ಟ್ರಾಫಿಕ್ ಪೊಲೀಸರು ನಿಮ್ಮ ಬೈಕ್ ಕೀಗಳನ್ನು ತೆಗೆದುಕೊಳ್ಳಬಹುದೇ? ನಿಯಮಗಳು ಹೇಳೋದೇನು?

Traffic Rules: ಸಂಚಾರ ಪೊಲೀಸರು ದ್ವಿಚಕ್ರ ವಾಹನದ ಕೀಗಳನ್ನು ಮುಟ್ಟುಗೋಲು ಹಾಕಿಕೊಳ್ಳಬಹುದೇ? ನಿಯಮಗಳು ಏನು ಹೇಳುತ್ತವೆ? ಇದೆಲ್ಲವನ್ನು ಇಲ್ಲಿ ತಿಳಿಯಿರಿ..  

Written by - Savita M B | Last Updated : Aug 14, 2024, 08:26 PM IST
  • ಹಲವು ಸಂದರ್ಭಗಳಲ್ಲಿ ಸಂಚಾರ ಪೊಲೀಸರು ರಸ್ತೆಯಲ್ಲಿ ಸಂಚರಿಸುವಾಗ ವಾಹನಗಳನ್ನು ನಿಲ್ಲಿಸಿ ಚೆಕ್ ಮಾಡುತ್ತಾರೆ.
  • ಟ್ರಾಫಿಕ್ ಪೊಲೀಸರು ದ್ವಿಚಕ್ರ ವಾಹನದ ಕೀಗಳನ್ನು ಈ ರೀತಿ ತೆಗೆದುಕೊಳ್ಳಬಹುದೇ?
ಟ್ರಾಫಿಕ್ ಪೊಲೀಸರು ನಿಮ್ಮ ಬೈಕ್ ಕೀಗಳನ್ನು ತೆಗೆದುಕೊಳ್ಳಬಹುದೇ? ನಿಯಮಗಳು ಹೇಳೋದೇನು?  title=

traffic police: ಹಲವು ಸಂದರ್ಭಗಳಲ್ಲಿ ಸಂಚಾರ ಪೊಲೀಸರು ರಸ್ತೆಯಲ್ಲಿ ಸಂಚರಿಸುವಾಗ ವಾಹನಗಳನ್ನು ನಿಲ್ಲಿಸಿ ಚೆಕ್ ಮಾಡುತ್ತಾರೆ. ಡ್ರೈವಿಂಗ್ ಲೈಸೆನ್ಸ್, ವಿಮೆ, ಹೆಲ್ಮೆಟ್ ಮುಂತಾದ ಎಲ್ಲಾ ಅಗತ್ಯ ದಾಖಲೆಗಳು ಮತ್ತು ವಸ್ತುಗಳನ್ನು ಹೊಂದಿದ್ದರೆ ಯಾವುದೇ ತೊಂದರೆ ಇಲ್ಲ. ಆದರೆ ನೀವು ಯಾವುದನ್ನೂ ಹೊಂದಿಲ್ಲದಿದ್ದರೆ, ನೀವು ದಂಡವನ್ನು ಪಾವತಿಸಬೇಕಾಗುತ್ತದೆ. 

ಇನ್ನು ಕೆಲವು ಸಂದರ್ಭಗಳಲ್ಲಿ ಟ್ರಾಫಿಕ್ ಪೊಲೀಸರು ಬೈಕ್‌ನ ಕೀಗಳನ್ನು ತೆಗೆದುಕೊಂಡು ವಾಹನವನ್ನು ರಸ್ತೆ ಬದಿಯಲ್ಲಿ ಇಡುತ್ತಾರೆ. ಟ್ರಾಫಿಕ್ ಪೊಲೀಸರು ದ್ವಿಚಕ್ರ ವಾಹನದ ಕೀಗಳನ್ನು ಈ ರೀತಿ ತೆಗೆದುಕೊಳ್ಳಬಹುದೇ? ಹಾಗಾದರೆ ಅಲ್ಲಿ ನಿಮ್ಮ ಹಕ್ಕುಗಳೇನು? ನೀವು ಏನು ಮಾಡಬಹುದು? ಕೆಲವು ಸಂಚಾರಿ ನಿಯಮಗಳನ್ನು ತಿಳಿಯಿರಿ.

