Video : ಇದ್ದಕ್ಕಿದಂತೆ ಹೊತ್ತಿ ಉರಿದ ಕಾರಿನೊಳಗೆ ಸಿಲುಕಿದ್ದ ವೃದ್ಧ ದಂಪತಿ, ಕೊನೆ ಕ್ಷಣದಲ್ಲಿ ನಡೆದೇ ಬಿಟ್ಟಿತು ಜಾದು

ಲೇಕ್‌ಸೈಡ್ ಫೈರ್ ಡಿಸ್ಟ್ರಿಕ್ಟ್  ಹಂಚಿಕೊಂಡಿರುವ ಈ ಪೋಸ್ಟ್, ವೀಡಿಯೊ ಮತ್ತು ಎಂಥವರನ್ನೂ ದಿಗ್ಬ್ರಮೆಗೊಳಿಸುವಂತಿದೆ.  ವೀಡಿಯೊದಲ್ಲಿ, ಒಂದು ಕಾರು ತೀವ್ರವಾಗಿ ಉರಿಯುತ್ತಿರುವುದನ್ನು ಕಾಣಬಹುದು.

Written by - Ranjitha R K | Last Updated : Sep 9, 2021, 08:07 PM IST
  • ಸುಡುವ ಕಾರಿನಿಂದ ಹೊರಬಂದ ವೃದ್ಧ ದಂಪತಿ
  • ಘಟನೆಯ ಸಂಪೂರ್ಣ ದೃಶ್ಯ ಮೊಬೈಲ್ ನಲ್ಲಿ ಸೆರೆ
  • ದಂಪತಿ ರಕ್ಷಿಸಿದವರಿಗೆ ಸೋಶಿಯಲ್ ಮೀಡಿಯಾದಲ್ಲಿ ಪ್ರಶಂಸೆ
Video : ಇದ್ದಕ್ಕಿದಂತೆ ಹೊತ್ತಿ ಉರಿದ ಕಾರಿನೊಳಗೆ ಸಿಲುಕಿದ್ದ ವೃದ್ಧ ದಂಪತಿ, ಕೊನೆ ಕ್ಷಣದಲ್ಲಿ ನಡೆದೇ ಬಿಟ್ಟಿತು ಜಾದು  title=
Viral video (Photo instagram)

ನವದೆಹಲಿ : ಇದು ಕ್ಯಾಲಿಫೋರ್ನಿಯಾದ ಲೇಕ್‌ಸೈಡ್‌ನಲ್ಲಿ (Lakeside) ನಡೆದ ಘಟನೆ. ಈ ಘಟನೆಯಲ್ಲಿ ಸಿಕ್ಕಿಹಾಕಿಕೊಂಡಿದ್ದಾವರು ವೃದ್ಧ ದಂಪತಿ. ಈ ದಂಪತಿ ಇದ್ದ ಕಾರಿಗೆ ಇದ್ದಕ್ಕಿದ್ದಂತೆ ಬೆಂಕಿ ಹೊತ್ತಿಕೊಂಡಿದೆ. ಕ್ಷಣಾರ್ಧದಲ್ಲಿ ಬೆಂಕಿ ಧಗ ಧಗನೆ (Fire accident) ಉರಿಯಲು ಆರಂಭಿಸಿದೆ. ಅದೃಷ್ಟವಶಾತ್, ಕೆಲವು ದಾರಿಹೋಕರು ಆಗಮಿಸಿ, ದಂಪತಿಯ ಸಹಾಯಕ್ಕೆ ಮುಂದಾಗಿದ್ದಾರೆ.  ಸ್ಥಳದಲ್ಲಿದ್ದ ವ್ಯಕ್ತಿಯೊಬ್ಬರು ತಮ್ಮ ಮೊಬೈಲ್ ಕ್ಯಾಮೆರಾದಲ್ಲಿ ವೃದ್ಧ ದಂಪತಿಗಳನ್ನು ರಕ್ಷಿಸುವ ವಿಡಿಯೋವನ್ನು (Video) ರೆಕಾರ್ಡ್ ಮಾಡಿದ್ದಾರೆ. 

