ನವದೆಹಲಿ: CBSE 10th Result 2020 : ಸಿಬಿಎಸ್ಇ ಮಂಡಳಿ 10 ನೇ ತರಗತಿ 2020ರ ಫಲಿತಾಂಶವನ್ನು ನಾಳೆ ಅಂದರೆ ಜುಲೈ 15 ರಂದು ಹೊಸ ನಿಯಮಗಳ ಪ್ರಕಾರ ಬಿಡುಗಡೆ ಮಾಡಲಾಗುವುದು. ಸಿಬಿಎಸ್ಇ ಬೋರ್ಡ್ ಫಲಿತಾಂಶ 2020 ಅನ್ನು ಮಂಡಳಿಯ ಅಧಿಕೃತ ಫಲಿತಾಂಶ ಪೋರ್ಟಲ್, cbseresults.nic.in ನಲ್ಲಿ ಪ್ರಕಟಿಸಲಾಗುವುದು. ವಿದ್ಯಾರ್ಥಿಗಳು ಫಲಿತಾಂಶದ ನೇರ ಲಿಂಕ್ನಿಂದ ತಮ್ಮ ಫಲಿತಾಂಶವನ್ನು ಪರಿಶೀಲಿಸಬಹುದು.
ವಿದ್ಯಾರ್ಥಿಗಳು ತಮ್ಮ ಸಿಬಿಎಸ್ಇ (CBSE) ಬೋರ್ಡ್ 10 ನೇ ತರಗತಿ ಫಲಿತಾಂಶ 2020 ನೋಡಲು ಸಿಬಿಎಸ್ಇ ವೆಬ್ಸೈಟ್ cbse.nic.inಗೆ ಭೇಟಿ ನೀಡಬೇಕಾಗುತ್ತದೆ. ಇದರ ನಂತರ ಸಿಬಿಎಸ್ಇ ವೆಬ್ಸೈಟ್ ಅಥವಾ ಸಿಬಿಎಸ್ಇ ಫಲಿತಾಂಶ ಎಂಬ ಎರಡು ಆಯ್ಕೆಗಳಿವೆ, ಇದರಿಂದ ನೀವು ಫಲಿತಾಂಶ ಲಿಂಕ್ ಅನ್ನು ಕ್ಲಿಕ್ ಮಾಡುವುದರ ಮೂಲಕ ಫಲಿತಾಂಶ ಪೋರ್ಟಲ್ ಅನ್ನು ತಲುಪಬಹುದು. ಸಿಬಿಎಸ್ಇ ಫಲಿತಾಂಶ ಪೋರ್ಟಲ್ cbseresults.nic.in ಗೆ ನೇರವಾಗಿ ಹೋಗುವುದರ ಮೂಲಕ ವಿದ್ಯಾರ್ಥಿಗಳು ತಮ್ಮ ಫಲಿತಾಂಶಗಳನ್ನು ಪರಿಶೀಲಿಸಬಹುದು.
ಈ ಹಿಂದೆ ಕೇಂದ್ರ ಪ್ರೌಢ ಶಿಕ್ಷಣ ಮಂಡಳಿ ನೀಡಿದ ಮಾಹಿತಿಯ ಪ್ರಕಾರ 2020ರ ಜುಲೈ 15 ರ ಮೊದಲು ಸಿಬಿಎಸ್ಇ ಫಲಿತಾಂಶ 2020 ಅನ್ನು ಪ್ರಕಟಿಸುವ ನಿರೀಕ್ಷೆಯಿದೆ. ನಿರ್ಧಾರದ ಪ್ರಕಾರ ಜುಲೈ 13 ರಂದು ಸಿಬಿಎಸ್ಇ 12ನೇ ಫಲಿತಾಂಶವನ್ನು ಘೋಷಿಸಲಾಯಿತು.
ಸೈಟ್ನಲ್ಲಿ ಫಲಿತಾಂಶಗಳನ್ನು ನೋಡಲು ಕೆಳಗಿನ ಕ್ರಮ ಅನುಸರಿಸಿ:
ಹಂತ 1: ಅಧಿಕೃತ ವೆಬ್ಸೈಟ್ cbse.nic.in ಅಥವಾ cbseresults.nic.in ಗೆ ಹೋಗಿ.
ಹಂತ 2: ವೆಬ್ಸೈಟ್ನ ಮುಖಪುಟದಲ್ಲಿ ನೀಡಲಾದ ಫಲಿತಾಂಶದ ಲಿಂಕ್ ಅನ್ನು ಕ್ಲಿಕ್ ಮಾಡಿ.
ಹಂತ 3: ಹೊಸ ಪುಟ ತೆರೆಯುತ್ತದೆ. ಇಲ್ಲಿ ಬರೆಯುವ ಮೂಲಕ ನಿಮ್ಮ ರೋಲ್ ಸಂಖ್ಯೆಯನ್ನು ಸಲ್ಲಿಸಿ.
ಹಂತ 4: ನಿಮ್ಮ ಫಲಿತಾಂಶವು ಪರದೆಯ ಮೇಲೆ ಕಾಣಿಸುತ್ತದೆ.