ಟ್ರಾಫಿಕ್ ಪೊಲೀಸರು ಕೀಗಳನ್ನು ತೆಗೆದುಕೊಂಡು ಹೋಗುವುದು ಸರಿಯೋ ಇಲ್ಲವೋ ಎಂಬ ಅನುಮಾನ ಅನೇಕರಿಗೆ ಇದೆ. ಆದರೆ ಮೋಟಾರು ವಾಹನ ಕಾಯ್ದೆಯ ನಿಬಂಧನೆಗಳ ಪ್ರಕಾರ, ಟ್ರಾಫಿಕ್ ಪೊಲೀಸರಿಗೆ ಕಾರು ಅಥವಾ ಬೈಕ್ ಕೀಗಳನ್ನು ತೆಗೆದುಕೊಳ್ಳುವ ಹಕ್ಕು ಇಲ್ಲ. ಯಾರಾದರೂ ಇದನ್ನು ಮಾಡಿದರೆ, ನೀವು ಸಂಚಾರ ಪೊಲೀಸ್ ಅಧಿಕಾರಿಗೆ ದೂರು ಸಲ್ಲಿಸಬಹುದು. ಅಥವಾ ನೀವು ಟ್ರಾಫಿಕ್ ಪೊಲೀಸ್ ಸಿಬ್ಬಂದಿಯ ವೀಡಿಯೊವನ್ನು ರೆಕಾರ್ಡ್ ಮಾಡಬಹುದು.

ಟ್ರಾಫಿಕ್ ಪೊಲೀಸರು ಕೀ ಗಳನ್ನು ಏಕೆ ತೆಗೆದುಕೊಳ್ಳುತ್ತಾರೆ?
ಟ್ರಾಫಿಕ್ ಪೊಲೀಸರು ಕೆಲವು ಸಂದರ್ಭಗಳಲ್ಲಿ ನಿಮ್ಮ ಬೈಕಿನ ಕೀಗಳನ್ನು ತೆಗೆದುಕೊಂಡು ಹೋಗಬಹುದು. ಏಕೆಂದರೆ ಹಲವು ಬಾರಿ ತಪಾಸಣೆ ವೇಳೆ ಸವಾರರು ಸಂಚಾರ ನಿಯಮ ಉಲ್ಲಂಘಿಸಿ ತಪ್ಪಿಸಿಕೊಳ್ಳಲು ಯತ್ನಿಸುತ್ತಾರೆ. ಹೆಲ್ಮೆಟ್ ಇಲ್ಲದೇ ಬೈಕ್ ಓಡಿಸುವುದು, ತಪ್ಪಾದ ಪಾರ್ಕಿಂಗ್ ಅಥವಾ ಯಾವುದೇ ಗಂಭೀರ ಸಂಚಾರ ನಿಯಮ ಉಲ್ಲಂಘನೆ ಕಂಡುಬಂದಲ್ಲಿ ಸಂಚಾರ ಪೊಲೀಸರು ಕ್ರಮ ಕೈಗೊಳ್ಳಬಹುದು. ಭದ್ರತಾ ಕಾರಣಗಳಿಗಾಗಿ ಪೊಲೀಸರು ಕೀಗಳನ್ನು ತೆಗೆದುಕೊಳ್ಳಬಹುದು. ಆ ಸಂದರ್ಭದಲ್ಲಿ ಸಂಬಂಧಪಟ್ಟವರು ದ್ವಿಚಕ್ರ ವಾಹನ ಚಲಾಯಿಸುವಂತಿಲ್ಲ.

