ಬಾಬಾ ರಾಮ್ ರಹಿಮ್ ಗೆ ಪುರುಷತ್ವ ಹರಣ ಪ್ರಕರಣದಲ್ಲಿ ಜಾಮೀನು ನೀಡಿದ ಸಿಬಿಐ ಕೋರ್ಟ್

ಡೇರಾ ಸಚ್ಛಾ ಸೌಧದ ಮುಖ್ಯಸ್ಥ ಬಾಬಾ ರಾಮ್ ರಹೀಮ್ ಸಿಂಗ್ ಇನ್ಸಾನ್ ಅವರಿಗೆ ಪುರುಷತ್ವಹರಣ ಪ್ರಕರಣದಲ್ಲಿ ವಿಶೇಷ ಸಿಬಿಐ ನ್ಯಾಯಾಲಯದಿಂದ ಜಾಮೀನು ದೊರಕಿದೆ. 

Last Updated : Oct 5, 2018, 06:31 PM IST
ಬಾಬಾ ರಾಮ್ ರಹಿಮ್ ಗೆ ಪುರುಷತ್ವ ಹರಣ ಪ್ರಕರಣದಲ್ಲಿ ಜಾಮೀನು ನೀಡಿದ ಸಿಬಿಐ ಕೋರ್ಟ್   title=

ನವದೆಹಲಿ: ಡೇರಾ ಸಚ್ಛಾ ಸೌಧದ ಮುಖ್ಯಸ್ಥ ಬಾಬಾ ರಾಮ್ ರಹೀಮ್ ಸಿಂಗ್ ಇನ್ಸಾನ್ ಅವರಿಗೆ ಪುರುಷತ್ವಹರಣ ಪ್ರಕರಣದಲ್ಲಿ ವಿಶೇಷ ಸಿಬಿಐ ನ್ಯಾಯಾಲಯದಿಂದ ಜಾಮೀನು ದೊರಕಿದೆ. 

ಆದರೆ ರೇಪ್ ಪ್ರಕರಣದ ವಿಚಾರವಾಗಿ 20 ವರ್ಷ ಜೈಲು ಶಿಕ್ಷೆ ಅನುಭವಿಸುತ್ತಿರುವ ಬಾಬಾ ರಾಮ್ ರಹಿಮ್ ಗೆ ಕೇವಲ ಪುರುಷತ್ವ ಹರಣ ಪ್ರಕರಣದಲ್ಲಿ ಮಾತ್ರ ಜಾಮೀನು ಸಿಕ್ಕಿರುವುದರಿಂದ ಇನ್ನು ಉಳಿದ ಪ್ರಕರಣಗಳ ವಿಚಾರವಾಗಿ ಅವರು ಜೈಲ್ ನಲ್ಲಿಯೇ ಇರಲಿದ್ದಾರೆ ಎಂದು ತಿಳಿದುಬಂದಿದೆ.

ಡೇರಾ ಸಚ್ಛಾ ಸೌಧ ಆಶ್ರಮಗಳಲ್ಲಿ ಪುರುಷ ಭಕ್ತರ ಸಂತಾನ ಹರಣ ಮಾಡುವ ಪ್ರಕರಣದ ವಿಚಾರವಾಗಿ ಸಿಬಿಐ  ಪಂಜಾಬ್ ಮತ್ತು ಹರ್ಯಾಣ ಹೈಕೋರ್ಟ್ ನಿರ್ದೇಶನದ ಮೇರೆಗೆ 2015 ರಲ್ಲಿ ಅವರ ಮೇಲೆ ಪ್ರಕರಣ ದಾಖಲಿಸಿತ್ತು.

2012 ರಲ್ಲಿ ಬಾಬಾ ರಾಮ್ ರಹಿಮ್ ಫಾಲೋವರ್ ಹೈಕೋರ್ಟ್ ನಲ್ಲಿ ಸಿಬಿಐ ತನಿಖೆ ಮತ್ತು  2000 ದಲ್ಲಾದ  ಪುರುಷತ್ವ ಹರಣಕ್ಕಾಗಿ ದಂಡವನ್ನು ವಿಧಿಸಬೇಕೆಂದು ಅರ್ಜಿಯನ್ನು ಸಲ್ಲಿಸಿದ್ದರು.

 

Trending News