರುವುದಿಲ್ಲ.

CBSE ಹಾಗೂ ICSE ಬೋರ್ಡ್ ಗಳ ಸಿಲೆಬಸ್ ಭಿನ್ನವಾಗಿದೆ
CBSE ಹಾಗೂ ICSE ಬೋರ್ಡ್ ಗಳ ಸಿಲೆಬಸ್ ನಲ್ಲಿ ಭಾರಿ ಅಂತರವಿದೆ.  ಸಿಬಿಎಸ್ಇ ಹೋಲಿಕೆಯಲ್ಲಿ ಐಸಿಎಸ್ಇ ಸಿಲೆಬಸ್ ತುಂಬಾ ಜಾಸ್ತಿಯಾಗಿರುತ್ತದೆ.  ICSE ವಿಜ್ಞಾನ ವಿಷಯಕ್ಕೆ ಒಟ್ಟು ಮೂರು ಪತ್ರಿಕೆಗಳಿರುತ್ತವೆ. ಇವುಗಳನ್ನು 8ನೇ ತರಗತಿಯಿಂದಲೇ ವಿದ್ಯಾರ್ಥಗಳಿಗೆ ಹಂಚಲಾಗುತ್ತದೆ. ಇನ್ನೊಂದೆಡೆ ಸಿಬಿಎಸ್ಇ ನಲ್ಲಿ ವಿಜ್ಞಾನ ವಿಷಯಕ್ಕೆ ಒಂದೇ ಪತ್ರಿಕೆ ಇರುತ್ತದೆ.  ಐಸಿಎಸ್ಇ ಇಂಗ್ಲಿಷ್ ವಿಷಯಕ್ಕೂ ಕೂಡ ಎರಡು ಪುಸ್ತಕಗಳಿರುತ್ತವೆ.

ಕರಿಯರ್ ಆದ್ಯತೆ ಮೇರೆಗೆ ಬೋರ್ಡ್ ಆಯ್ಕೆ ಮಾಡಿ
ಸಿಬಿಎಸ್‌ಇ ಮಂಡಳಿಗೆ ಸಂಯೋಜಿತ ಶಾಲೆಗಳಲ್ಲಿ ಎನ್‌ಸಿಇಆರ್‌ಟಿ ಪುಸ್ತಕಗಳು ಮತ್ತು ಪಠ್ಯಕ್ರಮಗಳು ಅನುಸರಿಸುತ್ತವೆ. ದೇಶದ ಹೆಚ್ಚಿನ ಎಂಜಿನಿಯರಿಂಗ್ ಮತ್ತು ವೈದ್ಯಕೀಯ ಪ್ರವೇಶ ಪರೀಕ್ಷೆಗಳು ಸಹ ಈ ಪಠ್ಯಕ್ರಮವನ್ನು ಆಧರಿಸಿವೆ. ಭವಿಷ್ಯದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಾಗಲು ಬಯಸುವ ವಿದ್ಯಾರ್ಥಿಗಳಿಗೆ, ಶಾಲಾ ಮಟ್ಟದಲ್ಲಿ ಸಿಬಿಎಸ್‌ಇ ಮಂಡಳಿಯಲ್ಲಿ ಅಧ್ಯಯನ ಮಾಡುವುದರಿಂದ ಪ್ರಯೋಜನಕಾರಿ ಎಂದು ಸಾಬೀತಾಗಿದೆ. ನೀಟ್, ಜೆಇಇ ಮೇನ್ ಮುಂತಾದ ಪರೀಕ್ಷೆಗಳ ಪಠ್ಯಕ್ರಮವನ್ನು ಎನ್‌ಸಿಇಆರ್‌ಟಿ ಆಧಾರದ ಮೇಲೆ ನಿರ್ಧರಿಸಲಾಗುತ್ತದೆ.

ಇದನ್ನೂ ಓದಿ-CBSE Board Exam 2021: CBSE ಹೊಸ ನಿಯಮ, ಈ ಪರೀಕ್ಷೆಯಲ್ಲಿ ಯಾರಿಗೂ ಕೂಡ Fail ಮಾಡಲಾಗುವುದಿಲ್ಲ

ಐಸಿಎಸ್‌ಇ ಮಂಡಳಿಯ ಪಠ್ಯಕ್ರಮವು ಯುಕೆ ಯ ಬ್ರಿಟನ್‌ನ ಕೇಂಬ್ರಿಡ್ಜ್ ಶಾಲೆಯಿಂದ ಪ್ರೇರಿತವಾಗಿದೆ, ಅಲ್ಲಿ ಇಂಗ್ಲಿಷ್ ವಿಷಯಕ್ಕೆ ಹೆಚ್ಚು ಒತ್ತು ನೀಡಲಾಗುತ್ತದೆ. ಭವಿಷ್ಯದಲ್ಲಿ IELTS ಮತ್ತು TOEFL ನಂತಹ ಪರೀಕ್ಷೆಗಳನ್ನು ತೆಗೆದುಕೊಳ್ಳಲು ಬಯಸುವ ವಿದ್ಯಾರ್ಥಿಗಳಿಗೆ ಈ ಬೋರ್ಡ್ ಉತ್ತಮವಾಗಿದೆ.

ಇದನ್ನೂ ಓದಿ-CBSE Exam Date Sheet 2021: CBSE 10ನೇ ಮತ್ತು 12ನೇ ತರಗತಿ ಪರೀಕ್ಷೆಗಳ Date Sheet ಬಿಡುಗಡೆ, ಹೀಗೆ ಡೌನ್ಲೋಡ್ ಮಾಡಿ

ಯಾರು ಪ್ರವೇಶ ಪಡೆಯಬಹುದು
ಖಾಸಗಿ ಅಭ್ಯರ್ಥಿಗಳು ಅಥವಾ ರಾಜ್ಯ ಮಂಡಳಿ ವಿದ್ಯಾರ್ಥಿಗಳನ್ನು ಸುಲಭವಾಗಿ ಸಿಬಿಎಸ್‌ಇ ಮಂಡಳಿಗೆ ಸೇರಿಸಿಕೊಳ್ಳಲಾಗುತ್ತದೆ, ಆದರೆ ಐಸಿಎಸ್‌ಇ ಮಂಡಳಿಯು ಅಂತಹ ವಿದ್ಯಾರ್ಥಿಗಳನ್ನು ತಮ್ಮ ಪರೀಕ್ಷೆಗಳಿಗೆ ಕುಳಿತುಕೊಳ್ಳಲು ಅನುಮತಿಸುವುದಿಲ್ಲ (ವಿಶೇಷವಾಗಿ ದೊಡ್ಡ ತರಗತಿಗಳಲ್ಲಿ).

ಇದನ್ನೂ ಓದಿ- CBSE ಬೋರ್ಡ್ ಪರೀಕ್ಷೆಯಲ್ಲಿ ಹೆಚ್ಚಿನ ಅಂಕಗಳಿಸಲು ಇದು ಬೆಸ್ಟ್ ಟ್ರಿಕ್

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News