ನಿಮ್ಮ ಬೈಕ್ ಕೀಗಳನ್ನು ತೆಗೆದುಕೊಂಡರೆ ಏನು ಮಾಡಬೇಕು?
ಮೊದಲು, ಶಾಂತವಾಗಿರಿ. ಪೊಲೀಸರೊಂದಿಗೆ ಗೌರವದಿಂದ ಮಾತನಾಡಿ. ಅವರನ್ನು ಎಚ್ಚರಿಕೆಯಿಂದ ಆಲಿಸಿ, ಅವರ ಸೂಚನೆಗಳನ್ನು ಅನುಸರಿಸಿ. ಅಸಭ್ಯವಾಗಿ ವರ್ತಿಸಬೇಡಿ.. ಅಧಿಕಾರಿಯೊಂದಿಗೆ ಅನುಚಿತವಾಗಿ ವರ್ತಿಸುವುದರಿಂದ ಅನಗತ್ಯ ಸಮಸ್ಯೆಗಳು ಎದುರಾಗುತ್ತವೆ. ಅವರು ನಿಮ್ಮ ವಾಹನದ ಕೀಗಳನ್ನು ಏಕೆ ತೆಗೆದುಕೊಂಡರು? ನೀವು ಯಾವ ನಿಯಮವನ್ನು ಉಲ್ಲಂಘಿಸಿದ್ದೀರಿ ಎಂದು ಪೊಲೀಸರನ್ನು ಕೇಳಿ. ಇದನ್ನು ತಿಳಿದುಕೊಳ್ಳುವುದು ಬಹಳ ಮುಖ್ಯ. ಆಗ ಮಾತ್ರ ನೀವು ಏನು ತಪ್ಪು ಮಾಡಿದ್ದೀರಿ ಎಂದು ನಿಮಗೆ ಅರ್ಥವಾಗುತ್ತದೆ. ನೀವು ಯಾವುದೇ ಸಂಚಾರ ನಿಯಮವನ್ನು ಉಲ್ಲಂಘಿಸಿರುವುದು ಕಂಡುಬಂದರೆ, ನೀವು ದಂಡವನ್ನು ಪಾವತಿಸಬೇಕಾಗುತ್ತದೆ. ಚಲನ್ ಸ್ವೀಕರಿಸಿ ಮತ್ತು ದಂಡವನ್ನು ಪಾವತಿಸಿ. ಸಂಬಂಧಪಟ್ಟ ಟ್ರಾಫಿಕ್ ಪೋಲೀಸರು ತಪ್ಪದೇ ಚಲನ್ ನೀಡುವಂತೆ ಕೇಳಿ.. 

ದಂಡವನ್ನು ಪಾವತಿಸಿದ ನಂತರ, ಸಂಚಾರ ಪೊಲೀಸರು ನಿಮ್ಮ ವಾಹನದ ಕೀಗಳನ್ನು ಹಿಂತಿರುಗಿಸುತ್ತಾರೆ. ಪೊಲೀಸರು ನಿಮ್ಮ ವಾಹನದ ಕೀಗಳನ್ನು ಸರಿಯಾದ ರೀತಿಯಲ್ಲಿ ತೆಗೆದುಕೊಳ್ಳದಿದ್ದರೆ, ನೀವು ಸಂಬಂಧಪಟ್ಟ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಬಹುದು. ಅಥವಾ ಮೇಲಧಿಕಾರಿಗಳನ್ನು ಸಂಪರ್ಕಿಸಬಹುದು. ಅಧಿಕಾರಿಗಳು ಸರಿಯಾಗಿ ನಡೆದುಕೊಳ್ಳದಿದ್ದರೆ ಕಾನೂನು ಕ್ರಮ ಕೈಗೊಳ್ಳಬಹುದು. ಪ್ರಯಾಣದ ಸಮಯದಲ್ಲಿ ಯಾವುದೇ ತೊಂದರೆಗಳನ್ನು ತಪ್ಪಿಸಲು ಉತ್ತಮ ಮಾರ್ಗವೆಂದರೆ ಸಂಚಾರ ನಿಯಮಗಳನ್ನು ಅನುಸರಿಸುವುದು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News