ಹಂತ 5: ಫಲಿತಾಂಶವನ್ನು ಡೌನ್ಲೋಡ್ ಮಾಡಿ ಮತ್ತು ಅದರಿಂದ ಮುದ್ರಣವನ್ನು ತೆಗೆದುಕೊಳ್ಳಿ.
ಡಿಜಿಲಾಕರ್ನಲ್ಲಿ ಫಲಿತಾಂಶ :
ಫಲಿತಾಂಶಗಳನ್ನು ಘೋಷಿಸಿದ ನಂತರ ಮಂಡಳಿಯು ಡಿಜಿಲೊಕರ್ ಮೂಲಕ ಡಿಜಿಟಲ್ ಮಾರ್ಕ್ಶೀಟ್ಗಳನ್ನು ವಿದ್ಯಾರ್ಥಿಗಳಿಗೆ ಲಭ್ಯವಾಗುವಂತೆ ಮಾಡುತ್ತದೆ. ಸರ್ಕಾರದ ಉಮಾಂಗ್ ಆ್ಯಪ್ ಮೂಲಕ ಡಿಜಿಟಲ್ ಮಾರ್ಕ್ಶೀಟ್ ಲಭ್ಯವಾಗಲಿದೆ. ಉಮಾಂಗ್ ಅಪ್ಲಿಕೇಶನ್ನಲ್ಲಿ ಸಿಬಿಎಸ್ಇ ಫಲಿತಾಂಶ 2020 ರ ಮಾರ್ಕ್ಶೀಟ್ ಡೌನ್ಲೋಡ್ ಮಾಡಲು ಬಳಕೆದಾರ ಇಂಟರ್ಫೇಸ್ (ಯುಐ) ಅನ್ನು ನವೀಕರಿಸಲಾಗಿದೆ. ಉಮಾಂಗ್ ಅಪ್ಲಿಕೇಶನ್ನಲ್ಲಿ ಸಿಬಿಎಸ್ಇ 12 ನೇ ಫಲಿತಾಂಶ 2020 ಕ್ಕೆ 'ಪರೀಕ್ಷೆ' ಮತ್ತು 'ಪರೀಕ್ಷಾ ವರ್ಷ' ಆಯ್ಕೆಗಳನ್ನು ಸಕ್ರಿಯಗೊಳಿಸಲಾಗಿದೆ. ಇದರ ನಂತರ ವಿದ್ಯಾರ್ಥಿಗಳು ತಮ್ಮ ಪರೀಕ್ಷೆಯನ್ನು (10 ನೇ), ರೋಲ್ ಸಂಖ್ಯೆ, ಹುಟ್ಟಿದ ದಿನಾಂಕ ಮತ್ತು ಪ್ರವೇಶ ಕಾರ್ಡ್ ಐಡಿಯನ್ನು ಸಲ್ಲಿಸಬೇಕು. ಇದರ ನಂತರ ವಿದ್ಯಾರ್ಥಿಗಳು ತಮ್ಮ ಡಿಜಿಟಲ್ ಮಾರ್ಕ್ಶೀಟ್ ಡೌನ್ಲೋಡ್ ಮಾಡಲು ಸಾಧ್ಯವಾಗುತ್ತದೆ.
ಈ ರೀತಿಯ ಫಲಿತಾಂಶಗಳನ್ನು ಸಹ ನೀವು ನೋಡಬಹುದು:
ಫಲಿತಾಂಶಗಳನ್ನು ಆನ್ಲೈನ್ನಲ್ಲಿ ನೋಡುವುದರ ಹೊರತಾಗಿ ಎಲ್ಲಾ ಶಾಲೆಗಳು ತಮ್ಮ ಫಲಿತಾಂಶಗಳನ್ನು ತಮ್ಮ ನೋಂದಾಯಿತ ಇಮೇಲ್ ಐಡಿಯಲ್ಲಿ ವಿದ್ಯಾರ್ಥಿಗಳಿಗೆ ಕಳುಹಿಸುತ್ತವೆ. ಇದಲ್ಲದೆ ಕೆಲವು ದೂರವಾಣಿ ಸಂಖ್ಯೆಗಳನ್ನು ರಾಷ್ಟ್ರೀಯ ಮಾಹಿತಿ ಕೇಂದ್ರವು ಲಭ್ಯಗೊಳಿಸಿದೆ, ಅದರ ಮೂಲಕ ಫಲಿತಾಂಶವನ್ನು ಕಂಡುಹಿಡಿಯಬಹುದು. ಮೈಕ್ರೋಸಾಫ್ಟ್ ಎಸ್ಎಂಎಸ್ ಆರ್ಗನೈಸರ್ ಅಪ್ಲಿಕೇಶನ್ ಮತ್ತು ಡಿಜಿರೆಸಲ್ಟ್ ಅಪ್ಲಿಕೇಶನ್ನಲ್ಲಿ ಸಿಬಿಎಸ್ಇ 12 ನೇ ತರಗತಿ ಫಲಿತಾಂಶಗಳನ್ನು ಬಿಡುಗಡೆ ಮಾಡಿದೆ.