 ಧಗಧಗನೆ ಉರಿಯುವ ಕಾರಿನೊಳಗೆ ವೃದ್ಧ ದಂಪತಿ : 
ಲೇಕ್‌ಸೈಡ್ ಫೈರ್ ಡಿಸ್ಟ್ರಿಕ್ಟ್ (LakeSide Fire District)  ಹಂಚಿಕೊಂಡಿರುವ ಈ ಪೋಸ್ಟ್, ವೀಡಿಯೊ (Video) ಮತ್ತು ಎಂಥವರನ್ನೂ ದಿಗ್ಬ್ರಮೆಗೊಳಿಸುವಂತಿದೆ.  ವೀಡಿಯೊದಲ್ಲಿ, ಒಂದು ಕಾರು ತೀವ್ರವಾಗಿ ಉರಿಯುತ್ತಿರುವುದನ್ನು ಕಾಣಬಹುದು. ಈ ಸಮಯದಲ್ಲಿ, ಕಾರಿನೊಳಗಿದ್ದ ವೃದ್ಧ ದಂಪತಿ ಹೊರಬರಲು ಸಾಧ್ಯವಾಗದೇ ಸಿಕ್ಕಿಹಾಕಿಕೊಂಡಿದ್ದರು. ಆಗ ಅಲ್ಲಿಗೆ ಬಂದ ಕೆಲವು ದಾರಿಹೋಕರು ದಂಪತಿಯ (Old couple) ಸಹಾಯಕ್ಕೆ ಮುಂದಾಗಿದ್ದಾರೆ.  ದಾರಿಹೋಕರು ವೃದ್ಧ ದಂಪತಿಯನ್ನು ಸುರಕ್ಷಿತವಾಗಿ ಕಾರಿನಿಂದ ಹೊರ ತೆಗೆದಿದ್ದಾರೆ. 

 
 
 
 

 
 
 
 
 
 
 
 
 
 
 

A post shared by Lakeside Fire District (LKS) (@lakesidefiredist)

 

ಇದನ್ನೂ ಓದಿ : Viral Video: ಇದು ಯಾವುದೋ ಹಾರರ್ ಸಿನಿಮಾದ ದೃಶ್ಯವಲ್ಲ, ನಿಜವಾಗಿಯೂ ಏನಾಗಿದೆ ನೋಡಿ..!

ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೋ: 
ಈ ಸಂದರ್ಭದಲ್ಲಿ ಅಲ್ಲೇ ಇದ್ದ ವ್ಯಕ್ತಿಯೊಬ್ಬರು ಘಟನೆಯನ್ನು ತನ್ನ ಮೊಬೈಲ್ ನಲ್ಲಿ (Mobile video) ಸೆರೆ ಹಿಡಿದಿದ್ದಾರೆ. ಈ ವಿಡಿಯೋದಲ್ಲಿ ಕಾರಿಗೆ ಬೆಂಕಿ ಹೊತ್ತಿಕೊಳ್ಳುತ್ತಿರುವುದು, ದಂಪತಿ ಕಾರಿನೊಳಗೆ ಸಿಲುಕಿಹಾಕಿ ಕೊಂಡಿರುವುದು ಸ್ಪಷ್ಟವಾಗಿ ಕಾಣಿಸುತ್ತದೆ. ಅದೇ ರೀತಿ ದಾರಿ ಹೋಕರು ಆಗಮಿಸಿ ಇಬ್ಬರನ್ನೂ ಸುರಕ್ಷಿತವಾಗಿ ಹೊರಗೆ ಕರೆದುಕೊಂಡಿರುವ ದೃಶ್ಯ ಕೂಡಾ ಕಾಣಿಸುತ್ತದೆ. ಈ ವೀಡಿಯೊವನ್ನು ಸೋಶಿಯಲ್ ಮೀಡಿಯಾದಲ್ಲಿ (Social media) ಹಂಚಿಕೊಂಡಿದ್ದಾರೆ. ದಂಪತಿಗೆ ಸಹಾಯ ಮಾಡಿದ ದಾರಿಹೋಕರ ಬಗ್ಗೆ ಪ್ರಶಂಸೆ ವ್ಯಕ್ತವಾಗಿದೆ. ಈ ವಿಡಿಯೋ ಸೋಶಿಯಲ್ ಮೀಡಿಯಾ ದಲ್ಲಿ ಸಾಕಷ್ಟು ವೈರಲ್ (Viral video) ಆಗುತ್ತಿದೆ. 

ಇದನ್ನೂ ಓದಿ :Video : ಸಾಂಬಾರ್ ನಲ್ಲಿ ಎಣ್ಣೆ ಹೆಚ್ಚಾದರೆ ಐಸ್ ಮೂಲಕ ಈ ರೀತಿಯೂ ತೆಗೆಯಬಹುದು

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

 

Trending News